ವಚನಗಳಾಶಯದ ಬದುಕು ನಮ್ಮದಾಗಲಿ
Shivanand
January 22, 2021
featured, General News
334 Views
ನಿಜಶರಣ ಅಂಬಿಗರ ಚೌಡಯ್ಯನವರ 901ನೇ ಜಯಂತ್ಯೋತ್ಸವ.
ಗಜೇಂದ್ರಗಡ: ಸಮಾಜವನ್ನು ಕಂದಾಚಾರ, ಮೌಢ್ಯ, ಅಂಧಶೃದ್ಧೆಗಳಂಥ ಆಚರಣೆಗಳಿಗೆ ದೂಡಿ, ಜನರನ್ನು ಕೀಳಾಗಿ ನಡೆಸಿಕೊಳ್ಳುತ್ತ ನಿರಂತರ ಅನ್ಯಾಯ, ಶೋಷಣೆಗೆ ಈಡು ಮಾಡಿದ್ದ ಅಂದಿನ ಸನಾತನಿಗಳ ಕಪಿಮುಷ್ಠಿಯಿಂದ ಜನತೆಯನ್ನು ಹೊರತಂದು ಸಮಾನತೆಯ ಕಲ್ಯಾಣರಾಜ್ಯದ ಕನಸು ಕಟ್ಟಿಕೊಂಡು ಹೋರಾಡಿದವರು ಅಂದಿನ ಹನ್ನೆರಡನೆ ಶತಮಾನದ ಬಸವಾದಿ ಶರಣರು. ಶರಣರು ಕಟ್ಟಿಕೊಂಡಿದ್ದ ಅನುಭವ ಮಂಟಪದಲ್ಲಿ ಏಳುನೂರ ಎಪ್ಪತ್ತು ಅಮರ ಶರಣರಲ್ಲಿ ದೋಣಿ ನಡೆಸುವ ಕಾಯಕ ಮಾಡುತ್ತಿದ್ದ ಅಂಬಿಗರ ಚೌಡಯ್ಯನವರು ಬಹು ಪ್ರಮುಖರಾಗಿದ್ದರು. ಅವರು ನಾಡು ಕಂಡ ಮೊದಲ ಬಂಡಾಯ ಬರಹಗಾರ ಎಂದೆನಿಕೊಂಡವರು. ಅವರು ಕೊಡಮಾಡಿದ ಅಮೂಲ್ಯ ವಚನಗಳ ಆಶಯದಂತೆ ನಾವಿಂದು ಬದುಕು ಕಟ್ಟಿಕೊಳ್ಳಬೇಕಾಗಿದೆ ಎಂದು ಬಸವ ತತ್ವ ಅನುಭಾವಿ, ಚಿಂತಕ ಅಶೋಕ ಬರಗುಂಡಿ ಹೇಳಿದರು.
ಅವರು ಸಮೀಪದ ರಾಜೂರ ಗ್ರಾಮದಲ್ಲಿ ತಾಲೂಕ ಅಂಬಿಗರ ಚೌಡಯ್ಯ ಸಮಾಜ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಸಹಯೋಗದಲ್ಲಿ ನಡೆದ ನಿಜಶರಣ ಅಂಬಿಗರ ಚೌಡಯ್ಯನವರ 901ನೇ ಜಯಂತ್ಯೋತ್ಸವದಲ್ಲಿ ಉಪನ್ಯಾಸ ನೀಡಿದರು. 
ಕುದರಿಮೋತಿ ಮೈಸೂರು ಮಠದ ವಿಜಯಮಹಾಂತ ಸ್ವಾಮಿ ಸಾನಿಧ್ಯ ವಹಿಸಿ ಮಾತನಾಡಿ,ಅಂಬಿಗರ ಚೌಡಯ್ಯನವರು ಅಂದು ಸಮಾಜ ಬದಲಾವಣೆಗಾಗಿ ವಚನ ರಚಿಸಿದರು. ನಿಜಶರಣರಾಗಿ ಬದುಕಿ ಲಿಂಗಾಯತರಾದರು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಅಂಬಿಗರ ಸಮಾಜದ ತಾ.ಅಧ್ಯಕ್ಷ ಪರಸಪ್ಪ ಕಟ್ಟಿಮನಿ ವಹಿಸಿದ್ದರು.ವೇದಿಕೆ ಮೇಲೆ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಸಮಿತಿ ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ, ತಾ.ಸಂಚಾಲಕ ಗುರುಲಿಂಗಯ್ಯ ಓದಸುಮಠ,ಶರಣ ಎಸ್.ಎ.ಮಗದ, ಬಸವರಾಜ ಕೊಟಗಿ, ಶಂಕ್ರಯ್ಯ ಸಾಲಿಮಠ ಅತಿಥಿಗಳಾಗಿ ಆಸೀನರಾಗಿದ್ದರು.
ತಾಲೂಕಿನ ವಿವಿಧ ಹಳ್ಳಿಗಳಿಂದ ಬಂದಿದ್ದ ಸಮಾಜದ ನೂರಾರು ಜನರು ಮುಂಜಾನೆ ಗ್ರಾಮದ ಬೀದಿಗಳಲ್ಲಿ ಅಂಬಿಗರ ಚೌಡಯ್ಯನವರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಿದರು.
ಸಮಾರಂಭದಲ್ಲಿ ಎಸ್.ಕೆ.ಕಟ್ಟಿಮನಿ, ಬಸವರಾಜ ಕಟ್ಟಿಮನಿ, ಹನಮಪ್ಪ ಸುಣಗಾರ, ಬಾಳಪ್ಪ ಸುಣಗಾರ, ಬಸವರಾಜ ಅಂಗಡಿ, ಕೆ.ಎಸ್.ಸಾಲಿಮಠ, ಮಲ್ಲಿಕಾರ್ಜುನ ಇಂಡಿ, ಮಂಜು ಹೂಗಾರ, ಬಸವರಾಜ ಶೀಲವಂತರ, ಸಾಗರ ವಾಲಿ, ಬಸವರಾಜ ಹೂಗಾರ, ಸುರೇಶ ಚೋಳಿನ,ಬಿ.ಎಸ್.ಜಂತ್ಲಿ, ಶರಣಪ್ಪ ಹಡಪದ ಮತ್ತೀತರರು ಉಪಸ್ಥಿತರಿದ್ದರು.
ವರದಿ : ರವೀಂದ್ರ ಹೊನವಾಡ
Check Also
ಹುಬ್ಬಳ್ಳಿ: ಬಸವಕಲ್ಯಾಣದಲ್ಲಿ ನಿರ್ಮಿಸುತ್ತಿರುವ ಅನುಭವ ಮಂಟಪದ ಭೂಮಿಪೂಜೆ ಕಾರ್ಯಕ್ರಮದ ಕುರಿತು ಜ .6 ರಂದು ನೀಡಿದ ಜಾಹೀರಾತಿನಲ್ಲಿ ‘ಸನಾತನ …
ಲಿಂಗಾಯತ ಪ್ರಗತಿಪರ ಚಿಂತನೆಯ ಧರ್ಮವಾಗಿದೆ ಗದಗ : ಮಹಾಮಾನವತಾವಾದಿ ಪ್ರಗತಿಪರ ಚಿಂತಕ, ವಿಶ್ವಗುರು ಬಸವಣ್ಣನವರ ಕಾರ್ಯಕ್ಷೇತ್ರವಾಗಿದ್ದ ಬಸವಕಲ್ಯಾಣದಲ್ಲಿ ನೂತನ …
ಭಾರತದ ಚರಿತ್ರೆಯಲ್ಲಿ ಶರಣ ಚಳುವಳಿಗೆ ಒಂದು ವಿಶಿಷ್ಟವಾದ ಸ್ಥಾನ ಸಿಗುತ್ತದೆ. ಬೌದ್ಧ ಧರ್ಮದ ನಂತರ ಭಾರತದಲ್ಲಿ ಮತ್ತೊಮ್ಮೆ ಸಮಾಜೋಧಾರ್ಮಿಕ ಕ್ರಾಂತಿ …
ಲೇಖನ: ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತೋಂಟದಾರ್ಯ ಸಂಸ್ಥಾನ ಮಠ ಗದಗ ಬೆಳಗಾವಿ: ಕರ್ನಾಟಕವನ್ನು ಶೈಕ್ಷಣಿಕವಾಗಿ ಹಾಗು ಸಾಂಸ್ಕೃತಿಕವಾಗಿ …
ಬಸವಕಲ್ಯಾಣ: ರಾಜ್ಯ ಸರ್ಕಾರ ಪತ್ರಿಕೆಗಳಿಗೆ ನೀಡಿರುವ ಜಾಹೀರಾತಿನಲ್ಲಿ ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ ನೂತನ ಅನುಭವ ಮಂಟಪ ನಿರ್ಮಾಣ’ …
ಕೆಲವು ಅಥವಾ ಹಲವು ಅರೆಬೆಂದ ವಿಚಾರವಾದಿಗಳು ಅನುಭವ ಮಂಟಪದ ನಿರ್ಮಾಣದ ಕುರಿತಾಗಿ ಆರ್ಥಿಕ ಸ್ಥಿತಿ ಮತ್ತು ಇತರೆ ಕಾರಣಗಳಿಂದ ೫೦೦ …
ಹನ್ನೆರಡನೆಯ ಶತಮಾನದ ಬಸವಾದಿ ಶರಣರ ಸಮಕಾಲೀನ ಶಿವಶರಣೆ ಕೇತಲದೇವಿಯು ಶರಣ ಕುಂಬಾರ ಗುಂಡಯ್ಯನವರ ಧರ್ಮಪತ್ನಿ. ಕುಂಬಾರ ಗುಂಡಯ್ಯ ಮತ್ತು …
ಬೀದರ್: ವಿಶ್ವರು ಬಸವಣ್ಣನವರು 12ನೇ ಶತಮಾನದಲ್ಲಿ ಜಗತ್ತಿನ ಮುಟ್ಟು ಮೊದಲು ಪ್ರಜಾಪ್ರಭುತ್ವದ ಮಾದರಿಯ ಅನುಭವ ಮಂಟಪವನ್ನು ಸ್ಥಾಪಿಸಿದರು. ಅನುಭವ ಮಂಟಪದಲ್ಲಿ …
ಬೆಳಗಾವಿ: ಬೆಳಗಾವಿ ಲಿಂಗಾಯತ ಸಂಘಟನೆಯ ಸಕ್ರಿಯ ಕಾರ್ಯಕರ್ತ, ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಗ್ರಾಮೀಣ ಪ್ರಧಾನ ಕಾರ್ಯದರ್ಶಿ ರಾಜು …
ಗಜೇಂದ್ರಗಡ: ನಂಬಿಕೆಗೆ ಅರ್ಹವಲ್ಲದ ಪಂಚಾಂಗ, ಜ್ಯೋತಿಷ್ಯಕ್ಕೆ ಜೋತುಬಿದ್ದು, ಮೌಢ್ಯತೆಗೆ ಒಳಗಾಗಿ ನಮ್ಮ ಬದುಕನ್ನು ಕೆಡಿಸಿಕೊಳ್ಳುವುದರ ಬದಲಾಗಿ ಧರ್ಮಗುರು ಬಸವಣ್ಣ ಹಾಗೂ …
ಲೇಖನ: ಡಾ. ಶಿವಮೂರ್ತಿ ಮುರುಘಾ ಶರಣರು ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ದಿನವನ್ನು ರಾಷ್ಟ್ರದಾದ್ಯಂತ ಕಳೆದ ತಿಂಗಳು …
ಕಲಬುರಗಿ : ಪತ್ರಕರ್ತ-ಲೇಖಕ ಶಿವರಂಜನ್ ಸತ್ಯಂಪೇಟೆ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ. ಗುಲ್ಬರ್ಗ ವಿವಿ …
೧) ಬಸವ ಪರಂಪರೆ, ಶರಣ ಪರಂಪರೆ, ಲಿಂಗಾಯತ ಧರ್ಮವು 12ನೇ ಶತಮಾನದಲ್ಲಿ ಅರಿವೇ ಗುರು, ಆಚಾರವೇ ಲಿಂಗ, ಅನುಭಾವವೇ …
ರಾಮದುರ್ಗ: ಸುವರ್ಣ ಚಾನೆಲ್ ನವರು ಎಡೆಯೂರ ಸಿದ್ಧಲಿಂಗ ಶ್ರೀಗಳ ಬಗ್ಗೆ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅಭಿನವ ಅಲ್ಲಮನೆಂದೇ …
ಬಾಗಲಕೋಟೆ: ಇಳಕಲ್ನ ಚಿತ್ತರಗಿ ವಿಜಯ ಮಹಾಂತೇಶ ಸಂಸ್ಥಾನ ಮಠದ ಗುರುಮಹಾಂತ ಶ್ರೀಗಳಿಗೆ ಉಪಮುಖ್ಯ ಮಂತ್ರಿ ಗೋವಿಂದ ಕಾರಜೋಳ ಶನಿವಾರ …
ತುಂಬಾ ಅತ್ಯುತ್ತಮ ಕಾರ್ಯಕ್ರಮ. ಶರಣ ಆಶೋಕ ಬರಗುಂಡಿಯವರು ನಿಜಶರಣ ಅಂಬಿಗರ ಚೌಡಯ್ಯನವರ ಬಗೆಗೆ ತುಂಬಾ ಚೆನ್ನಾಗಿ ಮಾತನಾಡಿದ್ದಾರೆ.ಕಾರ್ಯಕ್ರಮ ತುಂಬಾ ಚೆನಾಗಿ ಮೂಡಿಬಂದಿದೆ. ಶರಣಾರ್ಥಿ.