ಲಿಂಗಾಯತ ದಿಟ್ಟ ಶರಣೆ: ಪ್ರೇಮಕ್ಕಾ ಅಂಗಡಿ
Shivanand
December 1, 2020
featured, General News, ಬೆಳಗಾವಿ
1,152 Views
ಬೈಲಹೊಂಗಲ: ಪ್ರೇಮಕ್ಕ ಅಂಗಡಿ ನಮ್ಮ ಸಮಾಜದ ದಿಟ್ಟ ಹೆಣ್ಣುಮಗಳು ಇಂದು ಇಡೀ ರಾಜ್ಯದಲ್ಲಿ ಲಿಂಗಾಯತ ಸಮಾಜದ ಮಹಿಳೆಯರು ಸಂಘಟಿತ ಆಗುವಲ್ಲಿ ಅಕ್ಕನದು ಪ್ರಮುಖ ಪಾತ್ರ.
ನಿರಾಭರಣಿ ಪ್ರೇಮಕ್ಕ ಸದಾ ನೊಸಲಲ್ಲಿ ವಿಭೂತಿ ಧರಿಸಿ ಮುಖದಲ್ಲಿ ಒಂದಿಷ್ಟು ಮುಗುಳ್ನಗೆ ಬೀರುವ ಪ್ರೇಮಕ್ಕನಿಗೆ ಅದುವೇ ನಿಜವಾದ ಆಭರಣ ಅಪ್ಪಟ ಬಸವಾನುಯಾಯಿಯಾದ ಪ್ರೇಮಕ್ಕ ತನ್ನ ಕೌಟುಂಬಿಕ ಜವಾಬ್ದಾರಿ ಜೊತೆಗೆ ಭೋದಕಿಯ ಕಾಯಕ ಜೊತೆ ಜೊತೆಗೆ ಇಡೀ ನಾಡಿನುದ್ದಕ್ಕೂ ಸಂಚರಿಸಿ ಸಮಾಜ ಸಂಘಟಿಸುವ ಹೊಣೆಗಾರಿಕೆ ಅನೇಕ ಒತ್ತಡಗಳಿದ್ದರೂ ಪ್ರತಿನಿತ್ಯ ನೂರಾರು ಕಿಲೋಮೀಟರ್ ಸಂಚರಿಸಿದರೂ ಅದೇ ಮುಗುಳ್ನಗೆ ಅದೇ ಉತ್ಸಾಹ ಎಂದೂ ಬೇಸರಿಕೆ ತೂಕಡಿಕೆ ಆಯಾಸ ವ್ಯಕ್ತಪಡಿಸದ ವ್ಯಕ್ತಿತ್ವ ಸಮಾಜವನ್ನು ಕಟ್ಟಿಕೊಂಡು ತಮಗೇನಾಗಬೇಕು ಎಂದು ತಾತ್ಸಾರ ವ್ಯಕ್ತಪಡಿಸುವ ವ್ಯಕ್ತಿಯೂ ಕೂಡ ಇದು ನನ್ನ ಸಮಾಜ ಇದರಲ್ಲಿ ನಾನೂ ಒಬ್ಬನಾಗಿರಬೇಕು ಎಂದು ಹಂಬಲಿಸುವಷ್ಟರ ಮಟ್ಟಕ್ಕೆ ಆತನನ್ನು ಬದಲಾಯಿಸಬಲ್ಲ ತಾಕತ್ತಿರುವುದು ಲಿಂಗಾಯತ ಸಮಾಜದ ಬೈಲಹೊಂಗಲದ ಪ್ರೇಮಕ್ಕ ಅಂಗಡಿ.
ಮಾತಿಗೆ ನಿಂತರೆಂದರೆ ಸಮಾರಂಭವೇ ನಿಶ್ಶಬ್ದ ಮಹಿಳೆಯರಂತೂ ಪ್ರೇಮಕ್ಕನ ಮಾತಿಗೆ ತಲೆದೂಗುತ್ತಾರೆ ಸೂಜಿಗಲ್ಲನಂತೆ ಸೆಳೆಯಬಲ್ಲ ಮಾತುಗಾರಿಕೆ ಪ್ರೇಮಕ್ಕನದು
ಹೇಳುತ್ತಾ ಹೋದರೆ ಮುಗಿಯಲಾರದ ವ್ಯಕ್ತಿತ್ವ ಪ್ರೇಮಕ್ಕನದು ತನ್ನೆಲ್ಲ ಒತ್ತಡಗಳ ಮಧ್ಯೆಯೂ ಸಮಾಜಕ್ಕಾಗಿ ಸಂಘಟನೆಗಾಗಿ ದುಡಿಯುತ್ತಿರುವ ಪ್ರೇಮಕ್ಕನಿಗಿಂದು ಜನ್ಮದಿನದ ಸಂಭ್ರಮ ಇನ್ನೂ ನೂರಾರು ವರ್ಷಗಳ ಕಾಲ ಸುಖ ಸಂತೋಷದಿಂದ ಬಾಳುವಂತಾಗಲಿ ಅವರ ಮುಖದಲ್ಲಿ ಸದಾ ನಗು ತುಂಬಿರಲಿ ಮತ್ತಷ್ಟು ಮಗದಷ್ಟು ಸಮಾಜಕ್ಕೆ ಅವರಿಂದ ಸೇವೆ ದೊರಕಲಿ ಎಂದು ಬಸವಾದಿ ಶರಣರಲ್ಲಿ ಪ್ರಾರ್ಥಿಸುತ್ತೇನೆ.
ಪೂಜ್ಯ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿಗಳು
ಶ್ರೀ ತೋಂಟದಾರ್ಯ ಸಂಸ್ಥಾನಮಠ ಬಸವಾಪಟ್ಟಣ ಅರಕಲಗೂಡು ತಾ ಹಾಸನ ಜಿಲ್ಲೆ
Check Also
‘ಸನಾತನ ಚಿಂತನೆಗಳ ಮರು ಸೃಷ್ಟಿ’ ಶೀರ್ಷಿಕೆಗೆ ಆಕ್ಷೇಪ ಬೀದರ್: ನೂತನ ಅನುಭವ ಮಂಟಪ ಭೂಮಿ ಪೂಜೆ ಕಾರ್ಯಕ್ರಮ ಕುರಿತು …
ಹುಬ್ಬಳ್ಳಿ: ಬಸವಕಲ್ಯಾಣದಲ್ಲಿ ನಿರ್ಮಿಸುತ್ತಿರುವ ಅನುಭವ ಮಂಟಪದ ಭೂಮಿಪೂಜೆ ಕಾರ್ಯಕ್ರಮದ ಕುರಿತು ಜ .6 ರಂದು ನೀಡಿದ ಜಾಹೀರಾತಿನಲ್ಲಿ ‘ಸನಾತನ …
ಲಿಂಗಾಯತ ಪ್ರಗತಿಪರ ಚಿಂತನೆಯ ಧರ್ಮವಾಗಿದೆ ಗದಗ : ಮಹಾಮಾನವತಾವಾದಿ ಪ್ರಗತಿಪರ ಚಿಂತಕ, ವಿಶ್ವಗುರು ಬಸವಣ್ಣನವರ ಕಾರ್ಯಕ್ಷೇತ್ರವಾಗಿದ್ದ ಬಸವಕಲ್ಯಾಣದಲ್ಲಿ ನೂತನ …
ಭಾರತದ ಚರಿತ್ರೆಯಲ್ಲಿ ಶರಣ ಚಳುವಳಿಗೆ ಒಂದು ವಿಶಿಷ್ಟವಾದ ಸ್ಥಾನ ಸಿಗುತ್ತದೆ. ಬೌದ್ಧ ಧರ್ಮದ ನಂತರ ಭಾರತದಲ್ಲಿ ಮತ್ತೊಮ್ಮೆ ಸಮಾಜೋಧಾರ್ಮಿಕ ಕ್ರಾಂತಿ …
ಲೇಖನ: ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತೋಂಟದಾರ್ಯ ಸಂಸ್ಥಾನ ಮಠ ಗದಗ ಬೆಳಗಾವಿ: ಕರ್ನಾಟಕವನ್ನು ಶೈಕ್ಷಣಿಕವಾಗಿ ಹಾಗು ಸಾಂಸ್ಕೃತಿಕವಾಗಿ …
ಬಸವಕಲ್ಯಾಣ: ರಾಜ್ಯ ಸರ್ಕಾರ ಪತ್ರಿಕೆಗಳಿಗೆ ನೀಡಿರುವ ಜಾಹೀರಾತಿನಲ್ಲಿ ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ ನೂತನ ಅನುಭವ ಮಂಟಪ ನಿರ್ಮಾಣ’ …
ಕೆಲವು ಅಥವಾ ಹಲವು ಅರೆಬೆಂದ ವಿಚಾರವಾದಿಗಳು ಅನುಭವ ಮಂಟಪದ ನಿರ್ಮಾಣದ ಕುರಿತಾಗಿ ಆರ್ಥಿಕ ಸ್ಥಿತಿ ಮತ್ತು ಇತರೆ ಕಾರಣಗಳಿಂದ ೫೦೦ …
ಹನ್ನೆರಡನೆಯ ಶತಮಾನದ ಬಸವಾದಿ ಶರಣರ ಸಮಕಾಲೀನ ಶಿವಶರಣೆ ಕೇತಲದೇವಿಯು ಶರಣ ಕುಂಬಾರ ಗುಂಡಯ್ಯನವರ ಧರ್ಮಪತ್ನಿ. ಕುಂಬಾರ ಗುಂಡಯ್ಯ ಮತ್ತು …
ಬೀದರ್: ವಿಶ್ವರು ಬಸವಣ್ಣನವರು 12ನೇ ಶತಮಾನದಲ್ಲಿ ಜಗತ್ತಿನ ಮುಟ್ಟು ಮೊದಲು ಪ್ರಜಾಪ್ರಭುತ್ವದ ಮಾದರಿಯ ಅನುಭವ ಮಂಟಪವನ್ನು ಸ್ಥಾಪಿಸಿದರು. ಅನುಭವ ಮಂಟಪದಲ್ಲಿ …
ಬೆಳಗಾವಿ: ಬೆಳಗಾವಿ ಲಿಂಗಾಯತ ಸಂಘಟನೆಯ ಸಕ್ರಿಯ ಕಾರ್ಯಕರ್ತ, ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಗ್ರಾಮೀಣ ಪ್ರಧಾನ ಕಾರ್ಯದರ್ಶಿ ರಾಜು …
ಗಜೇಂದ್ರಗಡ: ನಂಬಿಕೆಗೆ ಅರ್ಹವಲ್ಲದ ಪಂಚಾಂಗ, ಜ್ಯೋತಿಷ್ಯಕ್ಕೆ ಜೋತುಬಿದ್ದು, ಮೌಢ್ಯತೆಗೆ ಒಳಗಾಗಿ ನಮ್ಮ ಬದುಕನ್ನು ಕೆಡಿಸಿಕೊಳ್ಳುವುದರ ಬದಲಾಗಿ ಧರ್ಮಗುರು ಬಸವಣ್ಣ ಹಾಗೂ …
ಲೇಖನ: ಡಾ. ಶಿವಮೂರ್ತಿ ಮುರುಘಾ ಶರಣರು ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ದಿನವನ್ನು ರಾಷ್ಟ್ರದಾದ್ಯಂತ ಕಳೆದ ತಿಂಗಳು …
ಕಲಬುರಗಿ : ಪತ್ರಕರ್ತ-ಲೇಖಕ ಶಿವರಂಜನ್ ಸತ್ಯಂಪೇಟೆ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ. ಗುಲ್ಬರ್ಗ ವಿವಿ …
೧) ಬಸವ ಪರಂಪರೆ, ಶರಣ ಪರಂಪರೆ, ಲಿಂಗಾಯತ ಧರ್ಮವು 12ನೇ ಶತಮಾನದಲ್ಲಿ ಅರಿವೇ ಗುರು, ಆಚಾರವೇ ಲಿಂಗ, ಅನುಭಾವವೇ …
ರಾಮದುರ್ಗ: ಸುವರ್ಣ ಚಾನೆಲ್ ನವರು ಎಡೆಯೂರ ಸಿದ್ಧಲಿಂಗ ಶ್ರೀಗಳ ಬಗ್ಗೆ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅಭಿನವ ಅಲ್ಲಮನೆಂದೇ …