Home / featured / ಅರಿಯದವರೊಡನೆ ಸಂಗವ ಮಾಡಿದಡೆ ಕಲ್ಲ ಹೊಯ್ದು ಕಿಡಿಯ ತೆಗೆದುಕೊಂಬಂತೆ

ಅರಿಯದವರೊಡನೆ ಸಂಗವ ಮಾಡಿದಡೆ ಕಲ್ಲ ಹೊಯ್ದು ಕಿಡಿಯ ತೆಗೆದುಕೊಂಬಂತೆ

ಲಿಂಗಾಯತ ಕ್ರಾಂತಿ: ತಮ್ಮ ಅನುಪಮ ಅರಿವಿನ ಚಿದಾಗಸದಲ್ಲಿ ಚಿನ್ಮ ಯ ಜ್ಯೋತಿಯನ್ನು ಕಂಡವರು ನಮ್ಮ ಅಪ್ಪ ಬಸವಾದಿ ಶರಣರು. ಈ ಅರಿವು ಎಂಬ ಮಹಾ ಬೆಳಗಿನಲ್ಲಿ ಅವರು ತಂತಮ್ಮ ಭವದ ತಮಂಧ ವನ್ನು ನೀಗಿಸಿ ಕೊಂಡು ಬೆಳಕಾಗಿ ಬೆಳಗಿ ಬಾಳಿದ ವರು. ಈ ಜಗಜೀವನದ ಬದುಕಿನ ಬೀದಿಯುದ್ದ ಕ್ಕೂ ವಚನಗಳೆಂಬ ಅಕ್ಷರಗಳ ಬೆಳಕು ಚೆಲ್ಲುವ ಮೂಲಕ ಚಿರಂಜೀವಿಗಳಾಗಿ ಉಳಿದವರು ಅಪ್ಪ ಬಸವಾದಿಶರಣರು.ಇಂಥಾ ಶರಣರ ಸಮುದಾ ಯದಲ್ಲಿಯೇ ತಮ್ಮ ಅದ್ವಿತೀಯವಾದ ವಿರಕ್ತಿ, ಅರಿವು, ಆಚರಣೆ ಅಭಿವ್ಯಕ್ತಿ ಮೂಲಕ ಅಗ್ರಗಣ್ಯ ರಾದವರು ಅಕ್ಕಮಹಾದೇವಿ. ಅವರು ತಮ್ಮ ಈ ಕೆಳಗಿನ ವಚನದಲ್ಲಿ ಅರಿವಿನ ಆಚರಣೆಯ ದಾರಿ ಯಲ್ಲಿ ಬರುವಂಥ ಎಡರು ತೊಡರುಗಳೆಂಥವು ಅವುಗಳನ್ನು ನೀಗಿಕೊಳ್ಳುತ್ತಲೇ ಸಾಗಿದರೆ ಹೊಂದುವಂಥ ಫಲವೂ ಎಂಥಾದ್ದು, ಅಂತಿಮ ದಲ್ಲಿ ಸಾಧಿಸಿದ ಅರಿವಿನ ಮಹಾಂತತ್ವದ ಸ್ಥಿತಿ ಸ್ವರೂಪ ಎಂತಹದ್ದು ಎಂಬುದನ್ನು ಪ್ರಸ್ತುತ ಈ ವಚನದಲ್ಲಿ ಮೂರು ಮುಖ್ಯ ದೃಷ್ಟಾಂತಗಳಲ್ಲಿ ಎರಕಹೊಯ್ದು ಕೊಟ್ಟಿರುವರು.

ವಚನ
ಅರಿಯದವರೊಡನೆ ಸಂಗವ ಮಾಡಿದಡೆ
ಕಲ್ಲ ಹೊಯ್ದು ಕಿಡಿಯ ತೆಗೆದುಕೊಂಬಂತೆ.

ಬಲ್ಲವರೊಡನೆ ಸಂಗವ ಮಾಡಿದಡೆ
ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ.

ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಶರಣರ ಸಂಗವ ಮಾಡಿದಡೆ
ಕರ್ಪುರದ ಗಿರಿಯನುರಿಯಕೊಂಬಂತೆ.

ಅಕ್ಕಮಹಾದೇವಿ

ವಚನ ಅನುಸಂಧಾನ:

ಈಗ ವಚನದ ಮೊದಲನೆಯ ಎರಡು ಸಾಲಿನಲ್ಲಿ ಇರುವ ದೃಷ್ಟಾಂತವನ್ನೇ ವಿವೇಚಿಸಿ ನೋಡೋಣ

ಅರಿಯದವರೊಡನೆ ಸಂಗವ ಮಾಡಿದಡೆ
ಕಲ್ಲ ಹೊಯ್ದು ಕಿಡಿಯ ತೆಗೆದುಕೊಂಬಂತೆ.

ಈ ಎರಡೂ ಸಾಲುಗಳನ್ನು ಓದಿದರೆ ಮೇಲ್ನೋಟ ಕ್ಕೆ ಅವು ಕೊಡುವ ಅರ್ಥ ನೇತ್ಯಾತ್ಮಕವಾಗಿಯೇ ಇದೆ ಅನಿಸುತ್ತದೆ. ಅಂದರೆ, ಅರಿ(ತಿಳಿ)ಯದವರ ಸಂಗಡ (ಅರಿವಿನ ಚಿಂತನೆಯ) ಸಂಗವ ಮಾಡು ವುದು ವ್ಯರ್ಥ ಎಂಬ ಭಾವ. ಇನ್ನು, ಕಲ್ಲಿಗೆ ಕಲ್ಲು ಹೊಡೆದರೆ ಹೊರಡುವುದು ಕಿಡಿಯಲ್ಲದೇ ಮತ್ತೆ ಏನನ್ನು ಪಡೆಯಲು ಸಾಧ್ಯ? ಎಂಬ ನಿರಾಶೆಯ ಧ್ವನಿಯೂ ಕೇಳಸುತ್ತದೆ!
ಆದರೆ, ಅದು ವಚನದ ನಿಜವಾದ ಧ್ವನಿ ಅಲ್ಲ. ಹಾಗಾದರೆ ನಿಜವಾದ ದ್ವನಿ ಏನಂದರೆ; ಕಲ್ಲಿಗೆ ಕಲ್ಲು ಅಂದರೆ ಇಲ್ಲಿ ಚಕಮಕಿ ಕಲ್ಲಿನ ಮಧ್ಯದಲ್ಲಿ ಸಹನೆಯ ಅರಳಿಯನಿಟ್ಟು ಬೆಂಕಿಯ ಕಿಡಿಯನ್ನ ‘ಹೊತ್ತಿಸಿ’ ಕೊಳ್ಳುವುದು! (ತೆಗೆದುಕೊಂಬಂತೆ) ಅದು ಇಲ್ಲಿ ಅತಿ ಮುಖ್ಯ ಕೆಲಸವಾಗಿದೆ. ಈ ಕಿಡಿ ಯಿಂದ ಬೆಳಕನ್ನು ಪಡೆಯಲು ಸಾಧ್ಯವಿದೆ ಎಂಬ ‘ಆಶಾಜ್ಯೋತಿ’ ಈ ಮಾತುಗಳಲ್ಲಿ ಬೆಳಗುತ್ತಲಿದೆ!!

ಇನ್ನು ಎರಡನೇ ದೃಷ್ಟಾಂತವನ್ನು ನೋಡೋಣ;

ಬಲ್ಲವರೊಡನೆ ಸಂಗವ ಮಾಡಿದಡೆ, ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ.

ಇಲ್ಲಿ ಬಲ್ಲವರು ಅಂದರೆ, ತಿಳಿದವರು – ಏನನ್ನು ಚಿಂತನೆಯ ಮಾಡಿ ತಿಳಿಯುವುದು ಇದೆಯೋ ಅದನ್ನು ಪ್ರಥಮದಲ್ಲಿ ಅಲ್ಪ ಸ್ವಲ್ಪಮಟ್ಟಿಗಾದರೂ ಗೊತ್ತಿರುವವರು ಎಂದರ್ಥ. ಅಂಥವರನ್ನು ಈ ವಚನದಲ್ಲಿ ಮೊಸರಿಗೆ ಹೋಲಿಸಲಾಗಿದೆ. ಇಂಥ ಮೊಸರಿನಂಥವರನ್ನು ಅರಿವೆಂಬ ಕಡಗೋಲಿನ ಲ್ಲಿ ಕಡೆದರೆ ಬೆಳ್ಳನೆಯ ಬೆಳಕಿನಂಥ ಬೆಣ್ಣೆಯನ್ನು ತೆಗೆಯಬಹುದೆಂಬ ನಿಶ್ಚಿತ ಫಲಾತ್ಮಕ ಗುಣವು ಕಣ್ಮನಕ್ಕಷ್ಟೇ ಅಲ್ಲಾ ಅದು ಹೃದ್ಭಾವಕ್ಕೂ ಗೋಚ ರಿಸುತ್ತದೆ.!

ಇನ್ನು ವಚನದ ಕೊನೆ ಭಾಗದಲ್ಲಿನ ಮೂರನೆಯ ದೃಷ್ಟಾಂತವನ್ನು ಅನುಸಂಧಾನ ಮಾಡೋಣ.

ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಶರಣರ ಸಂಗವ ಮಾಡಿದಡೆ
ಕರ್ಪುರದ ಗಿರಿಯನುರಿಯಕೊಂಬಂತೆ.

ಎನ್ನುವಲ್ಲಿ, ಈ ವಚನದ ನಿರ್ಣಾಯಕ ಸತ್ಯವು; ಕೋಲ್ ಮಿಂಚಿನಂತೆ ಸಂಚರಿಸಿ ತನ್ನೊಳಗೆ ಅಡ ಗಿದ್ದ ಆ ಅನೂಹ್ಯ ದಿವ್ಯದ ಮಹಾ ಚೇತನವನ್ನು ಪ್ರಜ್ವಲಿಸಿ ಪ್ರಸಾದಿಸುತ್ತದೆ. ಅಂದರೆ, ಇದು ಸಾಧ್ಯ ವಾಗುವುದು ‘ಶರಣರ ಸಂಗದಿಂದ’ ಮಾತ್ರ! ಇಲ್ಲಿ
ಕರ್ಪುರದ ಗಿರಿಯಂತಹ ಭಕ್ತ ಶರಣರ ಸಂಗದ ಅರಿವಿನ ಮನದ ಉರಿತಾಗಿ, ಉರಿದು ಪ್ರಜ್ವಲಿಸಿ ಬೆಳಗಿ, ಬೆಳಕಾಗಿ ಬಯಲಾಗುವುದು! ಎಂಬರ್ಥ ದ ದಿವ್ಯ ಸಂದೇಶ ಹೃನ್ಮನಗಳಿಗೆ ಫಳ್ ನೇ ಹೊಳೆ ಯುತ್ತದೆ!!

ಹೀಗೆ ಅಕ್ಕಮಹಾದೇವಿ ತಾಯಿಯ ಈ ವಚನದ ಒಳಹೊರಗಿನ ಬೆಳಗು; ಎಂಥಾ ಕಲ್ಲು ಹೃನ್ಮನಗ ಳೂ ಸಹಿತ ಅರಿವಿನ ಧಾರಣೆ ಮಾಡಿದರೆ; ಅವು ಅರಳಿ, ಪರಿಮಳಿಸಿ,ಝಗಮಗಿಸಿ ಬೆಳಗಿ, ಮಹಾ ಬಯಲಲ್ಲಿ ಬೆರೆತು ಬಯಲಾಗಬಲ್ಲವು! ಎಂಬ ಭಕ್ತಿಯ ಬದುಕಿನ ದಿವ್ಯ ಸತ್ಯವನ್ನು ಅಕ್ಕನ ಈ ಪ್ರಸ್ತುತ ವಚನವು ಹೀಗೆ ಘನಮೌನ ಹೊದ್ದ ಶಬ್ದ ಗಳಲ್ಲಿ ಗರ್ಭೀಕರಿಸಿಕೊಂಡಿದ್ದನ್ನು ಅನುಸಂಧಾನ ಮಾಡಿ ಮನಗಾಣಬಹುದು ಎಂದು ಅನಿಸುತ್ತದೆ.

ಲೇಖನ: ಅಳಗುಂಡಿ ಅಂದಾನಯ್ಯ

About Shivanand

Admin : Lingayat Kranti Monthly news paper 8884000008 [email protected]

Check Also

ಸಂಸ್ಕೃತಿ & ಸಂಸ್ಕಾರಗಳ ಬೆನ್ನೇರಿದ ಯುವ ಸನ್ಯಾಸಿಗಳು : ಪೂಜ್ಯಶ್ರೀ ನಿಜಗುಣಾನಂದ ಮಹಾಸ್ವಾಮಿಗಳು

ಬೈಲೂರ: ತಮ್ಮ ಯೌವ್ವನದಲ್ಲಿ ಧರ್ಮದ ಕಂಕಣ ಕಟ್ಟಿಕೊಂಡು‌ ನಿಂತ ಯುವ ಸನ್ಯಾಸಿಗಳ ನೋಡಿದರೆ ತುಂಬ ಸಂತೋಷವಾಗುತ್ತದೆ ಜೊತೆಗೆ ಜೀವನ ಸಾರ್ಥಕವಾಯಿತು …

ಪ್ರತ್ಯೇಕ ಧರ್ಮ ಅಲ್ಪಸಂಖ್ಯಾತ ಮಾನ್ಯತೆ ಸಿಕ್ಕಿದ್ದರೆ, ಲಿಂಗಾಯತ ಉಪಪಂಗಡಗಳು ಮೀಸಲಾತಿ ಕೇಳುವ ಪ್ರಸಂಗವೇ ಬರುತ್ತಿರಲಿಲ್ಲ: ಎಂ ಬಿ ಪಾಟೀಲ

ಬೆಂಗಳೂರು: ಮಾಜಿ ಸಚಿವರು ಮತ್ತು ಶಾಸಕರಾದ ಶ್ರೀ ಎಂ.ಬಿ.ಪಾಟೀಲ ಅವರು ಬೆಂಗಳೂರಿನ ಸದಾಶಿವ ನಗರದ ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯನ್ನು …

ಸೋಹಂ ಎಂದೆನಿಸದೇ ದಾಸೋಹಂ ಎಂದೆನಿಸಯ್ಯ..

ಮೊದಲು ಮೂರು ನೀತಿಕಥೆಗಳನ್ನು ನೊಡೋಣ ಆನಂತರ ವಿಷಯಕ್ಕೆ ಬರೋಣ.ಬೆಳಗಿನ ಜಾವ ಯಾರೋ ಒಬ್ಬರು ಸಮುದ್ರ ತೀರದಲ್ಲಿ ವಾಯುವಿಹಾರ ಮಾಡುತ್ತಿದ್ದರು. ಅಂದು …

ಹಗಲಿನಲ್ಲಿಯೆ ಸಂಜೆಯಾಯಿತು ಒಂದು ಐತಿಹಾಸಿಕ ನಿರೂಪಣೆ: ಡಾ.ಸಿದ್ಧನಗೌಡ ಪಾಟೀಲ

ಸಾಹಿತಿ ಮತ್ತು ಲಿಂಗೈಕ್ಯ ಪೂಜ್ಯ ತೋಂಟದ ಸಿದ್ಧಲಿಂಗಶ್ರೀಗಳ ಒಡನಾಡಿ ಶಿಷ್ಯರಾದ ಸಿದ್ದು ಯಾಪಲಪರವಿ ಅವರು ಬರೆದ ಹಗಲಿನಲ್ಲಿಯೆ ಸಂಜೆಯಾಯಿತು ಕೃತಿ …

ರಂಗಾಯಣದಿಂದ ನೇಗಿನಹಾಳದಲ್ಲಿ ಸರ್ವರಿಗೂ ಸಂವಿಧಾನದ ನಾಟಕ

ನೇಗಿನಹಾಳ: ಜನಸಾಮಾನ್ಯರಲ್ಲಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಅರಿವು ಮೂಡಿಸುವುದರ ಜೊತೆಗೆ ಜಾತಿ, ಧರ್ಮ, ಲಿಂಗಸಮಾನತೆ, ಅಸ್ಪೃಶ್ಯತೆ ನಿವಾರಣೆ, ದೇವದಾಸಿ …

ಜಗದ್ಭವ್ಯ ಮೇರು ಕೃತಿ : ಮಹಾತ್ಮರ ಚರಿತಾಮೃತ

ಲೇಖನ: ಪ್ರಕಾಶ ಗಿರಿಮಲ್ಲನವರ                          …

ಸೆ. 25ರಂದು “ಮಹಾತ್ಮರ ಚರಿತಾಮೃತ” ಲೋಕಾರ್ಪಣೆ

ಅಥಣಿ: ಗಡಿಭಾಗದಲ್ಲಿ ನಾಡು-ನುಡಿ ಕಟ್ಟುವ ಕಾಯಕದಲ್ಲಿ ನಿರತವಾಗಿರುವ ಅಥಣಿ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಅವರು ಸಂತ-ಮಹಾಂತರ …

ಧರ್ಮ ವಿಭಜನೆ ನೆವದಲ್ಲಿ ಪಾಟೀಲರ ಟೀಕೆ ಸಾಧುವಲ್ಲ

-ಸಾಹಿತಿ ಶಿವಕುಮಾರ್ ಉಪ್ಪಿನ ಖೇದ ವಿಜಯಪುರ ಜಿಲ್ಲೆಯ ಒಳ ಮರ್ಮದ ರಾಜಕೀಯ ಮೇಲಾಟದ ಕಾರಣಕ್ಕೆ ಲಿಂಗಾಯತ ಚಳವಳಿಯಿಂದಲೇ ಕಾಂಗ್ರೆಸ್‌ಗೆ ಸೋಲಾಯಿತು …

ಲಿಂಗಾಯತ ಪೇಜ್‌ಗೆ ಕಿಡಿಗೇಡಿಗಳ ಕಿರಿಕಿರಿ..!

ಲಿಂಗಾಯತ ಯುವ ಒಕ್ಕೂಟ ಫೇಸ್ ಬುಕ್ ಪೇಜ್‌ಗೆ ಮಸಿ ಬಳಿಯಲು ಅದನ್ನು ಹ್ಯಾಕ್ ಮಾಡಿ ಅಶ್ಲೀಲ ಪೋಸ್ಟ್‌ಗಳನ್ನು ಮಾಡುತ್ತಿರುವುದರಿಂದ ಈ …

“ಲಕ್ಷ್ಮೀ ಪೂಜೆ” ಲಕ್ಷ್ಮೀ ಯಾರು.?

  ಈ ಲಕ್ಷ್ಮೀ ಪೂಜೆ ಯಾಕೆ ಮಾಡುತ್ತಿದ್ದರು? ರಾಜನ ಹೆಂಡತಿಗೆ ಲಕ್ಷ್ಮೀ ಎಂದು ಕರೆಯುತ್ತಿದ್ದರು, ಇದು ಹೊಗಳಿಕೆಯ ಪದ. ರಾಜನಿಗೆ …

ಸಂಗೊಳ್ಳಿ ರಾಯಣ್ಣನಿಗೆ ಜನ್ಮ ನೀಡಿದ್ದು ನೇಗಿನಹಾಳ ಗ್ರಾಮ

ಸ್ವತಂತ್ರ ಹೋರಾಟಗಾರರ ಧರ್ಮಪತ್ನಿ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ನೇಗಿನಹಾಳ : ಬ್ರಿಟಿಷ್ ಸರ್ಕಾರದ ವಿರುದ್ಧ ಮೊಟ್ಟಮೊದಲಿಗೆ ಧಂಗೆ ಸಾರಿ …

ಕ್ರೀಡೆ, ಕಲೆ, ಸಾಹಿತ್ಯದಂಥ ರಂಗಗಳು ಜಾತಿ, ಸಂಕುಚಿತತೆ ನಿರ್ಮೂಲನೆಯ ಮಹಾಸಾಧನಗಳು

  ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮೀಜಿ ಅಭಿಮತ ಮುಂಡರಗಿ ಆಗಷ್ಟ್ 07: ಪ್ರಸ್ತುತ ರಾಜಕಾರಣದಲ್ಲಿ, ಕಾವಿಯೊಳಗೆ ಖಾದಿಯ ಪ್ರವೇಶ ಸಲ್ಲದು. …

ಪ್ರಮಾಣ ವಚನ ನೇರಪ್ರಸಾರ; ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ರಾಜಭವನದಿಂದ ನೇರ ಪ್ರಸಾರ ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ಇಂದು ಮಧ್ಯಾಹ್ನ 2:15ಕ್ಕೆ …

ಅಲ್ಲಮಪ್ರಭುಗಳ ವಚನಗಳು ಇಂಗ್ಲಿಷ್‌ಗೆ ಭಾಷಾಂತರ

  ವಿಜಯಪುರ : ಖ್ಯಾತ ಭಾಷಾತಜ್ಞ ಎ. ಕೆ. ರಾಮಾನುಜನ್ ಅವರ ಬಳಿಕ ಶರಣರೊಬ್ಬರ ವಚನಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ ಕೀರ್ತಿ …

ತ್ರಿಭಾಷೆಗಳಲ್ಲಿ ಮೂಡಿಬಂದ ಮಹಾಜಂಗಮ

ಮಹಾಜಂಗಮ : ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಮರಾಠಿ ಮೂಲ ಲೇಖಕರು : ಶ್ರೀ ರಾಜು ಬ. ಜುಬರೆ …

Leave a Reply

Your email address will not be published. Required fields are marked *