Breaking News
Home / ಮಠಗಳ ಪರಂಪರೆ

ಮಠಗಳ ಪರಂಪರೆ

ಬಂಡಾಯ ಜಗದ್ಗುರು ಜೊತೆಗೆ ಮಾತುಕತೆ: ಪುಸ್ತಕ ಪರಿಚಯ

  ಬೆಂಗಳೂರು: ಸುಪ್ರಸಿದ್ಧ ಲೇಖಕ, ಪತ್ರಕರ್ತ ಡಾ.ಸರಜೂ ಕಾಟ್ಕರ್ ಅವರು ಬಂಡಾಯ ಜಗದ್ಗುರು ಎಂದು ಪ್ರಖ್ಯಾತರಾಗಿದ್ದ ಗದುಗಿನ ತೋಂಟದ ಸಿದ್ಧಲಿಂಗ ಸ್ವಾಮಿಗಳ ಜೊತೆಗೆ ಅನೇಕ ವಿಷಯಗಳ ಕುರಿತ ಸಂದರ್ಶನಗಳನ್ನು ‘ಬಂಡಾಯ ಜಗದ್ಗುರು ಜೊತೆಗೆ ಮಾತುಕತೆ’ ಎಂಬ ಕೃತಿಯ ರೂಪದಲ್ಲಿ ಹೊರತರಲಾಗಿದೆ. ಈ ಕೃತಿಯಲ್ಲಿ ಶ್ರೀಗಳ ಜೊತೆಗಿನ 16 ಸಂದರ್ಶನ ಲೇಖನಗಳಿವೆ. ಲೇಖಕರ ಪ್ರಶ್ನೆಗಳಿಗೆ ಶ್ರೀಗಳು ನೇರ, ದಿಟ್ಟ ಉತ್ತರ ಗಳನ್ನು ನೀಡಿದ್ದಾರೆ. ಅವರ ಉತ್ತರಗಳು ಸ್ಫೋಟಕ ವಿಚಾರಗಳನ್ನು ಹೊಂದಿವೆ. 140 …

Read More »

ಹುಕ್ಕೇರಿ ವಿರಕ್ತಮಠದ ಪೂಜ್ಯ ಶಿವಬಸವ ಸ್ವಾಮೀಜಿಯವರ ಸಂದರ್ಶನ

12ನೆಯ ಶತಮಾನದಲ್ಲಿ ಧರ್ಮಗುರು ಬಸವಣ್ಣನವರು ನೀಡಿದಂತ ಲಿಂಗಾಯತ ಧರ್ಮದ ತಳಹದಿಯ ಮೇಲೆ ಕರ್ನಾಟಕದಲ್ಲಿ ಸಾಕಷ್ಟು ಮಠಗಳು ಹುಟ್ಟಿಕೊಂಡವು. ಅವುಗಳು ವಚನ ಸಾಹಿತ್ಯ ಪ್ರಸಾರ, ಬಸವತತ್ವದ ಸಂಸ್ಕಾರದ ಜ್ಞಾನ ದಾಸೋಹದೊಂದಿಗೆ ಅನ್ನ ದಾಸೋಹ ನಡೆಸುತ್ತಾ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡು ಬರುತ್ತಿವೆ. ಅಂತಹಹ ಮಠಗಳಲ್ಲಿ ಹುಕ್ಕೇರಿಯ ವಿರಕ್ತಮಠವು ಒಂದಾಗಿದೆ. ಹುಕ್ಕೇರಿ ವಿರಕ್ತಮಠದ ಪೂಜ್ಯ ಶಿವಬಸವ ಮಹಾಸ್ವಾಮಿಗಳು ಲಿಂಗಾಯತ ಧರ್ಮ ಮತ್ತು ವಿರಕ್ತಮಠಗಳ ಕುರಿತು ಸಂಕ್ಷಿಪ್ತ ವಿವರಣೆ ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ. ಸಂದರ್ಶನದ ಲೈವ್ ವಿಡಿಯೋ …

Read More »

ಲಿಂಗಾಯತ ದಾಖಲೆ ಬ್ರಿಟಿಷರಿಂದ : ಜಿ.ಬಿ ಪಾಟೀಲ

ಬೆಂಗಳೂರು : ಹನ್ನೆರಡನೆಯ ಶತಮಾನದಿಂದ ಹತ್ತೊಂಬತ್ತನೆಯ ಶತಮಾನದ (ಕ್ರಿ. ಶ. ೧೨೦೦ ರಿಂದ ಕ್ರಿ.ಶ.೧೮೦೦) ರ ವರೆಗೆ ಲಿಂಗಾಯತ ದರ್ಮ ತನ್ನ ಮೂಲ ಸಿದ್ಧಾಂತ (ರೂಪ) ಕಳೆದುಕೊಳ್ಳುತ್ತ ಹೋದರು ಸಂಪೂರ್ಣವಾಗಿ ನಶಿಸಿ ಹೋಗಲಿಲ್ಲ.ವೈಧಿಕರು,ಶೈವರು,ವೀರಶೈವರು ಇವರೆಲ್ಲ ಸೇರಿ ಲಿಂಗಾಯತ ವಿಚಾರ ಮತ್ತು ಆಚರಣೆಯಲ್ಲಿ ಅನಗತ್ಯ ಬದಲಾವಣೆಗಳನ್ನು ತಂದರು. ಯಾವ ಸಿದ್ಧಾಂತಕ್ಕಾಗಿ ಬಸವಾದಿಶರಣರು ಹೋರಾಡಿದ್ದರೋ ಅದಕ್ಕೆ ತೀಲಾಂಜಲಿ ಇಟ್ಟು ಮತ್ತೆ ಜಾತಿಯ ವಿಷಬೀಜ ಬಿತ್ತಲಾರಂಬಿಸಿದರು, ಅದು ಮೊಳಕೆಯಾಗಿ, ಸಸಿಯಾಗಿ, ಹೆಮ್ಮರವಾಗಿ ಬೆಳೆದು ನಿಂತಿತು …

Read More »

ಕರ್ನಾಟಕ ಸರ್ಕಾರದ ಬಸವ ಪುರಸ್ಕಾರ ಪ್ರಶಸ್ತಿ

ಭಾಲ್ಕಿಯ ಪೂಜ್ಯ ಡಾ ಬಸವಲಿಂಗ ಪಟ್ಟದೇವರಿಗೆ ನೀಡಲಾಗುತ್ತಿದೆ. ಈ  ಕುರಿತು ಮೂಡಿಬಂದ ಪುಟ್ಟ ಸಾಕ್ಷ್ಯಚಿತ್ರ. ಸಾಹಿತ್ಯ ಹಾಗೂ ಧ್ವನಿ: ಪ್ರಭು ಚನ್ನಬಸವ ಸ್ವಾಮೀಜಿ. ಸಂಕಲನ : ಡಾ. ಅಲ್ಲಮಪ್ರಭು ಸ್ವಾಮೀಜಿ ಬೆಳಗಾವಿ .    

Read More »

ಸುಕ್ಷೇತ್ರ ದೇವನೂರು ಗುರುಮಲ್ಲೇಶ್ವರ ಇತಿಹಾಸ

ನಂಜನಗೂಡು: ಹನ್ನೆರಡನೆಯ ಶತಮಾನದಲ್ಲಿ ಕಾಯಕ-ದಾಸೋಹ ತತ್ತ್ವಗಳು ಸಮಾಜದ ಎರಡು ಸಾಧನಾ ಪಥಗಳಾಗಿದ್ದವು. ಅವು 19ನೇ ಶತಮಾನದ ಪೂರ್ವಾರ್ಧಕ್ಕೆ ಮೈಸೂರು ಪ್ರಾಂತ್ಯದಲ್ಲಿ ವಿಸ್ತಾರವಾಗಿ ಹರಡಿಕೊಂಡದ್ದು ಶ್ರೀಮನ್ನಿರಂಜನ ಗುರುಮಲ್ಲೇಶ್ವರರ ಕಾಲದಲ್ಲಿ. ಯೋಗವು ಶಿವಯೋಗವಾಗಿ, ಅಂಗವು ಲಿಂಗವಾಗಿ, ಭಕ್ತಸ್ಥಲವು ಐಕ್ಯಸ್ಥಲದಲ್ಲಿ ಲೀನವಾಗುವ ಸಂಪೂರ್ಣ ಶಿವತತ್ತ್ವವು ಶ್ರೀಗುರುಮಲ್ಲೇಶ್ವರರ ದಿವ್ಯಸಾನ್ನಿಧ್ಯದಲ್ಲಿ ಬೆಳೆದು ಶಿವಮಯವಾಯಿತು! ಹೊನ್ನಾಳಿ ತಾಲ್ಲೂಕಿನ ಚವುಳಂಗ ಗ್ರಾಮ ಶ್ರೀಗುರು ಮಲ್ಲೇಶ್ವರರ ಪೂರ್ವಿಕರಿದ್ದ ಸ್ಥಳ. ಅಲ್ಲಿ ನಂದಿಬಸವಾರ್ಯರೆಂಬ ಗೃಹಸ್ಥರು. ಇವರ ಮಗ ಶರಣಪ್ಪ. ಇವರ ಪತ್ನಿ ಶರ್ವಾಣಮ್ಮ. …

Read More »

ಗಡಿನಾಡಿನ ಬಸವತತ್ವ ಪ್ರಸಾರಕ : ಡಾ. ಚನ್ನಬಸವ ಪಟ್ಟದ್ದೆವರು

ಭಾಲ್ಕಿ: ನಡೆದಾಡುವ ದೇವರು, ನೂತನ ಅನುಭವ ಮಂಟಪದ ರೂವಾರಿ, ಕಾಯಕ ನಿಷ್ಠೆ-ದಾಸೋಹದ ಕರುಣಾ ಮೂರ್ತಿ, ಅನಾಥರ-ನೊಂದವರ ಬಾಳಿನ ಬೆಳಕು,ಗಡಿ ಭಾಗದಲ್ಲಿ ಕನ್ನಡ ಉಳಿಸಿ-ಬೆಳೆಸಿದ ಕನ್ನಡ ಭಾಷಾಪ್ರೇಮಿ, ವಚನ ಸಾಹಿತ್ಯ ತತ್ವಗಳನ್ನು ವಿಶ್ವಸಮುದಾಯಕ್ಕೆ ಪಸರಿಸಿದ ಮೇಧಾವಿ ಸಂತ, ಸರಳತೆಯನ್ನು ಮೈಗೂಡಿಸಿಕೊಂಡು ಕಾಯಕ ನಿಷ್ಠೆಯ ಸನ್ಮಾರ್ಗದಲ್ಲಿ ಸಾಗುವ ಮೂಲಕ ಈ ಜಗತ್ತಿಗೆ ಮಾದರಿಯಾಗಿ ಬದುಕಿ, ಇತರರಿಗೆ ಆದರ್ಶ ಚೇತನರಾಗಿ ಬಾಳಿದರು ನಮ್ಮ ಹೆಮ್ಮೆಯ ಕಲ್ಯಾಣದ ಪ್ರಜ್ವಲ ಜ್ಯೋತಿ ಭಾಲ್ಕಿ ಹಿರೇಮಠ ಸಂಸ್ಥಾನದ ಪರಮ …

Read More »

ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ

ಭಾಲ್ಕಿ: 22 ಏಪ್ರಿಲ್ 2020 ರಂದು ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ವಚನ ಜಾತ್ರೆ ಹಾಗೂ ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೇವರು ಮಹಾಸ್ವಾಮಿಗಳ 21ನೇ ಸ್ಮರಣೋತ್ಸವನ್ನು ಸರಳವಾಗಿ ಆಚರಿಸೋಣ ಎಂದು ಶ್ರೀ ಗಳು ತಿಳಿಸಿದ್ದಾರೆ. ಈ ವರ್ಷ ಕರೋನ ಎಂಬ ಮಹಾಮಾರಿ ಜಗತ್ತಿನಾದ್ಯಂತ ಹರಡಿರುವ ಕಾರಣದಿಂದ, ಶರಣ ಬಂಧುಗಳು ತಮ್ಮ-ತಮ್ಮ ಮನೆಗಳಲ್ಲಿಯೇ ಬಸವಣ್ಣನವರ ಹಾಗೂ ಪೂಜ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬಸವಾದಿ ಶರಣರ ವಚನಗಳನ್ನು ಪಠಣ ಮಾಡುವ ಮೂಲಕ ತಮ್ಮ …

Read More »

ನಾಗನೂರು ಶ್ರೀ ರುದ್ರಾಕ್ಷಿ ಮಠದಿಂದ ಸಿಎಂ ಪರಿಹಾರ ನಿಧಿಗೆ 5ಲಕ್ಷ ರೂ ದೇಣಿಗೆ

ಬೆಳಗಾವಿ(ಏ-15): ಬೆಳಗಾವಿಯ ರುದ್ರಾಕ್ಷಿ ಮಠದ ಶ್ರೀ ಸಿದ್ಧರಾಮೇಶ್ವರ ಎಜ್ಯುಕೇಶನ್ ಟ್ರಸ್ಟ ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿರುವ ರಾಜ್ಯ ಸರಕಾರಕ್ಕೆ ಐದು ಲಕ್ಷ ರೂ.ದೇಣಿಗೆಯನ್ನು ನೀಡಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5ಲಕ್ಷ ರೂ.ಗಳನ್ನು ಮತ್ತು ಎಸ್.ಜಿ.ಬಾಳೇಕುಂದ್ರಿ ಟ್ರಸ್ಟದಿಂದ 1.5 ಲಕ್ಷ ರೂ.ಗಳ ಚೆಕ್ ಗಳನ್ನು ನಾಗನೂರು ಶ್ರೀ ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ಬುಧವಾರ ಸಂಜೆ ಬೆಳಗಾವಿಯ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಅವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ …

Read More »

ಶರಣರ ತ್ಯಾಗ-ಬಲಿದಾನ ಜಗತ್ತಿಗೆ ತೋರಿಸಿದ ಮಾತಾಜಿ

ಬೈಲಹೊಂಗಲ : ರೋಮನ್ ದೇಶದ ಯಹೂದಿಗಳ ಮೂಡನಂಬಿಕೆ ಅಂದಕಾರವನ್ನು ತೊಲಗಿಸಲು ಹೋಗಿ ರೋಮನ್ ಸಾಮ್ರಾಜ್ಯದ ಒಡೆಯ ಕೈಸರ ಕೆಂಗಣ್ಣಿಗೆ ಗುರಿಯಾಗಿ ಯಹೂದಿಗಳ ಒತ್ತಾಯದ ಮೇಲೆ ರೋಮನ್ ದೇಶದ ಯಹೂದಿ ಪ್ರಾಂತ್ಯದ ಪ್ರತಿನಿಧಿ ಪಿಲಾತನಿಂದ ಒಬ್ಬ ಏಸು ಕ್ರೈಸ್ತ ಶಿಲುಬೆಗೆ ಏರಿಸಿದರು. ಆತನ ತ್ಯಾಗವನ್ನು ಏಸುವಿನ ಅನುಯಾಯಿಗಳು ಇಡಿ ಜಗತ್ತಿಗೆ ತೋರಿಸಿದರು. ಕ್ರೈಸ್ತ ಶಿಲುಬೆಗೆ ಏರಿಸಿರುವ ಸನ್ನಿವೇಶವನ್ನು ಜಗತ್ತಿನಾದ್ಯಂತ ಸ್ಮಾರಕಗಳನ್ನಾಗಿ ಮಾಡಿ ಮಿಷನರಿಗಳ ಮೂಲಕ ಕ್ರೈಸ್ತ ಧರ್ಮವನ್ನು ಪ್ರಚಾರಗೈದರು. ಭಾರತದಂತಹ ಪ್ರಾಚೀನ …

Read More »

ಭಾಲ್ಕಿ ಶ್ರೀ ಮಠದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ

ಜಗತ್ತಿನೆಲ್ಲೆಡೆ ಮಹಾ ಮಾರಿಯಾಗಿ ವ್ಯಾಪಿಸಿರುವ ಕೋರೋನಾ ವೈರಸ್ ನಿವಾರಣೆಗಾಗಿ ಭಾಲ್ಕಿ ಶ್ರೀ ಮಠದಲ್ಲಿ ಪರಮ ಪೂಜ್ಯರಿಂದ ಸಾಮೂಹಿಕವಾಗಿ ಇಷ್ಟಲಿಂಗ ಪೂಜೆ ಹಾಗೂ ಪ್ರಾರ್ಥನೆ ನೆರವೇರಿಸಲಾಯಿತು.

Read More »
error: Content is protected !!