Home / featured / ಎಲ್ಲೆಡೆ ಮಾನವೀಯ ಮೌಲ್ಯಗಳು ಕುಸಿದಿರುವಾಗ ಶರಣರ ಈ ನಾಡಿನಲ್ಲಿ ಇನ್ನೂ ಮೌಲ್ಯಗಳು ಜೀವಂತವಾಗಿವೆ

ಎಲ್ಲೆಡೆ ಮಾನವೀಯ ಮೌಲ್ಯಗಳು ಕುಸಿದಿರುವಾಗ ಶರಣರ ಈ ನಾಡಿನಲ್ಲಿ ಇನ್ನೂ ಮೌಲ್ಯಗಳು ಜೀವಂತವಾಗಿವೆ

 

ವಿಜಯಪುರ: ಎಲ್ಲೆಡೆ ಮಾನವೀಯ ಮೌಲ್ಯಗಳು ಕುಸಿದಿರುವಾಗ ಶರಣರ ಈ ನಾಡಿನಲ್ಲಿ ಇನ್ನೂ ಮೌಲ್ಯಗಳು ಜೀವಂತವಾಗಿವೆ. ಅಧಿಕಾರ, ಹಣ ಮತ್ತು ಪ್ರಚಾರಗಳು ಮಾನವೀಯ ಮೌಲ್ಯಗಳು ಕುಸಿತಕ್ಕೆ ಕಾರಣ ಎಂದು ಚಿಂತಕ ವಿವೇಕಾನಂದ ಎಚ್.ಕೆ ಅಭಿಪ್ರಾಯಪಟ್ಟರು.

ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿ ನಡೆಸಿರುವ  ಜ್ಞಾನ ದೀಕ್ಷಾ ಪಾದಯಾತ್ರೆ ನಿಮಿತ್ತ ಬಿ.ಎಲ್.ಡಿ.ಇ ವಚನಪಿತಾಮಹ ಡಾ.ಫ,ಗು.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಹಮ್ಮಿಕೊಂಡ ಚಿಂತನ ಗೋಷ್ಠಿಯಲ್ಲಿ ಮಾತನಾಡಿದ ಅವರು ಎಲ್ಲಿಯವರೆಗೆ ಕಳ್ಳರಿದ್ದಾರೆ ಎಂಬ ಬೋರ್ಡ್ ಹಾಕಿರುತ್ತವೆಯೋ ಅಲ್ಲಿಯವರೆಗೆ ಈ ಸಮಾಜ, ನಾಗರಿಕ ಸಮಾಜವಾಗಲು ಸಾಧ್ಯವಿಲ್ಲ. ನಾವು ನಮ್ಮ ದೃಷ್ಠಿ ವಿಶಾಲವಾಗಿಸಬೇಕು. ಜಾತಿ, ಮತ, ಭಾಷೆ, ಪ್ರಾಂತಗಳಿಗೆ ಸೀಮಿತರಾಗಿ ನಮ್ಮ ಚಿಂತನೆ ಸುತ್ತುವ ಕಾರಣ “ಸರ್ವೇಜನ ಸುಖಿನೋ ಭವಂತು” ಎನ್ನಲು ಆಗುತ್ತಿಲ್ಲ ಎಂದರು.

ಕಳಚುತ್ತಿರುವ ಸಂಬಂಧಗಳ ಕುರಿತು ಮಾತನಾಡಿದ ಅವರು ಸ್ವಾಮಿಜಿಗಳು-ಭಕ್ತರು, ವೈದ್ಯ-ರೋಗಿಗಳು, ಶಿಕ್ಷಕರು-ವಿದ್ಯಾರ್ಥಿಗಳು, ನ್ಯಾಯಾಲಯಗಳು-ಕಕ್ಷಿದಾರರು ಸೇರಿದಂತೆ ಎಲ್ಲ ಸಂಬಂಧಗಳು ಕಳಚುತ್ತಿವೆ. ಪರಸ್ಪರ ಒಬ್ಬರಿಗೊಬ್ಬರು ಅವಿಶ್ವಾಸದಿಂದ ನೋಡುವ ಸನ್ನಿವೇಶಗಳು ನಿರ್ಮಾಣವಾಗಿವೆ. ಇಂತಹ ಸನ್ನಿವೇಶಗದಲ್ಲಿ ನಮ್ಮ ಯುವ ಪೀಳಿಗೆಯನ್ನು ಎತ್ತ ದೂಡುತ್ತೇವೆ? ಎಂದರು.

ಜೈ ಹನುಮಾನ ಯಂತ್ರ, ಮಹಾಲಕ್ಷ್ಮೀ ಯಂತ್ರ 2ಸಾವಿರ ರೂ. ಕೊಟ್ಟು ತೆಗೆದುಕೊಂಡರೆ ನಿಮ್ಮ ಎಲ್ಲ ಕಷ್ಟಗಳು ಪರಿಹಾರ ಆಗುತ್ತವೆ ಎಂಬ ಜಾಹಿರಾತುಗಳು ಬರುತ್ತಿವೆ. ಜಾಹಿರಾತು ಎನ್ನುವದು ಸತ್ಯದ ಪ್ರಚಾರವೇ ಹೊರತು ಸುಳ್ಳಿನ ಸರಕು ಆಗಬಾರದು ಎಂದರು.

ಕೆ.ಸಿ.ರೆಡ್ಡಿ ಕಾಲದಿಂದಲೂ, ಎಸ್.ಎಂ.ಕೃಷ್ಣಾರವರೆಗೆ ಸರ್ಕಾರದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಪತ್ರಿಕಾ ಸಂಪಾದಕರನ್ನು, ಚಿಂತಕರನ್ನು ಅವರು ಸಂಪರ್ಕಿಸುತ್ತಿದ್ದರು. ಇಂದು ಆ ರೀತಿ ಸರ್ಕಾರಕ್ಕೆ ಸಲಹೆ ಕೊಡುವ ಮಟ್ಟದಲ್ಲಿ ಯಾವ ವ್ಯಕ್ತಿಗಳು ತಮ್ಮ ಮೌಲ್ಯಗಳನ್ನು ಉಳಿಸಿಕೊಂಡಿಲ್ಲ ಎಂದು ವಿಷಾಧಿಸಿದ ಅವರು ನನ್ನದು ನಿಮ್ಮ ಮನಸ್ಸುಗಳ ಮೇಲೆ ಸರ್ಜಿಕಲ್ ಸ್ಟ್ರೈಕ್. ಇದರಿಂದ ಸ್ವಲ್ಪಮಟ್ಟಿಗೆ ಬದಲಾವಣೆಯಾದರೆ ಸಾಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಮಹಾಂತೇಶ ಬಿರಾದಾರ ಬೀದರ ಜಿಲ್ಲೆಯಿಂದ ಸತತ 66ದಿನಗಳವರೆಗೆ ಪಾದಯಾತ್ರೆ ಮಾಡಿಕೊಂಡು, ಇದೀಗ ವಿಜಯಪುರಕ್ಕೆ ಆಗಮಿಸಿರುವ ವಿವೇಕಾನಂದರವರು ತಿಕೋಟಾ, ಬಬಲೇಶ್ವರ, ಕೋಲ್ಹಾರ, ನಿಡಗುಂದಿ, ಕೂಡಲಸಂಗಮ ಮಾರ್ಗವಾಗಿ ಸಾಗುತ್ತಾ 250ದಿನಗಳವರೆಗೆ ನಿರಂತರ ಏಕವ್ಯಕ್ತಿ ಪಾದಯಾತ್ರೆ ಮಾಡುವ ಮೂಲಕ ಸಾಮಾಜಿಕ ಬದಲಾವಣೆಗೆ ಸಂದೇಶ ನೀಡಲಿದ್ದಾರೆ ಎಂದರು.

ಡಾ.ವಿ.ಡಿ.ಐಹೊಳ್ಳಿ ಸ್ವಾಗತಿಸಿದರು. ಡಾ.ಎಂ.ಎಸ್.ಮದಭಾವಿ, ಇಬ್ರಾಹಿಂ ನಿಡಗುಂದಿ, ಸುಭಾಶ ಯಾದವಾಡ, ಬಿ.ಬಿ.ಡೆಂಗನವರ, ಜಿ.ಆರ್.ಅಂಬಲಿ, ಇಂದುಶೇಖರ ಮಣೂರ, ಡಾ.ಸುನೀಲಕುಮಾರ ಹೆಬ್ಬಿ, ಚೇತನಾ ಸಂಕೊಂಡ, ಎಸ್.ಪಿ.ಶೇಗುಣಶಿ ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡಿದ್ದರು.

About Shivanand

Admin : Lingayat Kranti Monthly news paper 8884000008 [email protected]

Check Also

ಸಂಸ್ಕೃತಿ & ಸಂಸ್ಕಾರಗಳ ಬೆನ್ನೇರಿದ ಯುವ ಸನ್ಯಾಸಿಗಳು : ಪೂಜ್ಯಶ್ರೀ ನಿಜಗುಣಾನಂದ ಮಹಾಸ್ವಾಮಿಗಳು

ಬೈಲೂರ: ತಮ್ಮ ಯೌವ್ವನದಲ್ಲಿ ಧರ್ಮದ ಕಂಕಣ ಕಟ್ಟಿಕೊಂಡು‌ ನಿಂತ ಯುವ ಸನ್ಯಾಸಿಗಳ ನೋಡಿದರೆ ತುಂಬ ಸಂತೋಷವಾಗುತ್ತದೆ ಜೊತೆಗೆ ಜೀವನ ಸಾರ್ಥಕವಾಯಿತು …

ಪ್ರತ್ಯೇಕ ಧರ್ಮ ಅಲ್ಪಸಂಖ್ಯಾತ ಮಾನ್ಯತೆ ಸಿಕ್ಕಿದ್ದರೆ, ಲಿಂಗಾಯತ ಉಪಪಂಗಡಗಳು ಮೀಸಲಾತಿ ಕೇಳುವ ಪ್ರಸಂಗವೇ ಬರುತ್ತಿರಲಿಲ್ಲ: ಎಂ ಬಿ ಪಾಟೀಲ

ಬೆಂಗಳೂರು: ಮಾಜಿ ಸಚಿವರು ಮತ್ತು ಶಾಸಕರಾದ ಶ್ರೀ ಎಂ.ಬಿ.ಪಾಟೀಲ ಅವರು ಬೆಂಗಳೂರಿನ ಸದಾಶಿವ ನಗರದ ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯನ್ನು …

ಸೋಹಂ ಎಂದೆನಿಸದೇ ದಾಸೋಹಂ ಎಂದೆನಿಸಯ್ಯ..

ಮೊದಲು ಮೂರು ನೀತಿಕಥೆಗಳನ್ನು ನೊಡೋಣ ಆನಂತರ ವಿಷಯಕ್ಕೆ ಬರೋಣ.ಬೆಳಗಿನ ಜಾವ ಯಾರೋ ಒಬ್ಬರು ಸಮುದ್ರ ತೀರದಲ್ಲಿ ವಾಯುವಿಹಾರ ಮಾಡುತ್ತಿದ್ದರು. ಅಂದು …

ಹಗಲಿನಲ್ಲಿಯೆ ಸಂಜೆಯಾಯಿತು ಒಂದು ಐತಿಹಾಸಿಕ ನಿರೂಪಣೆ: ಡಾ.ಸಿದ್ಧನಗೌಡ ಪಾಟೀಲ

ಸಾಹಿತಿ ಮತ್ತು ಲಿಂಗೈಕ್ಯ ಪೂಜ್ಯ ತೋಂಟದ ಸಿದ್ಧಲಿಂಗಶ್ರೀಗಳ ಒಡನಾಡಿ ಶಿಷ್ಯರಾದ ಸಿದ್ದು ಯಾಪಲಪರವಿ ಅವರು ಬರೆದ ಹಗಲಿನಲ್ಲಿಯೆ ಸಂಜೆಯಾಯಿತು ಕೃತಿ …

ರಂಗಾಯಣದಿಂದ ನೇಗಿನಹಾಳದಲ್ಲಿ ಸರ್ವರಿಗೂ ಸಂವಿಧಾನದ ನಾಟಕ

ನೇಗಿನಹಾಳ: ಜನಸಾಮಾನ್ಯರಲ್ಲಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಅರಿವು ಮೂಡಿಸುವುದರ ಜೊತೆಗೆ ಜಾತಿ, ಧರ್ಮ, ಲಿಂಗಸಮಾನತೆ, ಅಸ್ಪೃಶ್ಯತೆ ನಿವಾರಣೆ, ದೇವದಾಸಿ …

ಜಗದ್ಭವ್ಯ ಮೇರು ಕೃತಿ : ಮಹಾತ್ಮರ ಚರಿತಾಮೃತ

ಲೇಖನ: ಪ್ರಕಾಶ ಗಿರಿಮಲ್ಲನವರ                          …

ಸೆ. 25ರಂದು “ಮಹಾತ್ಮರ ಚರಿತಾಮೃತ” ಲೋಕಾರ್ಪಣೆ

ಅಥಣಿ: ಗಡಿಭಾಗದಲ್ಲಿ ನಾಡು-ನುಡಿ ಕಟ್ಟುವ ಕಾಯಕದಲ್ಲಿ ನಿರತವಾಗಿರುವ ಅಥಣಿ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಅವರು ಸಂತ-ಮಹಾಂತರ …

ಧರ್ಮ ವಿಭಜನೆ ನೆವದಲ್ಲಿ ಪಾಟೀಲರ ಟೀಕೆ ಸಾಧುವಲ್ಲ

-ಸಾಹಿತಿ ಶಿವಕುಮಾರ್ ಉಪ್ಪಿನ ಖೇದ ವಿಜಯಪುರ ಜಿಲ್ಲೆಯ ಒಳ ಮರ್ಮದ ರಾಜಕೀಯ ಮೇಲಾಟದ ಕಾರಣಕ್ಕೆ ಲಿಂಗಾಯತ ಚಳವಳಿಯಿಂದಲೇ ಕಾಂಗ್ರೆಸ್‌ಗೆ ಸೋಲಾಯಿತು …

ಲಿಂಗಾಯತ ಪೇಜ್‌ಗೆ ಕಿಡಿಗೇಡಿಗಳ ಕಿರಿಕಿರಿ..!

ಲಿಂಗಾಯತ ಯುವ ಒಕ್ಕೂಟ ಫೇಸ್ ಬುಕ್ ಪೇಜ್‌ಗೆ ಮಸಿ ಬಳಿಯಲು ಅದನ್ನು ಹ್ಯಾಕ್ ಮಾಡಿ ಅಶ್ಲೀಲ ಪೋಸ್ಟ್‌ಗಳನ್ನು ಮಾಡುತ್ತಿರುವುದರಿಂದ ಈ …

“ಲಕ್ಷ್ಮೀ ಪೂಜೆ” ಲಕ್ಷ್ಮೀ ಯಾರು.?

  ಈ ಲಕ್ಷ್ಮೀ ಪೂಜೆ ಯಾಕೆ ಮಾಡುತ್ತಿದ್ದರು? ರಾಜನ ಹೆಂಡತಿಗೆ ಲಕ್ಷ್ಮೀ ಎಂದು ಕರೆಯುತ್ತಿದ್ದರು, ಇದು ಹೊಗಳಿಕೆಯ ಪದ. ರಾಜನಿಗೆ …

ಸಂಗೊಳ್ಳಿ ರಾಯಣ್ಣನಿಗೆ ಜನ್ಮ ನೀಡಿದ್ದು ನೇಗಿನಹಾಳ ಗ್ರಾಮ

ಸ್ವತಂತ್ರ ಹೋರಾಟಗಾರರ ಧರ್ಮಪತ್ನಿ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ನೇಗಿನಹಾಳ : ಬ್ರಿಟಿಷ್ ಸರ್ಕಾರದ ವಿರುದ್ಧ ಮೊಟ್ಟಮೊದಲಿಗೆ ಧಂಗೆ ಸಾರಿ …

ಕ್ರೀಡೆ, ಕಲೆ, ಸಾಹಿತ್ಯದಂಥ ರಂಗಗಳು ಜಾತಿ, ಸಂಕುಚಿತತೆ ನಿರ್ಮೂಲನೆಯ ಮಹಾಸಾಧನಗಳು

  ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮೀಜಿ ಅಭಿಮತ ಮುಂಡರಗಿ ಆಗಷ್ಟ್ 07: ಪ್ರಸ್ತುತ ರಾಜಕಾರಣದಲ್ಲಿ, ಕಾವಿಯೊಳಗೆ ಖಾದಿಯ ಪ್ರವೇಶ ಸಲ್ಲದು. …

ಪ್ರಮಾಣ ವಚನ ನೇರಪ್ರಸಾರ; ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ರಾಜಭವನದಿಂದ ನೇರ ಪ್ರಸಾರ ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ಇಂದು ಮಧ್ಯಾಹ್ನ 2:15ಕ್ಕೆ …

ಅಲ್ಲಮಪ್ರಭುಗಳ ವಚನಗಳು ಇಂಗ್ಲಿಷ್‌ಗೆ ಭಾಷಾಂತರ

  ವಿಜಯಪುರ : ಖ್ಯಾತ ಭಾಷಾತಜ್ಞ ಎ. ಕೆ. ರಾಮಾನುಜನ್ ಅವರ ಬಳಿಕ ಶರಣರೊಬ್ಬರ ವಚನಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ ಕೀರ್ತಿ …

ತ್ರಿಭಾಷೆಗಳಲ್ಲಿ ಮೂಡಿಬಂದ ಮಹಾಜಂಗಮ

ಮಹಾಜಂಗಮ : ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಮರಾಠಿ ಮೂಲ ಲೇಖಕರು : ಶ್ರೀ ರಾಜು ಬ. ಜುಬರೆ …

Leave a Reply

Your email address will not be published. Required fields are marked *