Home / featured / ಶರಣರು ಸಕಲ ಭ್ರಮಾತೀತರು

ಶರಣರು ಸಕಲ ಭ್ರಮಾತೀತರು

ಈ ನೆಲದಲ್ಲಿ ಅನೇಕ ಬಗೆಯ ವಿಚಾರಧಾರೆಗಳುˌ ಧಾರ್ಮಿಕ ನಂಬಿಕೆಗಳುˌ ಸಾಧನಾ ಮಾರ್ಗಗಳು ಪ್ರತಿಪಾದಿಸಲ್ಪಟ್ಟಿವೆ. ಕಾಲಕಾಲಕ್ಕೆ ಹಳೆ ವಿಚಾರಗಳನ್ನು ಅಲ್ಲಗಳೆದು ಹೊಸ ವಿಚಾರಗಳು ಹುಟ್ಟಿಕೊಂಡಿವೆ. ಪ್ರತಿಯೊಂದು ಮಾರ್ಗಗಳಲ್ಲೂ ಒಂದಲ್ಲ ಒಂದು ನ್ಯೂನ್ಯತೆ ಇದ್ದೆ ಇದೆ. ಈ ಎಲ್ಲ ಮಾರ್ಗಗಳಿಗೆ ಪರ್ಯಾಯವಾಗಿ ಹನ್ನೆರಡನೇ ಶತಮಾನದಲ್ಲಿ ಹುಟ್ಟಿಕೊಂಡದ್ದೆ ಶರಣರ ಅನುಭಾವ ಮಾರ್ಗ. ಪ್ರಸ್ತುತ ಸಾಧನಾ ಮಾರ್ಗಗಳೊಳಗಿನ ಎಲ್ಲ ನ್ಯೂನ್ಯತೆಗಳನ್ನು ನೀಗಿ ಯಾವೊಂದು ಚೌಕಟ್ಟಿಗೂ ಒಳಪಡದೆ ಗುರುತಿಸಿಕೊಂಡದ್ದೆ ಶರಣರ ಅನುಭಾವ ಮಾರ್ಗವೆಂದು ಚೆನ್ನಬಸವಣ್ಣನವರು ಬಹು ಮಾರ್ಮಿಕವಾಗಿ ಈ ಕೆಳಗಿನ ವಚನದಲ್ಲಿ ಪ್ರತಿಪಾದಿಸಿದ್ದಾರೆ :

” ಆನು ನೀನು, ಅರಿದೆ ಮರೆದೆ,
ಅಳಿದೆನುಳಿದೆನೆಂಬ ಸಂಶಯ ಭ್ರಮೆ,
ಅತತ್ವ ತತ್ವವಿವೇಕ ಭ್ರಮೆ,
ಮೂಲ ಸ್ಥೂಲ ಸೂಕ್ಷ್ಮ ವಿಪರೀತ ಭ್ರಮೆ,
ಪುಣ್ಯಪಾಪ ಸ್ವರ್ಗ ನರಕ
ಬಂಧಮೋಕ್ಷ ಪ್ರವರ್ತಕ ನಿವರ್ತಕ.
ಆದಿಯಾದ ಸಪ್ತಕರ್ಮ ಬಂಧ ಭ್ರಮೆ,
ಹುಸಿಜೀವ ಪರಮನೈಕ್ಯ ಸಂಧಾನ ಭ್ರಮೆ,
ಯೋಗದಾಸೆ ಸಿಲುಕು ಭ್ರಮೆ,
ಅಂತರ್ಮುಖ ಭ್ರಮೆ,
ಬಹಿರ್ಮುಖ ಭ್ರಮೆ,
ಅನೃತ ಭ್ರಮೆ ಸತ್ಯ ಭ್ರಮೆ ನಿತ್ಯ ಭ್ರಮೆ,
ವಾಗದ್ವೈತ ಭ್ರಮೆ, ಅದ್ವೈತ ಭ್ರಮೆ,
ಮಂತ್ರ ಭ್ರಮೆ ತಂತ್ರ ಭ್ರಮೆ,
ನಾಹಂ ಭ್ರಮೆ, ಕೊಹಂ ಭ್ರಮೆ,
ಸೊಹಂ ಭ್ರಮೆ.
ತತ್ವ ಸಕರಣವೇಷ್ಟಿತ
ಜಗತ್ರಯಕ್ಕೆಲ್ಲಾ ಮಾಯಾಮಯ.
ಕೂಡಲಚೆನ್ನಸಂಗಾ
ನಿಮ್ಮ ಶರಣಂಗಾವ ಭ್ರಮೆಯೂ ಇಲ್ಲ.”

ಸವಸಂ : 3, ವಚನ-846 ಪುಟ-254.

ಆನು ನೀನು, ಅರಿದೆ ಮರೆದೆ, ಅಳಿದೆನುಳಿದೆನೆಂಬ ಸಂಶಯ ಭ್ರಮೆ,

ನಾನುˌ ನೀನು ಬೇರೆ ಅಥವ ಒಂದೇ ಎಂಬˌ ಅರಿತೆವುˌ ಮರೆತೆವೆಂಬˌ ಅಥವ ಅಳಿದೆವುˌ ಉಳಿದೆವೆಂಬ ಸಂಶಯವೇ ಒಂದು ಭ್ರಮೆ ಎನ್ನುತ್ತಾನೆ ಚೆನ್ನಬಸವಣ್ಣ.

ಅತತ್ವ ತತ್ವವಿವೇಕ ಭ್ರಮೆ, ಮೂಲ ಸ್ಥೂಲ ಸೂಕ್ಷ್ಮ ವಿಪರೀತ ಭ್ರಮೆ,

ಇದು ತತ್ವ ˌ ಇದು ತತ್ವವಲ್ಲ ಎನ್ನುವ ಅತಿವಾದ ವಿವೇಕದ ಭ್ರಮೆˌ ನನ್ನದು ಮೂಲˌ ನನ್ನದು ಸ್ಥೂಲˌ ನನ್ನದು ಸೂಕ್ಷ್ಮವೆಂಬ ವಿಪರೀತಗಳು ಕೂಡ ಭ್ರಮೆಯ ಎನ್ನುವುದು ಶರಣರ ಅಂಬೋಣ.

ಪುಣ್ಯಪಾಪ ಸ್ವರ್ಗ ನರಕ ಬಂಧಮೋಕ್ಷ ಪ್ರವರ್ತಕ ನಿವರ್ತಕ. ಆದಿಯಾದ ಸಪ್ತಕರ್ಮ ಬಂಧ ಭ್ರಮೆ,

ಸ್ವರ್ಗ ನರಕಗಳ ಅಸ್ಥಿತ್ವದ ತರ್ಕ ˌ ಪುಣ್ಯ ಪಾಪಗಳ ನಂಬಿಕೆˌ ಲೌಕಿಕ ಬಂಧನ ಮತ್ತು ಮೋಕ್ಷಗಳ ವಾದˌ ಪ್ರವರ್ತಕˌ ನಿವರ್ತಕಗಳ ಭ್ರಮೆˌ ಸಪ್ತ ಕರ್ಮಗಳ ನಂಬಿಕೆ ಇವೆಲ್ಲವೂ ಕೇವಲ ಭ್ರಮೆಯಾಗಿವೆ ಎನ್ನುತ್ತಾನೆ ಚೆನ್ನಬಸವಣ್ಣ.

ಹುಸಿಜೀವ ಪರಮನೈಕ್ಯ ಸಂಧಾನ ಭ್ರಮೆ, ಯೋಗದಾಸೆ ಸಿಲುಕು ಭ್ರಮೆ,

ಮನುಷ್ಯನ ಕ್ಷಣಿಕ ಬದುಕುˌ ಅವನು ಪರಮನಾದ ದೇವನಲ್ಲಿ ಲೀನವಾಗುವ ಸಂಧಾನದ ಸಿದ್ದಾಂತˌ ಯೋಗದ ಆಶೆಯಲ್ಲಿ ಸಿಲುಕುವುದೆಲ್ಲವೂ ಕೇವಲ ಭ್ರಮೆಗಳು ಎನ್ನುವುದು ಶರಣರ ನಿಲವು.

ಅಂತರ್ಮುಖ ಭ್ರಮೆ, ಬಹಿರ್ಮುಖ ಭ್ರಮೆ, ಅನೃತ ಭ್ರಮೆ ಸತ್ಯ ಭ್ರಮೆ ನಿತ್ಯ ಭ್ರಮೆ,

ಇಲ್ಲಿ ಅಂತರ್ಮುಕ ˌ ಬಹಿರ್ಮುಖˌ ಸತ್ಯ ˌ ಸುಳ್ಳು ˌ ಮುಂತಾದ ನಂಬಿಕೆಗಳೆಲ್ಲವೂ ಮನುಷ್ಯನ ಭ್ರಮೆಗಳು.

ವಾಗದ್ವೈತ ಭ್ರಮೆ, ಅದ್ವೈತ ಭ್ರಮೆ, ಮಂತ್ರ ಭ್ರಮೆ ತಂತ್ರ ಭ್ರಮೆ,

ಅದ್ವೈತˌ ವಾಗದ್ವೈತ ˌ ಮಂತ್ರ ತಂತ್ರಗಳೆಂಬ ಎಲ್ಲ ನಂಬಿಕೆಗಳೂ ಕೂಡ ಮನುಷ್ಯನ ಭ್ರಮೆಗಳೇ ಆಗಿವೆ ಎನ್ನುತ್ತಾರೆ ಶರಣರು.

ನಾಹಂ ಭ್ರಮೆ, ಕೊಹಂ ಭ್ರಮೆ, ಸೊಹಂ ಭ್ರಮೆ. ತತ್ವ ಸಕರಣವೇಷ್ಟಿತ ಜಗತ್ರಯಕ್ಕೆಲ್ಲಾ ಮಾಯಾಮಯ.

ನಾನುˌ ನೀನುˌ ಅವರುˌ ಇವರುˌ ಎಲ್ಲರೂ ಬೇರೆ ಬೇರೆˌ ಎಲ್ಲರೂ ಒಂದೇ ಎನ್ನುವ ತತ್ವಗಳಲ್ಲವೂ ಕೇವಲ ಮನುಷ್ಯನ ಭ್ರಮೆಯಿಂದ ಹುಟ್ಟಿಕೊಂಡ ನಂಬಿಕೆಗಳು.

ಕೂಡಲಚೆನ್ನಸಂಗಾ ನಿಮ್ಮ ಶರಣಂಗಾವ ಭ್ರಮೆಯೂ ಇಲ್ಲ.

ಆದರೆ ಈ ಮಣ್ಣಿನಲ್ಲಿ ಹುಟ್ಟಿಕೊಂಡು ನಂಬಿ ಆಚರಿಸುತ್ತ ಬಂದ ಮೇಲಿನ ಎಲ್ಲ ನಂಬಿಕೆಗಳಿಂದ ಶರಣ ಮಾರ್ಗ ಹೊರಗೆ. ವೇದˌ ಆಗಮˌ ಶಾಸ್ತ್ರ ˌ ಪುರಾಣˌ ಉಪನಿಷತ್ತುˌ ಕರ್ತˌ ಮುಂತಾದ ಎಲ್ಲ ಸಮಕಾಲಿನ ನಂಬಿಕೆಗಳು ಕೇವಲ ಭ್ರಮೆಗಳಾಗಿದ್ದು ˌ ಅನುಭಾವ ಮಾರ್ಗದಲ್ಲಿ ತೊಡಗಿಸಿಕೊಂಡ ಶರಣನಿಗೆ ಮೇಲಿನ ಸ್ಥಾಪಿತ ಯಾವ ಭ್ರಮೆಗಳೂ ಇಲ್ಲ. ಹಾಗಾಗಿ ಅನುಭಾವಿ ಶರಣ ಭ್ರಮಾತೀತನು ಎನ್ನುವುದು ಚೆನ್ನಬಸವಣ್ಣನವರ ಸ್ಪಷ್ಟ ನುಡಿ.

~ ಡಾ. ಜೆ ಎಸ್ ಪಾಟೀಲ.

About Shivanand

Admin : Lingayat Kranti Monthly news paper 8884000008 [email protected]

Check Also

ಸೆ. 25ರಂದು “ಮಹಾತ್ಮರ ಚರಿತಾಮೃತ” ಲೋಕಾರ್ಪಣೆ

ಅಥಣಿ: ಗಡಿಭಾಗದಲ್ಲಿ ನಾಡು-ನುಡಿ ಕಟ್ಟುವ ಕಾಯಕದಲ್ಲಿ ನಿರತವಾಗಿರುವ ಅಥಣಿ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಅವರು ಸಂತ-ಮಹಾಂತರ …

ಧರ್ಮ ವಿಭಜನೆ ನೆವದಲ್ಲಿ ಪಾಟೀಲರ ಟೀಕೆ ಸಾಧುವಲ್ಲ

-ಸಾಹಿತಿ ಶಿವಕುಮಾರ್ ಉಪ್ಪಿನ ಖೇದ ವಿಜಯಪುರ ಜಿಲ್ಲೆಯ ಒಳ ಮರ್ಮದ ರಾಜಕೀಯ ಮೇಲಾಟದ ಕಾರಣಕ್ಕೆ ಲಿಂಗಾಯತ ಚಳವಳಿಯಿಂದಲೇ ಕಾಂಗ್ರೆಸ್‌ಗೆ ಸೋಲಾಯಿತು …

ಲಿಂಗಾಯತ ಪೇಜ್‌ಗೆ ಕಿಡಿಗೇಡಿಗಳ ಕಿರಿಕಿರಿ..!

ಲಿಂಗಾಯತ ಯುವ ಒಕ್ಕೂಟ ಫೇಸ್ ಬುಕ್ ಪೇಜ್‌ಗೆ ಮಸಿ ಬಳಿಯಲು ಅದನ್ನು ಹ್ಯಾಕ್ ಮಾಡಿ ಅಶ್ಲೀಲ ಪೋಸ್ಟ್‌ಗಳನ್ನು ಮಾಡುತ್ತಿರುವುದರಿಂದ ಈ …

“ಲಕ್ಷ್ಮೀ ಪೂಜೆ” ಲಕ್ಷ್ಮೀ ಯಾರು.?

  ಈ ಲಕ್ಷ್ಮೀ ಪೂಜೆ ಯಾಕೆ ಮಾಡುತ್ತಿದ್ದರು? ರಾಜನ ಹೆಂಡತಿಗೆ ಲಕ್ಷ್ಮೀ ಎಂದು ಕರೆಯುತ್ತಿದ್ದರು, ಇದು ಹೊಗಳಿಕೆಯ ಪದ. ರಾಜನಿಗೆ …

ಸಂಗೊಳ್ಳಿ ರಾಯಣ್ಣನಿಗೆ ಜನ್ಮ ನೀಡಿದ್ದು ನೇಗಿನಹಾಳ ಗ್ರಾಮ

ಸ್ವತಂತ್ರ ಹೋರಾಟಗಾರರ ಧರ್ಮಪತ್ನಿ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ನೇಗಿನಹಾಳ : ಬ್ರಿಟಿಷ್ ಸರ್ಕಾರದ ವಿರುದ್ಧ ಮೊಟ್ಟಮೊದಲಿಗೆ ಧಂಗೆ ಸಾರಿ …

ಕ್ರೀಡೆ, ಕಲೆ, ಸಾಹಿತ್ಯದಂಥ ರಂಗಗಳು ಜಾತಿ, ಸಂಕುಚಿತತೆ ನಿರ್ಮೂಲನೆಯ ಮಹಾಸಾಧನಗಳು

  ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮೀಜಿ ಅಭಿಮತ ಮುಂಡರಗಿ ಆಗಷ್ಟ್ 07: ಪ್ರಸ್ತುತ ರಾಜಕಾರಣದಲ್ಲಿ, ಕಾವಿಯೊಳಗೆ ಖಾದಿಯ ಪ್ರವೇಶ ಸಲ್ಲದು. …

ಪ್ರಮಾಣ ವಚನ ನೇರಪ್ರಸಾರ; ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ರಾಜಭವನದಿಂದ ನೇರ ಪ್ರಸಾರ ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ಇಂದು ಮಧ್ಯಾಹ್ನ 2:15ಕ್ಕೆ …

ಅಲ್ಲಮಪ್ರಭುಗಳ ವಚನಗಳು ಇಂಗ್ಲಿಷ್‌ಗೆ ಭಾಷಾಂತರ

  ವಿಜಯಪುರ : ಖ್ಯಾತ ಭಾಷಾತಜ್ಞ ಎ. ಕೆ. ರಾಮಾನುಜನ್ ಅವರ ಬಳಿಕ ಶರಣರೊಬ್ಬರ ವಚನಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ ಕೀರ್ತಿ …

ತ್ರಿಭಾಷೆಗಳಲ್ಲಿ ಮೂಡಿಬಂದ ಮಹಾಜಂಗಮ

ಮಹಾಜಂಗಮ : ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಮರಾಠಿ ಮೂಲ ಲೇಖಕರು : ಶ್ರೀ ರಾಜು ಬ. ಜುಬರೆ …

ಹಡಪದರನ್ನು ನೋಡುವ ನೋಟ ಬದಲಾಗಲಿ

ಗಜೇಂದ್ರಗಡ ಜುಲೈ 25: ಅಸಮಾನತೆ, ಜಾತಿವಾದ ವ್ಯವಸ್ಥೆಯ ಈ ಸಮಾಜದಲ್ಲಿ ದಲಿತ ಜನಾಂಗದವರು ಮುಟ್ಟಿಸಿಕೊಳ್ಳದ ಅಸ್ಪೃಶ್ಯತೆಯ ಅವಮಾನಕ್ಕೊಳಗಾಗುತ್ತಿದ್ದಾರೆ. ಹಾಗೆಯೇ ಹಡಪದ …

ಯಡಿಯೂರಪ್ಪ ಅವರನ್ನು ಘನತೆಯಿಂದ ನಡೆಸಿಕೊಳ್ಳಿ- ಡಾ. ಎಂ ಬಿ ಪಾಟೀಲ

ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿದ್ದು, ಬಿ.ಎಸ್. ಯಡಿಯೂರಪ್ಪ …

ನಾಗನೂರ ರುದ್ರಾಕ್ಷಿಮಠಕ್ಕೆ ಮಾಜಿ ಗೃಹ ಸಚಿವ ಎಂ.ಬಿ ಪಾಟೀಲ ಬೇಟಿ

ಅಂತರರಾಷ್ಟ್ರೀಯ ಬಸವ ಗ್ರಂಥಾಲಯ ನಿರ್ಮಾಣದ ಕುರಿತು ಚಿಂತನೆ ಬೆಳಗಾವಿ : ಶುಕ್ರವಾರ ಶಿವಬಸವ ನಗರದ ನಾಗನೂರ ರುದ್ರಾಕ್ಷಿಮಠಕ್ಕೆ ಬೇಟಿ ನೀಡಿ …

47ನೇ ತ್ರೈಮಾಸಿಕ ಶಿವಾನುಭವ-ಗುರುವಂದನೆ

  ಮುಂಡರಗಿ ಜುಲೈ 12: ೧೨ನೆಯ ಶತಮಾನದ ಬಸವಾದಿ ಶರಣರು ದೇವರ ಕಲ್ಪನೆಯನ್ನು ಇಷ್ಟಲಿಂಗದಲ್ಲಿ ಕಂಡರು.ಗರ್ಭಗುಡಿ ಸಂಸ್ಕೃತಿಯಿಂದ ಜನರನ್ನು ಹೊರತಂದು,ಇಷ್ಟಲಿಂಗ …

ಬಸವಧರ್ಮದ ಕಾಯಕಯೋಗಿ ಬಸವ ಸಿದ್ಧಲಿಂಗ ಶ್ರೀಗಳಿಗೆ 50ವರ್ಷ

  ಲೇಖನ: ಶಿವಾನಂದ ಮೆಟ್ಯಾಲ ನೇಗಿನಹಾಳ ನೇಗಿನಹಾಳ: 12ನೆಯ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ನಂತರ ಬಸವಾದಿ ಶರಣರು ವಚನ …

“ಶಿವಾನುಭವ” ಪತ್ರಿಕೆ ಮರುಮುದ್ರಣಕ್ಕೆ ಲಿಂಗಾಯತ ನಾಯಕ ಡಾ‌. ಎಂ ಬಿ ಪಾಟೀಲ ಒತ್ತಾಯ

ಬೆಂಗಳೂರು: ಡಾ. ಫ.ಗು. ಹಳಕಟ್ಟಿಯವರ ಸಂಪಾದಿತ “ಶಿವಾನುಭವ” ಪತ್ರಿಕೆಯ ಮರುಮುದ್ರಣ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೈಗೊಳ್ಳಬೇಕೆಂದು ಲಿಂಗಾಯತ …

Leave a Reply

Your email address will not be published. Required fields are marked *