Home / featured / ಕಾಯಕದಲ್ಲೇ ದೇವರ ಕಂಡ ಕೇತಲಾದೇವಿ

ಕಾಯಕದಲ್ಲೇ ದೇವರ ಕಂಡ ಕೇತಲಾದೇವಿ

 

ಹನ್ನೆರಡನೆಯ ಶತಮಾನದ ಬಸವಾದಿ ಶರಣರ ಸಮಕಾಲೀನ ಶಿವಶರಣೆ ಕೇತಲದೇವಿಯು ಶರಣ ಕುಂಬಾರ ಗುಂಡಯ್ಯನವರ ಧರ್ಮಪತ್ನಿ. ಕುಂಬಾರ ಗುಂಡಯ್ಯ ಮತ್ತು ಕೇತಲದೇವಿ ಶರಣಜೀವಿಗಳು ಮೂಲತಃ ಬೀದರ ಜಿಲ್ಲೆಯ ಭಾಲ್ಕಿ ಪಟ್ಟಣದವರು. ಬಸವಕಲ್ಯಾಣದಿಂದ ನಲವತ್ತು ಕಿ.ಮೀ. ದೂರದಲ್ಲಿರುವ ಭಾಲ್ಕಿಯು ತನ್ನದೇ ಆದ ಐತಿಹಾಸಿಕ ಪರಂಪರೆ ಹೊಂದಿರುವ ತಾಲೂಕು ಕೇಂದ್ರ ಕೂಡ ಹೌದು.

ಶರಣೆ ಕೇತಲಾದೇವಿಯ ಆರಾಧ್ಯ ದೈವ ‘ಕುಂಭೇಶ್ವರ’.
ಇಂದಿಗೂ ಭಾಲ್ಕಿಯ ಕುಂಬಾರಗಲ್ಲಿಯ ಕೋಟೆ ಒಳಗಡೆ ‘ಕುಂಭೇಶ್ವರ ದೇವಾಲಯ’ ಇದೆ‌.
ಕುಂಬಾರ ಗುಂಡಯ್ಯ ಮತ್ತು ಕೇತಲಾದೇವಿಯ ದಂಪತಿಯ ಸಮಾಧಿಗಳು ಭಾಲ್ಕಿಯ ಕುಂಭೇಶ್ವರ ದೇವಾಲಯದ ಆವರಣದಲ್ಲಿವೆ. ಅದನ್ನು ‘ಶರಣರ ಸ್ಮಾರಕ’ವಾಗಿ ರೂಪಿಸುವುದು ಸ್ಥಳೀಯರ ಬೇಡಿಕೆಯಿದೆ.

ಗುಂಡಯ್ಯನವರ ಕುಲ ಕಸುಬು ಮಡಿಕೆ, ಕುಡಿಕೆ, ಹಣತೆ, ಇತ್ಯಾದಿ ಮಣ್ಣಿನ ಕಲಾಕೃತಿಗಳನ್ನು ಸಿದ್ದಪಡಿಸುವುದು. ನಿಷ್ಠೆಯ ಕಾಯಕ ಮೂಲಕವೇ ಜೀವನ ನಡೆಸಿದ ದಂಪತಿಗಳು ದುಡಿಮೆಗೆ ಮೊದಲ ಆದ್ಯತೆ ನೀಡಿದರು. ಹೀಗಾಗಿ ಎಲ್ಲಾ ಶರಣರು ಗುಂಡಯ್ಯನವರಿಗೆ ‘ನಿಷ್ಠೆಯ ಕಾಯಕ ಶರಣ’ ‘ ಕಾಯಕ ಯೋಗಿ’ ಹೀಗೆ ಹಲವು ನಾಮಗಳಿಂದ ಕರೆಯುತ್ತಿದ್ದರು. ಸತ್ಯ ಶುದ್ಧ ಕಾಯಕ, ದಾಸೋಹ ಮನೋಭಾವ ಹೊಂದಿರುವ ಅವರು ನಡೆ ನುಡಿ ಸಿದ್ದಾಂತದಲ್ಲಿ ಪರಿಶುದ್ಧರಾಗಿ ಭಕ್ತಿಯಲ್ಲಿಯೇ ದೇವರನ್ನು ಕಂಡುಕೊಳ್ಳಲು ಪ್ರಯತ್ನಿಸಿದರು.

ಸಮಾನತೆ ಸಂಕೇತಿಸುವ ಅನುಭವ ಮಂಟಪದಲ್ಲಿ ಭಾಗವಹಿಸಲು ಎಲ್ಲಾ ಶರಣರಿಗೆ ಮುಕ್ತ ಅವಕಾಶವಿತ್ತು. ಜಾತಿ, ಮತ, ಪಂಥ,ಲಿಂಗ ತಾರತಮ್ಯ ಎನ್ನದೇ ಎಲ್ಲಾ ವಚನಕಾರರು ತಮ್ಮ ತಮ್ಮ ಚಿಂತನೆಗಳನ್ನು ಅಭಿವ್ಯಕ್ತಿಗೊಳಿಸುವ ವ್ಯಕ್ತಿ ಸ್ವಾತಂತ್ರ್ಯ ಅಂದೇ ಪಡೆದುಕೊಂಡಿದ್ದರು. ಈ ಸಾಮಾಜಿಕ ಸುಧಾರಣೆಯ ಚಳುವಳಿಯಲ್ಲಿ ಕೇತಲಾದೇವಿ ಹಾಗೂ ಕೇತಲಾದೇವಿ ದಂಪತಿಗಳು ಭಾಗಿಯಾಗಿದ್ದರು. ಸತ್ಯ ಶುದ್ಧ ಕಾಯಕ ಬದುಕು ಗುಂಡಯ್ಯನವರ ಚೈತನ್ಯ ವೃದ್ಧಿಗೆ ಕಾರಣವಾಯಿತು. ತನ್ನ ವೃತ್ತಿಯನ್ನೇ ನಂಬಿ ಬದುಕಿದ ಗುಂಡಯ್ಯನವರಿಗೆ ಕಾಯಕ ತತ್ವಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದರು. ಗುಂಡಯ್ಯನವರು ಕೂಡ ವಚನಗಳು ರಚಿಸಿರಬಹುದು, ಆದರೆ ಅವರ ಯಾವುದೇ ವಚನಗಳು ಇಂದು ಲಭ್ಯವಿಲ್ಲ. ಆದರೂ ಅವರ ಸತ್ಯ ಶುದ್ಧವಾದ ಕಾಯಕ, ನಿಷ್ಠೆಯ ಭಕ್ತಿ ಪ್ರಸ್ತುತ ಸಮಾಜಕ್ಕೆ ದಾರಿದೀಪವಾಗಿದೆ.

ಗುಂಡಯ್ಯನವರ ಪುಣ್ಯಸ್ತ್ರೀ ಕೇತಲದೇವಿ ಗಂಡನ ನಿಷ್ಠೆಯ ಕಾಯಕ, ಭಕ್ತಿ ಭಾವವನ್ನು ಮೆಚ್ಚಿ ಬದುಕಿದರು. ಕಾಯಕದಲ್ಲಿಯೇ ದೇವರನ್ನು ಕಂಡುಕೊಳ್ಳಲು ‘ಸಮರಸ ಜೀವನ’ ನಡೆಸಿದ ಶರಣ ದಂಪತಿಗಳು ಪ್ರಸ್ತುತ ಸಮಾಜಕ್ಕೆ ಆದರ್ಶವಾಗಿದ್ದಾರೆ. ಕೇತಲಾದೇವಿಯವರು ‘ಕುಂಭೇಶ್ವರ ‘ ಅಥವಾ ‘ಕುಂಭೇಶ್ವರ ಲಿಂಗ’ ಎನ್ನುವ ವಚನಾಂಕಿತದಲ್ಲಿ ರಚಿಸಿರುವ ಎರಡು ವಚನಗಳು ಮಾತ್ರ ನಮಗೆ ಉಪಲಬ್ಧವಾಗಿವೆ.

ಕೇತಲದೇವಿಯವರು ಒಂದು ವಚನದಲ್ಲಿ ತಮ್ಮ ವೃತ್ತಿಯನ್ನು ಪರಿಭಾಷೆಯಾಗಿ ಬಳಸಿ ಚಿಂತನೆಯನ್ನು ಅಭಿವ್ಯಕ್ತಿಗೊಳಿಸಿದ್ದಾರೆ, ಮತ್ತೊಂದು ವಚನದಲ್ಲಿ ಲಿಂಗವಂತರ ನಡೆ – ನುಡಿ, ಆಚರಣೆ ತತ್ವದ ಬಗ್ಗೆ ತುಂಬಾ ಮಾರ್ಮಿಕವಾಗಿ ವಿಶ್ಲೇಷಿಸಿದ್ದಾರೆ.
ಕಾಯಕ ಮಹತ್ವ, ಜೀವಾನುಭವ ಒಳಗೊಂಡಿರುವ ಕೇತಲಾದೇವಿಯವರ ಎರಡು ವಚನಗಳು ಪ್ರಸ್ತುತ ಸಮಾಜಕ್ಕೆ ಅನನ್ಯ ಸಂದೇಶ ನೀಡುವ ಮಹತ್ವದ ವಚನಗಳು. ‘ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’ ಎನ್ನುವ ತತ್ವವನ್ನು ಕೇತಲದೇವಿಯವರು ಬದುಕಿನುದ್ದಕ್ಕೂ ಅಳವಡಿಸಿಕೊಂಡಿದ್ದರು‌. ಹೀಗಾಗಿಯೇ ಅವರ ಬದುಕು – ಕಾಯಕ – ತತ್ವ ಮಹೋನ್ನತವಾದದ್ದು.

ಕೇತಲಾದೇವಿಯವರ ಎರಡು ವಚನಗಳು ಹೀಗಿವೆ;

“ಹದ ಮಣ್ಣಲ್ಲದೆ ಮಡಕೆಯಾಗಲಾರದು.
ವ್ರತಹೀನನ ಬೆರೆಯಲಾಗದು.
ಬೆರೆದಡೆ ನರಕ ತಪ್ಪದು
ನಾನೊಲ್ಲೆ ಬಲ್ಲೆನಾಗಿ, ಕುಂಭೇಶ್ವರಾ”

ಈ ಮೇಲಿನ ವಚನದಲ್ಲಿ ‘ಹದ ಮಣ್ಣಲ್ಲದೆ ಮಡಕೆಯಾಗಲಾರದು’ ಎನ್ನುವ ಕೇತಲಾದೇವಿಯವರು ವೃತ್ತಿ ಬದುಕಿನ ಕುರಿತಾದ ಅನುಭವ ಕುರಿತು ಉಲ್ಲೇಖಿಸುತ್ತಾರೆ. ಮಣ್ಣಿನ ಮಡಿಕೆಗಳನ್ನು ಸಿದ್ದಪಡಿಸುವುದು ಅಷ್ಟು ಸುಲಭದ ಕೆಲಸವಲ್ಲ. ಜಿಗುಟಾದ ಹದ ಮಣ್ಣು ತಂದು ಸೋಸಿ ಮಣ್ಣಿನಲ್ಲಿರುವ ಕಸ, ಕಡ್ಡಿ, ಸಣ್ಣಕಲ್ಲುಗಳನ್ನು ಬೇರ್ಪಡಿಸಬೇಕಾಗುತ್ತದೆ. ಹದ ಮಾಡಿರುವ ಮಣ್ಣಿನಲ್ಲಿ ಸಾಸಿವೆಯಷ್ಟು ಸಣ್ಣ ಕಲ್ಲಿನ ಚೂರುಗಳಿದ್ದರೂ ಸಾಕು, ಅದು ಮಡಿಕೆ ತಯಾರಿಕೆಗೆ ಯೋಗ್ಯವಲ್ಲ. ಕಲ್ಲಿನ ಚೂರುಗಳಿರುವ ಮಡಕೆಗಳು ಬಿರುಕು ಬಿಡುತ್ತವೆ, ಅಂತಹ ಮಡಿಕೆಗಳು ಬೆಂಕಿಯಲ್ಲಿಟ್ಟು ಸುಡುವಾಗ ಸಿಡಿದು ಪೂರ್ತಿಯಾಗಿ ಒಡೆದು ಹಾಳಾಗುತ್ತವೆ ಎನ್ನುವ ಭಾವ ಈ ವಚನದಲ್ಲಿ ಕಾಣುತ್ತೇವೆ.

ಇಲ್ಲಿ ಮಣ್ಣು ರೂಪಕವಾಗಿ ಬಳಸಿರುವ ಶರಣೆ ಕೇತಲಾದೇವಿಯವರು ಮಾನವನ ದೇಹದ ಜೊತೆಗೆ ಹೋಲಿಸಿರುವುದು ಕಾಣುತ್ತೇವೆ. ಮಡಿಕೆವೆಂಬ ದೇಹವನ್ನು ಪರಿಶುದ್ಧವಾಗಿ ಹದ ಮಾಡಿಕೊಳ್ಳಬೇಕು, ಯೋಗ್ಯವಾದ ಆಹಾರ, ನೀರು ಸೇವನೆ ಜೊತೆಗೆ ಬದುಕಿನಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಇದನ್ನು ಅನುಷ್ಠಾನವಾದರೆ ಮಾನವನ ದೇಹ ಕೂಡ ಮಡಿಕೆಯ ಹಾಗೇ ಪರಿಶುದ್ಧ, ಪಕ್ವವಾಗುತ್ತದೆ, ಯೋಗ್ಯತೆಯ ಬದುಕು ನಮ್ಮದಾಗುತ್ತದೆ ಎನ್ನುವ ಸಾರ್ಥಕ ಜೀವನಕ್ಕೆ ಅಗತ್ಯ ಸಲಹೆಗಳು ಪ್ರತಿಪಾದಿಸಿದ್ದಾರೆ.

‘ಮಡಿಕೆಯ ಮಾಡುವಡೆ ಮಣ್ಣೆ ಮೊದಲು’ ಎನ್ನುವ ಬಸವಣ್ಣನವರ ವಚನ ಬದುಕಿನ ಪಾಠ ಕಲಿಸುತ್ತದೆ.
ಕುಂಬಾರಿಕೆ ವೃತ್ತಿ ತುಂಬಾ ಕಲಾತ್ಮಕವಾಗಿದೆ. ಹಾಗೇ ಗುಂಡಯ್ಯನವರಿಗೂ ಕುಂಬಾರಿಕೆ ಕಲೆ ಕರಗತವಾಗಿತ್ತು. ಜೊತೆಗೆ ವಾಸ್ತವ ಜಗತ್ತಿನ ಬಗ್ಗೆ ಯೋಚಿಸುತ್ತಾ ಸದಾ ಸಮ – ಸಮಾಜಕ್ಕಾಗಿ ಅವರು ಮಿಡಿಯುತ್ತಿದ್ದರು. ಮಡಿಕೆ ತಯಾರಿಸಬೇಕಾದರೆ ಮಣ್ಣು ಹದಮಾಡಬೇಕು. ಗಡಿಗೆಗಳಿಗೆ ಹದ ಮಣ್ಣಿನ ಅವಶ್ಯವಿದೆಯೋ ಹಾಗೇ ದುರ್ಬುದ್ಧಿ, ದುರ್ಗುಣ, ದುಶ್ಚಟಗಳಿಂದ ಬಿಡುಗಡೆಯಾಗಬೇಕಾದರೆ ಪರಿಶುದ್ಧ, ಸಮಚಿತ್ತ, ಸದ್ವಿಚಾರ ಹೊಂದಿದವರ ಸಂಗ ತೀರಾ ಅಗತ್ಯ. ಉತ್ತಮ ಬದುಕು ರೂಪಿಸಿಕೊಳ್ಳಬೇಕಾದರೆ ದೂರದೃಷ್ಟಿ, ಅರಿವಿನ ಪ್ರಜ್ಞೆ ತುಂಬಾ ಅವಶ್ಯವಾಗಿದೆ ಎಂದು ಶರಣರು ತಿಳಿಸುತ್ತಾರೆ.

‘ವೃತ್ತ ಹೀನನ ಬೆರೆಯಲಾಗದು. ಬೆರೆದಡೆ ನರಕ ತಪ್ಪದು ನಾನೊಲ್ಲೆ ಬಲ್ಲೆನಾಗಿ ಕುಂಭೇಶ್ವರಾ’ ಎಂದು ಸೂಚಿಸುತ್ತಾರೆ. ಮಣ್ಣು ಮಾಡುವುದು ಕೂಡ ವೃತ್ತಾಚರಣೆಗೆ ಸಮವಾಗಿದೆ. ಹಾಗೇ ಪ್ರತಿಯೊಬ್ಬರು ವೃತ್ತಾಚರಣೆಯ ಮೂಲಕ ತನ್ನಲ್ಲಿರುವ ಅಶಕ್ತ, ದೌರ್ಬಲ್ಯಗಳಿಂದ ಮುಕ್ತಿ ಹೊಂದಬೇಕು, ಉತ್ತಮ ಸಂಸ್ಕಾರ ಪಡೆದ ಮಣ್ಣು ಯೋಗ್ಯ ಗಡಿಗೆಯಾಗಿ ರೂಪಗೊಂಡಿರುತ್ತದೆ. ಹಾಗೇ ಮಾನವನ ದೇಹವೂ ಉತ್ತಮ ಸಂಸ್ಕಾರ ಹೊಂದಿದರೆ ಮಾತ್ರ ಪರಿವರ್ತನೆಯಾಗಲು ಸಾಧ್ಯ. ಅದು ಮಾನವನನ್ನು ವಿಶ್ವಮಾನವನಾಗಿ ಬದಲಿಸುವ ಸತ್ಪಥ ಎಂದು ವಚನಕಾರ್ತಿ ಕೇತಲಾದೇವಿಯವರು ಮನಮುಟ್ಟುವಂತೆ ಬೋಧಿಸುತ್ತಾರೆ.

ಮನಸ್ಸು ಪರಿಶುದ್ಧಗೊಳಿಸುವುದು ಸುಲಭದ ಕೆಲಸವಲ್ಲ. ಮೊದಲು ಅಂತರಂಗ ಶುದ್ಧೀಕರಣಗೊಳ್ಳಬೇಕು, ಸಪ್ತ ವ್ಯಸನಗಳಿಂದ ಮುಕ್ತಿ ಆಗಬೇಕು, ಅನುಭಾವಿ ಶರಣರ ಸಂಗ ಲೇಸೆಂದು ಬಯಸಬೇಕು. ಮಹಾತ್ಮ , ದಾರ್ಶನಿಕರ ಚಿಂತನಾರ್ಹ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಬೇಕು… ಹೀಗೆ ‘ಸಾರ್ಥಕ ಬದುಕಿನ ಸಂಸ್ಕಾರ ನೀತಿಗಳ’ ಕುರಿತು ಅದ್ಭುತವಾದ ಮಾರ್ಗದರ್ಶನ ನೀಡುತ್ತಾರೆ. ಮಡಿಕೆ ಯಾವುದೇ ಆಗಲಿ ಸ್ವಾದ ಸಾಕಾರದಲ್ಲಿ ಭೇದವಿಲ್ಲ ಎನ್ನುವುದು ಶರಣರ ನಿಲುವು, ಹಸಿ ಮಣ್ಣಿನಿಂದ ಸಿದ್ದಪಡಿಸಿದ ಮಡಿಕೆ ಗಟ್ಟಿಯಾಗಿರುವುದಿಲ್ಲ, ಅದು ಬಳಕೆಗೂ ಯೋಗ್ಯವಾಗಿರುವುದಿಲ್ಲ. ಸಿದ್ಧ ಮಾಡಿರುವ ಗಡಿಗೆಗಳನ್ನು ತಟ್ಟುತ್ತಾ ರೂಪ ನೀಡಬೇಕಾಗುತ್ತದೆ, ಆವಗಿಯಲ್ಲಿಟ್ಟು ಚನ್ನಾಗಿ ಸುಡಬೇಕಾಗುತ್ತದೆ.
ಸುಟ್ಟ ಮಡಿಕೆ ಗಟ್ಟಿಗೊಳ್ಳುತ್ತದೆ, ಸ್ವಾದ ರೂಪ ಹೊಂದಿರುವ ಮಡಿಕೆ ಪೂರ್ತಿ ಗಟ್ಟಿತನ ಪಡೆದುಕೊಳ್ಳುತ್ತದೆ.

ಕುಂಬಾರಿಕೆ ಕಾಯಕದಿಂದ ಹಣ ಸಂಪಾದನೆ ಮಾಡುವುದು ಗುಂಡಯ್ಯ ಕೇತಲದೇವಿ ದಂಪತಿಗಳ ಉದ್ದೇಶ ಆಗಿರಲಿಲ್ಲ. ಸಮಾಜದ ಹಿತವನ್ನು ಕಾಪಾಡುವುದು, ಮಾನವೀಯ ಮೌಲ್ಯಗಳ ಮೂಲಕ ಸಮಾನತೆ ಸಮಾಜ ಕಟ್ಟುವುದು ಅವರ ಪ್ರಮುಖವಾಗಿತ್ತು. ಹೀಗಾಗಿ ಅವರು ತಮ್ಮ ಕಾಯಕ ಸಿದ್ದಾಂತವನ್ನು ಶ್ರದ್ಧೆ ಭಕ್ತಿಯಿಂದ ನೆರೆವೇರಿಸಿದರು, ದಾಸೋಹ ಮನೋಭಾವವನ್ನು ಬೆಳೆಸಿಕೊಂಡು ಬದುಕಿದರು.

ಶರಣರ ಚಿಂತನೆಗಳು ಓದುತ್ತಾ ಹೋದಂತೆ ‘ಸಾಸಿವೆ ಮೇಲೆ ಸಾಗರ ಹರಿದಷ್ಟು’ ಖುಷಿಯಾಗುತ್ತದೆ, ಜೊತೆಗೆ ಆತ್ಮಜ್ಞಾನ ಕೂಡ ಹೆಚ್ಚಾಗುತ್ತದೆ. ಅಜ್ಞಾನದ ಕೂಪದಲ್ಲಿ ಬದುಕುತ್ತಿರುವ ಅಸಂಖ್ಯಾತ ಮನಸ್ಸುಗಳನ್ನು ಹದಮಾಡಿಕೊಳ್ಳಲು ಶರಣ ಮಾರ್ಗ ದಾರಿದೀಪವಾಗಿದೆ.‌ ಆದರೆ ವ್ರತ(ಸತ್ಯ ಶುದ್ಧ)ವನ್ನು ಅರಿಯದವರ ಜೊತೆಗೆ ಬೆರೆತುಕೊಳ್ಳಲು ‘ನಾನು ಒಲ್ಲೆ‌’ ಎಂದು ಕೇತಲಾದೇವಿ ಸಮಾಜದ ಅಸಮಾನತೆ, ಅಜ್ಞಾನದ ಕುರಿತು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಲಿಂಗಾಯತರು ಯಾರು? ಎನ್ನುವ ಪ್ರಶ್ನೆಗೆ ಕೇತಲಾದೇವಿಯವರ ಈ ವಚನದಲ್ಲಿ ಸ್ಪಷ್ಟತೆ ನೀಡುತ್ತದೆ.

“ಲಿಂಗವಂತರ ಲಿಂಗಾಚಾರಿಗಳ ಅಂಗಳಕ್ಕೆ ಹೋಗಿ
ಲಿಂಗಾರ್ಪಿತವ ಮಾಡುವಲ್ಲಿ ಸಂದೇಹವಿಲ್ಲದಿರಬೇಕು.
ಕಾಣುದುದನೆ ಚರಿಸದೆ, ಕಂಡುದನು ನುಡಿಯದೆ,
ಕಾಣುದುದನು ಕಂಡುದನು ಒಂದೇ ಸಮವೆಂದು ಅರಿಯಬಲ್ಲರೆ ಕುಂಭೇಶ್ವರ ಲಿಂಗವೆಂಬೆನು.”

ಲಿಂಗ,ವಿಭೂತಿ, ರುದ್ರಾಕ್ಷಿ ಮಾಲೆ ಧರಿಸಿಕೊಂಡ ಲಿಂಗವಂತರ ಬಾಹ್ಯ ಲಕ್ಷಣಗಳನ್ನು ನೋಡಿ ಒಬ್ಬರನ್ನು ‘ಲಿಂಗಾಯತರು’ ಎಂದು ಗುರುತಿಸಲು ಸಾಧ್ಯವಿಲ್ಲ.
ಅವು ಬರೀ ಲಾಂಛನಗಳಷ್ಟೇ, ಅವರನ್ನು ಲಿಂಗಾಯತರು ಎಂದು ಕರೆಯವುದು ಸಮಂಜಸವಲ್ಲ. ಬಾಹ್ಯ ಲಾಂಛನಗಳ ಧಾರಣೆಯ ಜೊತೆಗೆ ಅಂತರಂಗ ಕೂಡ ಪರಿಶುದ್ಧಗೊಳ್ಳಬೇಕು, ಧರ್ಮದ ತತ್ವ, ಸಿದ್ಧಾಂತಗಳಿಗೆ ಒಳಗೊಂಡಾಗ ಮಾತ್ರ ಅವರು ನಿಜವಾದ ಲಿಂಗಾಯತರು ಎನಿಸಿಕೊಳ್ಳಲು ಸಾಧ್ಯ ಎನ್ನುವ ‘ಲಿಂಗಾಚಾರ ಚಿಂತನೆ’ ಧರ್ಮ ಸಿದ್ಧಾಂತವನ್ನು ಶರಣೆ ಕೇತಲಾದೇವಿ ಪ್ರತಿಪಾದಿಸುತ್ತಾರೆ.

ಪ್ರಸ್ತುತ ಸಮಾಜದಲ್ಲಿ ಮಾನವೀಯ ಮೌಲ್ಯಗಳ ಬೆಳವಣಿಗೆ ತೀರಾ ಅಪರೂಪವಾಗಿದೆ. ಜಾತಿ ಮತ ಪಂಥ ಲಿಂಗ ತಾರತಮ್ಯ, ಅಸಮಾನತೆ, ಶೋಷಣೆ ತಾಂಡವವಾಡುತ್ತಿವೆ. ಎಲ್ಲಡೆ ಅರ್ಥಹೀನ ಆಚರಣೆಗಳ ವೈಭವೀಕರಣ ಮಿತಿಮೀರಿದೆ. ಇಂತಹ ಅವೈಜ್ಞಾನಿಕ, ಅವೈಚಾರಿಕ ಪದ್ಧತಿ ನಿರ್ನಾಮಕ್ಕೆ ಶರಣರ ವಚನಗಳು ಮಾರ್ಗದರ್ಶನವಾಗಿವೆ.

ಸಮಾನತೆ ಸಮಾಜ ಕಟ್ಟುವ ಮನೋಭಾವ ಹೊಂದಿರುವ ಮನಸ್ಸುಗಳ ಸಂಖ್ಯೆ ಇಂದು ಹೆಚ್ಚಾಗಬೇಕಾಗಿದೆ. ಮನುಷ್ಯತ್ವವನ್ನು ಎತ್ತಿ ಹಿಡಿದ ಬಸವಾದಿ ಶರಣರ ಚಿಂತನೆಗಳನ್ನು ಇಂದಿನ ಸಮಾಜ ಮರೆತಂತೆ ಕಾಣುತ್ತಿದೆ. ಶರಣರ ಚಿಂತನೆಗಳನ್ನು ಮುನ್ನೆಲೆಗೆ ಬರಬೇಕಾದರೆ ವಚನಗಳು ಹೃದಯದೊಳಗೆ ಇಳಿಸಿಕೊಳ್ಳಬೇಕಾಗಿದೆ.

– ಬಾಲಾಜಿ ಕುಂಬಾರ, ಚಟ್ನಾಳ
ಯುವ ಬರಹಗಾರ, ಬೀದರ್
Cell: 9739756216

About Shivanand

Admin : Lingayat Kranti Monthly news paper 8884000008 [email protected]

Check Also

ಸಂಸ್ಕೃತಿ & ಸಂಸ್ಕಾರಗಳ ಬೆನ್ನೇರಿದ ಯುವ ಸನ್ಯಾಸಿಗಳು : ಪೂಜ್ಯಶ್ರೀ ನಿಜಗುಣಾನಂದ ಮಹಾಸ್ವಾಮಿಗಳು

ಬೈಲೂರ: ತಮ್ಮ ಯೌವ್ವನದಲ್ಲಿ ಧರ್ಮದ ಕಂಕಣ ಕಟ್ಟಿಕೊಂಡು‌ ನಿಂತ ಯುವ ಸನ್ಯಾಸಿಗಳ ನೋಡಿದರೆ ತುಂಬ ಸಂತೋಷವಾಗುತ್ತದೆ ಜೊತೆಗೆ ಜೀವನ ಸಾರ್ಥಕವಾಯಿತು …

ಪ್ರತ್ಯೇಕ ಧರ್ಮ ಅಲ್ಪಸಂಖ್ಯಾತ ಮಾನ್ಯತೆ ಸಿಕ್ಕಿದ್ದರೆ, ಲಿಂಗಾಯತ ಉಪಪಂಗಡಗಳು ಮೀಸಲಾತಿ ಕೇಳುವ ಪ್ರಸಂಗವೇ ಬರುತ್ತಿರಲಿಲ್ಲ: ಎಂ ಬಿ ಪಾಟೀಲ

ಬೆಂಗಳೂರು: ಮಾಜಿ ಸಚಿವರು ಮತ್ತು ಶಾಸಕರಾದ ಶ್ರೀ ಎಂ.ಬಿ.ಪಾಟೀಲ ಅವರು ಬೆಂಗಳೂರಿನ ಸದಾಶಿವ ನಗರದ ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯನ್ನು …

ಸೋಹಂ ಎಂದೆನಿಸದೇ ದಾಸೋಹಂ ಎಂದೆನಿಸಯ್ಯ..

ಮೊದಲು ಮೂರು ನೀತಿಕಥೆಗಳನ್ನು ನೊಡೋಣ ಆನಂತರ ವಿಷಯಕ್ಕೆ ಬರೋಣ.ಬೆಳಗಿನ ಜಾವ ಯಾರೋ ಒಬ್ಬರು ಸಮುದ್ರ ತೀರದಲ್ಲಿ ವಾಯುವಿಹಾರ ಮಾಡುತ್ತಿದ್ದರು. ಅಂದು …

ಹಗಲಿನಲ್ಲಿಯೆ ಸಂಜೆಯಾಯಿತು ಒಂದು ಐತಿಹಾಸಿಕ ನಿರೂಪಣೆ: ಡಾ.ಸಿದ್ಧನಗೌಡ ಪಾಟೀಲ

ಸಾಹಿತಿ ಮತ್ತು ಲಿಂಗೈಕ್ಯ ಪೂಜ್ಯ ತೋಂಟದ ಸಿದ್ಧಲಿಂಗಶ್ರೀಗಳ ಒಡನಾಡಿ ಶಿಷ್ಯರಾದ ಸಿದ್ದು ಯಾಪಲಪರವಿ ಅವರು ಬರೆದ ಹಗಲಿನಲ್ಲಿಯೆ ಸಂಜೆಯಾಯಿತು ಕೃತಿ …

ರಂಗಾಯಣದಿಂದ ನೇಗಿನಹಾಳದಲ್ಲಿ ಸರ್ವರಿಗೂ ಸಂವಿಧಾನದ ನಾಟಕ

ನೇಗಿನಹಾಳ: ಜನಸಾಮಾನ್ಯರಲ್ಲಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಅರಿವು ಮೂಡಿಸುವುದರ ಜೊತೆಗೆ ಜಾತಿ, ಧರ್ಮ, ಲಿಂಗಸಮಾನತೆ, ಅಸ್ಪೃಶ್ಯತೆ ನಿವಾರಣೆ, ದೇವದಾಸಿ …

ಜಗದ್ಭವ್ಯ ಮೇರು ಕೃತಿ : ಮಹಾತ್ಮರ ಚರಿತಾಮೃತ

ಲೇಖನ: ಪ್ರಕಾಶ ಗಿರಿಮಲ್ಲನವರ                          …

ಸೆ. 25ರಂದು “ಮಹಾತ್ಮರ ಚರಿತಾಮೃತ” ಲೋಕಾರ್ಪಣೆ

ಅಥಣಿ: ಗಡಿಭಾಗದಲ್ಲಿ ನಾಡು-ನುಡಿ ಕಟ್ಟುವ ಕಾಯಕದಲ್ಲಿ ನಿರತವಾಗಿರುವ ಅಥಣಿ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಅವರು ಸಂತ-ಮಹಾಂತರ …

ಧರ್ಮ ವಿಭಜನೆ ನೆವದಲ್ಲಿ ಪಾಟೀಲರ ಟೀಕೆ ಸಾಧುವಲ್ಲ

-ಸಾಹಿತಿ ಶಿವಕುಮಾರ್ ಉಪ್ಪಿನ ಖೇದ ವಿಜಯಪುರ ಜಿಲ್ಲೆಯ ಒಳ ಮರ್ಮದ ರಾಜಕೀಯ ಮೇಲಾಟದ ಕಾರಣಕ್ಕೆ ಲಿಂಗಾಯತ ಚಳವಳಿಯಿಂದಲೇ ಕಾಂಗ್ರೆಸ್‌ಗೆ ಸೋಲಾಯಿತು …

ಲಿಂಗಾಯತ ಪೇಜ್‌ಗೆ ಕಿಡಿಗೇಡಿಗಳ ಕಿರಿಕಿರಿ..!

ಲಿಂಗಾಯತ ಯುವ ಒಕ್ಕೂಟ ಫೇಸ್ ಬುಕ್ ಪೇಜ್‌ಗೆ ಮಸಿ ಬಳಿಯಲು ಅದನ್ನು ಹ್ಯಾಕ್ ಮಾಡಿ ಅಶ್ಲೀಲ ಪೋಸ್ಟ್‌ಗಳನ್ನು ಮಾಡುತ್ತಿರುವುದರಿಂದ ಈ …

“ಲಕ್ಷ್ಮೀ ಪೂಜೆ” ಲಕ್ಷ್ಮೀ ಯಾರು.?

  ಈ ಲಕ್ಷ್ಮೀ ಪೂಜೆ ಯಾಕೆ ಮಾಡುತ್ತಿದ್ದರು? ರಾಜನ ಹೆಂಡತಿಗೆ ಲಕ್ಷ್ಮೀ ಎಂದು ಕರೆಯುತ್ತಿದ್ದರು, ಇದು ಹೊಗಳಿಕೆಯ ಪದ. ರಾಜನಿಗೆ …

ಸಂಗೊಳ್ಳಿ ರಾಯಣ್ಣನಿಗೆ ಜನ್ಮ ನೀಡಿದ್ದು ನೇಗಿನಹಾಳ ಗ್ರಾಮ

ಸ್ವತಂತ್ರ ಹೋರಾಟಗಾರರ ಧರ್ಮಪತ್ನಿ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ನೇಗಿನಹಾಳ : ಬ್ರಿಟಿಷ್ ಸರ್ಕಾರದ ವಿರುದ್ಧ ಮೊಟ್ಟಮೊದಲಿಗೆ ಧಂಗೆ ಸಾರಿ …

ಕ್ರೀಡೆ, ಕಲೆ, ಸಾಹಿತ್ಯದಂಥ ರಂಗಗಳು ಜಾತಿ, ಸಂಕುಚಿತತೆ ನಿರ್ಮೂಲನೆಯ ಮಹಾಸಾಧನಗಳು

  ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮೀಜಿ ಅಭಿಮತ ಮುಂಡರಗಿ ಆಗಷ್ಟ್ 07: ಪ್ರಸ್ತುತ ರಾಜಕಾರಣದಲ್ಲಿ, ಕಾವಿಯೊಳಗೆ ಖಾದಿಯ ಪ್ರವೇಶ ಸಲ್ಲದು. …

ಪ್ರಮಾಣ ವಚನ ನೇರಪ್ರಸಾರ; ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ರಾಜಭವನದಿಂದ ನೇರ ಪ್ರಸಾರ ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ಇಂದು ಮಧ್ಯಾಹ್ನ 2:15ಕ್ಕೆ …

ಅಲ್ಲಮಪ್ರಭುಗಳ ವಚನಗಳು ಇಂಗ್ಲಿಷ್‌ಗೆ ಭಾಷಾಂತರ

  ವಿಜಯಪುರ : ಖ್ಯಾತ ಭಾಷಾತಜ್ಞ ಎ. ಕೆ. ರಾಮಾನುಜನ್ ಅವರ ಬಳಿಕ ಶರಣರೊಬ್ಬರ ವಚನಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ ಕೀರ್ತಿ …

ತ್ರಿಭಾಷೆಗಳಲ್ಲಿ ಮೂಡಿಬಂದ ಮಹಾಜಂಗಮ

ಮಹಾಜಂಗಮ : ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಮರಾಠಿ ಮೂಲ ಲೇಖಕರು : ಶ್ರೀ ರಾಜು ಬ. ಜುಬರೆ …

Leave a Reply

Your email address will not be published. Required fields are marked *