Breaking News
Home / featured / ಅನುಭವಮಂಟಪ ನಡೆದು ಬಂದ ದಾರಿ

ಅನುಭವಮಂಟಪ ನಡೆದು ಬಂದ ದಾರಿ

ಬೀದರ್: ವಿಶ್ವರು ಬಸವಣ್ಣನವರು 12ನೇ ಶತಮಾನದಲ್ಲಿ ಜಗತ್ತಿನ ಮುಟ್ಟು ಮೊದಲು ಪ್ರಜಾಪ್ರಭುತ್ವದ ಮಾದರಿಯ ಅನುಭವ ಮಂಟಪವನ್ನು ಸ್ಥಾಪಿಸಿದರು. ಅನುಭವ ಮಂಟಪದಲ್ಲಿ ಎಲ್ಲರಿಗೆ ಮುಕ್ತವಾಗಿ ಪ್ರವೇಶ ನೀಡಲಾಗಿತ್ತು ಹಾಗಾಗಿ 770 ಶರಣ-ಶರಣೆಯರು ಒಗ್ಗೂಡಿ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿದ್ದರು. ಅವರ ಅನುಭವದ ನುಡಿಮುತ್ತುಗಳೆ ವಚನಗಳು. ವಚನಗಳಲ್ಲಿ ಪ್ರಜಾಪ್ರಭುತ್ವದ ಮಾನವಿಯ ಮೌಲ್ಯಗಳನ್ನು ಅಡಗಿವೆ.

ಸ್ವಾತಂತ್ರ್ಯ , ಸಮಾನತೆ, ಭಾತೃತ್ವ, ಸಾಮಾಜಿಕ ನ್ಯಾಯ, ಕಾಯಕ-ದಾಸೋಹ, ಮುಂತಾದ ಮೌಲ್ಯಗಳನ್ನು ಬರೆ ಹೆಳದೆ ತಮ್ಮ ನಿಜಾಚರಣೆಯಲ್ಲಿ ತರುವ ಮೂಲಕ ನಡೆ-ನುಡಿ ಸಿದ್ಧಾಂತಕ್ಕೆ ನಾಂದಿಹಾಡಿದರು. ಜಾತೀಯತೆ, ಅಸ್ಪೃಶ್ಯತೆ, ದೇವಾಲಯ ಸಂಸ್ಕೃತಿ, ಕಂದಾಚಾರ, ಮೂಢನಂಬಿಕೆ, ವೈದಿಕ ಸಂಸ್ಕೃತಿಯ ದಬ್ಬಾಳಿಕೆಯೇ, ಸಂಸ್ಕೃತಭಾಷೆಯ ವರ್ಚಸ್ಸನ್ನು ಧಿಕ್ಕರಿಸಿ ಜನಭಾಷೆವಾಗಿರುವ ಕನ್ನಡ ಭಾಷೆಯನ್ನು ಎತ್ತಿ ಹಿಡಿಯುವ ಮೂಲಕ ತಮ್ಮ ವಿಚಾರಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಕಾರ್ಯ ಮಾಡಿದರು. ಹಾಗಾಗಿಯೇ ತಳಸಮುದಾಯದ ಜನರು ಬಸವಣ್ಣನವರ ನೇತೃತ್ವದಲ್ಲಿ ಅನುಭವ ಮಂಟಪ ವೇದಿಕೆಯ ಮೂಲಕ ಒಂದಾದರೂ. ಸಹಪಂಕ್ತಿಭೋಜನದ ಜೊತೆಗೆ ಸಹಜೀವನಕ್ಕೆ ನಾಂದಿ ಹಾಡಿದ್ದು ಜಗತ್ತಿನ ಇತಿಹಾಸದಲ್ಲಿ ಒಂದು ಅಪೂರ್ವ ಘಟನೆ. ಇಂತಹ ಕ್ರಾಂತಿಕಾರಕ ಜೀವನ ಮೌಲ್ಯಗಳನ್ನು ಆಚರಣೆಯಲ್ಲಿ ತಂದಿದ್ದಕ್ಕಾಗಿ ಆಗಿನ ವೈದಿಕ ಹಾಗೂ ರಾಜಸತ್ತೆಯೂ ಶರಣರ ಕ್ರಾಂತಿಗೆ ಪ್ರತಿಕ್ರಾಂತಿ ಮಾಡಲಿಕ್ಕೆ ಯತ್ನಿಸಿದರು. ಅದಕ್ಕಾಗಿ ಶರಣರ ವಚನ ಸಾಹಿತ್ಯ ಅಗ್ನಿಯ ಪಾಲಾಯಿತು. ಅನುಭವಮಂಟಪದ ಪನತಿ ಒಡೆಯಿತು. ಶರಣರು ವಚನ ಸಾಹಿತ್ಯದ ರಕ್ಷಣೆಗಾಗಿ ಕಲ್ಯಾಣವನ್ನು ತೊರೆದು ಉಳವಿಯ ದಿಶೆಗೆ ಹೋದರು. ತಮ್ಮ ಪ್ರಾಣವನ್ನು ಕೊಟ್ಟು ವಚನ ಸಾಹಿತ್ಯ ರಕ್ಷಣೆ ಮಾಡಿದರು. ಹೀಗಾಗಿ ನಮ್ಮ ಇತಿಹಾಸ ತ್ಯಾಗ-ಬಲಿದಾನದ ಇತಿಹಾಸವಾಗಿದೆ.

12ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಅನುಭವ ಮಂಟಪ ಸಂಸ್ಕೃತಿಗೆ ಹದಿನಾರನೇ ಶತಮಾನದಲ್ಲಿ ಯಡಿಯೂರ ಸಿದ್ದಲಿಂಗೇಶ್ವರರು ಹಾಗೆ ಅನೇಕ ಮಹನೀಯರು ಮುಂದುವರಿಸುವ ಕಾರ್ಯ ಮಾಡಿದರು. 19ನೇ ಶತಮಾನದಲ್ಲಿ ಭಾಲ್ಕಿಯ ಹಿರೇಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಡಾ. ಲಿಂಗೈಕ್ಯ ಚನ್ನಬಸವ ಪಟ್ಟದೇವರು ಶರಣ ಭೂಮಿಯಾದ ಬಸವಕಲ್ಯಾಣದಲ್ಲಿ ಮತ್ತೊಮ್ಮೆ ಅನುಭವ ಮಂಟಪವನ್ನು ನಿರ್ಮಿಸುವ ನಿಟ್ಟಿನಲ್ಲಿ ಅಹೋರಾತ್ರಿ ಶ್ರಮಿಸಿದರು.

ಪೂಜ್ಯರು ಭಾಲ್ಕಿಯ ಮಠದಿಂದ ಪಾದಯಾತ್ರೆಯ ಮೂಲಕ ನೂರಾರು ಬಸವ ಭಕ್ತರ ಜೊತೆಗೆ ಬಸವಕಲ್ಯಾಣಕ್ಕೆ ಆಗಮಿಸಿ ಅನುಭವ ಮಂಟಪ ನವನಿರ್ಮಾಣದ ಸಂಕಲ್ಪ ಮಾಡಿದರು. ಸುಮಾರು ಒಂದು ದಶಕಗಳ ಕಾಲ ಬಸವಕಲ್ಯಾಣದ ಭೂಮಿಯಲ್ಲಿಯೇ ಉಳಿದು ತಾವು ಸ್ವತಹ ಕಲ್ಲು , ಮಣ್ಣು ಹೊತ್ತು ಮೂಲಕ ಅನುಭವಮಂಟಪವನ್ನು ಕಟ್ಟಿಲಿಕ್ಕೆ ನಿಂತಿದ್ದರು. ಇಲ್ಲಿ ನಾವೆಲ್ಲರೂ ಒಂದು ಮಾತನ್ನು ಗಮನದಲ್ಲಿಟ್ಟುಕೊಳ್ಳಬೇಕು ಯಾವ ಸಂದರ್ಭದಲ್ಲಿ ಸರ್ಕಾರ, ಮಠಮಾನ್ಯಗಳು, ಸಂಘ-ಸಂಸ್ಥೆಗಳು ಬಸವಕಲ್ಯಾಣದ ಕಡೆ ಮುಖಮಾಡಿ ನೋಡದೆ ಇದಾಗ ಭಾಲ್ಕಿಯ ಪೂಜ್ಯರು ತಮ್ಮ ಮಠವನ್ನೇ ತೊರೆದು, ತಾವು ಹುಟ್ಟುಹಾಕಿದ ಶಿಕ್ಷಣ ಸಂಸ್ಥೆಯನ್ನು ಬಿಟ್ಟು ಅನುಭವ ಮಂಟಪ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವುದು ಅವರ ಬಸವ ನಿಷ್ಠೆಗೆ ಹಿಡಿದ ಕನ್ನಡಿಯಾಗಿದೆ. ಪೂಜ್ಯ ಗುರುಗಳ ಸಂಕಲ್ಪವನ್ನು ಜಗದಗಲ ವಿಸ್ತರಿಸುವ ನಿಟ್ಟಿನಲ್ಲಿ ಪರಮಪೂಜ್ ಡಾ. ಬಸವಲಿಂಗ ಪಟ್ಟದೇವರು ಅವಿಶ್ರಾಂತವಾಗಿ ದುಡಿಯುತ್ತಿದ್ದಾರೆ.

ಪೂಜ್ಯರು ಅಧ್ಯಕ್ಷರಾದ ಮೇಲೆ ಅನುಭವ ಮಂಟಪದಲ್ಲಿ ನಿರಂತರ ದಾಸೋಹ ಸೇವೆಯನ್ನು ನಡೆಯುತ್ತಿದೆ. ಕಳೆದ 35 ವರ್ಷಗಳಿಂದ ನಡೆದುಬಂದಿರುವ ಶರಣ ಕಮ್ಮಟ ಕಾರ್ಯಕ್ರಮವನ್ನು ಪರಮಪೂಜ್ಯರು ಅನುಭವ ಮಂಟಪ ಉತ್ಸವನಾಗಿ ಮಾರ್ಪಾಡು ಮಾಡಿ ಅದಕ್ಕೆ ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನನೆ ಮಾಡಿದರು. ಬಸವಾದಿ ಶರಣರ ಚಿಂತನೆಗಳನ್ನು ಹೊರರಾಜ್ಯಗಳಲ್ಲಿ ಪರಿಚಯಿಸುವ ಸದುದ್ದೇಶದಿಂದ ಮರಾಠಿ, ತೆಲುಗು, ಹಿಂದಿ ಭಾಷೆಯಲ್ಲಿ ಶರಣ ಸಾಹಿತ್ಯ ಅನುವಾದವನ್ನು ಮಾಡಿ ನೂರಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಹೀಗೆಯೇ ಸ್ಥಾವರವಾಗುತಿರುವ ಅನುಭವ ಮಂಟಪಕ್ಕೆ ಪರಮಪೂಜ್ಯರು ಜಂಗಮವಾಗಿಸಿವುದರಿಂದಲೆ ಇಂದು ಸರ್ಕಾರದ ಗಮನ ಸೆಳೆದಿದೆ.

ಹಿಂದಿನ ಸರ್ಕಾರದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯನವರು ನೂತನ ಅನುಭವ ಮಂಟಪದ ಕನಸನ್ನು ಹೊತ್ತಿ ಶರಣ ಜೀವಿಗಳಾದ ವಿದ್ವಾಂಸರಾದ ಗು. ರು. ಚೆನ್ನಬಸಪ್ಪನವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿ ನೂತನ ಅನುಭವ ಮಂಟಪದ ನೀಲನಕ್ಷೆಯನ್ನು ರೂಪಿಸಿದರು. ನೂತನ ಅನುಭವ ಮಂಟಪ 650 ಕೋಟಿಯ ಒಂದು ವಿನೂತನ ಕಟ್ಟಡವಾಗಿದೆ. ಪರಮಪೂಜ್ಯರ ಸತತ ಪರಿಶ್ರಮದ ಫಲವಾಗಿ ಈಗಿರುವ ಸರಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ಹೊಸ ಅನುಭವ ಮಂಟಪದ ನಿರ್ಮಾಣಕ್ಕಾಗಿ 600 ಕೋಟಿ ಘೋಸಿಸಿ ಈಗಾಗಲೇ ನೂರು ಕೋಟಿ ರೂಪಾಯಿ ಬಿಡುಗಡೆ ಮಾಡಿರುವುದು ತಮ್ಮೆಲ್ಲರಿಗೆ ಗೊತ್ತಿರುವ ವಿಷಯವಾಗಿದೆ. ಶರಣರ ಕನಸಿನ ಅನುಭವ ಮಂಟಪ ಇಂದು ಸಾಕಾರ ಗೊಳ್ಳುತ್ತಿರುವುದು ನಾಡಿನ ಜನತೆಗೆ ಅತ್ಯಂತ ಸಂತೋಷವನ್ನುಂಟುಮಾಡಿದೆ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು 6 ಜನೆವರಿ 2021ರಂದು ನೂತನ ಅನುಭವ ಮಂಟಪದ ಭೂಮಿಪೂಜೆ ನೆರವೇರಿಸುತ್ತಿರುವುದು ಅತ್ಯಂತ ಸಂತೋಷವಾಗಿದೆ.

✒️- ರಾಜೂ ಬ. ಜುಬರೆ, ಭಾಲ್ಕಿ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಶರಣರ ಚಿಂತನೆಗಳ ಅನುಭವ ಮಂಟಪ ನಿರ್ಮಿಸಿ: ಬಸವರಾಜ ಧನ್ನೂರ

  ‘ಸನಾತನ ಚಿಂತನೆಗಳ ಮರು ಸೃಷ್ಟಿ’ ಶೀರ್ಷಿಕೆಗೆ ಆಕ್ಷೇಪ ಬೀದರ್: ನೂತನ ಅನುಭವ ಮಂಟಪ ಭೂಮಿ ಪೂಜೆ ಕಾರ್ಯಕ್ರಮ ಕುರಿತು …

ಶರಣರ ಪ್ರಗತಿಪರ ಚಿಂತನೆಗೆ ಧಕ್ಕೆ ಮಾಡದಿರಿ: ಬಸವರಾಜ ಹೊರಟ್ಟಿ

  ಹುಬ್ಬಳ್ಳಿ: ಬಸವಕಲ್ಯಾಣದಲ್ಲಿ ನಿರ್ಮಿಸುತ್ತಿರುವ ಅನುಭವ ಮಂಟಪದ ಭೂಮಿಪೂಜೆ ಕಾರ್ಯಕ್ರಮದ ಕುರಿತು ಜ .6 ರಂದು ನೀಡಿದ ಜಾಹೀರಾತಿನಲ್ಲಿ ‘ಸನಾತನ …

ಸರಕಾರದ ವಿರುದ್ಧ ತೋಂಟದ ಸಿದ್ಧರಾಮ ಶ್ರೀಗಳ ಅಸಮಾಧಾನ

  ಲಿಂಗಾಯತ ಪ್ರಗತಿಪರ ಚಿಂತನೆಯ ಧರ್ಮವಾಗಿದೆ ಗದಗ : ಮಹಾಮಾನವತಾವಾದಿ ಪ್ರಗತಿಪರ ಚಿಂತಕ, ವಿಶ್ವಗುರು ಬಸವಣ್ಣನವರ ಕಾರ್ಯಕ್ಷೇತ್ರವಾಗಿದ್ದ ಬಸವಕಲ್ಯಾಣದಲ್ಲಿ ನೂತನ …

ವೇದಕ್ಕೆ ಒರೆಯ ಕಟ್ಟುವೆ

ಭಾರತದ ಚರಿತ್ರೆಯಲ್ಲಿ ಶರಣ ಚಳುವಳಿಗೆ ಒಂದು ವಿಶಿಷ್ಟವಾದ ಸ್ಥಾನ ಸಿಗುತ್ತದೆ. ಬೌದ್ಧ ಧರ್ಮದ ನಂತರ ಭಾರತದಲ್ಲಿ ಮತ್ತೊಮ್ಮೆ ಸಮಾಜೋಧಾರ್ಮಿಕ ಕ್ರಾಂತಿ …

ಸಮಾಜಕ್ಕಾಗಿ ಸರ್ವಸ್ವವನ್ನು ತ್ಯಾಗಮಾಡಿದ ತ್ಯಾಗವೀರ ಶಿರಸಂಗಿ ಲಿಂಗರಾಜರು

  ಲೇಖನ: ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತೋಂಟದಾರ್ಯ ಸಂಸ್ಥಾನ ಮಠ ಗದಗ ಬೆಳಗಾವಿ: ಕರ್ನಾಟಕವನ್ನು ಶೈಕ್ಷಣಿಕವಾಗಿ ಹಾಗು ಸಾಂಸ್ಕೃತಿಕವಾಗಿ …

ಸನಾತನ ಶಬ್ದಕ್ಕೆ ಗೊ.ರು.ಚನ್ನಬಸಪ್ಪ ವಿರೋಧ

  ಬಸವಕಲ್ಯಾಣ: ರಾಜ್ಯ ಸರ್ಕಾರ ಪತ್ರಿಕೆಗಳಿಗೆ ನೀಡಿರುವ ಜಾಹೀರಾತಿನಲ್ಲಿ ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ ನೂತನ ಅನುಭವ ಮಂಟಪ ನಿರ್ಮಾಣ’ …

ಸಮಗ್ರ ಚಿಂತನೆಯ ವಿಚಾರವಾದ ಮತ್ತು ಮುಲಾಜಿಗೆ ಬಸಿರಾಗುವ ಅರೆಬೆಂದ ವಿಚಾರವಾದ

ಕೆಲವು ಅಥವಾ ಹಲವು ಅರೆಬೆಂದ ವಿಚಾರವಾದಿಗಳು ಅನುಭವ ಮಂಟಪದ ನಿರ್ಮಾಣದ ಕುರಿತಾಗಿ ಆರ್ಥಿಕ ಸ್ಥಿತಿ ಮತ್ತು ಇತರೆ ಕಾರಣಗಳಿಂದ ೫೦೦ …

ಕಾಯಕದಲ್ಲೇ ದೇವರ ಕಂಡ ಕೇತಲಾದೇವಿ

  ಹನ್ನೆರಡನೆಯ ಶತಮಾನದ ಬಸವಾದಿ ಶರಣರ ಸಮಕಾಲೀನ ಶಿವಶರಣೆ ಕೇತಲದೇವಿಯು ಶರಣ ಕುಂಬಾರ ಗುಂಡಯ್ಯನವರ ಧರ್ಮಪತ್ನಿ. ಕುಂಬಾರ ಗುಂಡಯ್ಯ ಮತ್ತು …

ಲಿಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ್ ನಿಧನ

  ಬೆಳಗಾವಿ: ಬೆಳಗಾವಿ ಲಿಂಗಾಯತ ಸಂಘಟನೆಯ ಸಕ್ರಿಯ ಕಾರ್ಯಕರ್ತ, ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಗ್ರಾಮೀಣ ಪ್ರಧಾನ ಕಾರ್ಯದರ್ಶಿ ರಾಜು …

2021ರ ಲಿಂಗಾಯತ ದಿನದರ್ಶಿಕೆ ಬಿಡುಗಡೆ ಹಾಗೂ ಶರಣ ಮೇಳದಲ್ಲಿ ಪಾಲ್ಗೊಳ್ಳಲು ಮನವಿ

ಗಜೇಂದ್ರಗಡ: ನಂಬಿಕೆಗೆ ಅರ್ಹವಲ್ಲದ ಪಂಚಾಂಗ, ಜ್ಯೋತಿಷ್ಯಕ್ಕೆ ಜೋತುಬಿದ್ದು, ಮೌಢ್ಯತೆಗೆ ಒಳಗಾಗಿ ನಮ್ಮ ಬದುಕನ್ನು ಕೆಡಿಸಿಕೊಳ್ಳುವುದರ ಬದಲಾಗಿ ಧರ್ಮಗುರು ಬಸವಣ್ಣ ಹಾಗೂ …

ಲಿಂಗಾಯತ– ವೀರಶೈವರ ‘ಒಬಿಸಿ ಬೇಡಿಕೆ’ ಮತ್ತು ಒಗ್ಗಟ್ಟಿನ ಹೋರಾಟ… ಧರ್ಮ, ರಾಜಕಾರಣ, ಸಾಮಾಜಿಕ ನ್ಯಾಯ

  ಲೇಖನ: ಡಾ. ಶಿವಮೂರ್ತಿ ಮುರುಘಾ ಶರಣರು ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನದ ದಿನವನ್ನು ರಾಷ್ಟ್ರದಾದ್ಯಂತ ಕಳೆದ ತಿಂಗಳು …

ಪತ್ರಕರ್ತ ಶಿವರಂಜನ್ ಸತ್ಯಂಪೇಟೆಗೆ ಪಿಎಚ್.ಡಿ.ಪದವಿ

  ಕಲಬುರಗಿ : ಪತ್ರಕರ್ತ-ಲೇಖಕ ಶಿವರಂಜನ್ ಸತ್ಯಂಪೇಟೆ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ. ಗುಲ್ಬರ್ಗ ವಿವಿ …

“ನಿಜ ಹೇಳದಿದ್ದರೂ ಪರವಾಗಿಲ್ಲ ಸುಳ್ಳು ಹೇಳಬೇಡಿ”

  ೧) ಬಸವ ಪರಂಪರೆ, ಶರಣ ಪರಂಪರೆ, ಲಿಂಗಾಯತ ಧರ್ಮವು 12ನೇ ಶತಮಾನದಲ್ಲಿ ಅರಿವೇ ಗುರು, ಆಚಾರವೇ ಲಿಂಗ, ಅನುಭಾವವೇ …

ಇತಿಹಾಸ ತಿರುಚುವ ರಂಭಾಪುರಿ ಶ್ರೀಗಳ ಕೃತ್ಯ ಖಂಡನೀಯ

ರಾಮದುರ್ಗ: ಸುವರ್ಣ ಚಾನೆಲ್ ನವರು ಎಡೆಯೂರ ಸಿದ್ಧಲಿಂಗ ಶ್ರೀಗಳ ಬಗ್ಗೆ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅಭಿನವ ಅಲ್ಲಮನೆಂದೇ …

ಇಳಕಲ್ ಗುರುಮಹಾಂತ ಶ್ರೀಗಳಿಗೆ ‘ಸಂಯಮ ಪ್ರಶಸ್ತಿ’ ಪ್ರದಾನ

  ಬಾಗಲಕೋಟೆ: ಇಳಕಲ್‌ನ ಚಿತ್ತರಗಿ ವಿಜಯ ಮಹಾಂತೇಶ ಸಂಸ್ಥಾನ ಮಠದ ಗುರುಮಹಾಂತ ಶ್ರೀಗಳಿಗೆ ಉಪಮುಖ್ಯ ಮಂತ್ರಿ ಗೋವಿಂದ ಕಾರಜೋಳ ಶನಿವಾರ …

Leave a Reply

Your email address will not be published. Required fields are marked *

error: Content is protected !!