Breaking News
Home / featured

featured

ಶಿವಯೋಗದಿಂದ ಎಲ್ಲವೂ ಸಾಧ್ಯ: ನಿಜಗುಣಾನಂದ ಶ್ರೀಗಳು

  ಹುಬ್ಬಳ್ಳಿ(ಉಣಕಲ್): ಜಗತ್ತಿನ ಎಲ್ಲ ಧರ್ಮದ ವಿಚಾರಗಳನ್ನು ಹೇಳುವವರು ಮತ್ತು ಕೇಳುವವರು ಇರುತ್ತಾರೆ ಆದರೆ ಶರಣ ಧರ್ಮದಲ್ಲಿ ಹೇಳುವವರು ಗುರುವಾದರೆ ಕೇಳುವವರು ಶರಣರಾಗಿರುತ್ತಾರೆ. ದೇಹವೇ ದೇವಾಲಯ ಹಾಗೂ ಅರಿವು ಗುರುವಾದ ಕಾರಣ ಶರಣ ಧರ್ಮ ಬಹಳಷ್ಟು ಶ್ರೇಷ್ಠವಾಗಿದೆ ಎಂದು ಮುಂಡರಗಿ ತೋಂಟದಾರ್ಯ ಮಠ ಹಾಗೂ ಬೈಲೂರ ನಿಷ್ಕಲ ಮಂಟಪದ ಪೂಜ್ಯ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಹೇಳಿದರು. ನಗರದ ಉಣಕಲ್ ಸದ್ಗುರು ಸಿದ್ದೇಶ್ವರ ಮಹಾಸ್ವಾಮಿಗಳ 100 ನೆಯ ವರ್ಷದ ಪುಣ್ಯಾರಾಧನೆ ಅಂಗವಾಗಿ …

Read More »

ಲಿಂಗಾಯತ ಹೋರಾಟಗಾರ, ಸಾಹಿತಿ ಶಿವಕುಮಾರ್ ಉಪ್ಪಿನ ಕಾಂಗ್ರೆಸ್ ಗೆ?

  ವಿಜಯಪುರ: ಲಿಂಗಾಯತ ಮಾನ್ಯತೆಯ ಹೋರಾಟದಲ್ಲಿ ಸಕ್ರಿಯವಾಗಿದ್ದ ಇಲ್ಲಿನ ಬರಹಗಾರ ಶಿವಕುಮಾರ್ ಉಪ್ಪಿನ ಶೀಘ್ರದಲ್ಲೇ ಕಾಂಗ್ರೆಸ್ ಸೇರುವುದು ಖಚಿತವಾಗಿದೆ. ಜಿಲ್ಲೆಯ ಪ್ರಭಾವಿ ಮುಖಂಡ ಎಂ.ಬಿ.ಪಾಟೀಲರ ಜೊತೆ ನಿಕಟ ಸಂಪರ್ಕ ಹೊಂದಿರುವ, ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಇವರು ಮೊನ್ನೆ ಬೆಂಗಳೂರಿನ ಅವರ ಮನೆಯಲ್ಲಿ ಪಾಟೀಲರನ್ನು ಭೇಟಿಯಾಗಿ ಸಕ್ರಿಯ ರಾಜಕಾರಣಕ್ಕೆ ಸೇರುವ ಕುರಿತು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ. ಬಹುತೇಕ ಪಾಟೀಲರಿಂದ ಹಸಿರು ನಿಶಾನೆ ಸಿಕ್ಕಿದ್ದು, ಸಿಂದಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಕ್ಕೆ …

Read More »

ಯುಗದ ಉತ್ಸಾಹ ಅರಟಾಳ ರುದ್ರಗೌಡರು

  ಡಾ|| ಎಂ.ಎಂ. ಕಲಬುರ್ಗಿ  ಬಸವಣ್ಣನವರನ್ನು ಯುಗದ ಉತ್ಸಾಹವೆಂದು ಪ್ರಭುದೇವರು ಬಣ್ಣಿಸಿದ್ದಾರೆ. 19-20ನೆಯ ಶತಮಾನಗಳ ಮಧ್ಯಕಾಲೀನ ಸಮಾಜದಲ್ಲಿ ಅಂಥ ಉತ್ಸಾಹವನ್ನು ತಮ್ಮ ವ್ಯಾಪ್ತಿಯಲ್ಲಿ ಮೆರೆದವರು, ಅರಟಾಳ ರುದ್ರಗೌಡರು. 1980. ಹಳೆಯ ಕಾಲದಲ್ಲಿ ಅಂಗಡಿಯ ಲೆಕ್ಕ ಬರೆಯಲು ಬಳಸುತ್ತಲಿದ್ದ, ಕೆಂಪು ಅರಿವೆ ಹೊದಿಕೆಯ ಎರಡು ದೊಡ್ಡ ವಹಿಗಳು. ಅವುಗಳನ್ನು ಧಾರವಾಡದ ‘‘ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ’’ಯಲ್ಲಿ ನೋಡುವ ಭಾಗ್ಯ ನನ್ನದಾಯಿತು. ಅವು ಶ್ರೀ ಅರಟಾಳ ರುದ್ರಗೌಡರ ಜೀವನ ಚರಿತ್ರೆಯ ಸಂಪುಟಗಳು. ಅದೇ ಆಗ …

Read More »

ಧರ್ಮದ ಕಾಲಂನಲ್ಲಿ ಲಿಂಗಾಯತ ಬರೆಸಿ: ಡಾ. ಗಂಗಾಮಾತಾಜಿ ಕರೆ

ಬೆಳಗಾವಿ: ಗುರು ಬಸವೇಶ್ವರರು 12ನೇ ಶತಮಾನದಲ್ಲಿ ಸ್ಥಾಪಿಸಿರುವ ಜಗತ್ತಿನ ವಿನೂತನ, ವಿಶಿಷ್ಟ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಿಗಲೇಬೇಕು. 2021ರ ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸುವಂತೆ ಕೂಡಲಸಂಗಮದ ಬಸವಧರ್ಮ ಪೀಠದ ಡಾ.ಗಂಗಾ ಮಾತಾಜಿ ಕರೆ ನೀಡಿದರು. ರವಿವಾರ ಬೆಳಗಾವಿಯ ಗಾಂಧಿ ಭವನದಲ್ಲಿ ಜಿಲ್ಲಾ ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ ಸಂಘಟನೆಗಳ ಆಶ್ರಯದಲ್ಲಿ ವಿಶ್ವದ ಮೊಟ್ಟ ಮೊದಲ ಮಹಿಳಾ ಜಗದ್ಗುರು ಕೂಡಲಸಂಗಮ ಬಸವಧರ್ಮ ಪೀಠದ ಲಿಂಗೈಕ್ಯ …

Read More »

ಧರ್ಮದ ಕಾಲಂನಲ್ಲಿ ಲಿಂಗಾಯತ ಬರೆಸಿ: ಡಾ. ಗಂಗಾಮಾತಾಜಿ ಕರೆ ವಿಶ್ವಗುರು ಬಸವೇಶ್ವರರು 12ನೇ ಶತಮಾನದಲ್ಲಿ ಸ್ಥಾಪಿಸಿರುವ ಜಗತ್ತಿನ ವಿನೂತನ, ವಿಶಿಷ್ಟ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಿಗಲೇಬೇಕು. 2021ರ ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸುವಂತೆ ಕೂಡಲಸಂಗಮದ ಬಸವಧರ್ಮ ಪೀಠದ ಡಾ.ಗಂಗಾ ಮಾತಾಜಿ ಕರೆ ನೀಡಿದರು. ರವಿವಾರ ಬೆಳಗಾವಿಯ ಗಾಂಧಿ ಭವನದಲ್ಲಿ ಜಿಲ್ಲಾ ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ ಸಂಘಟನೆಗಳ ಆಶ್ರಯದಲ್ಲಿ ವಿಶ್ವದ ಮೊಟ್ಟ ಮೊದಲ ಮಹಿಳಾ ಜಗದ್ಗುರು ಕೂಡಲಸಂಗಮ ಬಸವಧರ್ಮ ಪೀಠದ ಲಿಂಗೈಕ್ಯ ಡಾ. ಮಾತೆ ಮಹಾದೇವಿ ಅವರ 2ನೇ ಪುಣ್ಯಸ್ಮರಣೆ ಕಾರ್ಯಕ್ರಮ ನಿಮಿತ್ಯ ಲಿಂಗಾಯತ ಧರ್ಮ ಜನಗಣತಿ 2021ರ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಆರಂಭದಲ್ಲಿ ವೇದಿಕೆ ಮೇಲೆ ಆಸೀನರಾಗಿದ್ದ ಗಣ್ಯರು ವಿಶ್ವಗುರು ಬಸವೇಶ್ವರರು, ಲಿಂಗೈಕ್ಯ ಪರಮಪೂಜ್ಯ ಲಿಂಗಾನಂದ ಮಹಾಸ್ವಾಮೀಜಿ, ಡಾ.ಮಾತೆ ಮಹಾದೇವಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಜಯಘೋಷ ಕೂಗಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಾ.ಮಾತೆ ಗಂಗಾ ಮಾತಾಜಿ ಅವರು ಪರಮಪೂಜ್ಯ ಡಾ.ಮಾತೆ ಮಹಾದೇವಿ ತಾಯಿಯವರ ಎರಡನೇ ಪುಣ್ಯಸ್ಮರಣೆ ದಿನ ನಾವೆಲ್ಲಾ ಸಂಕಲ್ಪ ಮಾಡಬೇಕಿದೆ. ಈ ಬಾರಿಯ ಜನಗಣತಿಯಲ್ಲಿ ಲಿಂಗಾಯತ ಧರ್ಮ ಎಂದು ಬರೆಸುವ ಸಂಕಲ್ಪ ಮಾಡೋಣ. ಜಾಗತಿಕವಾಗಿ ಲಿಂಗಾಯತ ಧರ್ಮಕ್ಕೆ ಸ್ಥಾನಮಾನ ಸಿಗುವವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು. ಬೆಂಗಳೂರು ಚನ್ನಬಸವೇಶ್ವರ ಜ್ಞಾನಪೀಠದ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ ಭಕ್ತಿ, ಶ್ರದ್ಧೆಯಿಂದ ಬೆಳಗಾವಿ ಜಿಲ್ಲೆ ಅಷ್ಟೇ ಅಲ್ಲದೇ ಬೇರೆ ಬೇರೆ ರಾಜ್ಯಗಳಿಂದಗಳು ಬಸವಾಭಿಮಾನಿಗಳು ಆಗಮಿಸಿದ್ದಾರೆ. ಅದೇ ರೀತಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಜವಾಬ್ದಾರಿಯನ್ನು ನೀಡಲಾಗುತ್ತಿದೆ. ಅದೇ ರೀತಿ 2021 ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಎಲ್ಲರೂ ಬರೆಸಬೇಕು. ಅದೇ ರೀತಿ ಲಿಂಗಾಯತ ಧರ್ಮಕ್ಕೆ ಸಾಂವಿಧಾನದ ಮಾನ್ಯತೆ ದೊರೆಯುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎ.ಬಿ.ಪಾಟೀಲ್, ಬೀದರ ಬಸವ ಮಂಟಪದ ಪರಮಪೂಜ್ಯ ಸತ್ಯಾದೇವಿ ಮಾತಾಜಿ, ಬೆಳಗಾವಿ ವಿಶ್ವಗುರು ಬಸವಮಂಟಪದ ಸದ್ಗುರು ಪ್ರಭುಲಿಂಗ ಸ್ವಾಮೀಜಿ,ಬೆಳಗಾವಿ ರಾಷ್ಟ್ರೀಯ ಬಸವದಳದ ಹಿರಿಯ ಪದಾಧಿಕಾರಿಗಳು ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Read More »

ಮಠದ ಉತ್ತರಾಧಿಕಾರಿಯಾಗಿ ಮಹಿಳೆ: ಘೋಷಣೆ

  ರಾಮದುರ್ಗ: ಬಸವವಾದಿ ಶರಣರ ಸಮಾನತೆಯ ತತ್ವ ಅಳವಡಿಸಿ ಕೊಂಡಿರುವ ತಾವು ಕಲಬುರ್ಗಿ ಜಿಲ್ಲೆಯ ಅಳಂದ ತಾಲ್ಲೂಕಿನ ಖಜೂರಿ ಕೋರಣೇಶ್ವರಮಠದ ಉತ್ತರಾಧಿಕಾರಿ ಯನ್ನಾಗಿ ನೀಲಲೋಚನ ಮಾತೆ ಅವರನ್ನು ನೇಮಕ ಮಾಡಲಿರುವುದಾಗಿ ಪೀಠಾಧಿಪತಿ ಮುರುಘಂದ್ರ ಕೋರಣೇಶ್ವರ ಶಿವಯೋಗಿ ಘೋಷಿಸಿದರು. ಗುರುವಾರ ತಾಲ್ಲೂಕಿನ ಹೊಸಕೇರಿ ಗ್ರಾಮದಲ್ಲಿ ಬಸವ ಭವನ ನಿರ್ಮಾಣಕ್ಕೆ ಚಾಲನೆ ನೀಡುವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಅಧ್ಯಾತ್ಮದಲ್ಲಿ ತೊಡಗಿ ಕೊಂಡಿರುವ ಅವರನ್ನು ಮಠಕ್ಕೆ ಉತ್ತರಾ ಧಿಕಾರಿಯನ್ನಾಗಿ ಮಾಡಲಾಗುವುದು. …

Read More »

ಅಕ್ಕನ ಧಾರ್ಮಿಕ ಸೇವೆ ಅನನ್ಯ

  ಬೀದರ : ಶರಣ ಲೋಕದ ಸರಳ ಚೇತನ ಸ್ವರೂಪಿ, ಕಲ್ಯಾಣ ನಾಡಿನ ಧೀಮಂತ ಹೆಮ್ಮೆಯ ಸುಪುತ್ರಿ, ಸಂಘಟನೆ, ಹೋರಾಟ,ಬರವಣಿಗೆ ಹಾಗೂ ಶರಣ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಸಮಾಜದ ಹಾಗೂ ಬಸವ ತತ್ವ ಸೇವೆಯನ್ನು ಗೈಯುತ್ತ, ಕರುನಾಡಿನ ಪ್ರಸಿದ್ಧ ಪ್ರವಚನಕಾರರು ಎಂದೆ ಚಿರಪರಿಚಿತರಾದವರು ಅಕ್ಕ ಅನ್ನಪೂರ್ಣ ತಾಯಿ ಯವರು. ತತ್ವಜ್ಞಾನಿ, ಸಮಾ ಸಮಾಜದ ಕನಸು ಕಂಡ ಮಾಹಾಮಾನತವಾದಿ, ಸರ್ವರಿಗೂ ಲೇಸನ್ನೇ ಬಯಸಿದ ಮೇಧಾವಿ, ಸಮಾತವಾದದ ಸಹಕಾರ …

Read More »

ರಾಷ್ಟ್ರೀಯ ಬಸವ ದಳ: ಪದಾಧಿಕಾರಿಗಳ ನೇಮಕ

  ಬೆಂಗಳೂರು: ರಾಷ್ಟ್ರೀಯ ಬಸವ ದಳದ ವಿವಿಧ ಘಟಕಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಈ ಕುರಿತು ರಾಷ್ಟ್ರೀಯ ಬಸವ ದಳ ಅಧಿಕೃತ ಪ್ರಕಟಣೆ ಹೊರಡಿಸಿದೆ. ಆಯ್ಕೆಯಾದ ಪದಾಧಿಕಾರಿಗಳ ಪಟ್ಟಿ ಈ ಕೆಳಗಿನಂತಿದೆ. ರಾಜ್ಯ ಗೌರವಾಧ್ಯಕ್ಷರು : ಬಸವರಾಜ ಕಂಡುಗೋಳಿ. ರಾಜ್ಯಾಧ್ಯಕ್ಷರು : ಶರಣ. ಕೆ.ವಿ. ವೀರೇಶ್ ರಾಜ್ಯ ಉಪಾಧ್ಯಕ್ಷರು : ರಾಜೇಂದ್ರ ಜೋನ್ನಿಕೇರೆ ಮತ್ತು ಬಸವರಾಜ ಹೂಗಾರ. ರಾಜ್ಯ ಪ್ರಧಾನ ಸಂಘಟನಾ ಕಾರ್ಯದರ್ಶಿ : ರವಿ ಪಾಪಡೆ. ರಾಜ್ಯ ಪ್ರಧಾನ …

Read More »

ಮಾರ್ಚ್ 31 ರಂದು ಲಿಂಗಾಯತ ಧರ್ಮದ ವಿಜಯೋತ್ಸವ ಹಾಗೂ ಬಲಿದಾನ ದಿನ

  ಬೆಳಗಾವಿ: ಮಾರ್ಚ 19 ರಂದು ಆಯೋಜಿಸಲಾಗಿದ್ದ, ಡಾ.ನಾಗಮೋಹನ ದಾಸ ಅವರ ನೇತೃತ್ವದ ಉನ್ನತಾಧಿಕಾರ ಸಮಿತಿಯ ಸಪ್ತರ್ಷಿಗಳು 2018 ರಲ್ಲಿ ನೀಡಿರುವ ಲಿಂಗಾಯತ ಸ್ವತಂತ್ರ ಧರ್ಮವೆಂಬ ಅತ್ಯಂತ ವೈಜ್ಞಾನಿಕ ವರದಿಯ ಮೂರನೇ ವಾರ್ಷಿಕೋತ್ಸವ ಮತ್ತು ಬಸವ-ಭೀಮ ಸಂಭ್ರಮ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿಗಳ ಪ್ರದಾನ ಸಮಾರಂಭವನ್ನು ಮಾರ್ಚ 19 ಬದಲಾಗಿ, ಮಾರ್ಚ 31 ರಂದು ಈ ಕಾರ್ಯಕ್ರಮದೊಂದಿಗೆ ಹರಳಯ್ಯ-ಮಧುವರಸ-ಶೀಲವಂತರ ಬಲಿದಾನ ದಿನ ಹಾಗೂ ಲಿಂಗಾಯತ ಧರ್ಮದ ವಿಜಯೋತ್ಸವ ಕಾರ್ಯಕ್ರಮವನ್ನು …

Read More »

ಮಠಾಧಿಶರಿಗೆ ಮೈಲುಗಲ್ಲಾದ ಪೂಜ್ಯ ಡಾ ಮಾತೆ ಮಹಾದೇವಿ”

  ಇಂದು ಪೂ.ಡಾ ಮಾತೆ ಮಹಾದೇವಿಯವರ ಜನನ ಹಾಗೂ ಲಿಂಗೈಕ್ಯ ಸ್ಮರಣೆಯ ಕಾರಣ, ಅವರ ಕಾರ್ಯ ಸ್ಮರಣೆ. ಶರಣರ ಅಭಿಪ್ರಾಯದಂತೆ ಹುಟ್ಟು ಹಬ್ಬ, ಪುಣ್ಯತಿಥಿಗಳು,ಶ್ರಾದ್ಧಗಳು ,ಮೂಹೂರ್ತ ತಿಥಿಗಳು ,ನಾವು ನಂಬುವಂತಿಲ್ಲಾ ಹಾಗೂ ಆಚರಿಸುವಂತಿಲ್ಲಾ , ಸಿದ್ದರಾಮೇಶ್ವರ ಆದೇಶದಂತೆ “ಹಬ್ಬಗಳೆಲ್ಲಾ ಉಬ್ಬುಬ್ಬಿ ಲಿಂಗದ ಹಬ್ಬಕ್ಕೆ ಬಂದಬ್ಬರವ ನೋಡಾ! ಲಿಂಗದ ಹಬ್ಬ ನಿಮ್ಮ ಬಾಯಿಗೆ ಒಬ್ಬಿಯಲ್ಲದೆ ನಿಮ್ಮ ಜನನಕ್ಕೆ ಹಬ್ಬವೇನೊ , ಕಬ್ಬಿಲ ಮುಬ್ಬುಳ್ಳ ಕೊಬ್ಬುಗರಿರಾ ,ಕಪಿಲಸಿದ್ದಮಲ್ಲಿಕಾರ್ಜುನೊಬ್ಬನರಿಯರ್ದಡೆ .” ಎಂಬಂತೆ ಜನನ ಮರಣಗಳಿಗೆ …

Read More »
error: Content is protected !!