Breaking News
Home / featured / ವೇದಕ್ಕೆ ಒರೆಯ ಕಟ್ಟುವೆ

ವೇದಕ್ಕೆ ಒರೆಯ ಕಟ್ಟುವೆ

ಭಾರತದ ಚರಿತ್ರೆಯಲ್ಲಿ ಶರಣ ಚಳುವಳಿಗೆ ಒಂದು ವಿಶಿಷ್ಟವಾದ ಸ್ಥಾನ ಸಿಗುತ್ತದೆ. ಬೌದ್ಧ ಧರ್ಮದ ನಂತರ ಭಾರತದಲ್ಲಿ ಮತ್ತೊಮ್ಮೆ ಸಮಾಜೋಧಾರ್ಮಿಕ ಕ್ರಾಂತಿ ಉಂಟು ಮಾಡಿದ ಕಾಲಘಟ್ಚವೆಂದರೆ ಅದು ಶರಣಯುಗ ೧೨ ನೇ ಶತಮಾನ. ವೈಜ್ಞಾನಿಕ, ವೈಚಾರಿಕ, ತತ್ವಜ್ಞಾನವನ್ನು ಆಧಾರವಾಗಿರಿಸಿಕೊಂಡು ಧರ್ಮದ ಮೂಲಕ ಸಾಮಾಜಿಕ ಕ್ರಾಂತಿಗೆ ಕಾರಣವಾದರು ಬಸವಾದಿ ಶರಣರು.

ಶತಶತಮಾನಗಳಿಂದ ವೇದ, ಆಗಮ, ಶಾಸ್ತ್ರ ಪುರಾಣಗಳು ಈ ನೆಲವನ್ನು ಆಳಿದವು. ಈ ವೇದ ಆಗಮ, ಪುರಾಣ ಶಾಸ್ತ್ರಗಳ ಹೆಸರಲ್ಲಿ ಅಸಮಾನತೆ ಎಂಬ ತೊಟ್ಟಿಲು ಕಟ್ಟಿ ತೂಗುತ್ತಿದ್ದ ಕಾಲಘಟ್ಟವದು. ಇಂತಹ ಅಸಮಾನತೆಯ ವಿರುದ್ದವಾಗಿ ಬಂಡಾಯವೆದ್ದ ಚಾರ್ವಾಕ, ಜೈನ, ಬೌದ್ದ,ಗಳ ಜೊತ ಲಿಂಗಾಯತ ಚಳುವಳಿ ಪ್ರಮುಖ ಎನಿಸುತ್ತದೆ. ತಮ್ಮ ಸ್ವಾರ್ಥಕ್ಕಾಗಿ ಜನರ ಶೋಷಣೆಗಾಗಿ ಹುಟ್ಟಿಕೊಂಡಂತ ಇಂತಹ ಗ್ರಂಥಗಳ ಬಂಡವಾಳವನ್ನು ಬಟ್ಟಬಯಲು ಮಾಡಿದರು ಬಸವಾದಿ ಶರಣರು.

ಬಹುತೇಕರು ಹೇಳುವಂತೆ ವೇದಗಳಲ್ಲಿ ಮೌಲ್ಯಗಳು ಇಲ್ಲ, ಶೋಷಣೆ ಮಾಡುವಂತ ಯಾವ ವಿಷಯಗಳು ಇಲ್ಲ, ವೇದಗಳು ಪವಿತ್ರ ಎಂದೆಲ್ಲಾ ಹೇಳಿದರೂ ಶರಣರು ಯಾಕೆ ವೇದಗಳನ್ನು ಧಿಕ್ಕರಿಸಿದರು?. ಶರಣರು ಸುಮ್ಮನೆ ವೇದಗಳನ್ನು ಧಿಕ್ಕರಿಸಲಿಲ್ಲ ವೇದಗಳಲ್ಲಿ ಎಲ್ಲವೂ ಸರಿಯಿದ್ದರೆ ಬಸವಣ್ಣ ಯಾಕೆ ಅವುಗಳಿಗೆ ಒರೆಯ ಕಟ್ಚುತ್ತಿದ್ದ. ಬದಲಿಗೆ ಅವುಗಳನ್ನು ಕೂಲಂಕುಶವಾಗಿ ವಿಮರ್ಶಿಸಿಯೇ “ವೇದಕ್ಕೆ ಒರೆಯ ಕಟ್ಟುವೆ ” ಎಂದರು.

ಅಧುನಿಕ ವಿದ್ವಾಂಸರ ಪ್ರಕಾರ ನೋಡಿದರೆ ವೇದಗಳಿಗೆ ಆಧ್ಯಾತ್ಮಿಕ ಮೌಲ್ಯವಿದೆ ಎಂಬ ಮಾತನ್ನು ಅಲ್ಲಗಳೆಯುತ್ತಾರೆ.
ಪ್ರೂ. ಮ್ಯಾರ್ ಪ್ರಕಾರ ” ಈ(ವೇದದ) ರಚನೆಗಳನ್ನು ಅವು ರಚಿತವಾಗಿರಬಹುದಾದ ಸಂದರ್ಭಗಳನ್ನು ಆಂತರಿಕ ಸಾಕ್ಷ್ಯಾಧಾರದ ಮೇಲೆ ಪರಿಶೀಲಿಸಿದರೆ ಅವು(ವೇದಗಳು) ಪುರಾತನ ಕವಿಗಳು ತಮ್ಮ ಆಸೆ ಆಕಾಂಕ್ಷೆಗಳನ್ನು ವೇದನೆಗಳನ್ನು ಸ್ವಾಭಾವಿಕವಾಗಿ ವ್ಯಕ್ತಪಡಿಸಿದ ಮೊಟ್ಟ ಮೊದಲ ಕವಿತೆ ಗಳಿಗಿಂತ ಹೆಚ್ಚೇನು ಅಲ್ಲ ಎಂಬ ಊಹೆಗೆ ಸರಿ ಹೊಂದುತ್ತದೆ. ಈ ಕವಿತೆಗಳಲ್ಲಿ ಆರ್ಯ ಋಷಿಗಳು ತಮ್ಮ ಪುರಾತನ ದೇವರುಗಳನ್ನು ಶ್ಲಾಘಿಸುವ ಅವರಿಗೆ ಸ್ವೀಕಾರಾರ್ಹವೆನಿಸಬಹುದಾದ ವಿವಿಧ ರೀತಿಯ ಅರ್ಪಣೆಗಳನ್ನೂ ಮಾತುಗಳ ಮೂಲಕ ಅವರ ಒಲವನ್ನು ಪಡೆಯಲು ಪ್ರಯತ್ನಸಿದರ ಮತ್ತು ಅವರ ಅನುಗ್ರಹದ ಮೂಲಕ ಮನುಷ್ಯರು ಸಾಮಾನ್ಯವಾಗಿ ಎನನ್ನು ಆಪೇಕ್ಷಿಸುತ್ತಾರೋ ಅಂದರೆ ಆರೋಗ್ಯ, ಐಶ್ವರ್ಯ, ಆಯುಸ್ಸು, ದನಕರುಗಳು, ಸಂತಾನ, ಶತ್ರುಗಳ ಮೇಲೆ ಜಯ, ತಮ್ಮ ಪಾಪಗಳನ್ನು ಕ್ಷಮೀಸುವುದು ಮತ್ತು ಕೆಲವು ಸಾರಿ ದೇವಲೋಕದ ಸನ್ಮಾನ ಇವುಗಳನ್ನು ಆಪೇಕ್ಷಿಸಿದರು. ”
ಆದರೆ ಈ ಮಾತುಗಳನ್ನು ಕೆಲವೊಬ್ಬರು ಒಪ್ಪುವುದಿಲ್ಲ ಯಾಕಂದರೆ ಪಾಶ್ಚಿಮಾತ್ಯ ವಿದ್ವಾಂಸರು ಪೂರ್ವಗ್ರಹ ಪೀಡಿತರು ಅಂತ.

ಆದರೆ ವೇದಗಳ ಬಗ್ಗೆ ಈ ನೆಲದ ಮೊದಲ ಬಂಡಾಯಗಾರರು ಆದ ಚಾರ್ವಾಕರು ಎನೂ ಹೇಳಿದ್ದಾರೆ ನೋಡೋಣ.
” ಒಂದು ವೇಳೆ ಪರಲೋಕದಲ್ಲಿ ಸುಖ ಸಿಗುವುದಿಲ್ಲವಾದರೆ ಅನುಭವಸ್ಥ ಜ್ಞಾನಿಗಳು ಅಧಿಕ ಧನ್ಯವಯ ಮತ್ತು ಶ್ರಮವ್ಯಯ ಮಾಡಿ ಅಗ್ನಿಹೋತ್ರ ಮುಂತಾದ ಯಜ್ಞಗಳಲ್ಲಿ ಎಕೆ ನಿರತರಾಗಬೇಕು ಎಂದು ನೀವು ಆಕ್ಷೇಪಿಸಬಹುದು. ಆದರೆ ನಿಮ್ಮ ಆಕ್ಷೇಪ ನಮ್ಮ ವಿರುದ್ಧ ಸಾಧಿಸುವ ಪ್ರಮಾಣವಾಗಲಾರದು. ಎಕೆಂದರೆ ಅಗ್ನಿಹೋತ್ರ ಮುಂತಾದ ಯಜ್ಞಗಳು ಜೀವನೋಪಾಯದ ಸಾಧನಗಳಷ್ಟೆ. ಅಲ್ಲದೆ ವೇದಗಳಲ್ಲಿ ಅಸತ್ಯ, ಸ್ವವಿರೋಧ,ಮತ್ತು ಪುನರುಕ್ತಿ ಎಂಬ ಮೂರು ದೋಷಗಳು ಇವೆ. ಅಲ್ಲದೆ ತಮ್ಮನ್ನು ವೈದಿಕ ಪಂಡಿತರೆಂದು ಕರೆದುಕೊಳ್ಳುವ ಕೆಲ ಧೂರ್ತರು ಪರಸ್ಪರ ಖಂಡನೆಯಲ್ಲಿ ತೊಡಗುತ್ತಾರೆ. ಎಕೆಂದರೆ ಕರ್ಮಕಾಂಡ ಪ್ರಾಮಾಣ್ಯವಾದಿಗಳು ಜ್ಞಾನ ಕಾಂಡ ಪ್ರಾಮಾಣ್ಯವನ್ನು ಖಂಡಿಸುತ್ತಾರೆ , ಜ್ಞಾನ ಕಾಂಡ ಪ್ರಾಮಾಣ್ಯವಾದಿಗಳು ಕರ್ಮಕಾಂಡ ಪ್ರಾಮಾಣ್ಯವನ್ನು ಖಂಡಿಸುತ್ತಾರೆ. ಕೊನೆಯದಾಗಿ ವೇದಗಳು ಧೂರ್ತರು ರಚಿಸಿದ ಅಸಂಬದ್ಧ ಪ್ರಲಾಪಗಳು.”

ಬ್ರಹಸ್ಪತಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗುತ್ತಾರೆ.
” ಸ್ವರ್ಗ, ಮೋಕ್ಷ, ಪರಲೋಕಕ್ಕೆ ಹೋಗುವ ಆತ್ಮ ಇಲ್ಲ. ವರ್ಣಾಶ್ರಮ ಧರ್ಮ ಕರ್ಮಗಳಿಗೆ ತಕ್ಕ ಫಲಗಳು ಇಲ್ಲ. ಅಗ್ನಿಹೋತ್ರ , ಮೂರು ವೇದಗಳು, ಸನ್ಯಾಸಿಗಳು ಭಸ್ಮಲೇಪನ… ಇವನ್ನು ಬುದ್ಧಿಹೀನರು, ಪೌರುಷಹೀನರು ತಮ್ಮ ಜೀವಿಕೆಗೋಸ್ಕರ ಸ್ರಷ್ಠಿ ಮಾಡಿಕೊಂಡರು. ಜ್ಯೋತಿಷ್ಟೋಮ ಯಾಗದಲ್ಲಿ ಕೊಲ್ಲಲ್ಪಟ್ಟು ಸ್ವರ್ಗಕ್ಕೆ ಹೋಗುವುದಾದರೆ ಯಜಮಾನನು ತನ್ನ ತಂದೆಯ ಕೊಂದು ಆತ್ಮವನ್ನು ಎಕೆ ಸ್ವರ್ಗಕ್ಕೆ ಕಳುಹಿಸ ಬಾರದು.? ಮೂರು ವೇದಗಳ ಕ್ರತ್ರಗಳು ಭಂಡ, ಧೂರ್ತ, ಮತ್ತು ರಾಕ್ಷಸರು.

ಇನ್ನೂ ಋಗ್ವೇದ ಕೆಲವೊಂದು ಮಂತ್ರಗಳನ್ನು ನೋಡೋಣ

೧) ಎಲೈ ಇಂದ್ರದೇವನೆ ನಮ್ಮನ್ನು ರಕ್ಷಿಸು. ನಮಗೆ ಸಂಪತ್ತು ಕೊಡು . ನೀನು ತಂದ ಸಂಪತ್ತು ನಮ್ಮನ್ನು ಸಂತೋಷವಾಗಿಡಲಿ ಮತ್ತು ನಮ್ಮ ಶತ್ರುಗಳನ್ನು ಸಂಹರಿಸಲು ಸಹಾಯ ಮಾಡಲಿ.

೨) ಇಂದ್ರ ಅಗ್ನಿ ಮತ್ತು ವರುಣ ಪತ್ನಿಯರು ನನ್ನ ಬಳಿ ಬಂದು ಸೋಮರಸವನ್ನು ಕುಡಿಯಲಿ ಎಂದು ಪ್ರಾರ್ಥಿಸುತ್ತೆನೆ.

೩) ಎಲೈ ಅಗ್ನಿಯು ರಾಕ್ಷಸರಿಂದಲೂ, ಮೋಸಗಾರರಿಂದಲೂ , ಶತ್ರುಗಳಿಂದಲೂ, ದ್ವೇಷ ಮಾಡುವವರಿಂದಲೂ ನಮ್ಮನ್ನು ಕೊಲ್ಲುವವರಿಂದಲೂ ನಮ್ಮನ್ನು ರಕ್ಷಿಸು.

೪) ಓ ಇಂದ್ರನೆ ಈ ಸೋಮರಸವನ್ನು ಕುಡಿ. ಇದು ಅತ್ಯುತ್ತಮವಾದದು, ಇದು ಅಮ್ರತವನ್ನು, ಹೆಚ್ಚು ಮದವನ್ನು ಕೊಡುತ್ತದೆ.

ಇವಷ್ಟೇ ಅಲ್ಲ ಇಂತಹ ಸಾಕಷ್ಟು ಮಂತ್ರಗಳು ವೇದಗಳ ತುಂಬಾ ಇವೆ. ಹೀಗೆ ವೇದಗಳಲ್ಲಿ ತಮ್ಮ ತಮ್ಮ ಆಸೆ ಆಕಾಂಕ್ಷೆಗಳ ಪೂರೈಕೆಯ ಮಂತ್ರಗಳಿಂದ ತುಂಬಿ ಹೋಗಿವೆ. ಇವು ತಮ್ಮ ಜೀವಿಕೆಗೋಸ್ಕರ ಮಾಡಿಕೊಂಡಿರುವ ಉಪಾಯವಷ್ಟೇ ಹೊರತು ಅದರಿಂದ ಯಾವ ಪ್ರ ಯೋಜನೆಗಳು ಇಲ್ಲ. ಹೀಗೆ ವೈಯಕ್ತಿಕ ಆಸೆ ಆಕಾಂಕ್ಷೆಗಳಿಗೆ ಒತ್ತು ಕೊಟ್ಟ ವೇದಗಳನ್ನು ಬಸವಾದಿ ಶರಣರು ಹೇಗೆ ಒಪ್ಪುತ್ತಾರೆ.

ಶರಣರು ಯಾಕೆ ವೇದಗಳಿಗೆ ಒರೆಯ ಕಟ್ಟುತ್ತಾರೆ ಎಂದರೆ
” ವೇದ ನಡುನಡುಗಿತ್ತು ಯಾಕೆ?
ನಮ್ಮ ಕೂಡಲಸಂಗಯ್ಯನು ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ.
ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದಿತ್ತಯ್ಯಾ ಯಾಕೆ?
ಕೂಡಲಸಂಗಯ್ಯನು ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ
ತರ್ಕತರ್ಕಿಸಲರಿಯದೆ ಮೂಗುವಟ್ಟಿದ್ದಿತಯ್ಯಾ ಯಾಕೆ?
ನಮ್ಮ ಕೂಡಲಸಂಗಯ್ಯನು ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ
ಆಗಮ ಹೊರತಾಗಿ ಅಗಲಿದ್ದಿತಯ್ಯಾ ಯಾಕೆ? ನಮ್ಮ ಕೂಡಲಸಂಗಯ್ಯನು ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ
ನಮ್ಮ ಕೂಡಲಸಂಗಯ್ಯನು ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ ವೇದ ನಡುನಡುಗಿತ್ತು. ”

ವೇದಗಳು ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ ಯಾಕೆ ನಡುಗಬೇಕು? ಯಾಕಂದರೆ ಮಾದಾರ ಚೆನ್ನಯ್ಯನಿಗೆ ವೇದಗಳಲ್ಲಿ ಪ್ರವೇಶವಿದ್ದಿಲ್ಲ. ವೇದಗಳನ್ನು ಕೇಳಿದರೆ ಸಾಕು ಮಾದಾರ ಚೆನ್ನಯ್ಯನ ಕಿವಿಯಲ್ಲಿ ಸೀಸ ಹಾಕುವ ವೇದಗಳು ಕೂಡಲಸಂಗಯ್ಯನು ಮಾದಾರ ಚೆನ್ನಯ್ಯನ ಮನೆಯಲುಂಡರೆ ಹೇಗೆ ಸಹಿಸಿಯಾವು?. ಮಾದಾರ ಚೆನ್ನಯ್ಯನನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲದ ವೇದಗಳನ್ನು ಬಸವಣ್ಣ ಹೇಗೆತಾನೆ ಒಪ್ಪಿಯಾನು? . ಬಸವಣ್ಣನದು ಎಲ್ಲವನ್ನೂ ಒಳಗೊಳ್ಳುವ ಸಿದ್ದಾಂತ, ವೇದಗಳದು ಒಳಗೊಳ್ಳುವಿಕೆ ಆಸ್ಪದವಿಲ್ಲದಂತ ಸಿದ್ದಾಂತ. ವೇದಗಳು ಮಾದಾರ ಚೆನ್ನಯ್ಯನನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ ಬಸವನದು ಮಾದಾರ ಚೆನ್ನಯ್ಯನನ್ನು ಮಂತ್ರ ಪುರುಷನಾಗಿ , ಗೋತ್ರ ಪುರುಷನಾಗಿ ಒಪ್ಪಿಕೊಂಡು ಲಿಂಗಾಯತ ತತ್ವ ಗೋತ್ರ ಪುರಷನನ್ನಾಗಿ ಮಾಡುವಂತ ಸಿದ್ದಾಂತ. ಎಲ್ಲಿ ಮಾದಾರ ಚೆನ್ನಯ್ಯನನ್ನು ತಿರಸ್ಕರಿಸಲಾಯಿತೋ ಅಲ್ಲಿ ಬಸವಣ್ಣ ವೇದಗಳಿಗೆ ಒರೆಯ ಕಟ್ಟಿದ. ಜೀವ ವಿರೋಧಿ ಮನುಷ್ಯ ವಿರೋಧಿ ವಿಚಾರಗಳಿಗೆ ಒರೆಯ ಕಟ್ಟಿದ ಬಸವಣ್ಣ.

ಸೊಡ್ಡಳ ಬಾಚರಸನ ಈ ವಚನ ಇನ್ನೂ ಗಮನಾರ್ಹವಾದದ್ದು.
” ವೇದದವರನೊಲ್ಲದೆ ಮಾದಾರ ಚೆನ್ನಯ್ಯಂಗೊಲಿದೆ
ಶಾಸ್ತ್ರದವರನೊಲ್ಲದೆ ಶಿವರಾತ್ರಿ ಸಂಕಣ್ಣಂಗೊಲಿದೆ
ಆಗಮದವರನೊಲ್ಲದೆ ತೆಲುಗು ಜೊಮ್ಮಯ್ಯಂಗೊಲಿದೆ
ಪುರಾಣಕರ್ಮಿಗಳೆಂಬ ವಿಸಿಷ್ಠ ಬ್ರಹ್ಮರನೊಲ್ಲದೆ ಉದ್ಘಟಯ್ಯಂಗೊಲಿದೆ
ಅಣ್ಣ ಕೇಳಾ ಸೋಜಿಗವಾ!
ದಾಸದುಗ್ಗಳೆಗೊಲಿದೆ ಮುಕ್ಕಣ್ಣ ಸೊಡ್ಡಳ
ಹಾರವಣ್ಣಗಳಿಗೆ ಹೇಸಿ ಕದವನಿಕ್ಕಿಕೊಂಡೆ”
ಈ ವಚನದಲ್ಲಿ ವೇದ ಶಾಸ್ತ್ರ ಪುರಾಣ ಆಗಮಗಳು ಯಾರನ್ನೂ ದೂರ ಇಡಲ್ಪಟ್ಟವೋ ಅವರಿಗೆ ಸಂಗಯ್ಯನು ಒಲಿದ, ಯಾರಿಗೆ ವೇದ ಆಗಮ ಪುರಾಣ ಶಾಸ್ತ್ರಗಳು ಒಲಿದವೋ ಅಂತವರನ್ನು ಕಂಡು ಹೇಸಿ ಸಂಗಯ್ಯ ಕದವನಿಕ್ಕಿಕೊಂಡ. ಬಸವನದು ಒಳಗೊಳುವ ಪ್ರಕ್ರಿಯೆ ವೇದಗಳದು ಒಳಗೊಳ್ಳದಿರುವ ಪ್ರಕ್ರಿಯೆ. ಹಾಗಾಗಿ ಬಸವಣ್ಣ ವೇದಗಳಿಗೆ ಒರೆಯ ಕಟ್ಟಿದ.

ಇನ್ನೂ ವೇದಗಳಲ್ಲಿ ತಮ್ಮ ವೈಯಕ್ತಿಕ ಆಸೆ ಆಕಾಂಕ್ಷೆಗಳಿಗೆ ಒತ್ತು ಕೊಟ್ಟಂತ ಸಿದ್ದಾಂತ ಬಸವನದು ವೈಯಕ್ತಿಕ ಸ್ವಾರ್ಥ ಆಸೆ ಆಕಾಂಕ್ಷೆಗಳಗಿಂತ ಸಾಮಾಜಿಕ ಆಸೆಯಗಳು ಮುಖ್ಯ. ಅದಕ್ಕಾಗಿ ” ಸೋಹಂ ಎಂದೆನಿಸದೆ ದಾಸೋಹಂ ಎಂದನಿಸಯ್ಯ ” ಎನ್ನುವಂತದ್ದು. ವ್ಯಕ್ತಿ ವಿಷಯಗಳಿಗಿಂತ ಸಮಷ್ಟಿ ವಿಷಯಗಳೆ ಬಸವಣ್ಣನಿಗೆ ಪ್ರಿಯವಾದವು.ಅದಕ್ಕಾಗಿ ಬಸವಣ್ಣ ” ಲಿಂಗ ವ್ಯಸನಿ ಜಂಗಮ ಪ್ರೇಮಿಯಾಗಿಸಯ್ಯ ” ಎಂದು ಕೇಳಿಕೊಳ್ಳುತ್ತಾನೆ. ಜಂಗಮವೆ ಲಿಂಗವೆಂದು ನಂಬಿದ ಬಸವಣ್ಣನಿಗೆ ಜಂಗಮವೆ ಅಂತಿಮ ಲಿಂಗವಾಗುತ್ತದೆ. ಸಮಾಜಕ್ಕಾಗಿ ತನ್ನನ್ನು ತಾನೇ ಸಮರ್ಪಿಸಿಕೊಂಡ ಬಸವಣ್ಣ. ಮಾದಾರ ಚೆನ್ನಯ್ಯನನ್ನು ಒಪ್ಪದ ವೇದ , ಸಂಕಣ್ಣನನ್ನು ಒಪ್ಪದ ವೇದ, ತೆಲುಗು ಜೊಮ್ಮಯ್ಯನನ್ನು ಒಪ್ಪದ ವೇದ, ದಾಸ ದುಗ್ಗಳೆಯರನ್ನು ಒಪ್ಪದ ವೇದಕ್ಕೆ ಬಸವಣ್ಣ ಒರೆಯ ಕಟ್ಟಿದ.

ವೇದಕ್ಕೆ ಒರೆಯ ಕಟ್ಟುವೆ.

ಡಾ. ರಾಜಶೇಖರ ನಾರನಾಳ
ವೈದ್ಯರು. ಗಂಗಾವತಿ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಶರಣರ ಚಿಂತನೆಗಳ ಅನುಭವ ಮಂಟಪ ನಿರ್ಮಿಸಿ: ಬಸವರಾಜ ಧನ್ನೂರ

  ‘ಸನಾತನ ಚಿಂತನೆಗಳ ಮರು ಸೃಷ್ಟಿ’ ಶೀರ್ಷಿಕೆಗೆ ಆಕ್ಷೇಪ ಬೀದರ್: ನೂತನ ಅನುಭವ ಮಂಟಪ ಭೂಮಿ ಪೂಜೆ ಕಾರ್ಯಕ್ರಮ ಕುರಿತು …

ಶರಣರ ಪ್ರಗತಿಪರ ಚಿಂತನೆಗೆ ಧಕ್ಕೆ ಮಾಡದಿರಿ: ಬಸವರಾಜ ಹೊರಟ್ಟಿ

  ಹುಬ್ಬಳ್ಳಿ: ಬಸವಕಲ್ಯಾಣದಲ್ಲಿ ನಿರ್ಮಿಸುತ್ತಿರುವ ಅನುಭವ ಮಂಟಪದ ಭೂಮಿಪೂಜೆ ಕಾರ್ಯಕ್ರಮದ ಕುರಿತು ಜ .6 ರಂದು ನೀಡಿದ ಜಾಹೀರಾತಿನಲ್ಲಿ ‘ಸನಾತನ …

ಸರಕಾರದ ವಿರುದ್ಧ ತೋಂಟದ ಸಿದ್ಧರಾಮ ಶ್ರೀಗಳ ಅಸಮಾಧಾನ

  ಲಿಂಗಾಯತ ಪ್ರಗತಿಪರ ಚಿಂತನೆಯ ಧರ್ಮವಾಗಿದೆ ಗದಗ : ಮಹಾಮಾನವತಾವಾದಿ ಪ್ರಗತಿಪರ ಚಿಂತಕ, ವಿಶ್ವಗುರು ಬಸವಣ್ಣನವರ ಕಾರ್ಯಕ್ಷೇತ್ರವಾಗಿದ್ದ ಬಸವಕಲ್ಯಾಣದಲ್ಲಿ ನೂತನ …

ಸಮಾಜಕ್ಕಾಗಿ ಸರ್ವಸ್ವವನ್ನು ತ್ಯಾಗಮಾಡಿದ ತ್ಯಾಗವೀರ ಶಿರಸಂಗಿ ಲಿಂಗರಾಜರು

  ಲೇಖನ: ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತೋಂಟದಾರ್ಯ ಸಂಸ್ಥಾನ ಮಠ ಗದಗ ಬೆಳಗಾವಿ: ಕರ್ನಾಟಕವನ್ನು ಶೈಕ್ಷಣಿಕವಾಗಿ ಹಾಗು ಸಾಂಸ್ಕೃತಿಕವಾಗಿ …

ಸನಾತನ ಶಬ್ದಕ್ಕೆ ಗೊ.ರು.ಚನ್ನಬಸಪ್ಪ ವಿರೋಧ

  ಬಸವಕಲ್ಯಾಣ: ರಾಜ್ಯ ಸರ್ಕಾರ ಪತ್ರಿಕೆಗಳಿಗೆ ನೀಡಿರುವ ಜಾಹೀರಾತಿನಲ್ಲಿ ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ ನೂತನ ಅನುಭವ ಮಂಟಪ ನಿರ್ಮಾಣ’ …

ಸಮಗ್ರ ಚಿಂತನೆಯ ವಿಚಾರವಾದ ಮತ್ತು ಮುಲಾಜಿಗೆ ಬಸಿರಾಗುವ ಅರೆಬೆಂದ ವಿಚಾರವಾದ

ಕೆಲವು ಅಥವಾ ಹಲವು ಅರೆಬೆಂದ ವಿಚಾರವಾದಿಗಳು ಅನುಭವ ಮಂಟಪದ ನಿರ್ಮಾಣದ ಕುರಿತಾಗಿ ಆರ್ಥಿಕ ಸ್ಥಿತಿ ಮತ್ತು ಇತರೆ ಕಾರಣಗಳಿಂದ ೫೦೦ …

ಕಾಯಕದಲ್ಲೇ ದೇವರ ಕಂಡ ಕೇತಲಾದೇವಿ

  ಹನ್ನೆರಡನೆಯ ಶತಮಾನದ ಬಸವಾದಿ ಶರಣರ ಸಮಕಾಲೀನ ಶಿವಶರಣೆ ಕೇತಲದೇವಿಯು ಶರಣ ಕುಂಬಾರ ಗುಂಡಯ್ಯನವರ ಧರ್ಮಪತ್ನಿ. ಕುಂಬಾರ ಗುಂಡಯ್ಯ ಮತ್ತು …

ಅನುಭವಮಂಟಪ ನಡೆದು ಬಂದ ದಾರಿ

ಬೀದರ್: ವಿಶ್ವರು ಬಸವಣ್ಣನವರು 12ನೇ ಶತಮಾನದಲ್ಲಿ ಜಗತ್ತಿನ ಮುಟ್ಟು ಮೊದಲು ಪ್ರಜಾಪ್ರಭುತ್ವದ ಮಾದರಿಯ ಅನುಭವ ಮಂಟಪವನ್ನು ಸ್ಥಾಪಿಸಿದರು. ಅನುಭವ ಮಂಟಪದಲ್ಲಿ …

ಲಿಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ್ ನಿಧನ

  ಬೆಳಗಾವಿ: ಬೆಳಗಾವಿ ಲಿಂಗಾಯತ ಸಂಘಟನೆಯ ಸಕ್ರಿಯ ಕಾರ್ಯಕರ್ತ, ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಗ್ರಾಮೀಣ ಪ್ರಧಾನ ಕಾರ್ಯದರ್ಶಿ ರಾಜು …

2021ರ ಲಿಂಗಾಯತ ದಿನದರ್ಶಿಕೆ ಬಿಡುಗಡೆ ಹಾಗೂ ಶರಣ ಮೇಳದಲ್ಲಿ ಪಾಲ್ಗೊಳ್ಳಲು ಮನವಿ

ಗಜೇಂದ್ರಗಡ: ನಂಬಿಕೆಗೆ ಅರ್ಹವಲ್ಲದ ಪಂಚಾಂಗ, ಜ್ಯೋತಿಷ್ಯಕ್ಕೆ ಜೋತುಬಿದ್ದು, ಮೌಢ್ಯತೆಗೆ ಒಳಗಾಗಿ ನಮ್ಮ ಬದುಕನ್ನು ಕೆಡಿಸಿಕೊಳ್ಳುವುದರ ಬದಲಾಗಿ ಧರ್ಮಗುರು ಬಸವಣ್ಣ ಹಾಗೂ …

ಲಿಂಗಾಯತ– ವೀರಶೈವರ ‘ಒಬಿಸಿ ಬೇಡಿಕೆ’ ಮತ್ತು ಒಗ್ಗಟ್ಟಿನ ಹೋರಾಟ… ಧರ್ಮ, ರಾಜಕಾರಣ, ಸಾಮಾಜಿಕ ನ್ಯಾಯ

  ಲೇಖನ: ಡಾ. ಶಿವಮೂರ್ತಿ ಮುರುಘಾ ಶರಣರು ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನದ ದಿನವನ್ನು ರಾಷ್ಟ್ರದಾದ್ಯಂತ ಕಳೆದ ತಿಂಗಳು …

ಪತ್ರಕರ್ತ ಶಿವರಂಜನ್ ಸತ್ಯಂಪೇಟೆಗೆ ಪಿಎಚ್.ಡಿ.ಪದವಿ

  ಕಲಬುರಗಿ : ಪತ್ರಕರ್ತ-ಲೇಖಕ ಶಿವರಂಜನ್ ಸತ್ಯಂಪೇಟೆ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ. ಗುಲ್ಬರ್ಗ ವಿವಿ …

“ನಿಜ ಹೇಳದಿದ್ದರೂ ಪರವಾಗಿಲ್ಲ ಸುಳ್ಳು ಹೇಳಬೇಡಿ”

  ೧) ಬಸವ ಪರಂಪರೆ, ಶರಣ ಪರಂಪರೆ, ಲಿಂಗಾಯತ ಧರ್ಮವು 12ನೇ ಶತಮಾನದಲ್ಲಿ ಅರಿವೇ ಗುರು, ಆಚಾರವೇ ಲಿಂಗ, ಅನುಭಾವವೇ …

ಇತಿಹಾಸ ತಿರುಚುವ ರಂಭಾಪುರಿ ಶ್ರೀಗಳ ಕೃತ್ಯ ಖಂಡನೀಯ

ರಾಮದುರ್ಗ: ಸುವರ್ಣ ಚಾನೆಲ್ ನವರು ಎಡೆಯೂರ ಸಿದ್ಧಲಿಂಗ ಶ್ರೀಗಳ ಬಗ್ಗೆ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅಭಿನವ ಅಲ್ಲಮನೆಂದೇ …

ಇಳಕಲ್ ಗುರುಮಹಾಂತ ಶ್ರೀಗಳಿಗೆ ‘ಸಂಯಮ ಪ್ರಶಸ್ತಿ’ ಪ್ರದಾನ

  ಬಾಗಲಕೋಟೆ: ಇಳಕಲ್‌ನ ಚಿತ್ತರಗಿ ವಿಜಯ ಮಹಾಂತೇಶ ಸಂಸ್ಥಾನ ಮಠದ ಗುರುಮಹಾಂತ ಶ್ರೀಗಳಿಗೆ ಉಪಮುಖ್ಯ ಮಂತ್ರಿ ಗೋವಿಂದ ಕಾರಜೋಳ ಶನಿವಾರ …

Leave a Reply

Your email address will not be published. Required fields are marked *

error: Content is protected !!