Home / featured / ಮಾದರ ಚನ್ನಯ್ಯಾ ಸ್ವಾಮಿಗಳು ಬಸವತತ್ವ ಅರೆಯಲಿ

ಮಾದರ ಚನ್ನಯ್ಯಾ ಸ್ವಾಮಿಗಳು ಬಸವತತ್ವ ಅರೆಯಲಿ

ಮಾದಾರ ಚೆನ್ನಯ್ಯ ಪೀಠದ ಬಸವ ಮೂರ್ತಿ ಸ್ವಾಮಿಗಳು ಬುದ್ಧ, ಬಸವ, ಮಾದಾರ ಚನ್ನಯ್ಯ, ಅಂಬೇಡ್ಕರ್ ತತ್ವದ ಮೇಲೆ ಸಾಗಲಿ.

ಬೀದರ : ಕಳೆದ ಮೂರು ದಿನದ ಹಿಂದೆ ಅಯೋಧ್ಯೆಯಲ್ಲಿ ಶ್ರೀ ರಾಮ‌ ಮಂದಿರ ಕಟ್ಟಡದ ಭೂಮಿ ಪೂಜೆಯ ಕಾರ್ಯಕ್ರಮದಲ್ಲಿ ಭಾಗಿಯಾದ ಮಾದಾರ ಚೆನ್ನಯ್ಯ ಪೀಠದ ಬಸವ ಮೂರ್ತಿ ಶ್ರೀ ಮಾದಾರ ಚನ್ನಯ್ಯ ಶ್ರೀಗಳ ನಡೆ ಸಮಸ್ತ ಮಾದಾರ ಸಮಾಜದ ಜನತೆಗೆ ದಿಗ್ಭ್ರಮೆಯನ್ನುಂಟು ಮಾಡಿದೆ.

ವಿಶ್ವಗುರು ಬಸವಣ್ಣನವರ ಮತ್ತು ಶರಣ ಶ್ರೇಷ್ಟ ಮಾದಾರ ಚನ್ನಯ್ಯನವರ ತತ್ವಗಳನ್ನು ಮೈಗೂಡಿಸಿಕೊಂಡು ಚಿತ್ರದುರ್ಗ ಪೀಠದ ಮುರುಘೇಂದ್ರ ಸ್ವಾಮಿಗಳಿಂದ ಕಾವಿ ದೀಕ್ಷೆ ಪಡೆದು, ಬಸವತತ್ವದ ಪ್ರಚಾರಕ್ಕಾಗಿ ಜೀವನ ಮುಡಿಪಾಗಿಟ್ಟ ಪೂಜ್ಯರು ಇತ್ತೀಚೆಗೆ ಸಂಘ ಪರಿವಾರ ಮತ್ತು ಶ್ರೀ ರಾಮ ಭಕ್ತರ ಜೊತೆ ಸೇರಿ ಸೈದ್ಧಾಂತಿಕ ತತ್ವದ ತದ್ವಿರುದ್ಧವಾಗಿ ಸಾಗುತ್ತಿರುವುದು ಮಾದಾರ ಚೆನ್ನಯ್ಯ ಸಮುದಾಯಕ್ಕೆ ಮಾಡುವ ಅವಮಾನವಾಗಿದೆ.

ಮನು ಸಂಸ್ಕೃತಿಯ ಆಧಾರದ ಮೇಲೆ ಶತಶತಮಾನಗಳ ಕಾಲ ಸಮಾನತೆಯನ್ನು ಒಪ್ಪದ, ಹುಟ್ಟಿನಿಂದ ಮೇಲು ಕೀಳೆಂದು ಭೇದ ಸೃಷ್ಟಿಸಿ ತಳ ಸಮುದಾಯಗಳನ್ನು ಜಾತಿಯಾಧಾರದ ಮೇಲೆ ಇಂದಿಗೂ ವಂಚಿಸುತ್ತಿರುವ ಮನುವಾದಿಗಳ ಜೊತೆಗೆ ಸೇರಿ ಬಸವಾದಿ ಪ್ರಮಥರ ಆಶಯಕ್ಕೆ ದಕ್ಕೆ ತರುವುತ್ತಿರುವುದನ್ನು ಖಂಡಿಸುತ್ತೇವೆ.

ಮಾದಾರ ಸಮಾಜದ ಜನ ಏನೂ ಅರಿಯದ ಮುಗ್ದರು. ಬುದ್ದ ಬಸವ ಮಾದಾರ ಚನ್ನಯ್ಯ ಅಂಬೇಡ್ಕರ್ ವಿಚಾರವನ್ನು ಹೊತ್ತು ಸಾಗುವ ಸ್ವಾಭಿಮಾನಿಗಳು. ಆ ಸಮುದಾಯದ ಮಾದಾರ ಚನ್ನಯ್ಯನವರು ಬಸವಪ್ರೀಯರು, ಗುರು ಬಸವಣ್ಣನವರೇ ಮಾದಾರ ಚನ್ನಯ್ಯನನ್ನು ಅಪ್ಪ ಎಂದು ಅಪ್ಪಿಕೊಂಡವರು. ಇಂದು ನಾವು ಬಸವಣ್ಣನವರ ತತ್ವದ ಮೇಲೆ ಸಾಗಬೇಕೇ ಹೊರತು, ಮನುವಾದಿಗಳ ಜೊತೆ ಸೇರಿ ಮಾದಾರ ಸಮುದಾಯದ ಜನಗಳಿಗೆ ದಿಕ್ಕು ತಪ್ಪಿಸುವ ಕಾರ್ಯ ಮಾಡಬಾರದು. ಇದರಿಂದ ಸಮಾಜ ಎಚ್ಚೆತ್ತುಕೊಳ್ಳಬೇಕು.

ಸ್ವಾಮಿಗಳು ರಾಜಾಕಾರಣ ಮಾಡುವುದೇ ಆದರೆ ಮಾದಾರ ಚನ್ನಯ್ಯ ಪೀಠ ತ್ಯಜಿಸಿ ಶ್ರೀ ಸಂಘ ಪರಿವಾರ ಸೇರಿಕೊಳ್ಳಲಿ ಆದರೆ ನಂಬಿದ ತತ್ವಕ್ಕೆ ಧಕ್ಕೆ ತಂದೊಡ್ಡಬಾರದು.

ಈ ದೇಶವೂ ಬಹು ಸಂಸ್ಕೃತಿಯ ನಾಡು ಹಲವಾರು ಮತ, ಪಂಥ, ಧರ್ಮಗಳ ಆಚರಣೆಗಳಿಗೆ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಅವರವರ ಧರ್ಮಗಳ ಅನುಸಾರ ಸೈದ್ಧಾಂತಿಕ ನಿಲುವನೊಂದಿಗೆ ಸಾಗಲಿ. ಶ್ರೀ ರಾಮನ ಮಂದಿರ ಮಾಡುವ ಬಗ್ಗೆ ನಮ್ಮದೇನು ಆಭ್ಯಂತರವಿಲ್ಲ. ಆದರೆ ಬಸವಧರ್ಮಕ್ಕೂ, ಶ್ರೀ ರಾಮನ ಮನು ಸಂಸ್ಕೃತಿಯ ವೈದಿಕ ಮತಕ್ಕೂ ಸೈದ್ಧಾಂತಿಕ ತತ್ವದ ಭಿನ್ನತೆಯಿದೆ. ಈ ಕಾರಣದಿಂದ ಬಸವ ಧರ್ಮವನ್ನು ಆಚರಣೆ ಮಾಡುವ ಮಾದಾರ ಚನ್ನಯ್ಯ ಪೀಠದ ಪೂಜ್ಯರು ಸೈದ್ಧಾಂತಿಕ ತತ್ವದ ಮೇಲೆ ಸಾಗಬೇಕೆಂಬುದಷ್ಟೆ ನಮ್ಮ ಕಳಕಳಿ.

ಪೂಜ್ಯರು ಬುದ್ದ, ಬಸವ, ಮಾದಾರ ಚನ್ನಯ್ಯ, ಅಂಬೇಡ್ಕರ ಕಟ್ಟಿದ ಭವ್ಯ ಭಾರತದ ಪರಂಪರೆಯಲ್ಲಿ ಸಾಗುವುದಲ್ಲದೆ, ಮಾದಾರ ಸಮಾಜವನ್ನು ಅದೇ ತತ್ವದ ಮೇಲೆ ಮುನ್ನಡೆಸಬೇಕು. ಸಮಾಜ ಈಗ ಎಚ್ಚೆತ್ತುಕೊಂಡಿದೆ ನಿಮ್ಮ ಸೂಕ್ಷ್ಮ ನಡೆಯನ್ನು ಗಮನಿಸುತ್ತಿದೆ ಎಂಬುದು ಪೂಜ್ಯರು ಅರಿತುಕೊಳ್ಳಬೇಕು.

ಪೂಜ್ಯರು ಮಾದಾರ ಚನ್ನಯ್ಯನ ತತ್ವವನ್ನು ಪ್ರಚಾರ ಮಾಡುವಲ್ಲಿ ಗಟ್ಟಿತನ ಪ್ರದರ್ಶಿಸಬೇಕು ಮತ್ತು ಸ್ವಾಭಿಮಾನದ ನಡೆಯನ್ನು ಅನುಸರಿಸಬೇಕು. ಸಂಘ ಪರಿವಾರದ ಗುಲಾಮಗಿರಿತನದ ವ್ಯವಸ್ಥೆಯ ಅಡಿಯಾಳುಗಳಾಗಿ ಹೋಗುವುದು ಬೇಡ ಸಮಾಜ ಸದಾ ನಿಮ್ಮೊಂದಿಗೆ ಇರುತ್ತದೆ.

ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ. ಚಿಂತಕರು ಹಾಗೂ ರಾಷ್ಟ್ರೀಯ ಬಸವದಳದ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಗಳು ಬೆಂಗಳೂರು.

About Shivanand

Admin : Lingayat Kranti Monthly news paper 8884000008 [email protected]

Check Also

ಸೆ. 25ರಂದು “ಮಹಾತ್ಮರ ಚರಿತಾಮೃತ” ಲೋಕಾರ್ಪಣೆ

ಅಥಣಿ: ಗಡಿಭಾಗದಲ್ಲಿ ನಾಡು-ನುಡಿ ಕಟ್ಟುವ ಕಾಯಕದಲ್ಲಿ ನಿರತವಾಗಿರುವ ಅಥಣಿ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಅವರು ಸಂತ-ಮಹಾಂತರ …

ಧರ್ಮ ವಿಭಜನೆ ನೆವದಲ್ಲಿ ಪಾಟೀಲರ ಟೀಕೆ ಸಾಧುವಲ್ಲ

-ಸಾಹಿತಿ ಶಿವಕುಮಾರ್ ಉಪ್ಪಿನ ಖೇದ ವಿಜಯಪುರ ಜಿಲ್ಲೆಯ ಒಳ ಮರ್ಮದ ರಾಜಕೀಯ ಮೇಲಾಟದ ಕಾರಣಕ್ಕೆ ಲಿಂಗಾಯತ ಚಳವಳಿಯಿಂದಲೇ ಕಾಂಗ್ರೆಸ್‌ಗೆ ಸೋಲಾಯಿತು …

ಲಿಂಗಾಯತ ಪೇಜ್‌ಗೆ ಕಿಡಿಗೇಡಿಗಳ ಕಿರಿಕಿರಿ..!

ಲಿಂಗಾಯತ ಯುವ ಒಕ್ಕೂಟ ಫೇಸ್ ಬುಕ್ ಪೇಜ್‌ಗೆ ಮಸಿ ಬಳಿಯಲು ಅದನ್ನು ಹ್ಯಾಕ್ ಮಾಡಿ ಅಶ್ಲೀಲ ಪೋಸ್ಟ್‌ಗಳನ್ನು ಮಾಡುತ್ತಿರುವುದರಿಂದ ಈ …

“ಲಕ್ಷ್ಮೀ ಪೂಜೆ” ಲಕ್ಷ್ಮೀ ಯಾರು.?

  ಈ ಲಕ್ಷ್ಮೀ ಪೂಜೆ ಯಾಕೆ ಮಾಡುತ್ತಿದ್ದರು? ರಾಜನ ಹೆಂಡತಿಗೆ ಲಕ್ಷ್ಮೀ ಎಂದು ಕರೆಯುತ್ತಿದ್ದರು, ಇದು ಹೊಗಳಿಕೆಯ ಪದ. ರಾಜನಿಗೆ …

ಸಂಗೊಳ್ಳಿ ರಾಯಣ್ಣನಿಗೆ ಜನ್ಮ ನೀಡಿದ್ದು ನೇಗಿನಹಾಳ ಗ್ರಾಮ

ಸ್ವತಂತ್ರ ಹೋರಾಟಗಾರರ ಧರ್ಮಪತ್ನಿ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ನೇಗಿನಹಾಳ : ಬ್ರಿಟಿಷ್ ಸರ್ಕಾರದ ವಿರುದ್ಧ ಮೊಟ್ಟಮೊದಲಿಗೆ ಧಂಗೆ ಸಾರಿ …

ಕ್ರೀಡೆ, ಕಲೆ, ಸಾಹಿತ್ಯದಂಥ ರಂಗಗಳು ಜಾತಿ, ಸಂಕುಚಿತತೆ ನಿರ್ಮೂಲನೆಯ ಮಹಾಸಾಧನಗಳು

  ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮೀಜಿ ಅಭಿಮತ ಮುಂಡರಗಿ ಆಗಷ್ಟ್ 07: ಪ್ರಸ್ತುತ ರಾಜಕಾರಣದಲ್ಲಿ, ಕಾವಿಯೊಳಗೆ ಖಾದಿಯ ಪ್ರವೇಶ ಸಲ್ಲದು. …

ಪ್ರಮಾಣ ವಚನ ನೇರಪ್ರಸಾರ; ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ರಾಜಭವನದಿಂದ ನೇರ ಪ್ರಸಾರ ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ಇಂದು ಮಧ್ಯಾಹ್ನ 2:15ಕ್ಕೆ …

ಅಲ್ಲಮಪ್ರಭುಗಳ ವಚನಗಳು ಇಂಗ್ಲಿಷ್‌ಗೆ ಭಾಷಾಂತರ

  ವಿಜಯಪುರ : ಖ್ಯಾತ ಭಾಷಾತಜ್ಞ ಎ. ಕೆ. ರಾಮಾನುಜನ್ ಅವರ ಬಳಿಕ ಶರಣರೊಬ್ಬರ ವಚನಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ ಕೀರ್ತಿ …

ತ್ರಿಭಾಷೆಗಳಲ್ಲಿ ಮೂಡಿಬಂದ ಮಹಾಜಂಗಮ

ಮಹಾಜಂಗಮ : ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಮರಾಠಿ ಮೂಲ ಲೇಖಕರು : ಶ್ರೀ ರಾಜು ಬ. ಜುಬರೆ …

ಹಡಪದರನ್ನು ನೋಡುವ ನೋಟ ಬದಲಾಗಲಿ

ಗಜೇಂದ್ರಗಡ ಜುಲೈ 25: ಅಸಮಾನತೆ, ಜಾತಿವಾದ ವ್ಯವಸ್ಥೆಯ ಈ ಸಮಾಜದಲ್ಲಿ ದಲಿತ ಜನಾಂಗದವರು ಮುಟ್ಟಿಸಿಕೊಳ್ಳದ ಅಸ್ಪೃಶ್ಯತೆಯ ಅವಮಾನಕ್ಕೊಳಗಾಗುತ್ತಿದ್ದಾರೆ. ಹಾಗೆಯೇ ಹಡಪದ …

ಯಡಿಯೂರಪ್ಪ ಅವರನ್ನು ಘನತೆಯಿಂದ ನಡೆಸಿಕೊಳ್ಳಿ- ಡಾ. ಎಂ ಬಿ ಪಾಟೀಲ

ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿದ್ದು, ಬಿ.ಎಸ್. ಯಡಿಯೂರಪ್ಪ …

ನಾಗನೂರ ರುದ್ರಾಕ್ಷಿಮಠಕ್ಕೆ ಮಾಜಿ ಗೃಹ ಸಚಿವ ಎಂ.ಬಿ ಪಾಟೀಲ ಬೇಟಿ

ಅಂತರರಾಷ್ಟ್ರೀಯ ಬಸವ ಗ್ರಂಥಾಲಯ ನಿರ್ಮಾಣದ ಕುರಿತು ಚಿಂತನೆ ಬೆಳಗಾವಿ : ಶುಕ್ರವಾರ ಶಿವಬಸವ ನಗರದ ನಾಗನೂರ ರುದ್ರಾಕ್ಷಿಮಠಕ್ಕೆ ಬೇಟಿ ನೀಡಿ …

47ನೇ ತ್ರೈಮಾಸಿಕ ಶಿವಾನುಭವ-ಗುರುವಂದನೆ

  ಮುಂಡರಗಿ ಜುಲೈ 12: ೧೨ನೆಯ ಶತಮಾನದ ಬಸವಾದಿ ಶರಣರು ದೇವರ ಕಲ್ಪನೆಯನ್ನು ಇಷ್ಟಲಿಂಗದಲ್ಲಿ ಕಂಡರು.ಗರ್ಭಗುಡಿ ಸಂಸ್ಕೃತಿಯಿಂದ ಜನರನ್ನು ಹೊರತಂದು,ಇಷ್ಟಲಿಂಗ …

ಬಸವಧರ್ಮದ ಕಾಯಕಯೋಗಿ ಬಸವ ಸಿದ್ಧಲಿಂಗ ಶ್ರೀಗಳಿಗೆ 50ವರ್ಷ

  ಲೇಖನ: ಶಿವಾನಂದ ಮೆಟ್ಯಾಲ ನೇಗಿನಹಾಳ ನೇಗಿನಹಾಳ: 12ನೆಯ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ನಂತರ ಬಸವಾದಿ ಶರಣರು ವಚನ …

“ಶಿವಾನುಭವ” ಪತ್ರಿಕೆ ಮರುಮುದ್ರಣಕ್ಕೆ ಲಿಂಗಾಯತ ನಾಯಕ ಡಾ‌. ಎಂ ಬಿ ಪಾಟೀಲ ಒತ್ತಾಯ

ಬೆಂಗಳೂರು: ಡಾ. ಫ.ಗು. ಹಳಕಟ್ಟಿಯವರ ಸಂಪಾದಿತ “ಶಿವಾನುಭವ” ಪತ್ರಿಕೆಯ ಮರುಮುದ್ರಣ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೈಗೊಳ್ಳಬೇಕೆಂದು ಲಿಂಗಾಯತ …

One comment

  1. ಬಹಳ ಒಳ್ಳೆಯ ರೀತಿಯಿಂದ ಸದ್ಬುದ್ಧಿ ಹೇಳಿರುವ ಪೂಜ್ಯರಿಗೆ ಅನಂತ ಶರಣು ಶರಣಾರ್ಥಿಗಳು

Leave a Reply

Your email address will not be published. Required fields are marked *