Home / featured / ಕರ್ನಾಟಕ ಮಹಾವಿದ್ಯಾಲಯ ಸ್ಥಾಪನೆ: ಯಾರ ಕೊಡುಗೆ ಏಷ್ಟೇಷ್ಟು?

ಕರ್ನಾಟಕ ಮಹಾವಿದ್ಯಾಲಯ ಸ್ಥಾಪನೆ: ಯಾರ ಕೊಡುಗೆ ಏಷ್ಟೇಷ್ಟು?

ಚನ್ನಮ್ಮನ ಕಿತ್ತೂರು:  1866ರಲ್ಲಿ ಡೆಪ್ಯೂಟಿ ಚೆನ್ನಬಸಪ್ಪನವರು ಧಾರವಾಡ ದಲ್ಲಿ ಗಂಡು ಮಕ್ಕಳ ಕಾಲೇಜ್ ಪ್ರಾರಂಬಿಸಿದರು.1872ರಲ್ಲಿ ಧಾರವಾಡ ದ ಕಲೆಕ್ಟರ್ ಧಾರವಾಡ ದಲ್ಲಿ ಕಲಾ ಮಹಾವಿದ್ಯಾಲಯದ ಅವಶ್ಯಕತೆ ಇದೆ ಎಂದರು.

1902ರಲ್ಲಿ ಧಾರವಾಡ ಕ್ಕೆ ಬಂದಿದ್ದ ಮುಂಬಯಿ ಶಿಕ್ಷಣ ಇಲಾಖೆಯ ನಿರ್ದೇಶಕ E ಜಾಯ್ಸ್ ಕಲಾಮಹಾವಿದ್ಯಾಲಯದ ಅವಶ್ಯಕತೆ ಒತ್ತಿ ಒತ್ತಿ ಹೇಳಿದರು.. ನಂತರ ೧೯೦೯ ರಲ್ಲಿ ರೂದ್ದ ಶ್ರೀನಿವಾಸರು ಅರಟಾಳ ರುದ್ರಗೌಡ್ರ ಹತ್ತಿರ ಬಂದು ಕರ್ನಾಟಕ ಕಾಲೇಜು ಸ್ಥಾಪನೆಗೆ ಶಿರಸಂಗಿ ಲಿಂಗರಾಜ ಟ್ರಸ್ಟನಿಂದ ಒಂದು ಲಕ್ಷ ನೇರವು ಕೇಳಿದರು..ಆದರೆ ಇದಕ್ಕೆ ಕಾನೂನಿನಲ್ಲಿ ಅವಕಾಶ ಇರಲಿಲ್ಲ.ದಿನಾಂಕ20/10/1909 ಮುಂಬೈ ರಾಜ್ಯದ ದಕ್ಷಿಣ ಭಾಗದ ಕಮೀಷನರ್ M.C.ಗಿಬ್ಬ ಮುಂತಾದವರು ಬೆಳಗಾವಿಯಲ್ಲಿ ಸಭೆ ಮಾಡಿ  2ಲಕ್ಷ64ಸಾವಿರ ಠೇವಣಿ ಕೂಡಿಸಿ ಕೂಟ್ಟರೆ ಸೆಕೆಂಡ ಗ್ರೇಡ ಕಾಲೇಜ ಸ್ಥಾಪನೆಗೆ ಅನುಮತಿ ನೀಡುವುದಾಗಿ ಹೇಳಿದರು.

ಇ ಸಭೆಯಲ್ಲಿ ಅರಟಾಳ ರುದ್ರಗೌಡ್ರ ಮತ್ತು ರೂದ್ದ ಶ್ರೀನಿವಾಸ ಇಬ್ಬರು ಉಪಸ್ಥಿತರಿದ್ದರು.ರೋದ್ದ ಶ್ರೀನಿವಾಸರು ಎಲ್ಲ ಹಣವನ್ನು‌ ನಾನೆ‌ ಕೂಡಿಸಿ ಕೂಡುವೆ ಎಂದು ಆವೇಶದಿಂದ ಸಭೆಗೆ ಹೇಳಿದರು. ಕಾರಣ1912ರಲ್ಲಿ   ಮುಂಬೈ ವಿಧಾನ ಪರಿಷತ್ ಚುನಾವಣೆಗೆ ಸ್ಥಳಿಯಸಂಘಸಂಸ್ಥೆಗಳ ಕ್ಷೇತ್ರದಿಂದ ಸ್ಪರ್ಧಿಸುವ ಹುಮ್ಮಸ್ಸಿನಲ್ಲಿದ್ದರು…

ಆಗ ಅವರಿಗೆ ಚುನಾವಣಾ ವಿಷಯವಾಗಿ ಇದನ್ನು ಪರಿವರ್ತಿಸಿಕೂಂಡರು ರೂದ್ದಶ್ರೀನಿವಾಸರು ಮತ್ತು ದತ್ತೂಪಂತ ಬೆಳವಿಯವರು…ತಾವೇ ಕರ್ನಾಟಕ ಕಾಲೇಜಿನ ಮುಖಂಡರು‌ಎಂದು ಜನ ಮಾನಸದ ಮುಂದೆ ಒತ್ತಿ ಒತ್ತಿ ಹೇಳಿದರು.ಇವೆಲ್ಲವು ಅರಟಾಳ ರುದ್ರಗೌಡ್ರರಿಗೆ ತಿಳಿದಿತ್ತು.

1912ರಲ್ಲಿ ಧಾರವಾಡದ ಮುನ್ಸಿಪಲ್ ಕಛೇರಿಯಲ್ಲಿ ಕರ್ನಾಟಕ ಕಾಲೇಜ್ ಸ್ಥಾಪನೆ ಕುರಿತು ಮುಂಬೈ ದಕ್ಷಿಣ ಬಾಗದ ಕಮೀಷನರ್ ಶೇಪರ್ಡ ,ರೂದ್ದ ಶ್ರೀನಿವಾಸ ,ಶಾಂತವೀರಪ್ಪ ಮೇಣಸಿನಕಾಯಿ ಅವರುಅವರು ಭಾಗವಹಿಸಿದ್ದರು.ಸಭೆಯಲ್ಲಿ ಮಾತನಾಡುವಾಗ ರೂದ್ದ ಶ್ರೀನಿವಾಸ ಅವರು ಅರಟಾಳ ರುದ್ರಗೌಡ್ರ ಮತ್ತು ಅವರ ಬೆಂಬಲಿಗರ ಸಹಾಯ ಕೋರಿದರು.ಮತ್ತು ಪತ್ರಿಕಾ ಜಾಹಿರಾತಿನಲ್ಲಿ ಒಪ್ಪಿಗೆ ಇಲ್ಲದೇ ಅರಟಾಳ ರುದ್ರಗೌಡ್ರ ಮತ್ತು ಮುಂತಾದವರ ಹೆಸರು ಬಳಸಿಕೂಂಡರು…ಹೆಸರು ಬಳಸಿಕೊಳ್ಳುವ ಉದ್ದೇಶವೆನೆಂದರೆ 2ಲಕ್ಷ64ಸಾವಿರ ರೂಪಾಯಿ ಕೂಡಿಸುವಲ್ಲಿ ಇವರನ್ನು ಕೆಲಸಕ್ಕೆ ಹಚ್ಚುವುದಾಗಿತ್ತು.ಅದರ ಜವಾಬ್ದಾರಿಯಲ್ಲಿ ಅರಟಾಳ ರುದ್ರಗೌಡ್ರ ಸಮ ಜವಾಬ್ದಾರಿ ಹೂಂದಿದ್ದಾರೆ ಎಂದು ಸಂದೇಶ ರವಾನಿಸುವುದಾಗಿತ್ತು.ತಾವು ಇ ಹಿಂದೇ ಎಲ್ಲ ಹಣವನ್ನು ತಾವೂಬ್ಬರೇ ಕೂಡಿಸಿಕೂಡುವುದಾಗಿ ಹೇಳಿದ್ದರು ಕಾರಣ ತಾವು ವಿಧಾನ ಪರಿಷತ್ ಸದಸ್ಯರಾಗಬೇಕಿತ್ತು.ಜಾಹಿರಾತಿನಲ್ಲಿ ಹೆಸರು ಬಳಸಿಕೂಂಡಿದ್ದಕ್ಕೆ ಸಾಕಷ್ಟು ಗಲಾಟೆಯಾಗಿ‌ ರೋದ್ದ ಶ್ರೀನಿವಾಸರಾಯರು ಕರ್ನಾಟಕವೃತ್ತ ಪತ್ರಿಕೆ ಮೂಲಕ ಕ್ಷಮೆ ಕೇಳಿದರು.

1913ರಲ್ಲಿ ಮುಂಬೈ ನ ಮಹಾಬಲೇಶ್ವರ ದಲ್ಲಿ ಮುಂಬೈ ಶಿಕಷಣ ಕಾಯ್ದೆ ಯ ಕೌನ್ಸಿಲ್ ಮೀಟಿಂಗ್ ಇತ್ತು.ಇದರಲ್ಲಿ ಧಾರವಾಡದ ಕಲೆಕ್ಟರ್ ಮೇಕನಾಕಿ ,ರೋದ್ದ ಶ್ರೀನಿವಾಸ, ದತ್ತೂಪಂತ ಬೆಳವಿ ಹಾಜರಿದ್ದರು.

ಇಲ್ಲಿ ರೂದ್ದ ಶ್ರೀನಿವಾಸ ಮತ್ತು ದತ್ತೂಪಂತ ಬೆಳವಿ ಕರ್ನಾಟಕ ಕಾಲೇಜ್ ಸ್ಥಾಪನೆಗೆ ಅರಟಾಳ ರುದ್ರಗೌಡ್ರ ಸಹಕಾರ ನೀಡುತ್ತಿಲ್ಲ ಎಂದು ಎತ್ತಿ ತೂರುವುದೇ ಆಗಿತ್ತು.ಇದೇ ರೀತಿಯಾಗಿ ಸಭೆ ಯಲ್ಲಿ ನಡೆದು ಹೋಯಿತು .ಸಭೆಯಲ್ಲಿ ಇದ್ದ h.c.hill ಸದಸ್ಯರು ಮುಂಬೈ ಎಕ್ಸಿಕ್ಯುಟಿವ್ ಕೌನ್ಸಿಲ್ ಇವರು ನಂಬಿಯೇ ಬಿಟ್ಟರು.ದಿನಾಂಕ 8/6/1913 ರಂದು ಧಾರವಾಡ ದಲ್ಲಿ ಜರುಗಿದ ಸಭೆಯಲ್ಲಿ ಅರಟಾಳ ರುದ್ರಗೌಡ್ರ h.c.hillರ ಮನಸ್ಸಿನಲ್ಲಿ ಇನ್ನೂಬ್ಬರಿಂದ ಪೂರ್ವಾಗ್ರಹ ಫೀಡಿತರಾದ ವಿಷಯವನ್ನು ತೆಗೆದು ಹಾಕಿದರು.

ಕಾಲೇಜು ಸ್ಥಾಪನೆಯ ಕುರಿತು ರೊದ್ದ ಶ್ರೀನಿವಾಸರ ಅಂತರಾಳದ ವಿಚಾರಗಳನ್ನು ಅರಟಾಳ ರುದ್ರಗೌಡ್ರ h.c.hillರ ಮುಂದೆ ತೆರದಿಟ್ಡರು. ಆಗ ಕಾಲೇಜು ಸ್ಥಾಪನೆಗೆ ರೋದ್ದ ಶ್ರೀನಿವಾಸ ಅವರು ತಮ್ಮ  ಸಮುದಾಯದಿಂದ ಒಂದು ಲಕ್ಷ ಅರಟಾಳ  ರುದ್ರಗೌಡ್ರ ತಾವು ಪ್ರತಿನಿದಿಸುವ  ಸಮುದಾಯದಿಂದ  ಒಂದು_ಲಕ್ಷ_ರೂಪಾಯಿ ಕೂಡಿಸುವ ಠರಾವನ್ನು ಅರಟಾಳ ರುದ್ರಗೌಡ್ರ ಸೂಚನೆ ಮೆರೆಗೆ h.c.hillರು ಒಪ್ಪಿ ನಿಯಮ ಮಾಡಿದರು.ಮತ್ತು ಅರಟಾಳರು ಒಂದು ಲಕ್ಷ ರೂಪಾಯಿಗಳನ್ನು ನಿಯಮಾನುಸಾರ ಕೂಡಿಸಿ ಕೂಡುವುದಾಗಿ h.c.hill ಅವರಿಗೆ ವಾಗ್ದಾನ ಮಾಡಿದರು..

ಅದೇ ದಿನ ಧಾರವಾಡ ತಾಲೂಕ ಪಂಚಾಯತ ನ ಹಳೆಯ ಕಟ್ಟಡ ದಲ್ಲಿ ಸಭೆಯನ್ನು h.c.hill ಅವರು ಕರೆದರು.ಅಲ್ಲಿ ರೊದ್ದರು ತಮ್ಮ ಸಮುದಾಯದಿಂದ ಒಂದು ಲಕ್ಷ,ಅರಟಾಳ ರುದ್ರಗೌಡ್ರ ತಮ್ಮ ಸಮುದಾಯದಿಂದ ಒಂದು ಲಕ್ಷ ಕೂಡಿಸಿ ಕೂಡಬೇಕು ಎಂದು ಹೇಳಿದರಲ್ಲದೆ ಅರಟಾಳರ ಬಗೆಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು.

ನಂತರ ಅರಟಾಳ ರುದ್ರಗೌಡ್ರ ಬೆಳಗಾವಿ ಜಿಲ್ಲೆಯಿಂದ  ದಿನಾಂಕ16/6/1913 ರಂದು ಉಪಜಿಲ್ಲಾದಿಕಾರಿ ಹುದ್ದೆಯಿಂದ ನಿವೃತ್ತರಾದರು. ನಂತರ ದಿನಾಂಕ 21/11/1913ರಂದು ಮೊದಲ ಕಂತಿನಲ್ಲಿ, ನಂತರ ದಿನಾಂಕ 13/6/1916ರಂದು ಎರಡನೇಯ ಕಂತಿನಲ್ಲಿ ಒಟ್ಟು ಒಂದು ಲಕ್ಷ ರೂಪಾಯಿಗಳನ್ನು ಸೇರಿಸಿ ಮಂಬೈ ಸರಕಾರದಲ್ಲಿ ಗೌರ್ನಮೆಂಟ ಪ್ರಾಮೀಸರಿ ನೋಟ್ಸ ರೂಪದಲ್ಲಿ ಹಣವನ್ನು ಸರಕಾರಕ್ಕೆ ಸಂದಾಯ ಮಾಡಿದರು.ಇದರಿಂದ ಆ ಹಣಕ್ಕೆ ಸಾಕಷ್ಟು  ಬಡ್ಡಿಹಣ ಬಂದಿತು.ಆ  ಬಡ್ಡಿ ಹಣವನ್ನು ಅರಟಾಳ ರುದ್ರಗೌಡ್ರ ಮತ್ತೂಂದು ಶಿಕ್ಷಣ ಸಂಸ್ಥೆ ಸ್ಥಾಪಿಸುವುದಕ್ಕೆ ವೀನಿಯೂಗಿಸಿದರು..‌ಆ ಕುರಿತು ಮತ್ತೂಂದು ವೀಶೆಷ ಅಂಕಣವನ್ನು ಮುಖಪುಟದಲ್ಲಿ ಪ್ರಕಟಿಸುವೆ.

ಆದರೆ ರೋದ್ದ ಶ್ರೀನಿವಾಸರು ಕೇವಲ ಇಪ್ಪತ್ತೆಳು ಸಾವಿರ ರೂಪಾಯಿ ಮಾತ್ರ ಕೂಡಿಸಿದ್ದರು…ಅದರಲ್ಲಿಯೂ ನಿಯಮಾವಳಿಗಳನ್ನು ಮೀರಿದ್ದರು..

ದಿನಾಂಕ 29/7/1913ರಂದು ಮುಂಬೈ ವಿಧಾನ ಪರಿಷತ ಸದಸ್ಯರಾದ ನಂತರ ರೊದ್ದರು ಮತ್ತು ದತ್ತೂಪಂತ ಬೆಳವಿಯವರು h.c.hillರವರು ಕರ್ನಾಟಕ ಕಾಲೇಜು ಸ್ಥಾಪನೆಗೆ ಹಾಕಿದ ನಿಯಮಾವಳಿಗಳನ್ನು ಖಂಡಿಸಿ ಮಾತನಾಡಿದರು.ರೊದ್ದ ಶ್ರೀನಿವಾಸ ಅವರು ಒಂದು ಲಕ್ಷ ಕೂಡಿಸಿ ಕೂಡುವುದಾಗಿ ಆಶ್ವಾಸನೆ ನಿಡಿ ಕೇವಲ  ಇಪ್ಪತೇಳು ಸಾವಿರ ಕೂಡಿಸಿದಾಗ ಕೂರತೆಯಾದ ಹಣವನ್ನೆಲ್ಲ ಅರಟಾಳ ರುದ್ರಗೌಡ್ರ ಸಂಗ್ರಹಿಸಿಕೂಟ್ಟರು.

ಹಾಗಾಗಿ ನಿಜವಾದ ಅರ್ಥದಲ್ಲಿ ಕರ್ನಾಟಕ_ಕಾಲೇಜ ಸ್ಥಾಪಕರೆಂದರೆ ಅರಟಾಳ ರುದ್ರಗೌಡ್ರು…
1916ರಲ್ಲಿ ಉತ್ತರ ಕರ್ನಾಟಕ ಮೊದಲ ಉನ್ನತ ಶಿಕ್ಣ ಸಂಸ್ಥೆ ಯಾಗಿ ಅರಟಾಳ ರುದ್ರಗೌಡ್ರ ಅವಿರತ ಯತ್ನದಿಂದ ಲೋಕಾರ್ಪಣೆಗೂಳ್ಳುವುದು..

ಆದರೆ ಆ ಮಹಾವಿದ್ಯಾಲಯದಲ್ಲಿ ಕಲಿಯುವ ಮತ್ತು ಪಾಠ ಮಾಡುವ ಅದೇಷ್ಟೂ ಸಿಬ್ಬಂದಿಗೆ ಇ ಮಾಹಿತಿ ಇಲ್ಲದೇ ಇರುವುದು ಖೇದಕರ.

ಲೇಖನ: ಮಹೇಶ ನೀಲಕಂಠ ಚನ್ನಂಗಿ.
ಪ್ರೌಡಶಾಲಾ ಮುಖ್ಯಶಿಕ್ಷಕರು.

ಚನ್ನಮ್ಮನ ‌ಕಿತ್ತೂರು.

About Shivanand

Admin : Lingayat Kranti Monthly news paper 8884000008 [email protected]

Check Also

ಹಸಿರುಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಶ್ರೀ ಕಲ್ಯಾಣರಾವ್ ಜಿ ಮುಚಳಂಬಿ ಲಿಂಗೈಕ್ಯ

ಬೆಳಗಾವಿ: ರೈತ ಚಳವಳಿಗಳಿಗಳ ಮುಂಚೂಣಿ ನಾಯಕ, ಹಸಿರು ಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಕಲ್ಯಾಣರಾವ್ ಗುರಬಸಪ್ಪ ಮುಚಳಂಬಿಯವರು ಅವರು ಬೆಳಗಾವಿ …

ನೂತನ ಸಂಸತ್ ಭವನಕ್ಕೆ ಅನುಭವ ಮಂಟಪ ಎಂದು ಹೆಸರಿಡಲು ನಿಜಗುಣಾನಂದ ಸ್ವಾಮೀಜಿ ಒತ್ತಾಯ

ಬೈಲೂರು: ದೆಹಲಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸಂಸತ್ ಭವನಕ್ಕೆ “ಅನುಭವ ಮಂಟಪ” ಎಂದು ನಾಮಕರಣ ಮಾಡಬೇಕು ಎಂದು ಬೈಲೂರು ನಿಷ್ಕಲ ಮಂಟಪದ …

ಅಕ್ಟೋಬರ್ 3ರಂದು “ಶಿವಬಸವ ಕಾರುಣ್ಯ” ದ ಗುರು ಪ್ರವೇಶ

ಲಿಂಗಾಯತ ಕ್ರಾಂತಿ: ಉತ್ತರಕನ್ನಡ ಜಿಲ್ಲೆ ಹಳಿಯಾಳದ ಅಂಗಡಿ ಕುಟುಂಬದ ನೂತನ ಮನೆ “ಶಿವಬಸವ ಗುರುಕಾರುಣ್ಯ” ದ ಗುರು ಪ್ರವೇಶವು ಅಕ್ಟೋಬರ್ …

ಅಕ್ಕನ ಸಮರ್ಪಣಾ ಭಾವ

ಭಾರತೀಯ ಭಕ್ತಿ ಸಾಹಿತ್ಯದ ಚರಿತ್ರೆಯಲ್ಲಿ ಅಕ್ಕಮಹಾದೇವಿ ಒಬ್ಬ ವಿಶಿಷ್ಟ ಸಾಧಕಿ, ಯೋಗಿಣಿಯಾಗಿ ಕಂಡುಬರುತ್ತಾಳೆ. ಆಕೆಯ ಪ್ರೀತಿ ಪ್ರೇಮ ವಿನೂತನ ವಿಸ್ಮಯದ …

ಪ್ರಭು ಚನ್ನಬಸವ ಸ್ವಾಮೀಜಿ ವಿರಚಿತ ಮಹಾತ್ಮರ ಚರಿತಾಮೃತ ಗ್ರಂಥ ಲೋಕಾರ್ಪಣೆ

ಬೆಂಗಳೂರು: ಬೆಳಗಾವಿ ಜಿಲ್ಲೆಯ ಅಥಣಿಯ ಶ್ರೀ ಮೋಟಗಿ ಮಠ ಬೆಂಗಳೂರಿನಲ್ಲಿ ಆಯೋಜಿಸಿದ್ದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ (ಅಥಣೀಶ) ವಿರಚಿತ …

ರಂಭಾಪುರಿ ಶ್ರೀಗಳು ಢೋಂಗಿತನ ಬಿಡಲಿ

ತಮ್ಮ ಸ್ವಾರ್ಥಕ್ಕೆ ಪಂಚಪೀಠಗಳನ್ನು ಒಡೆದು ಆಳುವ ನೀತಿ ಅನುಸರಿಸುತ್ತಿರುವ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಬೇರೆಯವರನ್ನು …

“ವೇದಕ್ಕೆ ಒರೆಯ ಕಟ್ಟುವೆ” – ಕೃತಿ ಲೋಕಾರ್ಪಣೆ

ಲಿಂಗಾಯತರಿಗೆ ಲಿಂಗಾಯತ ಧರ್ಮದ ಇತಿಹಾಸವೇ ಗೊತ್ತಿಲ್ಲದಿರುವುದು ದೊಡ್ಡ ದುರಂತ ಲಿಂಗಾಯತ ಧರ್ಮೀಯರು ವೈದಿಕ ಆಚರಣೆಯ ಸೆಳೆತಕ್ಕೆ ಸಿಲುಕಿಕೊಂಡಿದ್ದಾರೆ. ಡಾ.ಜೆ.ಎಸ್.ಪಾಟೀಲರ ” …

“ಲಿಂಗಾನಂದರ ವಚನಧರ್ಮ ಚಳುವಳಿಗೆ” ಡಾಕ್ಟರೇಟ್ ಪದವಿ

ಲಿಂಗಾಯತ ಕ್ರಾಂತಿ : ಸುಮಾರು 50 ವರ್ಷಗಳಾಚೆಯ ನೈಜ ಬಸವತತ್ವ ಪ್ರಸಾರ, ಶರಣಧರ್ಮದ ವೈಚಾರಿಕ ಚಿಂತನೆಗಳನ್ನು ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ …

“ಅವಕಾಶ ವಂಚಿತರಿಗೆ ಬೆಳಕಾದ ಸಜ್ಜನ ರಾಜಕಾರಣಿ ಸಿದ್ದಪ್ಪ ಕಂಬಳಿಯವರು”

ರಾಜಕೀಯ ಇತಿಹಾಸದಲ್ಲಿ ಮೈಲಿಗಲ್ಲು ಸಾಧಿಸಿದ ಕರ್ನಾಟಕ ಮಹಾಪುರುಷ ಶರಣ ಸಿದ್ದಪ್ಪ ಕಂಬಳಿಯವರು. ಶಾಲಾ ಕಾಲೇಜುಗಳ ತೊರೆದು ಕೋರ್ಟ್ ಕಛೇರಿ ಬಹಿಷ್ಕಾರ …

ಸೆಪ್ಟೆಂಬರ್ 25ರಂದು ಮಹಾತ್ಮರ ಚರಿತಾಮೃತ ಗ್ರಂಥ ಬಿಡುಗಡೆ: ಪೂಜ್ಯ ನಿಜಗುಣಾನಂದ ಶ್ರೀಗಳು

ಬೆಳಗಾವಿ: ಭಾರತ ಬಹುತ್ವದ ಭಾರತಕ್ಕೆ ಧಾರ್ಮಿಕ ಗ್ರಂಥವಾಗಿ ಮಹಾತ್ಮರ ಚರಿತಾಮೃತ ಅಥಣಿಯ ಪ್ರಭು ಚನ್ನಬಸವ ಸ್ವಾಮೀಜಿ ಗ್ರಂಥ ರಚಿಸಿದ್ದಾರೆ ಎಂದು …

“ನೊಬೆಲ್” ಎಂಬ ಮನುಕುಲದ ದ್ರುವತಾರೆ…🌟

ನೂರು ವರ್ಷಗಳ ಹಿಂದೆ ಒಬ್ಬ ಉದ್ಯಮಿ ಬೆಳಗಿನ ಕಾಫ಼ಿ ಸೇವಿಸುತ್ತ ಅಂದಿನ ದಿನಪತ್ರಿಕೆಯೊಂದನ್ನ ಕೈಗೆತ್ತಿಕೊಂಡು ಓದಲು ಪ್ರಾರಂಭಿಸುತ್ತಾನೆ. ಅದರಲ್ಲಿನ ಒಂದು …

ಸಂಸ್ಕೃತಿ & ಸಂಸ್ಕಾರಗಳ ಬೆನ್ನೇರಿದ ಯುವ ಸನ್ಯಾಸಿಗಳು : ಪೂಜ್ಯಶ್ರೀ ನಿಜಗುಣಾನಂದ ಮಹಾಸ್ವಾಮಿಗಳು

ಬೈಲೂರ: ತಮ್ಮ ಯೌವ್ವನದಲ್ಲಿ ಧರ್ಮದ ಕಂಕಣ ಕಟ್ಟಿಕೊಂಡು‌ ನಿಂತ ಯುವ ಸನ್ಯಾಸಿಗಳ ನೋಡಿದರೆ ತುಂಬ ಸಂತೋಷವಾಗುತ್ತದೆ ಜೊತೆಗೆ ಜೀವನ ಸಾರ್ಥಕವಾಯಿತು …

ಪ್ರತ್ಯೇಕ ಧರ್ಮ ಅಲ್ಪಸಂಖ್ಯಾತ ಮಾನ್ಯತೆ ಸಿಕ್ಕಿದ್ದರೆ, ಲಿಂಗಾಯತ ಉಪಪಂಗಡಗಳು ಮೀಸಲಾತಿ ಕೇಳುವ ಪ್ರಸಂಗವೇ ಬರುತ್ತಿರಲಿಲ್ಲ: ಎಂ ಬಿ ಪಾಟೀಲ

ಬೆಂಗಳೂರು: ಮಾಜಿ ಸಚಿವರು ಮತ್ತು ಶಾಸಕರಾದ ಶ್ರೀ ಎಂ.ಬಿ.ಪಾಟೀಲ ಅವರು ಬೆಂಗಳೂರಿನ ಸದಾಶಿವ ನಗರದ ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯನ್ನು …

ಸೋಹಂ ಎಂದೆನಿಸದೇ ದಾಸೋಹಂ ಎಂದೆನಿಸಯ್ಯ..

ಮೊದಲು ಮೂರು ನೀತಿಕಥೆಗಳನ್ನು ನೊಡೋಣ ಆನಂತರ ವಿಷಯಕ್ಕೆ ಬರೋಣ.ಬೆಳಗಿನ ಜಾವ ಯಾರೋ ಒಬ್ಬರು ಸಮುದ್ರ ತೀರದಲ್ಲಿ ವಾಯುವಿಹಾರ ಮಾಡುತ್ತಿದ್ದರು. ಅಂದು …

ಹಗಲಿನಲ್ಲಿಯೆ ಸಂಜೆಯಾಯಿತು ಒಂದು ಐತಿಹಾಸಿಕ ನಿರೂಪಣೆ: ಡಾ.ಸಿದ್ಧನಗೌಡ ಪಾಟೀಲ

ಸಾಹಿತಿ ಮತ್ತು ಲಿಂಗೈಕ್ಯ ಪೂಜ್ಯ ತೋಂಟದ ಸಿದ್ಧಲಿಂಗಶ್ರೀಗಳ ಒಡನಾಡಿ ಶಿಷ್ಯರಾದ ಸಿದ್ದು ಯಾಪಲಪರವಿ ಅವರು ಬರೆದ ಹಗಲಿನಲ್ಲಿಯೆ ಸಂಜೆಯಾಯಿತು ಕೃತಿ …

Leave a Reply

Your email address will not be published. Required fields are marked *