Home / featured / ಸಮಗ್ರ ಚಿಂತನೆಯ ವಿಚಾರವಾದ ಮತ್ತು ಮುಲಾಜಿಗೆ ಬಸಿರಾಗುವ ಅರೆಬೆಂದ ವಿಚಾರವಾದ

ಸಮಗ್ರ ಚಿಂತನೆಯ ವಿಚಾರವಾದ ಮತ್ತು ಮುಲಾಜಿಗೆ ಬಸಿರಾಗುವ ಅರೆಬೆಂದ ವಿಚಾರವಾದ

ಕೆಲವು ಅಥವಾ ಹಲವು ಅರೆಬೆಂದ ವಿಚಾರವಾದಿಗಳು ಅನುಭವ ಮಂಟಪದ ನಿರ್ಮಾಣದ ಕುರಿತಾಗಿ ಆರ್ಥಿಕ ಸ್ಥಿತಿ ಮತ್ತು ಇತರೆ ಕಾರಣಗಳಿಂದ ೫೦೦ ಕೋಟಿ ರೂ.ಗಳು ವ್ಯಯಿಸುವುದು ವ್ಯರ್ಥವೆಂದು ಪರಿಗಣಿಸಿ ಋಣಾತ್ಮಕ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಅಲ್ಲಾ, ಇಲ್ಲಿಯವರೆಗೂ ಬರೀ ಮೌಢ್ಯವನ್ನೇ ಬಿತ್ತುವ ಕೆಟ್ಟ ಉದ್ದೇಶಕ್ಕಾಗಿ ಎಲ್ಲಾ ಸರಕಾರಗಳು ಇಷ್ಟು ದಿನ ಎಷ್ಟೆಷ್ಟೋ ಲಕ್ಷ-ಲಕ್ಷ ಕೋಟಿಗಳನ್ನು ವ್ಯಯ ಮಾಡಿದ್ದಾರೆ. ಆದರೆ ಇಂದು ಸಾಮಾಜಿಕ ಕಳಕಳಿಯ ಒಳ್ಳೆಯ ಉದ್ಧೇಶಕ್ಕಾಗಿ ಶರಣರು ಸಾರಿದ ಸಂದೇಶಗಳನ್ನು ಪ್ರಚಾರ ಮತ್ತು ಪ್ರಸಾರ ಮಾಡಲು, ಶರಣರ ನೈಜ ಇತಿಹಾಸವನ್ನು ನೆನೆಯಲು, ಇಡೀ ವಿಶ್ವಕ್ಕೆ ಮೊಟ್ಟಮೊದಲ ಬಾರಿಗೆ ಕ್ರಿ.ಶ. ೧೨ನೇಯ ಶತಮಾನದಲ್ಲೆ ಅನುಭವ ಮಂಟಪದ ಹೆಸರಿನಲ್ಲಿ ಪ್ರಜಾಸಂಸತ್ತನ್ನು ನೀಡಿದ ಕರ್ನಾಟಕದ ಶರಣರ ಹೆಸರನ್ನು ವಿಶ್ವದಾದ್ಯಂತ ಪಸರಿಸಲು ಮತ್ತು ಅವರ ಸರ್ವೋತೋಮುಖ ಬೆಳವಣಿಗೆಯ ಸಿದ್ದಾಂತವನ್ನು ಪ್ರಚುರಗೊಳಿಸಲು ಅನುಕೂಲವಾಗುವ ಅನುಭವ ಮಂಟಪವನ್ನು ಪುನರ್ ನಿರ್ಮಾಣ ಮಾಡುವುದು ತಪ್ಪೇ ಅಲ್ಲ.

ಲಿಂಗಾಯತರನ್ನು ಮತ್ತು ಲಿಂಗಾಯತ ತತ್ವದವರ ವಿರೋಧಿ ಮತ್ತು ದ್ವೇಷಿಗಳಾದ ಈಗಿನ ಹಲವು ಕೀಳು ಮನಸ್ಥಿತಿ ಹೊಂದಿರುವವರು ಮತ್ತು ಮುಲಾಜಿಗೆ ಬಸಿರಾಗುವ ಕೆಲವರು ಅನುಭವ ಮಂಟಪದ ನಿರ್ಮಾಣಕ್ಕೆ ವಿರೋಧ ಅಥವಾ ಮತ್ಸರ ಪಡುತ್ತಿದ್ದರೆ ಕೆಲವು ಸ್ವಯಂಘೋಷಿತ ವಿಚಾರವಾದಿಗಳು ಮತ್ತು ಕೆಲವು ಲಿಂಗಾಯತರು ಕೂಡ ಅನುಭವ ಮಂಟಪದ ನಿರ್ಮಾಣ ಕುರಿತು ಆರ್ಥಿಕ ಹಿನ್ನೆಲೆಯ ದೃಷ್ಟಿಯಿಂದ ಚಕಾರವೆತ್ತುತ್ತಿವೆ.

ಸಮಗ್ರ ಚಿಂತನೆಯ ಯಾವುದೇ ವಿಚಾರವಾದಿ ಲಿಂಗಾಯತ ಶರಣರ ಸಂದೇಶ ಸಾರಲು ವ್ಯಯಿಸುವ ಹಣ ವ್ಯರ್ಥವೆಂದು ಎಂದೂ ಭಾವಿಸುವುದಿಲ್ಲ. ಇದಕ್ಕೆ ಪ್ರತ್ಯಕ್ಷ ಉದಾ. ಫ. ಗು. ಹಳಕಟ್ಟಿಯವರು. ಅವರು ತಮ್ಮ ಸ್ವಂತ ಆಸ್ತಿಯನ್ನೇ ಮಾರಾಟ ಮಾಡಿ ಶರಣರ ವಚನಗಳನ್ನು ಉಳಿಸಿಕೊಂಡು ಪ್ರಚಾರ ಮಾಡಿದರು.
ಅಂತಹದರಲ್ಲಿ ಈ ಉದ್ದೇಶಕ್ಕಾಗಿ ಸರಕಾರದ ಹಣ ಉಪಯೋಗಿಸುವುದು ವ್ಯರ್ಥವೆನ್ನುವರು ಅರೆಬೆಂದ ಬುದ್ದಿಬೆಳವಣಿಗೆಯವರು ಎಂದೇ ಅರ್ಥ.

ಒಂದು ವೇಳೆ ಈ ಹಣವನ್ನು ನಿರ್ಮಾಣಕೆ ಉಪಯೋಗಿಸದೇ ಸರಕಾರವೇ ಉಳಿಸಿಕೊಂಡರೆ ಮುಂದೆ ಯಾವುದಕ್ಕಾಗಿ ಈ ಹಣವನ್ನು ಉಪಯೋಗಿಸುತ್ತಾರೆ ಎಂದು ಯಾರಾದರೂ ಯೋಚಿಸಿದ್ದೀರಾ.!?
ತಮ್ಮತಮ್ಮ ಸರಕಾರಗಳನ್ನು ಉಳಿಸಿಕೊಳ್ಳುವ ಅಥವಾ ಬೇರೆ ಸರಕಾರಗಳನ್ನು ಪಥನಗೊಳಿಸುವ ಕುದುರೆ ವ್ಯಾಪಾರಕ್ಕೆ ಬಳಸುತ್ತಾರೆ.
ಈ ಹಣವನ್ನು ಅಭಿವೃದ್ಧಿಯ ಹೆಸರಿನಲ್ಲಿ ಲಪಟಾಯಿಸಲು ಹೊಂಚು ಹಾಕುತ್ತಾರೆ.
ಅಥವಾ ಇನ್ನಿತರ ಯೊಜನೆಗಳ ಹೆಸರಲ್ಲಿ ತಿಂದುತೇಗಲು ಬಳಸುತ್ತಾರೆ.

ಕೇವಲ ಕರೋನಾ ಹೆಸರಿನಲ್ಲಿ ಮಾತ್ರ ಸರಕಾರಗಳು ಎಷ್ಟೆಲ್ಲಾ ದೋಚಿದರು ಎಂದು ಯೋಚಿಸಿರಿ ಸಾಮಾನ್ಯರಿಂದ.!

ಆದ್ದರಿಂದ ಶರಣರ ವಿಚಾರವಾಗಿ ಯಾವುದೇ ಋಣಾತ್ಮಕ ವಿಷಯಗಳನ್ನು ಹಂಚಿಕೊಳ್ಳುವ ಮೊದಲು ಸಮಗ್ರ ಚಿಂತನೆಯ ದೃಷ್ಟಿಯಿಂದ ಒಂದು ಪ್ರಬುಧ್ಧ ನಿರ್ಧಾರಕ್ಕೆ ಬರಲು ವಿನಂತಿಸುತ್ತೇನೆ.

~ಶರಣು ಶಿಣ್ಣೂರ್

About Shivanand

Admin : Lingayat Kranti Monthly news paper 8884000008 [email protected]

Check Also

ಸಂಸ್ಕೃತಿ & ಸಂಸ್ಕಾರಗಳ ಬೆನ್ನೇರಿದ ಯುವ ಸನ್ಯಾಸಿಗಳು : ಪೂಜ್ಯಶ್ರೀ ನಿಜಗುಣಾನಂದ ಮಹಾಸ್ವಾಮಿಗಳು

ಬೈಲೂರ: ತಮ್ಮ ಯೌವ್ವನದಲ್ಲಿ ಧರ್ಮದ ಕಂಕಣ ಕಟ್ಟಿಕೊಂಡು‌ ನಿಂತ ಯುವ ಸನ್ಯಾಸಿಗಳ ನೋಡಿದರೆ ತುಂಬ ಸಂತೋಷವಾಗುತ್ತದೆ ಜೊತೆಗೆ ಜೀವನ ಸಾರ್ಥಕವಾಯಿತು …

ಪ್ರತ್ಯೇಕ ಧರ್ಮ ಅಲ್ಪಸಂಖ್ಯಾತ ಮಾನ್ಯತೆ ಸಿಕ್ಕಿದ್ದರೆ, ಲಿಂಗಾಯತ ಉಪಪಂಗಡಗಳು ಮೀಸಲಾತಿ ಕೇಳುವ ಪ್ರಸಂಗವೇ ಬರುತ್ತಿರಲಿಲ್ಲ: ಎಂ ಬಿ ಪಾಟೀಲ

ಬೆಂಗಳೂರು: ಮಾಜಿ ಸಚಿವರು ಮತ್ತು ಶಾಸಕರಾದ ಶ್ರೀ ಎಂ.ಬಿ.ಪಾಟೀಲ ಅವರು ಬೆಂಗಳೂರಿನ ಸದಾಶಿವ ನಗರದ ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯನ್ನು …

ಸೋಹಂ ಎಂದೆನಿಸದೇ ದಾಸೋಹಂ ಎಂದೆನಿಸಯ್ಯ..

ಮೊದಲು ಮೂರು ನೀತಿಕಥೆಗಳನ್ನು ನೊಡೋಣ ಆನಂತರ ವಿಷಯಕ್ಕೆ ಬರೋಣ.ಬೆಳಗಿನ ಜಾವ ಯಾರೋ ಒಬ್ಬರು ಸಮುದ್ರ ತೀರದಲ್ಲಿ ವಾಯುವಿಹಾರ ಮಾಡುತ್ತಿದ್ದರು. ಅಂದು …

ಹಗಲಿನಲ್ಲಿಯೆ ಸಂಜೆಯಾಯಿತು ಒಂದು ಐತಿಹಾಸಿಕ ನಿರೂಪಣೆ: ಡಾ.ಸಿದ್ಧನಗೌಡ ಪಾಟೀಲ

ಸಾಹಿತಿ ಮತ್ತು ಲಿಂಗೈಕ್ಯ ಪೂಜ್ಯ ತೋಂಟದ ಸಿದ್ಧಲಿಂಗಶ್ರೀಗಳ ಒಡನಾಡಿ ಶಿಷ್ಯರಾದ ಸಿದ್ದು ಯಾಪಲಪರವಿ ಅವರು ಬರೆದ ಹಗಲಿನಲ್ಲಿಯೆ ಸಂಜೆಯಾಯಿತು ಕೃತಿ …

ರಂಗಾಯಣದಿಂದ ನೇಗಿನಹಾಳದಲ್ಲಿ ಸರ್ವರಿಗೂ ಸಂವಿಧಾನದ ನಾಟಕ

ನೇಗಿನಹಾಳ: ಜನಸಾಮಾನ್ಯರಲ್ಲಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಅರಿವು ಮೂಡಿಸುವುದರ ಜೊತೆಗೆ ಜಾತಿ, ಧರ್ಮ, ಲಿಂಗಸಮಾನತೆ, ಅಸ್ಪೃಶ್ಯತೆ ನಿವಾರಣೆ, ದೇವದಾಸಿ …

ಜಗದ್ಭವ್ಯ ಮೇರು ಕೃತಿ : ಮಹಾತ್ಮರ ಚರಿತಾಮೃತ

ಲೇಖನ: ಪ್ರಕಾಶ ಗಿರಿಮಲ್ಲನವರ                          …

ಸೆ. 25ರಂದು “ಮಹಾತ್ಮರ ಚರಿತಾಮೃತ” ಲೋಕಾರ್ಪಣೆ

ಅಥಣಿ: ಗಡಿಭಾಗದಲ್ಲಿ ನಾಡು-ನುಡಿ ಕಟ್ಟುವ ಕಾಯಕದಲ್ಲಿ ನಿರತವಾಗಿರುವ ಅಥಣಿ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಅವರು ಸಂತ-ಮಹಾಂತರ …

ಧರ್ಮ ವಿಭಜನೆ ನೆವದಲ್ಲಿ ಪಾಟೀಲರ ಟೀಕೆ ಸಾಧುವಲ್ಲ

-ಸಾಹಿತಿ ಶಿವಕುಮಾರ್ ಉಪ್ಪಿನ ಖೇದ ವಿಜಯಪುರ ಜಿಲ್ಲೆಯ ಒಳ ಮರ್ಮದ ರಾಜಕೀಯ ಮೇಲಾಟದ ಕಾರಣಕ್ಕೆ ಲಿಂಗಾಯತ ಚಳವಳಿಯಿಂದಲೇ ಕಾಂಗ್ರೆಸ್‌ಗೆ ಸೋಲಾಯಿತು …

ಲಿಂಗಾಯತ ಪೇಜ್‌ಗೆ ಕಿಡಿಗೇಡಿಗಳ ಕಿರಿಕಿರಿ..!

ಲಿಂಗಾಯತ ಯುವ ಒಕ್ಕೂಟ ಫೇಸ್ ಬುಕ್ ಪೇಜ್‌ಗೆ ಮಸಿ ಬಳಿಯಲು ಅದನ್ನು ಹ್ಯಾಕ್ ಮಾಡಿ ಅಶ್ಲೀಲ ಪೋಸ್ಟ್‌ಗಳನ್ನು ಮಾಡುತ್ತಿರುವುದರಿಂದ ಈ …

“ಲಕ್ಷ್ಮೀ ಪೂಜೆ” ಲಕ್ಷ್ಮೀ ಯಾರು.?

  ಈ ಲಕ್ಷ್ಮೀ ಪೂಜೆ ಯಾಕೆ ಮಾಡುತ್ತಿದ್ದರು? ರಾಜನ ಹೆಂಡತಿಗೆ ಲಕ್ಷ್ಮೀ ಎಂದು ಕರೆಯುತ್ತಿದ್ದರು, ಇದು ಹೊಗಳಿಕೆಯ ಪದ. ರಾಜನಿಗೆ …

ಸಂಗೊಳ್ಳಿ ರಾಯಣ್ಣನಿಗೆ ಜನ್ಮ ನೀಡಿದ್ದು ನೇಗಿನಹಾಳ ಗ್ರಾಮ

ಸ್ವತಂತ್ರ ಹೋರಾಟಗಾರರ ಧರ್ಮಪತ್ನಿ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ನೇಗಿನಹಾಳ : ಬ್ರಿಟಿಷ್ ಸರ್ಕಾರದ ವಿರುದ್ಧ ಮೊಟ್ಟಮೊದಲಿಗೆ ಧಂಗೆ ಸಾರಿ …

ಕ್ರೀಡೆ, ಕಲೆ, ಸಾಹಿತ್ಯದಂಥ ರಂಗಗಳು ಜಾತಿ, ಸಂಕುಚಿತತೆ ನಿರ್ಮೂಲನೆಯ ಮಹಾಸಾಧನಗಳು

  ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮೀಜಿ ಅಭಿಮತ ಮುಂಡರಗಿ ಆಗಷ್ಟ್ 07: ಪ್ರಸ್ತುತ ರಾಜಕಾರಣದಲ್ಲಿ, ಕಾವಿಯೊಳಗೆ ಖಾದಿಯ ಪ್ರವೇಶ ಸಲ್ಲದು. …

ಪ್ರಮಾಣ ವಚನ ನೇರಪ್ರಸಾರ; ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ರಾಜಭವನದಿಂದ ನೇರ ಪ್ರಸಾರ ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ಇಂದು ಮಧ್ಯಾಹ್ನ 2:15ಕ್ಕೆ …

ಅಲ್ಲಮಪ್ರಭುಗಳ ವಚನಗಳು ಇಂಗ್ಲಿಷ್‌ಗೆ ಭಾಷಾಂತರ

  ವಿಜಯಪುರ : ಖ್ಯಾತ ಭಾಷಾತಜ್ಞ ಎ. ಕೆ. ರಾಮಾನುಜನ್ ಅವರ ಬಳಿಕ ಶರಣರೊಬ್ಬರ ವಚನಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ ಕೀರ್ತಿ …

ತ್ರಿಭಾಷೆಗಳಲ್ಲಿ ಮೂಡಿಬಂದ ಮಹಾಜಂಗಮ

ಮಹಾಜಂಗಮ : ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಮರಾಠಿ ಮೂಲ ಲೇಖಕರು : ಶ್ರೀ ರಾಜು ಬ. ಜುಬರೆ …

Leave a Reply

Your email address will not be published. Required fields are marked *