Home / featured / ಸ್ಥಾವರ, ಜಂಗಮ ಮತ್ತು‌‌ ಹೋರಾಟ

ಸ್ಥಾವರ, ಜಂಗಮ ಮತ್ತು‌‌ ಹೋರಾಟ

(ಬಸವವೇಶ್ವರ ದೇವಸ್ಥಾನದ ಇತಿಹಾಸ)

“Are you a Lingayat? do you know he condition of the temple….. ಬರುತ್ತಲಿದ್ದವು ಬಾಣದಂತೆ ಪ್ರಶ್ನೆಗಳು.ಉತ್ತರಕ್ಕಾಗಿ ಓದಿ

ಲಿಂಗಾಯತ ಕ್ರಾಂತಿ:  ಕ್ರಿಶ್ಚಿಯನ್ ಧರ್ಮಕ್ಕೆ ಬೆತ್ಲೆಹಾಮ್,ಇಸ್ಲಾಂ ಧರ್ಮಕ್ಕೆ ಮೆಕ್ಕಾ, ಸಿಕ್ಕ ಧರ್ಮಕ್ಕೆ ಅಮೃತಸರ್. ಬೌದ್ದ ಧರ್ಮಕ್ಕೆ ಬೌದ್ದ ಗಯಾ, ಇವುಗಳು ಪವಿತ್ರ ಸ್ಥಾನಗಳು ಅವರವರ ಧರ್ಮಕ್ಕೆ, ಹಾಗೇ ಲಿಂಗಾಯತರಿಗೆ ಪವಿತ್ರ ಸ್ಥಳ ಬಸವಣ್ಣನವರ ಹುಟ್ಟುರು ಬಾಗೇವಾಡಿ. ಕಾಯಕ ಸ್ಥಳ ಕಲ್ಯಾಣ,ಐಕ್ಯ ಸ್ಥಳ ಕೂಡಲ ಸಂಗಮ. ಈ ಊರುಗಳ ಇತಿಹಾಸ, ಬೆಳವಣಿಗೆಗಳನ್ನು ತಿಳಿಯುವದು ಲಿಂಗಾಯತರಿಗೆ ಪವಿತ್ರ ಹಾಗು ಅವಶ್ಯ.

ಲಿಂಗಾಯತರ ಕಾಶಿ ಬಸವನ ಬಾಗೆವಾಡಿ.ಇಲ್ಲಿದೆ ಅಂತರಾಷ್ಟ್ರಿಯ ಮಟ್ಟದ ಬಸವೇಶ್ವರ ದೇವಸ್ಥಾನ. ಐತಿಹಾಸಿಕ ದೇವಸ್ಥಾನದ ಇತಿಹಾಸದೊಂದಿಗಿದೆ ಬಾಗೇವಾಡಿಯ ರೋಚಕ ಇತಿಹಾಸ. ಬಸವಣ್ಣನವರು ಜನ್ಮತಾಳುವಾಗ ಅಗ್ರಹಾರವಾಗಿತ್ತು ಬಾಗೇವಾಡಿ, ಸ್ವಾತಂತ್ರ್ಯ ಪೂರ್ವದಲ್ಲಿಯೇ ಇದು ತಾಲುಕಿನ ದರ್ಜೆ ಪಡೆದಿತ್ತು, ವಿಜಾಪುರ ಜಿಲ್ಲೆಯ ಈ ಬಾಗೇವಾಡಿ ಮುಂಬೈ ಪ್ರಾಂತದ ದೊಡ್ಡ ತಾಲೂಕ.ಇದು ಜಿಲ್ಲಾ ಸ್ಥಳ ವಿಜಾಪುರದಿಂದ ೪೫ ಕಿ.ಮಿ.ದೂರದಲ್ಲಿದೆ.ಮತ್ತೆ ಕರ್ನಾಟಕ ರಾಜಧಾನಿ ಬೆಂಗಳೂರಿನಿಂದ ೫೫೦ ಕಿ. ಮಿ. ಅಂತರದಲ್ಲಿದೆ (ರಸ್ತೆ ಮಾರ್ಗ ವಾಗಿ).ರಸ್ತೆ, ರೈಲು ಸಂಪರ್ಕ ಚನ್ನಾಗಿದೆ. ಮುಂಬೈ, ಹೈದರಾಬಾದ ಹಾಗು ಬೆಂಗಳೂರಿನಿಂದ ವಿಮಾನ ಸೌಲಬ್ಯವಿದೆ ಹತ್ತಿರದ ಕಲ್ಬುರ್ಗಿಗೆ. (ಸುಮಾರು ೧೨೦ ಕಿ.ಮಿ.ಅಂತರ ಬಾಗೇವಾಡಿಗೆ). ಬಾಗೇವಾಡಿ ಒಂದು ಸಣ್ಣ ಪಟ್ಟಣ, ಜನಸಂಖ್ಯೆ ಲಕ್ಷಕ್ಕಿಂತ ಕಡಿಮೆ.

ದೇವಸ್ಥಾನದ ಪಶ್ಚಿಮಕ್ಕೆ ಬಾಗಕ್ಕಿದೆ ಬಾಗೇವಾಡಿ. ದೇವಸ್ಥಾನದ ಬೃಹದಾಕಾರವಾದ ಎರಡು ದ್ವಾರ ಬಾಗಿಲುಗಳಿವೆ ಪಶ್ಚಿಮದಲ್ಲಿ. ದೇವಸ್ಥಾನದ ಪ್ರಾಂಗಣದ ನಾಲ್ಕೂ ದಿಕ್ಕಿನಲ್ಲಿವೆ ಮಹಾದ್ವಾರಗಳು, ಪಶ್ಚಿಮಕ್ಕೆ ಎರಡು ಮಹಾದ್ವಾರಗಳಿದ್ದರೆ, ಪೂರ್ವಕ್ಕೆ ಒಂದು, ಉತ್ತರಕ್ಕೆ ಇನ್ನೊಂದು.ಉತ್ತರಕ್ಕಿರುವ ಬಾಗಿಲು ದಾರಿ ಮಾಡಿಕೊಡುವದು ಕಲ್ಯಾಣಿಗೆ.ಈ ಕಲ್ಯಾಣಿ ಯನ್ನು ಕರೆಯುವರು ಬಸವಣ್ಣನ ಭಾವಿ ಎಂದು ಸ್ಥಳಿಯರು. ಅವುಗಳೆಲ್ಲವೂ ನಾಮಕರಣಗೊಂಡಿವೆ ದೇವಸ್ಥಾನದ ಕಟ್ಟಡಕ್ಕೆ ದಾಸೋಹ ಮಾಡಿದ ದಾನಿಗಳ ಹೆಸರಿನಲ್ಲಿ.

ಪಶ್ಚಿಮ ಭಾಗದಿಂದ ದೇವಸ್ಥಾನವನ್ನು ಪ್ರವೇಶಿಸಿದರೆ ಇಳಿಯ ಬೇಕಾಗುವದು ಕೆಲ ಮೆಟ್ಟಲುಗಳನ್ನು. ಪ್ರಾಂಗಣದಲ್ಲಿ ಅಡಿ ಇಟ್ಟಾಗ ಎದುರಿಗೆ ಕಾಣುವದು ಚಾಲುಕ್ಯ ಶೈಲಿಯ ತ್ರಿಕುಟ ಮಾದರಿಯ ಸುಂದರ ದೇವಾಲಯ. ಪ್ರಾಂಗಣವನ್ನು ಮತ್ತಷ್ಟು ಸುಂದರಗೊಳಿಸಿದ್ದಾರೆ ಉಬ್ಬು ತಗ್ಗುಗಳನ್ನಾಗಿ ಪರಿವರ್ತಿಶಿಸಿ. ಕಲ್ಲಿನ ನೆಲಹಾಸಿನಿಂದ ಇಮ್ಮಡಿಸಿದೆ ದೇವಸ್ಥಾನದ ಸೌಂದರ್ಯ. ಗರ್ಭ ಗುಡಿಯನ್ನು ಪ್ರವೇಶಿಸಬೇಕು ಉತ್ತರದ ದ್ವಾರದಿಂದ. ಒಳಗೆ ಹೋಗಲು ಒಂದು ದ್ವಾರವಿದ್ದರೆ ಹೊರ ಹೋಗಲು ಎರಡು ದ್ವಾರಗಳು.

ನನ್ನ ಕಾಲೇ ಕಂಬ ದೇಹವೇ ದೇಗುಲ ಎಂದ ಬಸವಣ್ಣನವರಿಗೇಕೆ ದೇವಸ್ಥಾನ, ಹೌದು,ಸ್ಥಾವರಕ್ಕಳಿವುಂಟು ಜಂಗಮನಿಗೆ ಅಳಿವಿಲ್ಲ ಎಂಬ ಸಂತನಿಗೇಕೆ ದೇವಸ್ಥಾನ?. ಸತ್ಯ.ಅಸಲಿನಲ್ಲಿ ಇಲ್ಲಿರುವದು ನಂದಿಯ ದೇವಸ್ಥಾನ. ಬಸವಣ್ಣನವರ ತಾಯಿ ಮಾದಲಾಂಬಿಕೆ ಯ ಆರಾಧ್ಯ ದೈವ ಇದೆ ವೃಷಭ ,ಇದೆ ವೃಷಭನ ವರದಿಂದ ಹುಟ್ಟಿದವ ಬಸವಣ್ಣ ಎನ್ನುತ್ತಿವೆ ಪುರಾಣಗಳು. ಐತಿಹಾಸಿಕ ಸ್ಥಾವರ ಲಿಂಗದ ಎದುರಿಗಿದೆ ಆಳೆತ್ತರದ ಮಲಗಿದ ನಂದಿಯ ಸುಂದರ ವಿಗ್ರಹ. ಬಸವಣ್ಣನವರ ದೇವಸ್ಥಾನವೆಂದು ಯಾಕೆ? ಯಾವಾಗ? ಪ್ರಸಿದ್ದಿ ಪಡೆಯಿತು ಸಂಶೋದಿಸಬೇಕು ಓದುಗರು. ಬಸವಣ್ಣನವರ ಮೂರ್ತಿಯೇ ಇಲ್ಲದ ಬಸವೇಶ್ವರ ದೇವಸ್ಥಾನ? ಅಭಾಸ !! ಎಂದರು ಹಿರಿಯರು.ಸ್ಥಾಪಿಸಿದರು ಬಸವಣ್ಣನವರ ಮೂರ್ತಿಯನ್ನು. ಮತ್ತೆ ಅನುವು ಮಾಡಿಕೊಟ್ಟರು ಮೂರ್ತಿ ಪೂಜೆಗೆ, ಬಸವಣ್ಣನವರಿಗೆ ದೇವರ ಪಟ್ಟಗಟ್ಟಿಸ್ಥಾವರ ಮಾಡಿದರು ಲಿಂಗಾಯತ ಧರ್ಮ ಸ್ಥಾಪಕನನ್ನು. ಇತ್ತೀಚೆಗೆ ಸ್ಥಾಪಿಸಿದ್ದಾರೆ ಸಂಗಮವರಿ ಕಲ್ಲಿನ ಮಂತ್ರಿಯ ಪೋಷಾಕಿನಲ್ಲಿರುವ ಬಸವಣ್ಣನವರ ಮುರ್ತಿ.ಇದಿರುವದು ಮೂಲ ನಂದಿಯ ಗರ್ಭ ಗುಡಿಯ ಪಕ್ಕದಲ್ಲಿ. ಪೂಣ್ಯಕ್ಕೆ ವೈದಿಕ ಪೂಜೆ ಸಲ್ಲುವದಿಲ್ಲ ಧರ್ಮಸ್ಥಾಪಕನಿಗೆ. ಆದರೆ ಅದು ಸಲ್ಲುತ್ತಲಿದೆ ಮೂಲ ನಂದಿ ಹಾಗು ಸ್ಥಾವರಲಿಂಗಗಳಿಗೆ.

ಕರ್ನಾಟಕ ಸರಕಾರದ ಸ್ಸ್ವಾಯತ್ತ ಸಂಸ್ಥೆಯಾದ ಕೂಡಲ ಸಂಗಮ ಅಭಿವೃದ್ದಿ ಪ್ರಾಧಿಕಾರದ ವ್ಯಾಪ್ಪ್ತಿಗೆ ಒಳಪ್ಪಟ್ಟಿದೆ ಇಂದಿನ ಬಸವೇಶ್ವರ ದೇವಸ್ಥಾನ. ಇದಕ್ಕೂ ಮಂಚೆ ಆಡಳಿತವಿತ್ತು ಬಸವೇಶ್ವರ ದೇವಸ್ಥಾನದ ಅಭಿವೃದ್ದಿ ಮಂಡಳಿಯ ಹಿಡಿತದಲ್ಲಿ.ದೇವಸ್ಥಾನ ಜೀರ್ಣೋದ್ದಾರಗೊಂಡಿದೆ ಹಲವು ಭಾರಿ. ೧೯೪೦ ರಲ್ಲಿ ಕೈಗೊಂಡ ಬೃಹತ್ ಮಟ್ಟದ ಜಿರ್ಣೋದ್ಧಾರದ ಸಮಯದಲ್ಲಿ ನಿರ್ಮಿಸಲಾದ ಮಹಾದ್ವಾರಗಳು ರಕ್ಷಣಾ ಗೊಡೆಗಳು, ಅತಿಥಿಗ್ರಹಗಳು, ಪಾಕಶಾಲೆ, ಉಟದ ಮನೆಗಳು ಇಂದಿಗೂ ತೊರುತ್ತಿವೆ ವೈಭೋಗವನ್ನು. ಅಂದಿನ ಹಿರಿಯರು ಹಾಕಿದ ಯೋಜನೆಗಳು ಅಚ್ಚರಿಗೊಳಿಸುತ್ತಿವೆ ಇಂದಿನ ಪ್ರವಾಸಿಗರನ್ನು. ಈ ಬೃಹತ್ ಕಾರ್ಯದ ರೂವಾರಿಯೇ ಸಿಂಹಾಸನ ಮಾಮಲೆದಾರ ಸಾಹೇಬರು. ಇವರ ದೂರದೃಷ್ಠಿ, ಅವಿರತ ಪರಿಶ್ರಮ,ದೀರ್ಘ ಅಧ್ಯಯನದ, ಆಡಳಿತ ಅನುಭವದ ಫಲವಾಗಿ ರೂಪಗೊಂಡಿದೆ ಅಂತರಾಷ್ಟ್ರೀಯ ಮಟ್ಟದ ದೇವಾಲಯ.

ಈ ದೇವಸ್ಥಾನದ ಜಿರ್ಣೋದ್ಧಾರದ ಹಿಂದಿದೆ ರೋಚಕ ಹಿನ್ನೆಲೆ. ಭಾರತದ ಸಂಸ್ಕೃತಿ,ಶ್ರೀಮಂತಿಕಿಗೆ
ಬೆರಗಾಗಿ ಬಂದವರು ಬ್ರಿಟಿಷರು. ಬಂದಿದ್ದು ವ್ಯಾಪಾರಕ್ಕೆ, ಆದರೆ ಕಂಡರು ನಮ್ಮಲ್ಲಿಯ ಒಡಕುಗಳನ್ನು, ಪ್ರಯೋಜನ ಪಡೆದು ಆಳಿದರು ನಮ್ಮನ್ನು ನೂರಾರು ವರ್ಷ. ಸಮಸಮಾಜದ, ವರ್ಗವರ್ಣ ರಹಿತ ಆಂಗ್ಲರ ವಿಚಾರಗಳು ಸಮಾಜವಾದಿ ಬಸವಣ್ಣನವರ ತತ್ವಗಳು ತಾಳೆಯಾಗುತ್ತವೆ.ಬಸವಣ್ಣನವರಲ್ಲಿ ಅವರು ಕಂಡರು ಪಾಶ್ಚಿಮಾತ್ಯ ಚಿಂತಕರನ್ನು. ಪ್ರಿತಿಸಲಾರಂಭಿ ಸಿದರು ಮಹಾಮಾನವತಾವಾದಿಯನ್ನು.ಸಾಮಾನ್ಯವಾಗಿ ಆಂಗ್ಲರು ಕುತೂಹಲಿಗಳು. ಪ್ರತ್ಯಕ್ಷ ಕಂಡರು ಪ್ರಮಾಣಿಸಿ ನೋಡಬೇಕೆನ್ನುವ ಸ್ವಭಾವದವರು. ಕುತೂಹಲ, ಆಸೇಯಿಂದ ನೋಡಲು ಬಂದರು ಬಸವಣ್ಣನ ಹುಟ್ಟುರನ್ನು. ಕಂಡರವರು ಅಲ್ಲಿ ಕಾಣಬಾರದ್ದನ್ನು. ಸಮಾಜದ ಕಳೆಯನ್ನು ಕೀಳಲು ಹುಟ್ಟಿದ ಬಸವಣ್ಣನ ಹುಟ್ಟೂರಿನಲ್ಲಿ ತುಂಬಿದೆ ಅನಾಗರಿಕತೆಯ ಕಳೆ. ಮಾದಲಾಂಬಿಕೆಯ ಪವಿತ್ರ ದೇವಸ್ಥಾನ ನಿಂತಿದೆ ಮಲೀನಗೊಂಡ ಕೂಪಿನಲ್ಲಿ. ಮಲಗಿವೆ ಬಿಡಾಡಿ ದನಗಳು ಎಲ್ಲಂದರಲ್ಲಿ. ಪವಿತ್ರವಾದ ದೇವಸ್ಥಾನದ ಗೋಡೆಗಳಾಗಿವೆ ಬೆರಣಿಯ ಕಾರಖಾನೆ. ಜಾನುವಾರಗಳೊಂದಿಗೆ ಮಾನವರೂ ತೀರಿಸಿಕೊಳ್ಳುತ್ತಿದ್ದಾರೆ ದೇಹ ಬಾದೆಯನ್ನು ದೇವಸ್ಥಾನದ ಪ್ರಾಂಗಣದಲ್ಲಿ. ಅದನ್ನು ಕಂಡು ಅಹಸ್ಯ ಪಟ್ಟರು ಆಂಗ್ಲ ಪ್ರವಾಸಿಗರು. ತುಶ್ಚಿಕರಿಸಿದರು ಭಾರತೀಯರ ಅನಾಗರಿಕತೆಯನ್ನು. ವಿಷಯ ಮುಟ್ಟಿತು ಆಂಗ್ಲ ಅಧಿಕಾರಿ ಆರ್.ಜಿ.ಗಾರ್ಡನ ರಿಗೆ. ಜಿಗುಪ್ಸೆಯಿಂದ ಕೆಂಡಾ ಮಂಡಲ ವಾದರು ಬ್ರಿಟಿಷ್ ಅಧಿಕಾರಿ. ಅದೆ ಕಾಲಕ್ಕೆ ತಾಲೂಕ ಮಾಜಿಸ್ಟ್ರೆಟ ಆಗಿದ್ದರು ಸಿಂಹಾಸನರವರು. ಕೇಳಿದರು ಆಂಗ್ಲ ಅಧಿಕಾರಿ ಇವರನ್ನು ” Are you a lingayat, do you know Basaveshwar? do you know the condition of the temple?,is it the way to manage?” ಬರುತ್ತಿದ್ದವು ಪ್ರಶ್ನೆಗಳು ಬಾಣದಂತೆ. ಜೀವನ ಪರ್ಯಂತ ಇಂಗ್ಲೀಷರಿಂದ ಶಭಾಶಗಿರಿ ಪಡೆದ ಮಾಮಲೇದಾರ ಸಾಹೇಬರು ಕಲ್ಪಿಸಿಕೊಂಡಿರಲಿಲ್ಲ ಇಂತಹ ಬಿರು ನುಡಿಗಳನ್ನು ತಮ್ಮ ಮೇಲಾಧಿಕಾರಿಗಳಿಂದ. ನಾಚಿಕೆ ಇಂದ ತಲೆತಗ್ಗಿಸಿದರವರು, ಬಿದ್ದಿತ್ತು ಅವರ ಸ್ವಾಭಿಮಾನಕ್ಕೆ ಪೆಟ್ಟು. “ಬಡವನ ಸಿಟ್ಟು ಹೊಟ್ಟೆಯಲ್ಲಿ”. ತಾವು ಮಾಡುತ್ತಿರುವದು ಸರಕಾರಿ ಕೆಲಸ.ಅದರಲ್ಲಿ ಅವಕಾಶವಿಲ್ಲ ಧಾರ್ಮಿಕ ಸೇವೆಗೆ. ಅಂದೇ ಸಂಕಲ್ಪ ಮಾಡಿದರು ಈ ಕಾರ್ಯಮಾಡಲು ನಿವೃತ್ತಿಯ ನಂತರ.

ಮಲ್ಲಪ್ಪ ಶಂಕರಪ್ಪ ಸಿಂಹಾಸನರವರ ಹುಟ್ಟುರು ಅಮಿನಗಡ. ಅಮಿನಗಡದ ಅಂಟು (ಕರದಂಟು-ಒಂದು ಬಗೆಯ ಸಿಹಿ ಪ್ರದಾರ್ಥ) ಪ್ರಸಿದ್ದ ಇಂದಿಗೂ .ತಂದೆ ಶಂಕರಪ್ಪನವರ ಕಾಯಕ ನೇಯುವದು. ಪ್ರತಿಭಾಶಾಲಿ ಮಗ ಮಲ್ಲಪ್ಪನನ್ನು ಸಾಹೇಬ ನನ್ನಾಗಿ ಮಾಡವ ಕನಸು ಈಡೀ ಕುಟುಂಬದ್ದು. ಅವರ ಆಸೇ ಕೈ ಗೂಡಿತು, ಜಿಲ್ಲಾ ಡೆಪೂಟಿ ಕಲೆಕ್ಟರಾದರು ಮಲ್ಲಪ್ಪನವರು ಮುಂದೊಂದು ದಿವಸ.ಅಂದಿನ ಬಾಗೇವಾಡಿಯಲ್ಲಿ ಮಾಮಲೇದಾರರಾಗಿ ಕೆಲಸ ಮಾಡಿದ ಸಿಂಹಾಸನ ಮಾಮಲೇದಾರ ಕನಸೇ ಇಂದಿನ ಬಸವೇಶ್ವರ ದೇವಾಲಯ.

ಸಾಹೇಬರು ನಿವೃತ್ತರಾದರು ಡೆಪೂಟಿ ಕಲೆಕ್ಟರ ಹುದ್ದೆ ಇಂದ. ಆಂಗ್ಲ ಸರಕಾರ ಪ್ರಶಂಸಿಸಿತು ಅವರ ಸೇವೆಯನ್ನು,ಸನ್ಮಾನಿಸಿತು “ರಾವ ಸಾಹೇಬ” ಎಂಬ ಬಿರುದಿನೊಂದಿಗೆ ಇವರ ನಿವೃತ್ತಿಯ ಅಂಚಿನಲ್ಲಿ. ನಿವೃತ್ತಿ ನಂತರ ಬಡಿದೆಬ್ಬಿಸಿತು ಅವರ ಮನಸಾಕ್ಷಿ. ನೆನಪಾದವು ಬ್ರಿಟಿಷ್ ಅಧಿಕಾರಿಯ ಬಿರುನುಡಿಗಳು.
ಇದೆ ಸಕಾಲವೆಂದರು ಮಾಮಲೇದಾರ ಸಾಹೇಬರು, ಸುದ್ದಿ ಮುಟ್ಟಿಸಿದರು ಬಾಗೇವಾಡಿ ನಾಗರಿಕರಿಗೆ, ತಾವು ಬರುವ ವಿಷಯ. ಕರೆದರು ಸಾರ್ವಜನಿಕ ಸಭೆ ಏಪ್ರಿಲ ೮,೧೯೪೦ ರಂದು. ಸಭೆಗೆ ಹಾಜರಾದರು ತಾಲೂಕಿನ ದೇಸಾಯಿವರು, ಗೌಡರು, ಶ್ರೀಮಂತರು, ಗಣ್ಯರು  ಚರ್ಚಿಸಿದರು ದೇವಸ್ಥಾನದ ಅಂದಿನ ಸ್ಥಿತಿ ಗತಿಗಳನ್ನು, ತಿಳಿಸಿ ಹೇಳಿದರು ದೇವಸ್ಥಾನದ ಜಿರ್ಣೋದ್ದಾರದ ತುರ್ತನ್ನ. ಸೂಚಿಸಿದರು ಉಪಾಯ, ಅದೆ ಸಾರ್ವಜನಿಕ ವಂತಿಗೆ. ತಾವೇ ಮೊದಲಿಟ್ಟರು ಐದು ಸಾವಿರ ರೂಪಾಯಿಗಳನ್ನು. (ಅಂದಿತ್ತು ಬಂಗಾರದ ಬೆಲೆ ೩೬.೦೪ ಪ್ರತಿ ಹತ್ತು ಗ್ರಾಂ ಗಳಿಗೆ ಅದನ್ನು ಇಂದಿಗೆ ರೂಪಾಂತಿರಿಸಿದರೆ ಆಗುವದು ೭೬ ಲಕ್ಷಗಳು). ಸಾಹೇಬರ ಉತ್ಸಾಹ ಭರಿತ ಮಾತುಗಳಿಗೆ ಭಾವುಕರಾದರು ಸ್ಥಳಿಯ ವ್ಯಾಪಾರಿ ದುಂಬಾಳಿಯವರು, ರಾಮನಗೌಡರು, ಹೇಳಿದರು ಬರೆದುಕೊಳ್ಳಿ ನಮ್ಮ ನಮ್ಮ ಐದು ಸಾವಿರ ರೂಪಾಯಿ ದೇಣಿಗೆ ಎಂದು.ಬಸವೇಶ್ವರ ದೇವಸ್ಥಾನದ ಜಿರ್ಣೋದ್ದಾರದ ವಿಷಯ ಹಬ್ಬಿತು ಬಸವ ಭಕ್ತರಲ್ಲಿ.ಬಸರಿಗಿಡದ ವಿರಪ್ಪನವರು,ವಾರದ ಮಲ್ಲಪ್ಪನವರ ಮಗ ಮಗ ಬಾಬಾಸಾಹೇಬ,ಆಲಮೇಲ ದೇಸಾಯಿ ಶಿವಲಿಂಗರಾವ ದೇಶಮುಖ ಬಾಗೇವಾಡಿಯ ಸಿದ್ದನಗೌಡ, ರಾಮನಗೌಡ, ಹು.ಹಿಪ್ಪರಗಿಯ ಬ್ಯಾಕೋಡ, ಸಾಲವಾಡಗಿಯ ಪಾಟೀಲರು,ಜೋಳದ ರಾಶಿ ದೊಡ್ಡನ ಗೌಡರು,ಬಸರಕೊಡದ ನಾಡಗೌಡರು,ಮುದ್ದೆಬಿಹಾಳದ ಚಿನಿವಾಲರು, ನಾಯ್ಕೊಡಿಯವರು, ರಾಚಯ್ಯ ವಸ್ತ್ರದ, ಉಮರ್ಜಿಯವರು, ಹುಣಶ್ಯಾಳದ ಗೌಡರು,ದಿಂಡವಾರದ ಪಟ್ಟಣಶೆಟ್ಟರು ಇನ್ನೂ ಅನೇಕರು ಕೈ ಗೂಡಿಸಿದರು ಸಾಹೇಬರಿಗೆ. ಬಂಥನಾಳ ಶಿವಯೋಗಿಗಳು ಪ್ರವಚನ ಮಾಡಿ ಕೂಡಿಸಿದರು ಮುವತೈದು ಸಾವಿರ ರೂಪಾಯಿಗಳನ್ನು. ಸೂಮಾರು ನೂರಕ್ಕೂ ಹೆಚ್ಚು ದಾನಿಗಳು ಮಾಡಿದರು ದಾಸೋಹ. ಪ್ರತಿಯಾಗಿ ಸಾಹೇಬರು ದೇಣಿಗೆದಾರರ ಹೆಸರುಗಳನ್ನು ಕೆತ್ತಿಸಿದರು ಸುಂದರವಾದ ಬಿಳಿಯ ಕಲ್ಲಿನಲ್ಲಿ. ಸ್ಥಾಪಿಸಿದರು ಅವುಗಳನ್ನು ಎಲ್ಲರಿಗೂ ಕಾಣುವ ಸ್ಥಳಗಳಲ್ಲಿ. ಇಂದು ಅವು ಹೇಳುತ್ತಿವೆ ಅವುಗಳು ತಮ್ಮನ್ನು ಗುಡ್ಡದಿಂದ ತಂದು ಉದ್ದಾರ ಮಾಡಿದವರ ಇತಿಹಾಸದ ಕಥೆಗಳನ್ನು.

ಅದೆ ಸಮಯಕ್ಕೆ ಕವಿದಿತ್ತು ಎರಡನೆಯ ಮಹಾಯುದ್ದದ ಕಾರ್ಮೋಡ. ಕಾಣುತ್ತಿತ್ತು ಭಾರತ ತಕ್ಷಣ ಸ್ವಾತಂತ್ರ್ಯದ ಕನಸು. ಪ್ರಾರಂಭವಾಯಿತು ಜಂಗಮ ಸಿಂಹಾಸನ ಸಾಹೇಬರ ಓಡಾಟ. ಸಾಹೇಬರು ಬಿಡಿಸಿದರು ತಮ್ಮ ಕನಸಿನ ದೇವಾಲಯದ ಚಿತ್ರ ಎಲ್ಲ ಮುಖಂಡರೆದುರಿಗೆ. ಜನರನ್ನು ಹುರುದುಂಬಿಸುವಲ್ಲಿ ಕಳೆದುಹೋದವು ಮತ್ತೆರಡು ವರ್ಷಗಳು. ಕೈ ಕಟ್ಟಿ ಕೂಡಲಿಲ್ಲ ಇಳಿವಯಸ್ಸಿನ ಪಾದರಸ. ಹಾಕಿಕೊಂಡರು ಗ್ರಾಮ ಬೆಟ್ಟಿಯ ಕಾರ್ಯಕ್ರಮ. ದೇವಸ್ಥಾನದ ಕಟ್ಟಡಕ್ಕಾಗಿ ಹಾಕಿದರು ಜಂಗಮ ಜೋಳಿಗೆ. ಒಟ್ಟುಗೂಡಿಸಿದರು ಸುಮಾರು ಮೂರು ಲಕ್ಷ ರೂಪಾಯಿಗಳನ್ನು. ಎಲ್ಲರ ಅಪೇಕ್ಷೆಯನ್ನು ಅರುಹಿದರು ವಾಸ್ತುಶಿಲ್ಪಿಗಳಿಗೆ. ಎಲ್ಲರ ಅಪೇಕ್ಷೆಯಂತೆ ಕೊನೆಗೂ ಹೊರ ಬಂತು ಮುಂಬೈ ಪ್ರಸಿದ್ದ ವಾಸ್ತು ಶಿಲ್ಪಿಯಾದ ಶ್ರೀ ಎಚ್. ಎಂ. ಬೆಳಮಗಿಯವರ ನೀಲನಕ್ಷೆ ೧೯೪೩ ರಲ್ಲಿ.

ಪ್ರಾರಂಭವಾಯಿತು ದೇವಸ್ಥಾನದ ಜೀರ್ಣೋದ್ದಾರ, ಆರ್ಕಿಟೆಕ್ಟ ಸೂಚಿಸಿದ್ದರು ಕಲ್ಲು ಹಾಗು ಗಚ್ಚಿನ ಕಟ್ಟಡ. ಕಲ್ಲಿನ ಕಟ್ಟಡಕ್ಕೆ ಬೇಕಾಗುವ ಕಲ್ಲುಗಳನ್ನು ಅಳತೆಗೆ ತಕ್ಕಂತೆ ತಯಾರಿಸಲಾಗುತಿತ್ತು ಕ್ವಾರಿಗಳಲ್ಲಿ, ಅವುಗಳಿದ್ದವು ಬಾಗೇವಾಡಿಯ ಆಸುಪಾಸಿನ ಊರುಗಳಾದ ಮಸಬಿನಾಳ,ಇಂಗಳೇಶ್ವರ,ಅರಳಿಚಂಡಿ ಗ್ರಾಮಗಳಲ್ಲಿ. ಸೈಜಿನ ಪ್ರಕಾರ ಒಡೆದು ಘಟಾಯಿಸಿದ ಕಲ್ಲುಗಳ ಸಾಗಾಣಿಕೆ ಆಗುತ್ತಿತ್ತು ಎತ್ತಿನ ಗಾಡಿಗಳ ಮುಖಾಂತರ. ಸೋಮವಾರದಂದು ಶ್ರಮಧಾನ ಮಾಡುತ್ತಿದ್ದರು ರೈತರು, ಬರುತ್ತಿದ್ದರವರು ತಮ್ಮ ತಮ್ಮ ಎತ್ತಿನ ಗಾಡಿಗಳೊಂದಿಗೆ. ತಾವೇ ಕಲ್ಲುಗಳನ್ನು ಎತ್ತಿ ಗಾಡಿಗೆ ಹಾಕಿ ಸಾಗಿಸುತ್ತಿದ್ದರು ಕಟ್ಟಡದ ಸ್ಥಳಕ್ಕೆ. ಬರದಿಂದ ಸಾಗಿತು ಕಟ್ಟಡದ ಕೆಲಸ. ದಾಂಡೇಲಿಯಿಂದ ಬಂತು ಸಾಗವಾನಿ ಕಟ್ಟಿಗೆ, ಕಿಟಕಿ ಬಾಗಿಲುಗಳಿಗೆ. ಅಂದಿರಲಿಲ್ಲ ಸಿಮೆಂಟ್ ಕೈಯ್ಯಿಂದ ತಯಾರಿಸುತ್ತಿದ್ದರು ಗಚ್ಚು ಎಂಬ ಸ್ಥಾನೀಯ ಸಿಮೆಂಟನ್ನು. ಅದಕ್ಕೆ ಬೇಕಾಗುತಿತ್ತು ಹುಣಸೆ ಮರಗಳು. ಅವುಗಳನ್ನೂ ದಾಸೋಹ ಮಾಡಿದರು ಭಕ್ತರು, ಅಧಿಕ ಹುಣಸೆ ಮರವಿರುವ ಕೆಲವು ತೋಟದ ಮಾಲಿಕರು ತಯಾರಿಸಿದರು ತಮ್ಮ ಜಮೀನುಗಳಲ್ಲಿಯೆ ಗಚ್ಚನ್ನು. ತಂದು ಸುರುವಿದರು ಅದನ್ನು ತಮ್ಮದೆ ಗಾಡಿಗಳಲ್ಲಿ. ಸ್ಥಳಿಯವಾಗಿ ದೊರೆಯುವ ಕಪ್ಪ, ಬಿಳಿ, ಹಾಗು ಕೆಂಪು ಬಣ್ಣದ ಕಲ್ಲುಗಳ ಬಳಕೆ ಮಾಡಿದೆ ಆರ್ಕಿಟೆಕ್ಟರ ನಕ್ಷೆಯ ಅನುಗುಣವಾಗಿ.ಸುಂದರವಾಗಿ ಮೇಳೈಸಲಾಗಿದೆ ಕಪ್ಪು ಬಿಳಿ ಹಾಗು ಕೆಂಪು ಬಣ್ಣದ ಕಲ್ಲುಗಳನ್ನು. ಬರೀ ಸ್ಥಳಿಯ ಕಲ್ಲುಗಳನ್ನಲ್ಲದೆ ಬಳಸಲಾಗಿದೆ ದೂರಿನೂರಿನ ಬಣ್ಣ ಬಣ್ಣದ ಕಲ್ಲುಗಳನ್ನು ಸಹ. ಅವುಗಳು ಬಂದವು ಬಾದಾಮಿ, ಶೆಲ್ಲಿಕೇರಿ, ಗುಳೆದಗುಡ್ಡ ದಿಂದ ರೈಲಿನಲ್ಲಿ.

ಬಸವೇಶ್ವರ ದೇವಸ್ಥಾನದಲ್ಲಿವೆ ದೊಡ್ಡ ದೊಡ್ಡ ಕೋಣೆಗಳಲ್ಲದೆ ಅನೇಕ ಚಿಕ್ಕ ಚಿಕ್ಕ ಕೋಣೆಗಳು ಈ ಪ್ರಾಂಗಣದಲ್ಲಿ. ನಾಲ್ಕೂ ದಿಕ್ಕಿನಲ್ಲಿವೆ ವಿಸ್ತರಿಸಿವೆ ಯಾತ್ರಿಗಳ ಅನಕೂಲಕ್ಕಾಗಿ ಕೊಟಡಿಗಳು. ಅವುಗಲ್ಲಿ ಕೆಲವು ಪರಿವರ್ತಿತವಾಗಿವೆ ಇಂದು ಆಡಳಿತ ಕಛೇರಿಗಳಾಗಿ. ಬೃಹದಾಕಾರವಾದ ರಕ್ಷಣಾ ಗೋಡೆಗಳಿಗೆ ಹೊಂದಿಕೊಂಡಂತೆ ಇವೆ ಯಾತ್ರಿ ನಿವಾಸಗಳು. ಪಾಕಶಾಲೆ, ಉಟದ ಕೋಣೆ,ಸ್ನಾನಗ್ರಹ ಮುಂತಾದವು. ದೇವಸ್ಥಾನದ ದಕ್ಷಿಣ ದಿಕ್ಕಿನ ಹೊರವಲಯದಲ್ಲಿವೆ ಅಂಗಡಿಗಳು, ಅವುಗಳ ಮೇಲಂತಸ್ತನಲ್ಲಿವೆ ದೊಡ್ಡ ದೊಡ್ಡ ಕೋಣೆಗಳು. ಉತ್ತರದ ಮಹಾದ್ವಾರದ ಆಚೆ ಇತ್ತೀಚೆಗೆ ಕಟ್ಟಲ್ಪಟ್ಟಿದೆ ಬಸವೇಶ್ವರ ಕಲ್ಯಾಣ ಮಂಟಪ. ಪೂರ್ವದಲ್ಲಿದೆ ಕಲ್ಯಾಣಿ. ದೇವಸ್ಥಾನದ ದಕ್ಷಿಣ ದಿಕ್ಕಿಗೆ ಎಕರೆಯಷ್ಟು ಕಲ್ಲು ನೆಲ ಹಾಸಿನ ಮೈದಾನವಿತ್ತು. ಇತ್ತಿಚೀಗೆ ಇದರ ಕೆಲಭಾಗವನ್ನು ಸರಕಾರ ವಶಪಡಿಸಿಕೊಂಡಿದೆ ರಸ್ತೆಗಾಗಿ.ಇದನ್ನು ಮೊದಲು ಉಪಯೋಗಿಸುತ್ತಿದ್ದರು ಸಾರ್ವಜನಿಕ ಸಭೆ ಸಮಾರಂಭಗಳಗೆ. ಇಲ್ಲಿದೆ ಒಂದು ಸುಂದರವಾದ ಚಿಕ್ಕ ಮಂಟಪ. ಅಲ್ಲಿದ್ದಾರೆ ಇಂದು ಸ್ಥಾವರವಾಗಿ ನಿಜ ಜಂಗಮ ಸಿಂಹಾಸನ ಮಾಮಲೆದಾರ ಸಾಹೇಬರು.

ಸಿಂಹಾಸನ ಮಾಮಲೇದಾರ ಸಾಹೇಬರ ಕಾಲದಲ್ಲಿ ಸಂಪೂರ್ಣವಾಗಿ ಕೈಗೂಡಲಿಲ್ಲ ಅವರ ಕನಸಿನ ದೇವಸ್ಥಾನ. ಅವರೆನೋ ಪ್ರಾರಂಬಿಸಿದ್ದರು ಸಂಪೂರ್ಣ ನೀಲ ನಕ್ಷೆಯೊಂದಿಗೆ ಜೀರ್ಣೋದ್ದಾರದ ಕಾಯಕವನ್ನು. ಮೊದಲಿಗೆ ಕೈ ಹಾಕಿದ್ದರು ಕೋಟೆಯನ್ನು ಗಟ್ಟಿಗೊಳಿಸುವ ಕಾರ್ಯಕ್ಕೆ. ‘ಕೋಟೆ ಸುರಕ್ಷಿತವಾಗಿದ್ದರೆ ಒಳಗಿರುವ ಸಂಪತ್ತು ಸುರಕ್ಷಿತ’ ಎಂದು ಯಾರು ಹೇಳಬೇಕಾಗಿರಲಿಲ್ಲ ನಿಪುಣ ಆಡಳಿತಗಾರರಿಗೆ. ಅದಕ್ಕಾಗಿ ಮೊದಲ ಪ್ರಾಶಸ್ತ್ಯ ರಕ್ಷಾ ಗೋಡೆಗಳಿಗೆ (compound wall) ಮತ್ತು ಯಾತ್ರಿಕರ ಅನಕೂಲಕ್ಕೆ. ಕೈ ಹಚ್ಚಲಿಲ್ಲ ಗರ್ಭ ಗುಡಿಯ ಜಿರ್ಣೋದ್ದಾರಕ್ಕೆ. ಇನ್ನೊಂದು ಕಾರಣವು ಇರಬಹುದು ಅವರಿಗೆ, ಗರ್ಭಗುಡಿಯ ಕಟ್ಟಡ ನೆಲಸಮ ಮಾಡಿದಲ್ಲಿ ದೇವಸ್ಥಾನದ ಪೂಜೆಗೆ ವಿಗ್ನ ಬರುತ್ತಿತ್ತು.ಆದ್ದರಿಂದ ಮೊದಲು ಕಾರ್ಯ ಪ್ರಾರಂಭಿಸಿರಬಹುದು ರಕ್ಷಣಾ ಗೋಡೆಗಳಿಂದ. ಆದರೆ ಈ ಕಾರ್ಯ ಮುಗಿಯುವದರಲ್ಲಿ ಖಾಲಿಯಾಗಿತ್ತು ಅವರ ಕೈ. ಬೃಹದಾಕಾರದ ಕೆಲಸಕ್ಕೆ ಬೇಕು ಬೃಹದಾಕಾರದ ಮೊತ್ತ. ಇಂತಹ ಕೆಲಸಗಳನ್ನು ಮಾಡಬೇಕಾದವು ಸರಕಾರಗಳು. ಸರಕಾರ ಮಾಡಬಹುದಾದ ಕೆಲಸವನ್ನು ಕೈಗೆತ್ತಿ ಕೊಂಡಿದ್ದರು ಬಸವ ಭಕ್ತರು. ಆದರೆ ಅಂದಿನ ಲಿಂಗಾಯತರು ಬಡವರು ಕೂಲಿಕಾರರಾಗಿದ್ದರು. ಅಷ್ಟೇ ಏಕೆ ಇಡೀ ದೇಶವೇ ಬಡತನದಲ್ಲಿತ್ತು .

ಖಾಲಿಯಾದವು ಕೂಡಿಸಿದ ಮೂರು ಲಕ್ಷ ರೂಪಾಯಿಗಳು.ಪೈಗೆ ಪೈ ಲೆಕ್ಕಕೊಡುತ್ತಿದ್ದರು ಮಾಮಲೆದಾರ ಸಾಹೇಬರು.ಮತ್ತೋಮ್ಮೆ ಕೈಯಿಂದ ಹಾಕಿದರು ಮೂರು ಸಾವಿರ ರೂಪಾಯಿಗಳನ್ನು. ಮಾಡಿದರು ಅನೇಕರಲ್ಲಿ ಕೈ ಸಾಲ. ದೇಶ ಸ್ವಾತಂತ್ರ್ಯಪಡೆಯುವ ಗಡಿ ಬಿಡಿಯಲ್ಲಿತ್ತು. ಅಸ್ತವ್ಯಸ್ತವಾಗಿದ್ದವು ಸಂಪರ್ಕ ಸಾಧನಗಳು. ನಿರಾಶಾದಾಯಕ ದಿನಗಳು ಅವು. ಭಯಬೀತರಾಗಿತ್ತು ಆಳುವ ವರ್ಗ. ದೇಸಾಯಿ,ನಾಡಗೌಡ, ಪಾಟೀಲರಿಗಿತ್ತು ನಾಳಿನ ಚಿಂತೆ. ಮುಸ್ಲಿಂ ಜನಾಂಗವಾಗಿತ್ತು ಅಸಾಯಕ.ದಿನ ನಿತ್ಯ ದುರಂತದ ಕಥೆಗಳು ಬರುತ್ತಿದ್ದವು ವರ್ತಮಾನ ಪತ್ರಿಕೆಗಳಲ್ಲಿ.ಪಟ್ಟುಬಿಡದ ಮಾಮಲೇದಾರ ಸಾಹೇಬರು ಮತ್ತೊಮ್ಮೆ ಪ್ರಯತ್ನಿಸಿದರು ಹಣ ಕೂಡಿಸಲು. ಮತ್ತೊಮ್ಮೆ ಸಹಾಯಕ್ಕೆ ಬಂದರು ಸ್ಥಳಿಯರಾದ ದುಂಬಾಳಿ, ಪಟ್ಟಣಶೆಟ್ಟಿ, ಯಳಮೇಲಿ, ಸುಂಕದ ಮತ್ತು ಕಿಣಗಿ ಮನೆತನದಯವರು.

ಮೂಲ ದೇವಸ್ಥಾನದ ಸುಂದರ ಕಲ್ಪನೆ ಇತ್ತು ಸಾಹೇಬರಿಗೆ. ಚಾಲುಕ್ಯ ಶೈಲಿಯ ತ್ರಿಕೂಟ ಮಾದರಿಯ ಕಲ್ಲುಗಳನ್ನು ಕವನ ಗಳಾಗಿಸುವ ಕನಸ್ಸು ಕಂಡಿದ್ದರು ವೃದ್ಧ ಜಂಗಮರು. ದೇಣಿಗೆ ಕೊಡುವ ಬಡವನ ಶ್ರಿಮಂತ ಹೃದಯ ಅಸಹಾಯಕವಾಗಿತ್ತು. ಭಕ್ತರ ಮನಸ್ಸು ಹಾತೋರೆಯುತ್ತಿತ್ತು ದಾಸೋಹ ಮಾಡಲು ಅದರೆ ಅವರ ಹೊಟ್ಟೆ ಬೇಡುತಿತ್ತು ಆಹಾರ. ಕೊನೆಗೆ ಗೆದ್ದಿತು ದೇಹ. ಎನೇ ಮಾಡಿದರೂ ಹಣ ಹೊಂದಿಸಲಾಗಲಿಲ್ಲ ಸಾಹೇಬರಿಗೆ, ಬಾಕಿ ಉಳಿದ ಕೆಲಸ ಮತ್ತು ಮೂಲ ದೇವಸ್ಥಾನದ ಹೊಸ ಕಟ್ಟಡದ ಕೆಲಸ ಪೂರೈಸಲು. ಕೈ ಸಾಲಗಾರರು ಮಖ ಸಪ್ಪೆ ಮಾಡಿ ಸಾಹೇಬರ ಎದುರು ನಿಂತರು. ಸಾರ್ವಜನಿಕರಿಗಾಗಿ ಸಾಲ ಮಾಡಿದ್ದರು ಸಾಹೇಬರು. ಶರಣರಿಗೆ ಉಪವಾಸ ಬಿದ್ದರು ಚಿಂತೆಯಿಲ್ಲ ನಾಲಿಗೆ ಮಾತ್ರ ತಪ್ಪಬಾರದು. ಕೈಸಾಲಗಾರರಿಗೆ ಹಿಂದುರಿಗಸಿದರು ಹಣವನ್ನು. ಬಾಗಿಲು ಕಿಟಿಕಿಗಳನ್ನು ಹಚ್ಚ ಬೇಕಾಗಿತ್ತು ಕೋಣೆಗಳಿಗೆ. ನಿತ್ರಾಣಗೊಂಡಿದ್ದರು ಸಿಂಹಾಸನ ಮಾಮಲೇದಾರ ಸಾಹೇಬರು. ಅವರ ಜೀವನದ ಕೊರಗನ್ನು ಪೂರೈಸಿತು ಕರ್ನಾಟಕ ಸರಕಾರ ಡಾ ಜಾಮದಾರ ಅವರ ಅಧಿಕಾರದಲ್ಲಿ. ಇಂದಿರುವ ಮೂಲ ದೇವಸ್ಥಾನ ಜೀರ್ಣೋದ್ದಾರ ಗೊಂಡಿದೆ ಕೂಡಲ ಸಂಗಮ ಅಭಿವೃದ್ದಿ ಪ್ರಾಧಿಕಾರದ ಆಶ್ರಯದಲ್ಲಿ. ಅದಕ್ಕೆ ಬಾಷ್ಯ ಬರೆದಿದ್ದರು ಮತ್ತೊಬ್ಬ ಲಿಂಗಾಯತ ಮಹಾ ನಾಯಕ ಜೆ.ಎಚ್.ಪಟೇಲರು.

ಸಮಾಜ ಸೇವೆಗೆಂದೆ ಹುಟ್ಟಿದ ಸಾಹೇಬರಿಗೆ ವಂಶದ ಕುಡಿ ಇರಲಿಲ್ಲ. ಆದರೆ ಸಮಾಜದ ಕುಡಿಗಳೆಲ್ಲರೂ ಮಕ್ಕಳವರಿಗೆ. ಶಾಲೆ ಕಲಿಯುವ ಮಕ್ಕಳಿಂದ ಮನೆ ತುಂಬಿತ್ತು ಈ ಹಿಂದೆ. ಇಂದು ಕಾಯಿಲೆ ಬಿದ್ದ ಜಂಗಮಗೆ ಆರೈಕೆ ಮಾಡಲು ಯಾರಿಲ್ಲ. ಅರ್ದಾಂಗಿಯ ಒಲವಾಗಿತ್ತು ದತ್ತು ಮಕ್ಕಳನ್ನು ಪಡೆಯುವದು. ಅವರ ಜೀವ ಎಳೆಯ ತೋಡಗಿತ್ತು ತನ್ನ ತವರು ಮನೆಯತ್ತ. ಸಾಹೇಬರಿಗೆ ನೆನಪಾಯಿತು ಅಣ್ಣಂದಿರ ನಿಶ್ವಾರ್ಥ ಪ್ರಿತಿ. ಅಣ್ಣನ ಮಕ್ಕಳನ್ನು ದತ್ತು ತಗೆದು ಕೊಳ್ಳಬೇಕೆಂದು ಆಸೆ ಅಂತರಾಳದಲ್ಲಿ. ಕೊನೆಗೆ ನಿರ್ಧರಿಸಿದರು ಯಾರೂ ಬೆಡವೆಂದು.

ಜೀವನವೆಲ್ಲ ಸಂಘರ್ಷ ಮಾಡಿದ ಆರಡಿ ದೇಹ ದಣಿದಿತ್ತು, ನಿತ್ರಾಣಗೊಂಡಿತ್ತು. ಆರೋಗ್ಯ ಹದಗೆಟ್ಟಿತು. ಬಾಗೇವಾಡಿ ಯಿಂದ ಬಂದರು ನಾಯಕರು,ಎಲ್ಲರ ಕಣ್ಣಲ್ಲಿ ನೀರು. ಹೇಳಲೇ ಬೇಕೆಂದು ಬಂದು ತಿರುಗಿ ಹೋಗಿದ್ದರು ಎರಡು ಬಾರಿ. ದೈರ್ಯದ ಸಿದ್ದನಗೌಡ ಬಾಯಿ ತೆರೆದರು “ಸಾಹೇಬರಾ……, ಹುಟ್ಟಿದವರು ಸಾಯಲೇಬೇಕು….,ಹುಲ್ಲು ಮಾನವರಾದ ನಾವು, ನೀವು ಚಿರಾಯುಷಿಗಳಾಗಲಿ ಎಂದು ಬೇಡಿಕೊಂಡರೂ ಬಿಡನು ಭಗವಂತ……,ನೀವು ದೇಹ ತ್ಯಜಿಸಿದ ನಂತರ…,ನಿಮ್ಮ ದೇಹ ಬಾಗೇವಾಡಿ ದೇವಸ್ಥಾನದ ಸ್ಮಶಾನದಲ್ಲಿ ಶಾಂತಿ ಪಡೆಯಲಿ……..” ಹೇಳಿದರು ದಳದಳ ಕಣ್ಣಿರಿನೊಂದಿಗೆ. ” ಸಿದ್ದನಗೌಡ್ರೆ, ಮುಖ್ಯ ವಿಷಯಕ್ಕ ಬರ್ರಿ, ದಕ್ಷಿಣ ದಿಕ್ಕಿನ ಬಾಗಿಲದ ಪಡಕಾ ಕುಡ್ರಿಸಿದಿರಾ ….., ರೊಕ್ಕ ತಾಯಿ ಮಕ್ಕಳ ಬಾಂಧವ್ಯ ಕೆಡಸತದ…., ನಾ ಎಲ್ಲಾ ಲೆಕ್ಕ ಬರೆದು ಇಟ್ಟೀನಿ….., ಕೋಡವರಿಗೆ ಕೊಟ್ಟ ಬಿಡರಿ…, ಹಾಂ.. ಎನೋ ಹೇಳಿದಿರಲ್ಲ…ನಾನು ಸಾಯೂ ವಿಷಯ….ಅದನ್ನ ಹೇಳಾಕ ಇಷ್ಟ್ಯಾಕ ಸಂಕೋಚ ಪಡತೀರೀ….., ಬಸವಣ್ಣನ ಇಚ್ಛೆ, ನಿಮ್ಮೂರಿನವರ ಇಚ್ಛೆಯಂತೆ ಕಾರ್ಯ ಮಾಡಿರಿ……,
ಊಟಾ ಮಾಡಕೊಂಡ ಹೋಗರಿ…….”

ಎಪ್ರಿಲ್ ೨೪.೧೯೬೨ ಸಾಹೇಬರ ಉಸಿರು ನಿಂತಿತು. ಬಂಗಲೆ ಅನಾಥವಾಯಿತು.ಮನೆಯಲ್ಲಿ ವೃದ್ದ ಪತ್ನಿ ಒಬ್ಬಳೆ. ಸಾವಿನ ಸುದ್ದಿ ಮುಟ್ಟಲಿಲ್ಲ ಬಹುಪಾಲು ಜನಕ್ಕೆ, ಅಷ್ಟಿಷ್ಟು ಸುದ್ದಿ ಮುಟ್ಟಿಸಿದರು ಆಪ್ತರು. ಬಾಗೇವಾಡಿಗೂ ಸುದ್ದಿ ಹೋಯಿತು. ಉರಲ್ಲಿ ಇರಲಿಲ್ಲ ಊರ ಗೌಡರು.ಲಿಂಗದಲ್ಲಿ ಲೀನವಾದ ಶರೀರವನ್ನು ಬಾಗೇವಾಡಿಗೆ ತರಬೇಕು. ಅಂತಿಮ ಸಂಸ್ಕಾರಕ್ಕೆ ಸ್ಥಳ ಗುರುತಿಸಬೇಕು.ಬಸವೇಶ್ವರ ದೇವಸ್ಥಾನದ ಪಕ್ಕದಲ್ಲಿತ್ತು ಸ್ಮಶಾನ.ಆದರೆ ಅದು ಕೇವಲ ಒಂದು ವರ್ಗಕ್ಕೆ ಮೀಸಲಾಗಿತ್ತು. ಆ ಜಾತಿಯ ಜನರು ಎತ್ತಿದರು ಆಕ್ಷೇಪಣೆ. ಮತ್ತೆ ಜಾತಿ ಗರಿಗೆದರಿ ನಿಂತಿತು ಫಾಖಂಡಿಗಳಿಗೆ…. ಅದೂ ಬಸವಣ್ಣನ ಹುಟ್ಟುರಿನಲ್ಲಿ.. ವಿರೋದಿಸಿದರು ತಮ್ಮ ದಲ್ಲದ ಜಾತಿಯ ದೇಹವನ್ನು ಹೂಳಲು ತಮ್ಮ ಶವಗಳಿಗಾಗಿ ಕಾಯ್ದಿರಿಸಿದ ಸ್ಮಶಾನದಲ್ಲಿ. ಬಸವನ ಹತ್ತಿರ ಶಾಶ್ವತವಾಗಿ ಮಲಗಬೇಕೆಂದಿದ್ದ ದೇಹಕ್ಕೆ ಸಿಗಲಿಲ್ಲ ಆರಡಿ X ಮೂರಡಿಯ ಜಾಗ.

ಸಮಯಕ್ಕೆ ಸರಿಯಾಗಿ ಬರಲಿಲ್ಲ ಬಾಗೇವಾಡಿಯಿಂದ ಉತ್ತರ. ವಿಜಾಪೂರದ ನಾಗರಿಕರು ನಿರ್ಧರಿಸಿದರು ಅಂತಿಮ ಶವ ಸಂಸ್ಕಾರದ ಸ್ಥಳ. ಪೂರೈಸಿದರು ನಿಜ ಜಂಗಮನ ಅಂತಿಮ ಯಾತ್ರೆ. ದೀಪವಾರಿತ್ತು…, ಕತ್ತಲಾವರಿಸಿತ್ತು….,ಬಸವ ಭಕ್ತರ ಮನದಲ್ಲಿ….., ಮತ್ತೊಮ್ಮೆ ಎದ್ದು ಕುಳಿತ್ತಿತ್ತು ಜಾತಿ.

ಆಯಿತು ಮತ್ತೊಂದು ಸಣ್ಣ ಕ್ರಾಂತಿ ಬಾಗೇವಾಡಿಯಲ್ಲಿ.ಹೊರ ಬಂದರು ರೊಚ್ಚಿ ಗೆದ್ದ ಜನ ಹಾರೆ ಗುದ್ದಲಿಗಳೊಂದಿಗೆ, ಅಗೆದರು ಸ್ಮಶಾನವನ್ನು, ಕಿತ್ತು ಹಾಕಿದರು ಹಿಂದಿನ ಸಮಾದಿಗಳನ್ನು. ಸ್ಥಾಪಿಸಿದರೊಂದು ಉದ್ಯಾನ. ಇಂದು ಕಂಗೊಳಿಸುತ್ತಿವೆ ಸುವಾಸನೆ ಭರಿತ ಹೂ ಗಳು ಅಲ್ಲಿ.ಅವು ಏರುತ್ತಿವೆ ಬಸವನ ಪಾದಕ್ಕೆ.

ಶರಣ ಜಿ ಬಿ ಪಾಟೀಲ

ಮಹಾಪ್ರಧಾನ ಕಾರ್ಯದರ್ಶಿಗಳು, ಜಾಗತಿಕ ಲಿಂಗಾಯತ ಮಹಾಸಭೆ, ಬೆಂಗಳೂರು..

About Shivanand

Admin : Lingayat Kranti Monthly news paper 8884000008 [email protected]

Check Also

47ನೇ ತ್ರೈಮಾಸಿಕ ಶಿವಾನುಭವ-ಗುರುವಂದನೆ

  ಮುಂಡರಗಿ ಜುಲೈ 12: ೧೨ನೆಯ ಶತಮಾನದ ಬಸವಾದಿ ಶರಣರು ದೇವರ ಕಲ್ಪನೆಯನ್ನು ಇಷ್ಟಲಿಂಗದಲ್ಲಿ ಕಂಡರು.ಗರ್ಭಗುಡಿ ಸಂಸ್ಕೃತಿಯಿಂದ ಜನರನ್ನು ಹೊರತಂದು,ಇಷ್ಟಲಿಂಗ …

ಬಸವಧರ್ಮದ ಕಾಯಕಯೋಗಿ ಬಸವ ಸಿದ್ಧಲಿಂಗ ಶ್ರೀಗಳಿಗೆ 50ವರ್ಷ

  ಲೇಖನ: ಶಿವಾನಂದ ಮೆಟ್ಯಾಲ ನೇಗಿನಹಾಳ ನೇಗಿನಹಾಳ: 12ನೆಯ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ನಂತರ ಬಸವಾದಿ ಶರಣರು ವಚನ …

“ಶಿವಾನುಭವ” ಪತ್ರಿಕೆ ಮರುಮುದ್ರಣಕ್ಕೆ ಲಿಂಗಾಯತ ನಾಯಕ ಡಾ‌. ಎಂ ಬಿ ಪಾಟೀಲ ಒತ್ತಾಯ

ಬೆಂಗಳೂರು: ಡಾ. ಫ.ಗು. ಹಳಕಟ್ಟಿಯವರ ಸಂಪಾದಿತ “ಶಿವಾನುಭವ” ಪತ್ರಿಕೆಯ ಮರುಮುದ್ರಣ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೈಗೊಳ್ಳಬೇಕೆಂದು ಲಿಂಗಾಯತ …

ನೇಗಿನಹಾಳ ಗ್ರಾಮದ ಸಮಸ್ಯೆಗಳ ಆಲಿಸಿದ ತಹಶಿಲ್ದಾರ್ ಬಸವರಾಜ ನಾಗರಾಳ್

ಗ್ರಾಮದ ಜನತಾ ಕಾಲನಿಯಲ್ಲಿ ನೀರು ನುಗ್ಗಿದ್ದರಿಂದ ಮನೆಗಳು ಬಿದ್ಧಿರುವ ಸ್ಥಳಗಳಿಗೆ ಬೇಟಿ ನೀಡಿದರು. ನೇಗಿನಹಾಳ (ಬೆಳಗಾವಿ) : ಗ್ರಾಮದಲ್ಲಿನ ಸಮಸ್ಯೆಗಳನ್ನು …

ಬಸವಣ್ಣ ದಕ್ಷಿಣ ಭಾರತದ ಪರ್ಯಾಯ ಬುದ್ದ

ಲಿಂಗಾಯತ ಕ್ರಾಂತಿ: ಎಂ.ಎಂ.ಕಲ್ಬುರ್ಗೀ ಸರ್ ಬರೆದಂತ ಬಸವಣ್ಣ ದಕ್ಷಿಣ ಭಾರತದ ಪರ್ಯಾಯ ಬುದ್ದ ಎನ್ನುವ ಶೀರ್ಷಿಕೆಯನ್ನು ಇಲ್ಲಿ ಬಳಸುತ್ತಿರುವೆ.ಕಲ್ಬುರ್ಗಿ ಸರ್ …

ವಚನ ಸಾಹಿತ್ಯ ಬೆಳಕಿಗೆ ತಂದವರು ಡಾ.ಫ.ಗು.ಹಳಕಟ್ಟಿಯವರು: ಡಾ. ಎಂ ಬಿ ಪಾಟೀಲ

  ವಿಜಯಪುರ: ಹರಿದು ಹಂಚಿ ಹೋಗಿದ್ದ ವಚನ ಸಾಹಿತ್ಯವನ್ನು ಹುಡುಕಿ ಪ್ರಕಟಿಸಿ, ಪ್ರಚಾರ ಮಾಡಿ, ಬೆಳಕಿಗೆ ತಂದವರು ವಚನಪಿತಾಮಹರೆಂದೇ ಖ್ಯಾತರಾದವರು …

ಅಂಬೇಡ್ಕರ್ ತತ್ವಗಳನ್ನು ಅರಿತಾಗ ಸಂವಿಧಾನದ ಆಶಯಗಳ ಅನುಷ್ಠಾನ ಸಾಧ್ಯ: ನಿಜಗುಣಾನಂದ ಶ್ರೀ

  ಎಂ.ಕೆ.ಹುಬ್ಬಳ್ಳಿ: ಅಂಬೇಡ್ಕರ್ ಅವರ ತತ್ವಗಳನ್ನು ಕೇವಲ ಕಾನೂನು ನ್ಯಾಯಾಂಗದ ಚೌಕಟ್ಟಿನಲ್ಲಿ ಮಾತ್ರ ಜನರು ಒಪ್ಪಿಕೊಳ್ಳುತ್ತಾರೆ. ಆದರೆ ಹೃದಯಾಳದಲ್ಲಿ ಅವರ …

ಕ್ರಿ.ಪೂ. 200 ವರ್ಷಗಳ ಹಿಂದೆ…

  ಲಿಂಗಾಯತ ಕ್ರಾಂತಿ: ಕ್ರಿ.ಪೂ. 200 ವರ್ಷಗಳ ಹಿಂದೆ ಅಲೆಕ್ಸಾಂಡರ್ ದಿ ಗ್ರೇಟ್ ಗ್ರೀಕ್ ದೇಶದ ಚಕ್ರವರ್ತಿಯಾಗಿದ್ದ. ಆತ ತುಂಬಾ …

ಪ್ರಕೃತಿಯ ಆರಾಧಕಳು ಅಕ್ಕ

  ಲಿಂಗಾಯತ ಕ್ರಾಂತಿ: ಪ್ರಕೃತಿಯ ಆರಾಧನೆ ಎಂದರೆ ಸತ್ಯ ಮತ್ತು ಸೌಂದರ್ಯದ ಅನುಸಂಧಾನದ ಪ್ರಕ್ರಿಯೆ. ಪಂಚಭೂತಗಳಿಂದ ಆವೃತವಾದ ಈ ಪ್ರಕೃತಿಯು …

‘ಲಿಂಗಾಯತ’ ಚಳವಳಿಗೆ ಕಿಚ್ಚು ಹಚ್ಚಿದವರೇ ಲಿಂಗಾನಂದ ಶ್ರೀ!

  ಲಿಂಗಾಯತ ಕ್ರಾಂತಿ:  ಆ ದುರ್ದಿನಗಳಲ್ಲಿ ಬಸವಾದಿ ಶರಣರನ್ನು ಹಳ್ಳಿ ಹಳ್ಳಿಗೂ ತಲುಪಿಸಿ, ಸಾಮಾನ್ಯರಲ್ಲಿ ‘ಲಿಂಗಾಯತ’ದ ಅರಿವು ಮೂಡಿಸಿದ್ದು ಲಿಂಗಾನಂದ …

ನಿಜಗುಣಪ್ರಭು ತೋಂಟದಾರ್ಯ ಶ್ರೀಗಳಿಗೆ ಇಂದು ಪ್ರಶಸ್ತಿ ಪ್ರದಾನ

  ಚನ್ನಮ್ಮನ ಕಿತ್ತೂರು: ಮೂರು ದಶಕಗಳಿಂದ ನಾನಾ ದೇಶಗಳನ್ನು ಸುತ್ತಿ ಬಸವ ತತ್ವಗಳನ್ನು ಬಿತ್ತುತ್ತಿರುವ ನಿಷ್ಕಲ ಮಂಟಪದ ಪೂಜ್ಯ ಶ್ರೀ …

ವಿಧಾನಸೌಧದಲ್ಲಿ ಬಸವಣ್ಣನವರ ಪುತ್ಥಳಿ ಸ್ಥಾಪನೆಗೆ ಸಿಎಂ ಸಿದ್ದತೆ

  ಬೆಂಗಳೂರು: ಲಿಂಗಾಯತ ಧರ್ಮೀಯರ ಬಹುದಿನಗಳ ಬೇಡಿಕೆಗೆ ಈಗ ಕಾಲ ಕೂಡಿಬಂದಿದೆ. ಹೌದು.! ವಿಧಾನಸೌಧದ ಆವರಣದಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿ …

ಬ್ರಾಹ್ಮಣ್ಯ ಕೇವಲ 15% ರಷ್ಟಿರುವ ಸವರ್ಣೀಯರಲ್ಲಷ್ಟೇ ಆಚರಿಸಲ್ಪಡುತ್ತದೆಯೇ..?

ಬ್ರಾಹ್ಮಣ್ಯದ ಬಗ್ಗೆ ಇತ್ತೀಚೆಗೆ ಎಲ್ಲೆಡೆ ಬಹಳ ಚರ್ಚೆ ಆಗುತ್ತಿದೆ. ಹಾಗಾಗಿ ನನ್ನ ಸೀಮಿತ ಅರಿವಿನ ಪರಿಧಿಯಲ್ಲಿ ನನ್ನ ಅಭಿಪ್ರಾಯ ಹಂಚಿಕೊಳ್ಳಲು …

ಲಿಂಗಾಯತರಿಗೆ ಬೇಕಿರುವುದು ಬೆಲ್ಲದ್ ಅಲ್ಲ; ಎಂ.ಬಿ.ಪಾಟೀಲರಂತಹ ಸಕ್ಕರೆ!

  ಹೌದು. ಲಿಂಗಾಯತರ ಮೇಲೆ ಯಾರನ್ನೋ ತಂದು ಹೇರಬೇಡಿ. ಪರ್ಯಾಯ ನಾಯಕನನ್ನು ಹುಡುಕುವ ಮತ್ತು ಅವರ ಮತಗಳನ್ನು ತಮ್ಮಲ್ಲೇ ಉಳಿಸಿಕೊಳ್ಳುವ …

ರವಿಯೊಳಡಗಿದ ಪ್ರತಿಬಿಂಬದಂತೆ

  ಲಿಂಗಾಯತ ಕ್ರಾಂತಿ: 12 ನೇ ಶತಮಾನದ ಶರಣೆಯರಲ್ಲಿ ಆಧ್ಯಾತ್ಮಿಕ ಪಥವನ್ನು ಮುಟ್ಟಿದ ವಿಶಿಷ್ಟ ಶರಣೆ ಮುಕ್ತಾಯಕ್ಕ. ಶರಣೆ ಎನ್ನುವ …

Leave a Reply

Your email address will not be published. Required fields are marked *