Home / featured / ಹೇ ಬಸವರಸಾ ನೀವು ಬಂದ ಕಾರ್ಯಕ್ಕೆ ಹಳಕಟ್ಟಿಯವರೂ ಬಂದರಯ್ಯಾ

ಹೇ ಬಸವರಸಾ ನೀವು ಬಂದ ಕಾರ್ಯಕ್ಕೆ ಹಳಕಟ್ಟಿಯವರೂ ಬಂದರಯ್ಯಾ

ನಿಜ ಲಿಂಗಾಯತನ ಮನೆಯಲ್ಲಿ ದೇವರ ಜಗುಲಿ ಇರುವುದಿಲ್ಲ . ಬದಲಿಗೆ ಶರಣರ ಪರುಷ ಕಟ್ಟೆ ಇರುತ್ತದೆ.

ಅದೇ ರೀತಿ ನಿಜ ಲಿಂಗಾಯತರು ಯಾವುದೇ ಹಬ್ಬ ಹರಿದಿನಗಳನ್ನು‌ ಆಚರಿಸುವಂತಿಲ್ಲ. ಬದಲಿಗೆ ಶರಣರ ಜಯಂತಿಗಳನ್ನಷ್ಟೇ ಆಚರಣೆಗೆ ತಕ್ಕವುಗಳು.

ಶಿವರಾತ್ರಿ ದಸರಾ ದೀಪಾವಳಿ ಹುಣ್ಣಿಮೆ ಅಮವಾಸೆಗಳು ಸೋಮುವಾರ ಮಂಗಳವಾರಗಳೆಂಬಿತ್ಯಾದಿ ಮೊಂಡ ಮೋಜಿನ ಹಬ್ಬಗಳಿಗೆಲ್ಲ ಬಂಡೆದ್ದು ಕುಣಿದು ಕುಪ್ಪಳಿಸಿ ಸೊಡರಿಕ್ಕಿ ಹೊಟ್ಟೆ ಹೊರೆಯುವ ಉದ್ದಂಡವಾದಿ ಕಂಡ ಕಂಡ ಭವಿಗಳನ್ನೆನಗೆ ತೋರದಿರಯ್ಯಾ ಎಂಬ ಶರಣವಾಣಿಯಂತೆ

ನಮಗೆ ಹಬ್ಬಗಳಿಲ್ಲ. ನಮಗೇನಿದ್ದರು ಮಹಾಂತರ ನೆನೆವ ಜಯಂತಿಗಳಂತಹ‌ ಶರಣರದಿನಗಳ ಅರ್ಥಪೂರ್ಣವಾಗಿ ಆಚರಿಸುವಿಕೆ. ಅಪ್ಪನ ಜಯಂತಿಯ ಸಡಗರ. ಶರಣರು ಸೇರುವ ಸಭೆ ಸಮಾರಂಭ ಮೇಳ ಪರ್ವಗಳು ಉತ್ಸವಗಳು‌ ನಮಗೆ ಅತ್ಯಂತ ವಿಶೇಷವಾದ ದಿನಗಳಾಗಿರುತ್ತವೆ.

ಇಂತಪ್ಪ ಆಚರಣೆಗಳಲ್ಲಿ ನಮಗೆ ಇಂದೂ ‌ಸಹಾ ಒಂದು ವಿಷೇಶವಾದ ದಿನ ..

ಶರಣರ ಪರುಷನುಡಿಗಳ ಹರುಷದಿಂ ಸಂಗ್ರಹಿಸಿ ನಿಜಾನಂದವನು ಹೊಂದಿ

ಸ್ವಂತದ್ದು ಎಂಬುದನೆಲ್ಲವನು ಸಂತಸದಿ ಸಂತೆಯೊಳಗಿಟ್ಟು, ಗುಟ್ಟಾಗಿ ಅಡಗಿದ್ದ
ಗಟ್ಟಿ ಪದಗಳ ವಚನಗಳ ಎದೆತಟ್ಟಿ , ಬೆನ್ನಿಗೆ‌ ಬಟ್ಟೆಯ ಕಟ್ಟಿ

ಸಂದಿಯೋಳ್ ಗೊಂದಿಯೋಳ್ ಮಂದಿಯಾ ಮನೆಗಳೋಳ್ ಬಂದುಗಳೊಳಗೆಲ್ಲ ಕಂದೀಲು‌ ಇಲ್ಲದಲೇ ಸದ್ದಡಗಿ ಕುಳಿತಿದ್ದ ವಚನ ಸಗ್ಗದ ಸಿರಿಯ ಸದ್ದಿಲ್ಲದಂತಲೇ ಹೊರತಂದ ತಂದೆ

ಬಂದನು ಭುವಿಗಿಂದು ಬಸವಬಂದ ಕಾರ್ಯವನು ಪೂರ್ಣಗೊಳಿಸಲೆಂದು

ಬೆಂದನು ಬಸವಪ್ಪನ ವಚನಗಳ ಸ್ಥಿತಿಕಂಡು
ನಿಂದನು ತನ್ನ ಸರ್ವವನ್ನೆಲ್ಲವನು‌ ಇಲ್ಲವಾಗಿಸುತ.

ಕಂದನಂತಲೇ ಮನೆ ಮನೆಗೆ‌ ಓಡಾಡಿ ಅತ್ತು ಕರೆದು ಮುದ್ದಿಸಿ ತಿದ್ದಿ‌ತೀಡಿ ಕಾಡಿ ಬೇಡಿ ಅಡಗಿದ್ದ ನಿಧಿಯನ್ನು ಪಡೆಯುವಾ ತವಕದಲಿ.

ಕಂದಿದವು ದೇಹ,ಭೌತಿಕದ ಆಸ್ತಿಗಳೆಂಬ ಸಿರಿಯು , ಚೈತನ್ಯವಾಗಿತ್ತು ಆಧ್ಯಾತ್ಮಿಕದಾ ಒಳಸಿರಿಯು.

ನೊಂದರೂ ಬೆಂದರೂ ಬಡತನವು ತಮ್ಮನ್ನೇ ಕೊಂದರೂ ಬಿಡಲಿಲ್ಲ ಬಸವ ಪರುಷದ ನುಡಿಗಳ ಒಕ್ಕಣಿಸುವ ಕಾರ್ಯಾ.

ನಿಂದರು ಬಸವನಾ ನಿಜ ಮಗನಾಗಿ , ನಮಗೆಲ್ಲ ಜೀವ ಚೈತನ್ಯವಾ ತುಂಬಿದಾ ನಿಜನಿಧಿಯಾಗಿ.

ಇಂತಪ್ಪ ಪರಂಜ್ಯೋತಿ, ತ್ಯಾಗದಾ ಜೀವ, ಮಾತೃ ಹೃದಯಿ,ಬಸವಪ್ಪನೇ ಕಳುಹಿಸಿದ ಕರುನಾಳ ಜೀವ ನಮಗಾಗಿ ಬಂದ ದಿನವಿಂದು

ಈ ದಿನ ನಮ್ಮನ್ನುದ್ದರಿಸಲು ಬಂದ ತ್ಯಾಗಿಯ ದಿನ
ಈ ದಿನ ಹೊಗಳಿಕೆಗೆ ನಿಲುಕದಾ ನಿಜನಿಧಿಯ ದಿನ.

ನನ್ನಂತ ಹಸುಕಂದಮ್ಮಗಳಿಗಾಗಿ ವಚನ ಸಿರಿಯ ಸಂಗ್ರಹಿಸಿ ದಾಸೋಹಗೈದ ಮಹಾ ದಾಸೋಹಿಯು ಹುಟ್ಟಿದಾ ದಿನ..

ಹೇ ಹಳಕಟ್ಟಿ ಅಜ್ಜಾ ಇಲ್ಲಿ ನನ್ನ ಮಾತ ಕೇಳು,
ನೀವು ಏನ ನೆನೆದು ಈ ಕಾರ್ಯ ಮಾಡಿದಿರೋ ಅದು ಅಂದು ಅಪ್ಪ ಚನ್ನಬಸವಾದಿ ಶರಣರೂ ನೆನೆದಿದ್ದರು ಎಂಬುದ ನಾವೆಲ್ಲರೂ ಬಲ್ಲೆವು.

ಇದೋ ನೋಡಿ ನಮ್ಮ ನಾಡು ಈಗಾಗಲೇ ವಚನ ಸುಧೆಯನು ಒತ್ತು ವೈಚಾರಿಕವಾಗಿ ಎಷ್ಟು ಗಟ್ಟಿತನದಿ ನಡೆಯುತ್ತಿದೆ..

ನಿವಚ್ಚಿದ ಜ್ಯೋತಿ #ಲಿಂಗಾನಂದವೆಂಬ ಅಪ್ಪಗಳ ಮೂಲಕ ಬೆಳಗಿ ತೊಳಗಿ ಪ್ರಕಾಶಮಾನವಾಗುತ್ತಿದೆ.

ಇಲ್ಲೊಮ್ಮೆ ನೋಡಿ .. ನನ್ನಂತ ಕಂದಮ್ಮಗಳ ಪ್ರತಿ ರಕ್ತದ ಕಣ ಕಣಗಳಲ್ಲೂ ಬಸವಪ್ಪನಾ ನಿಜನಿಲುವು ನೆಲೆಗೊಳ್ಳುತ್ತಿದೆ.

ಅಂದು ನೀವು ವಚನಗಳ ಮುದ್ರಿಸಲು ಪಟ್ಟ ಕಷ್ಟದ ಪ್ರತಿಫಲವೇನೋ ಎಂಬಂತೆ ಇಂದು ಪ್ರತಿ ದಿನವೂ ಅವುಗಳ ಮುದ್ರಣ . ನಿರ್ವಚನ . ಪ್ರವಚನಗಳು ಎಲ್ಲೆಲ್ಲೂ ನಡೆದಿವೆ.

ಸಾವಿರಾರು ಮುಖಪುಟ ವಾಟ್ಸಪ್‌ಗಳಂತ ಸಾಮಾಜಿಕ ತಾಣಗಳು ಪ್ರತಿ ದಿನವೂ ನಿಮ್ಮ ಕನಸಿನತ್ತ ಹೆಜ್ಜೆಯನ್ನಿಕ್ಕುತ್ತಿವೆ.

ಇದೇ ಕಾರಣಕ್ಕಲ್ಲವೇ ನೀವು ಬಸವಾದಿ ಶರಣರ ಅಣತೆಯ ಹೊತ್ತು ಬಂದಿದ್ದು..?

ನಿಮ್ಮನ್ನು ಪಡೆದ ನಾವುಗಳು ಧನ್ಯರು ಅಜ್ಜಾ ಧನ್ಯರು

ನಿಮ್ಮೆಲ್ಲರಿಗೂ ಫ ಗು ಹಳಕಟ್ಟಿ ಅಜ್ಜನ ಜಯಂತಿಯ ಶರಣು ಶರಣಾರ್ಥಿಗಳು.

ದೀಪ್ತಿ ಎಸ್ ಪಾಟೀಲ್ (ವಿಧ್ಯಾರ್ಥಿನಿ)
ಬಸವ ಪ್ರಿಯಳು.
Deepthi S Patil

About Shivanand

Admin : Lingayat Kranti Monthly news paper 8884000008 [email protected]

Check Also

ಹಸಿರುಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಶ್ರೀ ಕಲ್ಯಾಣರಾವ್ ಜಿ ಮುಚಳಂಬಿ ಲಿಂಗೈಕ್ಯ

ಬೆಳಗಾವಿ: ರೈತ ಚಳವಳಿಗಳಿಗಳ ಮುಂಚೂಣಿ ನಾಯಕ, ಹಸಿರು ಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಕಲ್ಯಾಣರಾವ್ ಗುರಬಸಪ್ಪ ಮುಚಳಂಬಿಯವರು ಅವರು ಬೆಳಗಾವಿ …

ನೂತನ ಸಂಸತ್ ಭವನಕ್ಕೆ ಅನುಭವ ಮಂಟಪ ಎಂದು ಹೆಸರಿಡಲು ನಿಜಗುಣಾನಂದ ಸ್ವಾಮೀಜಿ ಒತ್ತಾಯ

ಬೈಲೂರು: ದೆಹಲಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸಂಸತ್ ಭವನಕ್ಕೆ “ಅನುಭವ ಮಂಟಪ” ಎಂದು ನಾಮಕರಣ ಮಾಡಬೇಕು ಎಂದು ಬೈಲೂರು ನಿಷ್ಕಲ ಮಂಟಪದ …

ಅಕ್ಟೋಬರ್ 3ರಂದು “ಶಿವಬಸವ ಕಾರುಣ್ಯ” ದ ಗುರು ಪ್ರವೇಶ

ಲಿಂಗಾಯತ ಕ್ರಾಂತಿ: ಉತ್ತರಕನ್ನಡ ಜಿಲ್ಲೆ ಹಳಿಯಾಳದ ಅಂಗಡಿ ಕುಟುಂಬದ ನೂತನ ಮನೆ “ಶಿವಬಸವ ಗುರುಕಾರುಣ್ಯ” ದ ಗುರು ಪ್ರವೇಶವು ಅಕ್ಟೋಬರ್ …

ಅಕ್ಕನ ಸಮರ್ಪಣಾ ಭಾವ

ಭಾರತೀಯ ಭಕ್ತಿ ಸಾಹಿತ್ಯದ ಚರಿತ್ರೆಯಲ್ಲಿ ಅಕ್ಕಮಹಾದೇವಿ ಒಬ್ಬ ವಿಶಿಷ್ಟ ಸಾಧಕಿ, ಯೋಗಿಣಿಯಾಗಿ ಕಂಡುಬರುತ್ತಾಳೆ. ಆಕೆಯ ಪ್ರೀತಿ ಪ್ರೇಮ ವಿನೂತನ ವಿಸ್ಮಯದ …

ಪ್ರಭು ಚನ್ನಬಸವ ಸ್ವಾಮೀಜಿ ವಿರಚಿತ ಮಹಾತ್ಮರ ಚರಿತಾಮೃತ ಗ್ರಂಥ ಲೋಕಾರ್ಪಣೆ

ಬೆಂಗಳೂರು: ಬೆಳಗಾವಿ ಜಿಲ್ಲೆಯ ಅಥಣಿಯ ಶ್ರೀ ಮೋಟಗಿ ಮಠ ಬೆಂಗಳೂರಿನಲ್ಲಿ ಆಯೋಜಿಸಿದ್ದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ (ಅಥಣೀಶ) ವಿರಚಿತ …

ರಂಭಾಪುರಿ ಶ್ರೀಗಳು ಢೋಂಗಿತನ ಬಿಡಲಿ

ತಮ್ಮ ಸ್ವಾರ್ಥಕ್ಕೆ ಪಂಚಪೀಠಗಳನ್ನು ಒಡೆದು ಆಳುವ ನೀತಿ ಅನುಸರಿಸುತ್ತಿರುವ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಬೇರೆಯವರನ್ನು …

“ವೇದಕ್ಕೆ ಒರೆಯ ಕಟ್ಟುವೆ” – ಕೃತಿ ಲೋಕಾರ್ಪಣೆ

ಲಿಂಗಾಯತರಿಗೆ ಲಿಂಗಾಯತ ಧರ್ಮದ ಇತಿಹಾಸವೇ ಗೊತ್ತಿಲ್ಲದಿರುವುದು ದೊಡ್ಡ ದುರಂತ ಲಿಂಗಾಯತ ಧರ್ಮೀಯರು ವೈದಿಕ ಆಚರಣೆಯ ಸೆಳೆತಕ್ಕೆ ಸಿಲುಕಿಕೊಂಡಿದ್ದಾರೆ. ಡಾ.ಜೆ.ಎಸ್.ಪಾಟೀಲರ ” …

“ಲಿಂಗಾನಂದರ ವಚನಧರ್ಮ ಚಳುವಳಿಗೆ” ಡಾಕ್ಟರೇಟ್ ಪದವಿ

ಲಿಂಗಾಯತ ಕ್ರಾಂತಿ : ಸುಮಾರು 50 ವರ್ಷಗಳಾಚೆಯ ನೈಜ ಬಸವತತ್ವ ಪ್ರಸಾರ, ಶರಣಧರ್ಮದ ವೈಚಾರಿಕ ಚಿಂತನೆಗಳನ್ನು ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ …

“ಅವಕಾಶ ವಂಚಿತರಿಗೆ ಬೆಳಕಾದ ಸಜ್ಜನ ರಾಜಕಾರಣಿ ಸಿದ್ದಪ್ಪ ಕಂಬಳಿಯವರು”

ರಾಜಕೀಯ ಇತಿಹಾಸದಲ್ಲಿ ಮೈಲಿಗಲ್ಲು ಸಾಧಿಸಿದ ಕರ್ನಾಟಕ ಮಹಾಪುರುಷ ಶರಣ ಸಿದ್ದಪ್ಪ ಕಂಬಳಿಯವರು. ಶಾಲಾ ಕಾಲೇಜುಗಳ ತೊರೆದು ಕೋರ್ಟ್ ಕಛೇರಿ ಬಹಿಷ್ಕಾರ …

ಸೆಪ್ಟೆಂಬರ್ 25ರಂದು ಮಹಾತ್ಮರ ಚರಿತಾಮೃತ ಗ್ರಂಥ ಬಿಡುಗಡೆ: ಪೂಜ್ಯ ನಿಜಗುಣಾನಂದ ಶ್ರೀಗಳು

ಬೆಳಗಾವಿ: ಭಾರತ ಬಹುತ್ವದ ಭಾರತಕ್ಕೆ ಧಾರ್ಮಿಕ ಗ್ರಂಥವಾಗಿ ಮಹಾತ್ಮರ ಚರಿತಾಮೃತ ಅಥಣಿಯ ಪ್ರಭು ಚನ್ನಬಸವ ಸ್ವಾಮೀಜಿ ಗ್ರಂಥ ರಚಿಸಿದ್ದಾರೆ ಎಂದು …

“ನೊಬೆಲ್” ಎಂಬ ಮನುಕುಲದ ದ್ರುವತಾರೆ…🌟

ನೂರು ವರ್ಷಗಳ ಹಿಂದೆ ಒಬ್ಬ ಉದ್ಯಮಿ ಬೆಳಗಿನ ಕಾಫ಼ಿ ಸೇವಿಸುತ್ತ ಅಂದಿನ ದಿನಪತ್ರಿಕೆಯೊಂದನ್ನ ಕೈಗೆತ್ತಿಕೊಂಡು ಓದಲು ಪ್ರಾರಂಭಿಸುತ್ತಾನೆ. ಅದರಲ್ಲಿನ ಒಂದು …

ಸಂಸ್ಕೃತಿ & ಸಂಸ್ಕಾರಗಳ ಬೆನ್ನೇರಿದ ಯುವ ಸನ್ಯಾಸಿಗಳು : ಪೂಜ್ಯಶ್ರೀ ನಿಜಗುಣಾನಂದ ಮಹಾಸ್ವಾಮಿಗಳು

ಬೈಲೂರ: ತಮ್ಮ ಯೌವ್ವನದಲ್ಲಿ ಧರ್ಮದ ಕಂಕಣ ಕಟ್ಟಿಕೊಂಡು‌ ನಿಂತ ಯುವ ಸನ್ಯಾಸಿಗಳ ನೋಡಿದರೆ ತುಂಬ ಸಂತೋಷವಾಗುತ್ತದೆ ಜೊತೆಗೆ ಜೀವನ ಸಾರ್ಥಕವಾಯಿತು …

ಪ್ರತ್ಯೇಕ ಧರ್ಮ ಅಲ್ಪಸಂಖ್ಯಾತ ಮಾನ್ಯತೆ ಸಿಕ್ಕಿದ್ದರೆ, ಲಿಂಗಾಯತ ಉಪಪಂಗಡಗಳು ಮೀಸಲಾತಿ ಕೇಳುವ ಪ್ರಸಂಗವೇ ಬರುತ್ತಿರಲಿಲ್ಲ: ಎಂ ಬಿ ಪಾಟೀಲ

ಬೆಂಗಳೂರು: ಮಾಜಿ ಸಚಿವರು ಮತ್ತು ಶಾಸಕರಾದ ಶ್ರೀ ಎಂ.ಬಿ.ಪಾಟೀಲ ಅವರು ಬೆಂಗಳೂರಿನ ಸದಾಶಿವ ನಗರದ ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯನ್ನು …

ಸೋಹಂ ಎಂದೆನಿಸದೇ ದಾಸೋಹಂ ಎಂದೆನಿಸಯ್ಯ..

ಮೊದಲು ಮೂರು ನೀತಿಕಥೆಗಳನ್ನು ನೊಡೋಣ ಆನಂತರ ವಿಷಯಕ್ಕೆ ಬರೋಣ.ಬೆಳಗಿನ ಜಾವ ಯಾರೋ ಒಬ್ಬರು ಸಮುದ್ರ ತೀರದಲ್ಲಿ ವಾಯುವಿಹಾರ ಮಾಡುತ್ತಿದ್ದರು. ಅಂದು …

ಹಗಲಿನಲ್ಲಿಯೆ ಸಂಜೆಯಾಯಿತು ಒಂದು ಐತಿಹಾಸಿಕ ನಿರೂಪಣೆ: ಡಾ.ಸಿದ್ಧನಗೌಡ ಪಾಟೀಲ

ಸಾಹಿತಿ ಮತ್ತು ಲಿಂಗೈಕ್ಯ ಪೂಜ್ಯ ತೋಂಟದ ಸಿದ್ಧಲಿಂಗಶ್ರೀಗಳ ಒಡನಾಡಿ ಶಿಷ್ಯರಾದ ಸಿದ್ದು ಯಾಪಲಪರವಿ ಅವರು ಬರೆದ ಹಗಲಿನಲ್ಲಿಯೆ ಸಂಜೆಯಾಯಿತು ಕೃತಿ …

Leave a Reply

Your email address will not be published. Required fields are marked *