Home / featured / ಲಿಂಗಾಯತ ಮಠಾಧೀಶರ ಒಕ್ಕೂಟ ಅಸ್ತಿತ್ವಕ್ಕೆ

ಲಿಂಗಾಯತ ಮಠಾಧೀಶರ ಒಕ್ಕೂಟ ಅಸ್ತಿತ್ವಕ್ಕೆ

ಬೆಳಗಾವಿ: ಇಲ್ಲಿನ ರುದ್ರಾಕ್ಷಿ ಮಠದ ಎರಡು ದಿನಗಳ ಲಿಂಗಾಯತ ಮಠಾಧೀಶರ ಚಿಂತನಾ ಶಿಬಿರದಲ್ಲಿ ಸಮಾವೇಶಗೊಂಡ ನಾಡಿನ ಮಠಾಧೀಶರೆಲ್ಲ ಸೇರಿ ಲಿಂಗಾಯತ ಮಠಾಧೀಶರ ಒಕ್ಕೂಟವನ್ನು ಅಸ್ತಿತ್ವಕ್ಕೆ ತರಲು ನಿರ್ಧರಿಸಿತು.

ಹನ್ನೆರಡನೆಯ ಶತಮಾನದ ಬಸವಣ್ಣನವರನ್ನೆ ಗುರುವೆಂದು ಒಪ್ಪಿಕೊಳ್ಳುವುದು. ಶರಣರು ಬರೆದ ವಚನಗಳೇ ಧರ್ಮಗ್ರಂಥವೆಂದು ಸಾರಿ ಹೇಳಿತು. ಸನಾತನ ಪರಂಪರೆ, ಬಸವ ಪರಂಪರೆ ತುಂಬಾ ವಿಭಿನ್ನ. ಇದನ್ನು ಅರಿಯದೆ ಲಿಂಗಾಯತ ಮಠಾಧೀಶರು ವೈದಿಕರಣಗೊಂಡ ಬಗ್ಗೆ ಚಿಂತಿಸಿ, ಚರ್ಚಿಸಿ ತೀರ್ಮಾನಿಸಲಾಯಿತು ಎಂದು ಗದುಗಿನ ತೋಂಟದಾರ್ಯ ಮಠದ ಡಾ. ಪೂಜ್ಯ ಶ್ರೀ ಸಿದ್ದರಾಮ ಸ್ವಾಮೀಜಿ ತಿಳಿಸಿದರು.

ಇಲ್ಲಿಯವರೆಗೂ ಮಠಾಧೀಶರು ಇತಿಹಾಸದ ಸತ್ಯವನ್ನು ಅರಿಯದೆ ಆಚರಿಸಿದ ವೈದಿಕ ಆಚರಣೆಗಳು ಲಿಂಗಾಯತ ತತ್ವಕ್ಕೆ ಚ್ಯುತಿ ತರುವಂತಿದ್ದವು. ಇದಕ್ಕೆ ಕಾರಣ ವಚನ ಪ್ರಜ್ಞೆ ಇಲ್ಲದಿರುವುದೆ ಆಗಿತ್ತು ಎಂದವರು ಸ್ಪಷ್ಟ ಪಡಿಸಿದರು. ಹಾನಗಲ್ ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳು ಸಹ ಅಂದಿನ ಕಾಲಕ್ಕೆ ಅನಿವಾರ್ಯವಾದ ಶಿವಯೋಗ ಮಂದಿರವನ್ನು ಸ್ಥಾಪಿಸಿದರ ಹಿಂದೆ ಸದುದ್ದೇಶವೆ ಇತ್ತು. ಆಗ ವಚನ ಸಾಹಿತ್ಯ ಈಗಿನಷ್ಟು ವ್ಯಾಪಕವಾಗಿ ಪಸರಿಸಿರಲಿಲ್ಲ. ಅದ್ದರಿಂದ ಹಲವು ಗೊಂದಲಗಳು ಹಾಗೇ ಉಳಿದು ಬಂದವು. ಲಿಂಗಾಯತರು ಹಾಗೂ ಮಠಾಧೀಶರು ಅನಿವಾರ್ಯವಾಗಿ ಬೇರೊಂದು ಪಥದಲ್ಲಿ ಸಾಗಿ ಇಲ್ಲಿಯವರೆಗೆ ನಡೆದು ಬರಬೇಕಾಯಿತು.

ಆಗಮಗಳಲ್ಲಿ ವೇದಗಳಲ್ಲಿ ಎಲ್ಲಿಯೂ ಇಲ್ಲದ ವೀರಶೈವ ಕೆಲವರ ಪಿತೂರಿಯಿಂದ ನಮ್ಮ ಸಮಾಜವನ್ನು ಹೊಕ್ಕು ಶರಣ ಸಂಪ್ರದಾಯವನ್ನು ಅರಿಯದಂತೆ ಮಾಡಲು ಅದು ಅಡ್ಡಿಯಾಯಿತು ಎಂದು ಸಮಾವೇಶ ಅಭಿಪ್ರಾಯ ಪಟ್ಟಿತು.

ಶರಣರ ಚಿಂತನೆಗಳು ಇಂದು ಜಗತ್ತನ್ನು ಆಳುತ್ತವೆ. ಯಾವ ವ್ಯಕ್ತಿಯೂ ಇಂಥದ್ದೇ ಜಾತಿಯಲ್ಲಿ ಹುಟ್ಟಬೇಕೆಂದು ಪೂರ್ವದಲ್ಲಿ ನಿರ್ಧರಿಸಿರುವುದಿಲ್ಲ. ಆದ್ದರಿಂದ ಸಕಲ ಜೀವಾತ್ಮರಿಗೆ ಲೇಸ ಬಯಸುವ ತತ್ವವನ್ನು ಮುಂದಿಟ್ಟುಕೊಂಡು ೭೭0 ಅಮರಗಣಂಗಳ ಆಶಯಗಳನ್ನು ಮುಂದಿಟ್ಟುಕೊಂಡು ನಡೆಯಲೇ ಬೇಕಾದ ಸಂದರ್ಭ ಇದಾಗಿದೆ ಎಂದು ಸಭೆ ಒಕ್ಕೂರಲಿನಲ್ಲಿ ತೀರ್ಮಾನಿಸಿತು. ಜನ ಇನ್ನು ಮುಂದಿನಿಂದ ವಚನ ಸಾಹಿತ್ಯ ತೋರುವ ಹಾದಿಯಲ್ಲಿ ನಡೆದು ಲಿಂಗಾಯತ ಜನಗಳ ( ಭಕ್ತರ ) ಧಾರ್ಮಿಕ ಆಚರಣೆಗಳನ್ನು ಅನುಚಾನವಾಗಿ ಜಾರಿಗೆ ತರಲು ಸಭೆ ಸರ್ವ ಸಮ್ಮತದ ತೀರ್ಮಾನಕ್ಕೆ ಬರಲಾಯಿತು. ಶರಣ ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ನುಲಿಯ ಚಂದಯ್ಯ, ಹಡಪದ ಅಪ್ಪಣ್ಣ, ಡೋಹಾರ ಕಕ್ಕಯ್ಯ ಮಾದಾರ ಚೆನ್ನಯ್ಯ ಮುಂತಾದ ಶರಣರ ನಿಲುವು ಒಲವುಗಳ ಆಶಕ್ಕೆ ಧಕ್ಕೆ ತಾರದೆ ಮುನ್ನಡೆಯಬೇಕೆಂದು ಅದು ತೀರ್ಮಾನಿಸಿತು. ಲಿಂಗಾಯತರಲ್ಲಿ ಇತಿಹಾಸದ ಪ್ರಜ್ಞೆ ಇಲ್ಲದೆ ಹುಟ್ಟಿಕೊಂಡ ವಿವಿಧ ಒಳ ಪಂಗಡಗಳ ಕ್ರೂಢಿಕರಣದ ಮೂಲಕ ನಿಜ ಲಿಂಗಾಯತರಾಗಲು ಅನುವು ಮಾಡಿಕೊಡುವುದಾಗಿ ಅದು ಘೋಷಿಸಿತು.

ಚಿಂತನಾ ಶಿಬಿರದಲ್ಲಿ ನಾಡಿನ ಎಲ್ಲಾ ಮಠಾಧೀಶರು ಶಿಬಿರಾರ್ಥಿಯಾಗಿ ಸಮಾವೇಶಗೊಂಡಿದ್ದರು. ಉಪನ್ಯಾಸಕ್ಕಾಗಿ ಡಾ. ಎಸ್. ಎಂ. ಜಾಮದಾರ, ಡಾ ವೀರಣ್ಣ ರಾಜೂರ, ಡಾ. ಜೆ.ಎಸ್.ಪಾಟೀಲ ಹಾಗೂ ವಿಶ್ವಾರಾಧ್ಯ ಸತ್ಯಂಪೇಟೆ ಆಗಮಿಸಿದ್ದರು. ಚಿಂತನಾ ಶಿಬಿರದ ಕೊನೆಯಲ್ಲಿ ಲಿಂಗಾಯತ ಮಠಾಧೀಶರ ಒಕ್ಕೂಟದ ಮೂರು ವರ್ಷಗಳ ಅವಧಿಗೆ ಭಾಲ್ಕಿಯ ಬಸವಲಿಂಗ ಪಟ್ಟದ್ದೇವರನ್ನು ಅಧ್ಯಕ್ಷರೆಂದು ಆಯ್ಕೆ ಮಾಡಲಾಯಿತು. 25 ಜನ ಲಿಂಗಾಯತ ಒಳ ಪಂಗಡಗಳ ಮಠಾಧೀಶರು, ಕಾರ್ಯಕಾರಿ ಮಂಡಳಿಯನ್ನು ರಚಿಸುವ ಹೊಣೆಯನ್ನು ಅಧ್ಯಕ್ಷರ ವಿವೇಚನೆಗೆ ಬಿಡಲಾಯಿತು.

About Shivanand

Admin : Lingayat Kranti Monthly news paper 8884000008 [email protected]

Check Also

ಸಂಸ್ಕೃತಿ & ಸಂಸ್ಕಾರಗಳ ಬೆನ್ನೇರಿದ ಯುವ ಸನ್ಯಾಸಿಗಳು : ಪೂಜ್ಯಶ್ರೀ ನಿಜಗುಣಾನಂದ ಮಹಾಸ್ವಾಮಿಗಳು

ಬೈಲೂರ: ತಮ್ಮ ಯೌವ್ವನದಲ್ಲಿ ಧರ್ಮದ ಕಂಕಣ ಕಟ್ಟಿಕೊಂಡು‌ ನಿಂತ ಯುವ ಸನ್ಯಾಸಿಗಳ ನೋಡಿದರೆ ತುಂಬ ಸಂತೋಷವಾಗುತ್ತದೆ ಜೊತೆಗೆ ಜೀವನ ಸಾರ್ಥಕವಾಯಿತು …

ಪ್ರತ್ಯೇಕ ಧರ್ಮ ಅಲ್ಪಸಂಖ್ಯಾತ ಮಾನ್ಯತೆ ಸಿಕ್ಕಿದ್ದರೆ, ಲಿಂಗಾಯತ ಉಪಪಂಗಡಗಳು ಮೀಸಲಾತಿ ಕೇಳುವ ಪ್ರಸಂಗವೇ ಬರುತ್ತಿರಲಿಲ್ಲ: ಎಂ ಬಿ ಪಾಟೀಲ

ಬೆಂಗಳೂರು: ಮಾಜಿ ಸಚಿವರು ಮತ್ತು ಶಾಸಕರಾದ ಶ್ರೀ ಎಂ.ಬಿ.ಪಾಟೀಲ ಅವರು ಬೆಂಗಳೂರಿನ ಸದಾಶಿವ ನಗರದ ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯನ್ನು …

ಸೋಹಂ ಎಂದೆನಿಸದೇ ದಾಸೋಹಂ ಎಂದೆನಿಸಯ್ಯ..

ಮೊದಲು ಮೂರು ನೀತಿಕಥೆಗಳನ್ನು ನೊಡೋಣ ಆನಂತರ ವಿಷಯಕ್ಕೆ ಬರೋಣ.ಬೆಳಗಿನ ಜಾವ ಯಾರೋ ಒಬ್ಬರು ಸಮುದ್ರ ತೀರದಲ್ಲಿ ವಾಯುವಿಹಾರ ಮಾಡುತ್ತಿದ್ದರು. ಅಂದು …

ಹಗಲಿನಲ್ಲಿಯೆ ಸಂಜೆಯಾಯಿತು ಒಂದು ಐತಿಹಾಸಿಕ ನಿರೂಪಣೆ: ಡಾ.ಸಿದ್ಧನಗೌಡ ಪಾಟೀಲ

ಸಾಹಿತಿ ಮತ್ತು ಲಿಂಗೈಕ್ಯ ಪೂಜ್ಯ ತೋಂಟದ ಸಿದ್ಧಲಿಂಗಶ್ರೀಗಳ ಒಡನಾಡಿ ಶಿಷ್ಯರಾದ ಸಿದ್ದು ಯಾಪಲಪರವಿ ಅವರು ಬರೆದ ಹಗಲಿನಲ್ಲಿಯೆ ಸಂಜೆಯಾಯಿತು ಕೃತಿ …

ರಂಗಾಯಣದಿಂದ ನೇಗಿನಹಾಳದಲ್ಲಿ ಸರ್ವರಿಗೂ ಸಂವಿಧಾನದ ನಾಟಕ

ನೇಗಿನಹಾಳ: ಜನಸಾಮಾನ್ಯರಲ್ಲಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಅರಿವು ಮೂಡಿಸುವುದರ ಜೊತೆಗೆ ಜಾತಿ, ಧರ್ಮ, ಲಿಂಗಸಮಾನತೆ, ಅಸ್ಪೃಶ್ಯತೆ ನಿವಾರಣೆ, ದೇವದಾಸಿ …

ಜಗದ್ಭವ್ಯ ಮೇರು ಕೃತಿ : ಮಹಾತ್ಮರ ಚರಿತಾಮೃತ

ಲೇಖನ: ಪ್ರಕಾಶ ಗಿರಿಮಲ್ಲನವರ                          …

ಸೆ. 25ರಂದು “ಮಹಾತ್ಮರ ಚರಿತಾಮೃತ” ಲೋಕಾರ್ಪಣೆ

ಅಥಣಿ: ಗಡಿಭಾಗದಲ್ಲಿ ನಾಡು-ನುಡಿ ಕಟ್ಟುವ ಕಾಯಕದಲ್ಲಿ ನಿರತವಾಗಿರುವ ಅಥಣಿ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಅವರು ಸಂತ-ಮಹಾಂತರ …

ಧರ್ಮ ವಿಭಜನೆ ನೆವದಲ್ಲಿ ಪಾಟೀಲರ ಟೀಕೆ ಸಾಧುವಲ್ಲ

-ಸಾಹಿತಿ ಶಿವಕುಮಾರ್ ಉಪ್ಪಿನ ಖೇದ ವಿಜಯಪುರ ಜಿಲ್ಲೆಯ ಒಳ ಮರ್ಮದ ರಾಜಕೀಯ ಮೇಲಾಟದ ಕಾರಣಕ್ಕೆ ಲಿಂಗಾಯತ ಚಳವಳಿಯಿಂದಲೇ ಕಾಂಗ್ರೆಸ್‌ಗೆ ಸೋಲಾಯಿತು …

ಲಿಂಗಾಯತ ಪೇಜ್‌ಗೆ ಕಿಡಿಗೇಡಿಗಳ ಕಿರಿಕಿರಿ..!

ಲಿಂಗಾಯತ ಯುವ ಒಕ್ಕೂಟ ಫೇಸ್ ಬುಕ್ ಪೇಜ್‌ಗೆ ಮಸಿ ಬಳಿಯಲು ಅದನ್ನು ಹ್ಯಾಕ್ ಮಾಡಿ ಅಶ್ಲೀಲ ಪೋಸ್ಟ್‌ಗಳನ್ನು ಮಾಡುತ್ತಿರುವುದರಿಂದ ಈ …

“ಲಕ್ಷ್ಮೀ ಪೂಜೆ” ಲಕ್ಷ್ಮೀ ಯಾರು.?

  ಈ ಲಕ್ಷ್ಮೀ ಪೂಜೆ ಯಾಕೆ ಮಾಡುತ್ತಿದ್ದರು? ರಾಜನ ಹೆಂಡತಿಗೆ ಲಕ್ಷ್ಮೀ ಎಂದು ಕರೆಯುತ್ತಿದ್ದರು, ಇದು ಹೊಗಳಿಕೆಯ ಪದ. ರಾಜನಿಗೆ …

ಸಂಗೊಳ್ಳಿ ರಾಯಣ್ಣನಿಗೆ ಜನ್ಮ ನೀಡಿದ್ದು ನೇಗಿನಹಾಳ ಗ್ರಾಮ

ಸ್ವತಂತ್ರ ಹೋರಾಟಗಾರರ ಧರ್ಮಪತ್ನಿ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ನೇಗಿನಹಾಳ : ಬ್ರಿಟಿಷ್ ಸರ್ಕಾರದ ವಿರುದ್ಧ ಮೊಟ್ಟಮೊದಲಿಗೆ ಧಂಗೆ ಸಾರಿ …

ಕ್ರೀಡೆ, ಕಲೆ, ಸಾಹಿತ್ಯದಂಥ ರಂಗಗಳು ಜಾತಿ, ಸಂಕುಚಿತತೆ ನಿರ್ಮೂಲನೆಯ ಮಹಾಸಾಧನಗಳು

  ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮೀಜಿ ಅಭಿಮತ ಮುಂಡರಗಿ ಆಗಷ್ಟ್ 07: ಪ್ರಸ್ತುತ ರಾಜಕಾರಣದಲ್ಲಿ, ಕಾವಿಯೊಳಗೆ ಖಾದಿಯ ಪ್ರವೇಶ ಸಲ್ಲದು. …

ಪ್ರಮಾಣ ವಚನ ನೇರಪ್ರಸಾರ; ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ರಾಜಭವನದಿಂದ ನೇರ ಪ್ರಸಾರ ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ಇಂದು ಮಧ್ಯಾಹ್ನ 2:15ಕ್ಕೆ …

ಅಲ್ಲಮಪ್ರಭುಗಳ ವಚನಗಳು ಇಂಗ್ಲಿಷ್‌ಗೆ ಭಾಷಾಂತರ

  ವಿಜಯಪುರ : ಖ್ಯಾತ ಭಾಷಾತಜ್ಞ ಎ. ಕೆ. ರಾಮಾನುಜನ್ ಅವರ ಬಳಿಕ ಶರಣರೊಬ್ಬರ ವಚನಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ ಕೀರ್ತಿ …

ತ್ರಿಭಾಷೆಗಳಲ್ಲಿ ಮೂಡಿಬಂದ ಮಹಾಜಂಗಮ

ಮಹಾಜಂಗಮ : ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಮರಾಠಿ ಮೂಲ ಲೇಖಕರು : ಶ್ರೀ ರಾಜು ಬ. ಜುಬರೆ …

Leave a Reply

Your email address will not be published. Required fields are marked *