Home / featured / “ನಿಜ ಹೇಳದಿದ್ದರೂ ಪರವಾಗಿಲ್ಲ ಸುಳ್ಳು ಹೇಳಬೇಡಿ”

“ನಿಜ ಹೇಳದಿದ್ದರೂ ಪರವಾಗಿಲ್ಲ ಸುಳ್ಳು ಹೇಳಬೇಡಿ”

 

೧) ಬಸವ ಪರಂಪರೆ, ಶರಣ ಪರಂಪರೆ, ಲಿಂಗಾಯತ ಧರ್ಮವು 12ನೇ ಶತಮಾನದಲ್ಲಿ ಅರಿವೇ ಗುರು, ಆಚಾರವೇ ಲಿಂಗ, ಅನುಭಾವವೇ ಜಂಗಮ ಎಂಬ ನಿಟ್ಟಿನಲ್ಲಿ ಕಲ್ಯಾಣ ರಾಜ್ಯಕ್ಕಷ್ಟೇ ಅಲ್ಲ, ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂಬುದು ಸಾರ್ವಕಾಲಿಕ ಸತ್ಯ. ಇಂಥಾ ಬಸವ ಪರಂಪರೆಯನ್ನು ಅಂದಿನ ಕಾಲದ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಅಜ್ಞಾನದಿಂದ ಜ್ಞಾನದ ಮೇಲೆ ಸವಾರಿ ಮಾಡಿ ಶರಣರನ್ನು, ಶರಣ ಸಾಹಿತ್ಯವನ್ನು ಅಲ್ಲೋಲ ಕಲ್ಲೋಲ ಉಂಟು ಮಾಡಿದರು. ರಂಭಾಪುರಿ ಶ್ರೀಗಳೆ ಇದನ್ನು ನೀವು ಸರಿಯಾಗಿ ಬಲ್ಲಿರಿ.

೨) 12 ನೇ ಶತಮಾನದ ಬಸವೋತ್ತರ ಕಾಲ 300 ವರುಷದ ನಂತರ ಬಸವ ಪರಂಪರೆ, ಶರಣ ಪರಂಪರೆಯನ್ನು ಒಂದು ಹಾದಿಗೆ ತಂದಿದವರು ಶ್ರೀ ಯಡೆಯೂರು ಸಿದ್ಧಲಿಂಗೇಶ್ವರರು. ಇವರು ಮೂಲತಹಾ ಒಂದು ವರ್ತಕ (ಬಣಜಿಗ) ಮನೆತನದಲ್ಲಿ ಹುಟ್ಟಿದ್ದಾರೆಂದು  ದಾಖಲೆ ಸಹಿತ, ಇತಿಹಾಸ ಎಲ್ಲರಿಗೂ ಗೊತ್ತು. ಆದರೆ ನೀವು ಶ್ರೀ ಎಡೆಯೂರು ಸಿದ್ಧಲಿಂಗೇಶ್ವರರು ಹಿರೇಮಠ ಮನೆತನದಲ್ಲಿ ಹುಟ್ಟಿದ್ದಾರೆಂದು ಸುಳ್ಳು ಹೇಳಿ ನಮ್ಮ ಸಮಾಜಕ್ಕೆ ಧಕ್ಕೆ ಉಂಟು ಮಾಡುವ ಕಾರ್ಯ ಮಾಡಿದ್ದೀರಿ. ಇದು ಸಮಂಜಸವಲ್ಲ. ಹೀಗೆ ಹೇಳಿದ ನಿಮ್ಮ ಮಾತು ಹಿಂದೆಗೆದುಕೊಳ್ಳಬೇಕು.

೩) ಶ್ರೀ ಎಡೆಯೂರು ಸಿದ್ಧಲಿಂಗೇಶ್ವರರಿಗೆ ಬಸವಣ್ಣ ಎಂದರೆ ಅಪಾರವಾದ ಭಕ್ತಿ, ಗೌರವ, ತತ್ವ ನಿಷ್ಠೆ ಇದೆ ಎಂಬುದನ್ನು ಅವರ ವಚನಗಳಲ್ಲೇ ಎದ್ದು ಕಾಣುತ್ತವೆ.

“ಅನಾದಿ ಪರಶಿವತತ್ವದಿಂದ ಚಿತ್ತು ಉದಯವಾಯಿತ್ತು.
ಆ ನಿರ್ಮಲಮಹಾಜ್ಞಾನಚಿತ್ಸ್ವರೂಪವೇ ಬಸವಣ್ಣ ನೋಡ.
ಆ ಬಸವಣ್ಣನಿಂದ ನಾದ ಬಿಂದು ಕಳೆ.
ಆ ನಾದ ಬಿಂದು ಕಳೆ ಸಮರಸವಾಗಿ ಅಖಂಡಪರಿಪೂರ್ಣಗೋಳಕಾಕಾರ ತೇಜೋಮೂರ್ತಿ ಲಿಂಗಸ್ವರೂಪವಾಯಿತ್ತು ನೋಡ.
ಇದು ಕಾರಣ, ಅನಾದಿಶರಣ ಆದಿಲಿಂಗವೆಂದೆ,
ಬಸವಣ್ಣನಿಂದ ಲಿಂಗವಾದ ಕಾರಣ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.”

ಈ ಮೇಲಿನ ವಚನದ ಮೂಲಕ ಬಸವಣ್ಣ ಅನಾದಿ ಪರಶಿವ ತತ್ವಕ್ಕಿಂತ ಮುಂದೆ ನಿರ್ಮಲ ಮಹಾಜ್ಞಾನ ಚಿಸ್ವರೂಪವಾಗಿದ್ದರೆಂದು, ಅನಾದಿ ಶರಣನು ಆದಿ ಲಿಂಗವೆಂದು, ಬಸವಣ್ಣನಿಂದ ಇಷ್ಟಲಿಂಗ ನಮ್ಮ- ನಿಮ್ಮೆಲ್ಲರ ಕೈಗೆ ಸೇರಿದೆ ಎಂದು ಮುಕ್ತ ಕಂಠದಿಂದ ಹೇಳಲಾಗಿದೆ.  ಈ ವಚನದ ಪರಿಜ್ಞಾನ ನಿಮಗೆ ಆಗಿಲ್ಲವೇ..?

೪) ಸ್ವತಃ ಶ್ರೀಎಡೆಯೂರು ಸಿದ್ಧಲಿಂಗೇಶ್ವರರು
ಬಸವಣ್ಣನವರೇ ನಮ್ಮ ನಿಮ್ಮೆಲ್ಲರ ಗುರುಗಳೆಂದು ಅನೇಕ ವಚನಗಳಲ್ಲಿ ಉಲ್ಲೇಖಿಸಿದ್ದಾರೆ,
ಅಂಥಾ ಬಸವಣ್ಣನವರ ಒಂದು ವಚನದಲ್ಲಿ “ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ ?” ಎಂದು ಸರ್ವಕಾಲಿಕ ಸತ್ಯವನ್ನು ಹೇಳಿರುವರು. ಇದರ ಅರ್ಥ ಪರಮ ಪವಿತ್ರವಾದ  ಈ ಭೂಮಿಯ ಮೇಲೆ ಹುಟ್ಟಬೇಕಾದರೆ ಇಲ್ಲಿ ಯಾರೂ ಕರ್ಣದಿಂದ ಹುಟ್ಟುವುದಿಲ್ಲ.
ಎಲ್ಲರೂ ತಾಯಿಯ ಒಡಲಲ್ಲಿ ಹುಟ್ಟಲೇ ಬೇಕು.
ಇಂಥಹಾ ವಚನಗಳನ್ನು ಓದಿಯೂ ಮರೆತಿರುವಿರೋ
ಅಥವಾ ಓದದೇ ಪಾಂಡಿತ್ಯ ಗಳಿಸಿರುವ ನೀವು ಮೊನ್ನೆಯ ನಿಮ್ಮ ವೀಡಿಯೋದಲ್ಲಿ ಪ್ರಕ್ಷಿಪ್ತ ವಚನವೊಂದನ್ನು ಉಪಯೋಗಿಸಿರುವಿರಿ.
ಅದು ಶ್ರೀ ಎಡೆಯೂರು ಸಿದ್ಧಲಿಂಗೇಶ್ವರರು ಹೇಳಿದ್ದಾರೆಂದು  ನಮ್ಮೆಲ್ಲರ ಮನಕ್ಕೆ ಧಕ್ಕೆ ಉಂಟಾಗುವಂತೆ ಕಲ್ಪಿತ ಹೇಳಿಕೆ ಕೊಟ್ಟಿರುವುದು
ಬಹಳ ನೋವಿನ ಸಂಗತಿ.

೫) ಇಡೀ ಶರಣ ಸಂಕುಲದ
ಎಲ್ಲಾ ಶರಣರು ತಮ್ಮ ತಮ್ಮ ವಚನಗಳಲ್ಲಿ ಬಸವಣ್ಣನೆ ಗುರುವೆಂದು ಮುಕ್ತ ಕಂಠದಿಂದ ಸಾರಿದರೇ ನಿಮಗೆ ಮಾತ್ರ ಮನ ಒಪ್ಪುವಂತೆ ಅನಿಸುತ್ತಿಲ್ಲ. ನಮ್ಮೆಲ್ಲರಿಗೆ ನಿಮ್ಮ ಮೇಲೆ ಅಪಾರ ಗೌರವ ಇದೆ,
ಅದು ಯಾಕೆಂದರೆ ನಿಮ್ಮ ಶಾಲಾ ದಾಖಲಾತಿಯು ಲಿಂಗಾಯತ ಎಂದೇ ಇದೇ ಹೋರತು ಮತ್ತೆನೂ ಇಲ್ಲ. ದಯಮಾಡಿ ನಮ್ಮ ಪ್ರೀತಿಯನ್ನು ಸ್ವೀಕರಿಸಿ ನೀವು ಸಾರಿದ ಅಸತ್ಯವನ್ನು ಒಪ್ಪಿಕೊಂಡು ಸತ್ಯವನ್ನು ಪ್ರತಿಪಾದಿಸಿ. ನಿಜ ಹೇಳದಿದ್ದರೂ ಪರವಾಗಿಲ್ಲ
ಆದರೆ ಸುಳ್ಳು ಹೇಳಬೇಡಿ.

ಶ್ರೀಗಳಿಗೆ ಅನಂತ ಶರಣು ಶರಣಾರ್ಥಿಗಳು. 🙏🙏🙏

✍🏻ಮಡಪತಿ.ವಿ.ವಿ
[email protected]

About Shivanand

Admin : Lingayat Kranti Monthly news paper 8884000008 [email protected]

Check Also

ಸಂಸ್ಕೃತಿ & ಸಂಸ್ಕಾರಗಳ ಬೆನ್ನೇರಿದ ಯುವ ಸನ್ಯಾಸಿಗಳು : ಪೂಜ್ಯಶ್ರೀ ನಿಜಗುಣಾನಂದ ಮಹಾಸ್ವಾಮಿಗಳು

ಬೈಲೂರ: ತಮ್ಮ ಯೌವ್ವನದಲ್ಲಿ ಧರ್ಮದ ಕಂಕಣ ಕಟ್ಟಿಕೊಂಡು‌ ನಿಂತ ಯುವ ಸನ್ಯಾಸಿಗಳ ನೋಡಿದರೆ ತುಂಬ ಸಂತೋಷವಾಗುತ್ತದೆ ಜೊತೆಗೆ ಜೀವನ ಸಾರ್ಥಕವಾಯಿತು …

ಪ್ರತ್ಯೇಕ ಧರ್ಮ ಅಲ್ಪಸಂಖ್ಯಾತ ಮಾನ್ಯತೆ ಸಿಕ್ಕಿದ್ದರೆ, ಲಿಂಗಾಯತ ಉಪಪಂಗಡಗಳು ಮೀಸಲಾತಿ ಕೇಳುವ ಪ್ರಸಂಗವೇ ಬರುತ್ತಿರಲಿಲ್ಲ: ಎಂ ಬಿ ಪಾಟೀಲ

ಬೆಂಗಳೂರು: ಮಾಜಿ ಸಚಿವರು ಮತ್ತು ಶಾಸಕರಾದ ಶ್ರೀ ಎಂ.ಬಿ.ಪಾಟೀಲ ಅವರು ಬೆಂಗಳೂರಿನ ಸದಾಶಿವ ನಗರದ ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯನ್ನು …

ಸೋಹಂ ಎಂದೆನಿಸದೇ ದಾಸೋಹಂ ಎಂದೆನಿಸಯ್ಯ..

ಮೊದಲು ಮೂರು ನೀತಿಕಥೆಗಳನ್ನು ನೊಡೋಣ ಆನಂತರ ವಿಷಯಕ್ಕೆ ಬರೋಣ.ಬೆಳಗಿನ ಜಾವ ಯಾರೋ ಒಬ್ಬರು ಸಮುದ್ರ ತೀರದಲ್ಲಿ ವಾಯುವಿಹಾರ ಮಾಡುತ್ತಿದ್ದರು. ಅಂದು …

ಹಗಲಿನಲ್ಲಿಯೆ ಸಂಜೆಯಾಯಿತು ಒಂದು ಐತಿಹಾಸಿಕ ನಿರೂಪಣೆ: ಡಾ.ಸಿದ್ಧನಗೌಡ ಪಾಟೀಲ

ಸಾಹಿತಿ ಮತ್ತು ಲಿಂಗೈಕ್ಯ ಪೂಜ್ಯ ತೋಂಟದ ಸಿದ್ಧಲಿಂಗಶ್ರೀಗಳ ಒಡನಾಡಿ ಶಿಷ್ಯರಾದ ಸಿದ್ದು ಯಾಪಲಪರವಿ ಅವರು ಬರೆದ ಹಗಲಿನಲ್ಲಿಯೆ ಸಂಜೆಯಾಯಿತು ಕೃತಿ …

ರಂಗಾಯಣದಿಂದ ನೇಗಿನಹಾಳದಲ್ಲಿ ಸರ್ವರಿಗೂ ಸಂವಿಧಾನದ ನಾಟಕ

ನೇಗಿನಹಾಳ: ಜನಸಾಮಾನ್ಯರಲ್ಲಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಅರಿವು ಮೂಡಿಸುವುದರ ಜೊತೆಗೆ ಜಾತಿ, ಧರ್ಮ, ಲಿಂಗಸಮಾನತೆ, ಅಸ್ಪೃಶ್ಯತೆ ನಿವಾರಣೆ, ದೇವದಾಸಿ …

ಜಗದ್ಭವ್ಯ ಮೇರು ಕೃತಿ : ಮಹಾತ್ಮರ ಚರಿತಾಮೃತ

ಲೇಖನ: ಪ್ರಕಾಶ ಗಿರಿಮಲ್ಲನವರ                          …

ಸೆ. 25ರಂದು “ಮಹಾತ್ಮರ ಚರಿತಾಮೃತ” ಲೋಕಾರ್ಪಣೆ

ಅಥಣಿ: ಗಡಿಭಾಗದಲ್ಲಿ ನಾಡು-ನುಡಿ ಕಟ್ಟುವ ಕಾಯಕದಲ್ಲಿ ನಿರತವಾಗಿರುವ ಅಥಣಿ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಅವರು ಸಂತ-ಮಹಾಂತರ …

ಧರ್ಮ ವಿಭಜನೆ ನೆವದಲ್ಲಿ ಪಾಟೀಲರ ಟೀಕೆ ಸಾಧುವಲ್ಲ

-ಸಾಹಿತಿ ಶಿವಕುಮಾರ್ ಉಪ್ಪಿನ ಖೇದ ವಿಜಯಪುರ ಜಿಲ್ಲೆಯ ಒಳ ಮರ್ಮದ ರಾಜಕೀಯ ಮೇಲಾಟದ ಕಾರಣಕ್ಕೆ ಲಿಂಗಾಯತ ಚಳವಳಿಯಿಂದಲೇ ಕಾಂಗ್ರೆಸ್‌ಗೆ ಸೋಲಾಯಿತು …

ಲಿಂಗಾಯತ ಪೇಜ್‌ಗೆ ಕಿಡಿಗೇಡಿಗಳ ಕಿರಿಕಿರಿ..!

ಲಿಂಗಾಯತ ಯುವ ಒಕ್ಕೂಟ ಫೇಸ್ ಬುಕ್ ಪೇಜ್‌ಗೆ ಮಸಿ ಬಳಿಯಲು ಅದನ್ನು ಹ್ಯಾಕ್ ಮಾಡಿ ಅಶ್ಲೀಲ ಪೋಸ್ಟ್‌ಗಳನ್ನು ಮಾಡುತ್ತಿರುವುದರಿಂದ ಈ …

“ಲಕ್ಷ್ಮೀ ಪೂಜೆ” ಲಕ್ಷ್ಮೀ ಯಾರು.?

  ಈ ಲಕ್ಷ್ಮೀ ಪೂಜೆ ಯಾಕೆ ಮಾಡುತ್ತಿದ್ದರು? ರಾಜನ ಹೆಂಡತಿಗೆ ಲಕ್ಷ್ಮೀ ಎಂದು ಕರೆಯುತ್ತಿದ್ದರು, ಇದು ಹೊಗಳಿಕೆಯ ಪದ. ರಾಜನಿಗೆ …

ಸಂಗೊಳ್ಳಿ ರಾಯಣ್ಣನಿಗೆ ಜನ್ಮ ನೀಡಿದ್ದು ನೇಗಿನಹಾಳ ಗ್ರಾಮ

ಸ್ವತಂತ್ರ ಹೋರಾಟಗಾರರ ಧರ್ಮಪತ್ನಿ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ನೇಗಿನಹಾಳ : ಬ್ರಿಟಿಷ್ ಸರ್ಕಾರದ ವಿರುದ್ಧ ಮೊಟ್ಟಮೊದಲಿಗೆ ಧಂಗೆ ಸಾರಿ …

ಕ್ರೀಡೆ, ಕಲೆ, ಸಾಹಿತ್ಯದಂಥ ರಂಗಗಳು ಜಾತಿ, ಸಂಕುಚಿತತೆ ನಿರ್ಮೂಲನೆಯ ಮಹಾಸಾಧನಗಳು

  ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮೀಜಿ ಅಭಿಮತ ಮುಂಡರಗಿ ಆಗಷ್ಟ್ 07: ಪ್ರಸ್ತುತ ರಾಜಕಾರಣದಲ್ಲಿ, ಕಾವಿಯೊಳಗೆ ಖಾದಿಯ ಪ್ರವೇಶ ಸಲ್ಲದು. …

ಪ್ರಮಾಣ ವಚನ ನೇರಪ್ರಸಾರ; ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ರಾಜಭವನದಿಂದ ನೇರ ಪ್ರಸಾರ ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ಇಂದು ಮಧ್ಯಾಹ್ನ 2:15ಕ್ಕೆ …

ಅಲ್ಲಮಪ್ರಭುಗಳ ವಚನಗಳು ಇಂಗ್ಲಿಷ್‌ಗೆ ಭಾಷಾಂತರ

  ವಿಜಯಪುರ : ಖ್ಯಾತ ಭಾಷಾತಜ್ಞ ಎ. ಕೆ. ರಾಮಾನುಜನ್ ಅವರ ಬಳಿಕ ಶರಣರೊಬ್ಬರ ವಚನಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ ಕೀರ್ತಿ …

ತ್ರಿಭಾಷೆಗಳಲ್ಲಿ ಮೂಡಿಬಂದ ಮಹಾಜಂಗಮ

ಮಹಾಜಂಗಮ : ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಮರಾಠಿ ಮೂಲ ಲೇಖಕರು : ಶ್ರೀ ರಾಜು ಬ. ಜುಬರೆ …

Leave a Reply

Your email address will not be published. Required fields are marked *