Breaking News
Home / featured / ಗಣಾಚಾರಿ ಲಿಂಗಾಯತ ನಿಜಶರಣ ಅಂಬಿಗರ ಚೌಡಯ್ಯ

ಗಣಾಚಾರಿ ಲಿಂಗಾಯತ ನಿಜಶರಣ ಅಂಬಿಗರ ಚೌಡಯ್ಯ

 

ಉಚ್ಚೆಯ ಬಚ್ಚಲಲ್ಲಿ ಬಂದವರೆಲ್ಲಾ ,
ನಾ ಹೆಚ್ಚು, ನೀ ಹೆಚ್ಚು ಎಂಬುವರು.
ಇಂತಿವರನ್ನು ಹಿತ್ತಲಿನ ಬಚ್ಚಲಿಗೊಯ್ದು
ಮಚ್ಚಿ-ಮಚ್ಚಿಲೇ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣ.

ಜಾತಿ ತಾರತಮ್ಯ ವಿಚಾರವಾಗಿ ಈ ಮಟ್ಟದಲ್ಲಿ ಅತ್ಯಂತ ಕಟುವಾಗಿ ವಿಮರ್ಷಣೆ ಮಾಡುವ ಅಂಬಿಗರ ಚೌಡಯ್ಯ ನವರು ಕ್ರಿ.ಶ. ೧೨ ನೇ ಶತಮಾನದ ಕಾಲಮಾನದವರು. ಇವರು ಈಗಿನ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚೌಡದಾನಪುರ (ಶಿವಪುರ) ಎಂಬ ಗ್ರಾಮದವರು. ಹಾಗೂ ಕೆಲವು ಸಂಶೋಧನೆಗಳ ಪ್ರಕಾರ ಇವರು ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ಚೌಡಾಪೂರದವರು ಎಂಬ ಮಾಹಿತಿಯೂ ಇದೆ.

ಇವರು ವಿಶ್ವಗುರು ಬಸವಣ್ಣನವರ ವೈಚಾರಿಕ ವಚನ ಚಳುವಳಿಯ ಪ್ರಮುಖ ಪಾಲುದಾರರು. ಇವರು ಅಂದಿನ ಶರಣರಿಂದ ಲಿಂಗದೀಕ್ಷೆ ಹೊಂದಿ ಲಿಂಗಾಯತದ ಗಣಾಚಾರಿ ತತ್ವವನ್ನು ನೀಡುವಲ್ಲಿ ಇವರದು ಪ್ರಮುಖ ಪಾತ್ರವು ಇದೆ. ಇವರು ನದಿಯಲ್ಲಿ ದೋಣಿ ನಡೆಸುವ ಕಾಯಕವನ್ನು ಕೈಗೊಂಡಿದ್ದರು.

ಇವರು ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಬಹಳಷ್ಟು ಜ್ಞಾನವನ್ನು ಪಡೆದು ನಂತರದಲ್ಲಿ ತಮ್ಮ ಸ್ವಗ್ರಾಮದಲ್ಲೇ ಶರಣತತ್ವ ಪ್ರಸಾರ ಮಾಡುತ್ತಾ ಅಲ್ಲಿಯೇ ಐಕ್ಯರಾದರು.

ಅಂದಿನ ದಿನಗಳಲ್ಲಿನ ಮನುವಾದಿಗಳು ಚಾಲ್ತಿಯಲ್ಲಿಟ್ಟಿದ್ದ ಮೂಢಾಚಾರ, ಅತ್ಯಾಚಾರ, ಡಂಭಾಚಾರ ಮತ್ತು ದೇವರ ಹೆಸರಿನಲ್ಲಿ ನಡೆಸುತ್ತಿದ್ದ ಅನಾಚಾರಗಳನ್ನು ಯಾರ ದಯಾದಾಕ್ಷಿಣ್ಯ ಇಲ್ಲದೇ, ಯಾರ ಮುಲಾಜಿಗೂ ಬೀಳದೇ ಎಗ್ಗಿಲ್ಲದೇ ಕಟುವಾಗಿ ಟೀಕಿಸುವ ಮೂಲಕ ಸ್ಥಾಪಿತ ವ್ಯವಸ್ಥೆಯನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಪ್ರಶ್ನಿಸಿ ಮುಗ್ಧ ಜನರಲ್ಲಿ ಜಾಗೃತಿ ಮೂಡಿಸುತ್ತಾರೆ.

ಕಂತೆ ತೊಟ್ಟವ ಗುರುವಲ್ಲ
ಕಾವಿ ಹೊತ್ತವ ಜಂಗಮನಲ್ಲ
ಶೀಲ ಕಟ್ಟಿದವ ಶಿವಭಕ್ತನಲ್ಲ
ನೀರು ತೀರ್ಥವಲ್ಲ, ಕೂಳು ಪ್ರಸಾದವಲ್ಲ
ಹೌದೆಂಬವನ ಬಾಯಿ ಮೇಲೆ
ಅರ್ಧ ಮಣೆಯ ಪಾದರಕ್ಷೆಯ ತೆಗೆದುಕೊಂಡು
ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ ಟೊಕಟಕನೆ
ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ

“ಶರಣನ‍ು ಅವಗುಣಕ್ಕೆ ಮುನಿವನಲ್ಲದೇ ಪ್ರಾಣಕ್ಕೆ ಮುನಿಯ” ಎಂಬ ವಚನಸೂಕ್ತಿಯಂತೆ ಅಂದಿನ ಕಾಲದ ಢಾಂಬಿಕ ಬಾಹ್ಯಾಚರಣೆಯ ಗುರು-ಜಂಗಮರನ್ನು ಕೂಡ ತರಾಟೆಗೆ ತೆಗೆದುಕೊಂಡು ಅವರಲ್ಲಿರುವ ಅವಗುಣಗಳನ್ನು ಕಳೆದುಕೊಂಡು ಸನ್ಮಾರ್ಗದಲ್ಲಿ ನಡೆಯುವಂತೆ ಸ್ಪೂರ್ತಿಯಾಗುತ್ತಾರೆ.

“ಜನಕ್ಕಂಜಿ ನಡೆಯದೇ ಮನಕ್ಕಂಜಿ ನಡೆ” ಎನ್ನುವಂತೆ ಇವರ ಕೆಲವು ವಚನಗಳನ್ನು ಗಮನಿಸಿದರೆ ಆಧ್ಯಾತ್ಮದ ಕಡೆ ಕೂಡ ಆಂತರಿಕವಾಗಿ ಬಹಳ ಉನ್ನತಿ ಪಡೆದುಕೊಂಡವರು ಕೂಡ ಎಂದು ನಿಚ್ಛಳವಾಗಿ ಹೇಳಬಹುದು.

ಇವರ ಸ್ಮರಣಾರ್ಥ ಕರ್ನಾಟಕ ಸರಕಾರವು ಪ್ರತಿ ವರ್ಷ ಜನೇವರಿ-೨೧ ನೇ ತಾರಿಖಿನಂದು ಇವರ ಹೆಸರಿನಲ್ಲಿ ಜಯಂತಿಯನ್ನು ಆಚರಿಸುವಂತೆ ಅಧಿಕೃತ ಅದೇಶ ಹೊರಡಿಸುವ ಮೂಲಕ ಅವರ ಶರಣತತ್ವದ ಉದ್ದೇಶಗಳನ್ನು ಇಂದಿನ ನಾಗರೀಕ ಸಮಾಜಕ್ಕೆ ತಿಳಿಸಲು ಅವಕಾಶ ಒದಗಿಸಿದೆ.

12 ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನೆರವೇರಿದ ಸಮಾನ ಮನಸ್ಕರ ಅಂತರ್ಜಾತಿ ವಿವಾಹವಾಗಿದ್ದ ಕಾರಣ ಕಲ್ಯಾಣದ ಶರಣರನ್ನು ಹತ್ಯೆ ಮಾಡುತ್ತಿದ್ದ ಸಮಯದಲ್ಲಿ ಅಂದಿನ ಶರಣರೆಲ್ಲ ತಮಗಾದಷ್ಟು ವಚನಗಳ ಕಟ್ಟುಗಳನ್ನು ಹೊತ್ತೊಯ್ದರು. ಎಲ್ಲಾ ವರ್ಗದ ಶರಣರು ರಚಿಸಿದ್ದ ಕೋಟಿಗಟ್ಟಲೇ ವಚನಗಳನ್ನು ಅಂದಿನ ಜಾತಿವಾದಿಗಳು ಸುಟ್ಟರು.

ಸಂರಕ್ಷಿಸಲ್ಪಟ್ಟಂತಹ ವಚನ ಕಟ್ಟುಗಳಲ್ಲಿ ಪ್ರಸ್ತುತ ಕೇವಲ ೨೦೦೦೦+ ವಚನಗಳು ಮಾತ್ರ ಲಭ್ಯವಿದ್ದು ಅಂಬಿಗರ ಚೌಡಯ್ಯ ನವರ ಕೇವಲ 248 ಸಂಖ್ಯೆಯ ವಚನಗಳು ಮಾತ್ರ ದೊರಕಿರುತ್ತವೆ.

ಎಲ್ಲಾ ಶರಣರು ತಮ್ಮ ತಮ್ಮ ಇಷ್ಟದೈವದ ಹೆಸರಿನಲ್ಲಿ ವಚನಗಳನ್ನು ರಚಿಸಿದರೆ ಅಂಬಿಗರ ಚೌಡಯ್ಯ ನವರು ತಮ್ಮ ಹೆಸರನ್ನೇ ಆ ದೈವಕ್ಕೆ ಇಟ್ಟು ವಚನಗಳನ್ನು ರಚಿಸುತ್ತಾರೆ. ಈ ವಿಚಾರಕ್ಕೆ ಮತ್ತು ಇವರ ಗಣಾಚಾರಕ್ಕೆ ಮಾರುಹೋಗಿದ್ದ ಬಸವಣ್ಣನವರು ಇವರನ್ನು “ನಿಜಶರಣ ಅಂಬಿಗರ ಚೌಡಯ್ಯ” ಎಂದು ಕರೆಯುತ್ತಾರೆ.

ಈ ಹಿನ್ನೆಲೆಯಲ್ಲಿ ಚೌಡಯ್ಯ ನವರ ಕೆಲವು ವಚನಗಳ ಅಂಕಿತನಾಮ ಕೇವಲ “ಅಂಬಿಗರ ಚೌಡಯ್ಯ” ನೆಂತಲೂ ಹಾಗೂ ಇನ್ನು ಕೆಲವು ವಚನಗಳ ಅಂಕಿತನಾಮ “ಅಂಬಿಗರ ಚೌಡಯ್ಯ ನಿಜಶರಣ” ನೆಂತಲೂ ಕಾಣಬರುತ್ತವೆ.

ಇವರ ವಚನಗಳಲ್ಲಿ ಸಾಮಾಜಿಕ, ಧಾರ್ಮಿಕ, ಅಧ್ಯಾತ್ಮಿಕ, ಕಾಯಕ, ದಾಸೋಹ ಮತ್ತು ಇತರೆ ವಿಷಯಗಳ ವಿವರಣೆ ಇದ್ದು, ಇವರ ವಚನಗಳ ಅದ್ಯಯನಕ್ಕೆ ಮತ್ತು ಸಂಶೋಧನೆಗೆ ಹಾಗೂ ಉಡುಪಿ, ಮಂಗಳೂರು, ಕಾರವಾರ ಭಾಗದ ಮೀನುಗಾರಿಕೆ ಕಾಯಕದ ಜನರ ಸರ್ವೋದ್ಧಾರಕ್ಕಾಗಿ ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಮತ್ತು ಮಂಗಳೂರು ವಿಶ್ವವಿದ್ಯಾಲಯದಲ್ಲಿ “ಅಂಬಿಗರ ಚೌಡಯ್ಯ ಅಧ್ಯಯನ ಪೀಠ” ವನ್ನು ಸ್ಥಾಪಿಸಿರುತ್ತಾರೆ.

ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯ ಹಾರ್ಧಿಕ ಶುಭಾಶಯಗಳು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಶರಣರ ಪ್ರಗತಿಪರ ಚಿಂತನೆಗೆ ಧಕ್ಕೆ ಮಾಡದಿರಿ: ಬಸವರಾಜ ಹೊರಟ್ಟಿ

  ಹುಬ್ಬಳ್ಳಿ: ಬಸವಕಲ್ಯಾಣದಲ್ಲಿ ನಿರ್ಮಿಸುತ್ತಿರುವ ಅನುಭವ ಮಂಟಪದ ಭೂಮಿಪೂಜೆ ಕಾರ್ಯಕ್ರಮದ ಕುರಿತು ಜ .6 ರಂದು ನೀಡಿದ ಜಾಹೀರಾತಿನಲ್ಲಿ ‘ಸನಾತನ …

ಸರಕಾರದ ವಿರುದ್ಧ ತೋಂಟದ ಸಿದ್ಧರಾಮ ಶ್ರೀಗಳ ಅಸಮಾಧಾನ

  ಲಿಂಗಾಯತ ಪ್ರಗತಿಪರ ಚಿಂತನೆಯ ಧರ್ಮವಾಗಿದೆ ಗದಗ : ಮಹಾಮಾನವತಾವಾದಿ ಪ್ರಗತಿಪರ ಚಿಂತಕ, ವಿಶ್ವಗುರು ಬಸವಣ್ಣನವರ ಕಾರ್ಯಕ್ಷೇತ್ರವಾಗಿದ್ದ ಬಸವಕಲ್ಯಾಣದಲ್ಲಿ ನೂತನ …

ವೇದಕ್ಕೆ ಒರೆಯ ಕಟ್ಟುವೆ

ಭಾರತದ ಚರಿತ್ರೆಯಲ್ಲಿ ಶರಣ ಚಳುವಳಿಗೆ ಒಂದು ವಿಶಿಷ್ಟವಾದ ಸ್ಥಾನ ಸಿಗುತ್ತದೆ. ಬೌದ್ಧ ಧರ್ಮದ ನಂತರ ಭಾರತದಲ್ಲಿ ಮತ್ತೊಮ್ಮೆ ಸಮಾಜೋಧಾರ್ಮಿಕ ಕ್ರಾಂತಿ …

ಸಮಾಜಕ್ಕಾಗಿ ಸರ್ವಸ್ವವನ್ನು ತ್ಯಾಗಮಾಡಿದ ತ್ಯಾಗವೀರ ಶಿರಸಂಗಿ ಲಿಂಗರಾಜರು

  ಲೇಖನ: ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತೋಂಟದಾರ್ಯ ಸಂಸ್ಥಾನ ಮಠ ಗದಗ ಬೆಳಗಾವಿ: ಕರ್ನಾಟಕವನ್ನು ಶೈಕ್ಷಣಿಕವಾಗಿ ಹಾಗು ಸಾಂಸ್ಕೃತಿಕವಾಗಿ …

ಸನಾತನ ಶಬ್ದಕ್ಕೆ ಗೊ.ರು.ಚನ್ನಬಸಪ್ಪ ವಿರೋಧ

  ಬಸವಕಲ್ಯಾಣ: ರಾಜ್ಯ ಸರ್ಕಾರ ಪತ್ರಿಕೆಗಳಿಗೆ ನೀಡಿರುವ ಜಾಹೀರಾತಿನಲ್ಲಿ ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ ನೂತನ ಅನುಭವ ಮಂಟಪ ನಿರ್ಮಾಣ’ …

ಸಮಗ್ರ ಚಿಂತನೆಯ ವಿಚಾರವಾದ ಮತ್ತು ಮುಲಾಜಿಗೆ ಬಸಿರಾಗುವ ಅರೆಬೆಂದ ವಿಚಾರವಾದ

ಕೆಲವು ಅಥವಾ ಹಲವು ಅರೆಬೆಂದ ವಿಚಾರವಾದಿಗಳು ಅನುಭವ ಮಂಟಪದ ನಿರ್ಮಾಣದ ಕುರಿತಾಗಿ ಆರ್ಥಿಕ ಸ್ಥಿತಿ ಮತ್ತು ಇತರೆ ಕಾರಣಗಳಿಂದ ೫೦೦ …

ಕಾಯಕದಲ್ಲೇ ದೇವರ ಕಂಡ ಕೇತಲಾದೇವಿ

  ಹನ್ನೆರಡನೆಯ ಶತಮಾನದ ಬಸವಾದಿ ಶರಣರ ಸಮಕಾಲೀನ ಶಿವಶರಣೆ ಕೇತಲದೇವಿಯು ಶರಣ ಕುಂಬಾರ ಗುಂಡಯ್ಯನವರ ಧರ್ಮಪತ್ನಿ. ಕುಂಬಾರ ಗುಂಡಯ್ಯ ಮತ್ತು …

ಅನುಭವಮಂಟಪ ನಡೆದು ಬಂದ ದಾರಿ

ಬೀದರ್: ವಿಶ್ವರು ಬಸವಣ್ಣನವರು 12ನೇ ಶತಮಾನದಲ್ಲಿ ಜಗತ್ತಿನ ಮುಟ್ಟು ಮೊದಲು ಪ್ರಜಾಪ್ರಭುತ್ವದ ಮಾದರಿಯ ಅನುಭವ ಮಂಟಪವನ್ನು ಸ್ಥಾಪಿಸಿದರು. ಅನುಭವ ಮಂಟಪದಲ್ಲಿ …

ಲಿಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ್ ನಿಧನ

  ಬೆಳಗಾವಿ: ಬೆಳಗಾವಿ ಲಿಂಗಾಯತ ಸಂಘಟನೆಯ ಸಕ್ರಿಯ ಕಾರ್ಯಕರ್ತ, ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಗ್ರಾಮೀಣ ಪ್ರಧಾನ ಕಾರ್ಯದರ್ಶಿ ರಾಜು …

2021ರ ಲಿಂಗಾಯತ ದಿನದರ್ಶಿಕೆ ಬಿಡುಗಡೆ ಹಾಗೂ ಶರಣ ಮೇಳದಲ್ಲಿ ಪಾಲ್ಗೊಳ್ಳಲು ಮನವಿ

ಗಜೇಂದ್ರಗಡ: ನಂಬಿಕೆಗೆ ಅರ್ಹವಲ್ಲದ ಪಂಚಾಂಗ, ಜ್ಯೋತಿಷ್ಯಕ್ಕೆ ಜೋತುಬಿದ್ದು, ಮೌಢ್ಯತೆಗೆ ಒಳಗಾಗಿ ನಮ್ಮ ಬದುಕನ್ನು ಕೆಡಿಸಿಕೊಳ್ಳುವುದರ ಬದಲಾಗಿ ಧರ್ಮಗುರು ಬಸವಣ್ಣ ಹಾಗೂ …

ಲಿಂಗಾಯತ– ವೀರಶೈವರ ‘ಒಬಿಸಿ ಬೇಡಿಕೆ’ ಮತ್ತು ಒಗ್ಗಟ್ಟಿನ ಹೋರಾಟ… ಧರ್ಮ, ರಾಜಕಾರಣ, ಸಾಮಾಜಿಕ ನ್ಯಾಯ

  ಲೇಖನ: ಡಾ. ಶಿವಮೂರ್ತಿ ಮುರುಘಾ ಶರಣರು ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನದ ದಿನವನ್ನು ರಾಷ್ಟ್ರದಾದ್ಯಂತ ಕಳೆದ ತಿಂಗಳು …

ಪತ್ರಕರ್ತ ಶಿವರಂಜನ್ ಸತ್ಯಂಪೇಟೆಗೆ ಪಿಎಚ್.ಡಿ.ಪದವಿ

  ಕಲಬುರಗಿ : ಪತ್ರಕರ್ತ-ಲೇಖಕ ಶಿವರಂಜನ್ ಸತ್ಯಂಪೇಟೆ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ. ಗುಲ್ಬರ್ಗ ವಿವಿ …

“ನಿಜ ಹೇಳದಿದ್ದರೂ ಪರವಾಗಿಲ್ಲ ಸುಳ್ಳು ಹೇಳಬೇಡಿ”

  ೧) ಬಸವ ಪರಂಪರೆ, ಶರಣ ಪರಂಪರೆ, ಲಿಂಗಾಯತ ಧರ್ಮವು 12ನೇ ಶತಮಾನದಲ್ಲಿ ಅರಿವೇ ಗುರು, ಆಚಾರವೇ ಲಿಂಗ, ಅನುಭಾವವೇ …

ಇತಿಹಾಸ ತಿರುಚುವ ರಂಭಾಪುರಿ ಶ್ರೀಗಳ ಕೃತ್ಯ ಖಂಡನೀಯ

ರಾಮದುರ್ಗ: ಸುವರ್ಣ ಚಾನೆಲ್ ನವರು ಎಡೆಯೂರ ಸಿದ್ಧಲಿಂಗ ಶ್ರೀಗಳ ಬಗ್ಗೆ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅಭಿನವ ಅಲ್ಲಮನೆಂದೇ …

ಇಳಕಲ್ ಗುರುಮಹಾಂತ ಶ್ರೀಗಳಿಗೆ ‘ಸಂಯಮ ಪ್ರಶಸ್ತಿ’ ಪ್ರದಾನ

  ಬಾಗಲಕೋಟೆ: ಇಳಕಲ್‌ನ ಚಿತ್ತರಗಿ ವಿಜಯ ಮಹಾಂತೇಶ ಸಂಸ್ಥಾನ ಮಠದ ಗುರುಮಹಾಂತ ಶ್ರೀಗಳಿಗೆ ಉಪಮುಖ್ಯ ಮಂತ್ರಿ ಗೋವಿಂದ ಕಾರಜೋಳ ಶನಿವಾರ …

Leave a Reply

Your email address will not be published. Required fields are marked *

error: Content is protected !!