Home / ಧಾರ್ಮಿಕ ಕ್ಷೇತ್ರ (page 5)

ಧಾರ್ಮಿಕ ಕ್ಷೇತ್ರ

ನಾಡಿನಾದ್ಯಂತ ಇಷ್ಟಲಿಂಗ ಪೂಜೆ

ನಾಡಿನಾದ್ಯಂತ ವಿವಿಧ ಮಠಾಧೀಶರು, ಜಗದ್ಗುರುಗಳು ಹಾಗೂ ಲಿಂಗಾಯತ ನಾಯಕರು, ಮುಖಂಡರು ಇಷ್ಟಲಿಂಗ ಪೂಜೆ ಮಾಡಿಕೊಂಡ ಭಾವಚಿತ್ರಗಳು. ಮಹಾಮಾರಿ ಕೊರೂನಾ ವೈರಸ್ ಜಗತ್ತಿನಾದ್ಯಂತ ಹಬ್ಬುತ್ತಿದ್ದು ಲಕ್ಷಾಂತರ ಜನರು ಈಗಾಗಲೇ ಮರಣ ಹೊಂದಿದ್ದು ಭಾರತದಲ್ಲಿಯೂ ಸಹ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ವಿಶ್ವಕಲ್ಯಾಣಕ್ಕಾಗಿ ಸೃಷ್ಟಿಕರ್ತ ಪರಮಾತ್ಮನ ಸ್ಮರಣೆ ಒಂದೆ ದಾರಿ ಎಂಬ ಮಹತ್ತರ ನಂಬಿಕೆಯಿಂದ ಲಿಂಗಾಯತ ಧರ್ಮದ ಕುರುಹು ಇಷ್ಟಲಿಂಗ ಯೋಗ (ಪೂಜೆ) ವನ್ನು ತಮ್ಮ ಮನೆ, ಮಠ, ಮಹಾಮಠ, ಅನುಭವ ಮಂಟಪ ಹಾಗೂ …

Read More »

ಲಿಂಗಾಯತರ ಮುಂದಿರುವ ಪ್ರಶ್ನೆಗಳು

ಗದಗ: ಶತ ಶತಮಾನದ ಬೇಡಿಕೆಯಾದ ಲಿಂಗಾಯತ ಧರ್ಮ ಮಾನ್ಯತೆ ಮತ್ತು ಅಲ್ಪಸಂಖ್ಯಾತ ಸ್ಥಾನಮಾನ ಪಡೆಯಲು ಸಂಪೂರ್ಣ ವಿಫಲವಾದೆವೇ ? ಎಂಬ ಸಂದೇಹ ಈಗ ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟದ ಹಾದಿ ಬದಲಾಗಿದೆ ಅನ್ನುವ ಸಂಶಯ. ವೀರಶೈವರ ವಿರುದ್ಧ ಹೋರಾಡಿ ಈಗ ಒಳಗೊಳಗೆ ಒಪ್ಪಂದ ಆಗಿದೆ ಅಂತ ಅನುಮಾನ ದಟ್ಟವಾಗುತ್ತಿದೆ.  ಕೇಂದ್ರ ಸರ್ಕಾರ ಲಿಂಗಾಯತ ಧರ್ಮ ಮಾನ್ಯತೆ ಮತ್ತು ಅಲ್ಪಸಂಖ್ಯಾತ ಸ್ಥಾನ ಪಡೆಯುವ ಆಸೆಗೆ ತಣ್ಣಿರು ಎರಚಿ …

Read More »

ಇಷ್ಟಲಿಂಗ ಪೂಜೆ ಆತ್ಮಶುದ್ಧಿಗೆ ಹೊರತು ವೈರಸ್ ನಾಶಕ್ಕಲ್ಲ

ಲಿಂಗಸೂರು: ಅಂದು ಬಹುಸಂಖ್ಯಾತ ಶೂದ್ರರಿಗೆ ದೇವಸ್ಥಾನದ ಒಳಗೆ ಪ್ರವೇಶವಿಲ್ಲದಿದ್ದಾಗ ದೇಗುಲ ಸಂಸ್ಕೃತಿಯನ್ನೇ ಬಹಿಷ್ಕರಿಸಿ ಜನರ ಅಂಗೈಯಲ್ಲೇ ದೇವರನ್ನಿತ್ತವರು ಬಸವಣ್ಣ. ದೇವರು, ಭಕ್ತನ ನಡುವೆ ಪೂಜಾರಿ ಎಂಬ ದಲ್ಲಾಳಿಯನ್ನು ಹೊಡೆದು ಹಾಕುವುದರ ಜೊತೆಗೆ ‌ತಮ್ಮ ದೇವರ ಪೂಜೆಯನ್ನು ತಾವೇ ಮಾಡಿಕೊಳ್ಳಲಿ ಎಂಬ ಉದ್ದೇಶವಿತ್ತು.‌ ಇಷ್ಟಲಿಂಗವನ್ನು ಯಾರಾದರೂ ಧರಿಸಿ ಲಿಂಗವಂತರಾಗಬಹುದು. ಅದಕ್ಕೆ ಹೆಣ್ಣು-ಗಂಡು, ಬಡವ-ಶ್ರೀಮಂತ, ಜಾತಿ,ಧರ್ಮಗಳ ಭೇದವಿಲ್ಲ. ಲಿಂಗ, ವರ್ಗ, ಜಾತಿ ಹೊಡೆದು ಹಾಕುವ ಸಾಧನ ಇಷ್ಟಲಿಂಗ. ಅದನ್ನು ಪ್ರತಿದಿ‌ನ ಪೂಜಿಸಿ ಆತ್ಮಶುದ್ಧಿ …

Read More »

ಅಣುವಿಂದ ಮಹತ್ತರಕ್ಕೆ ಕೊಂಡೊಯ್ಯುವ ಇಷ್ಟಲಿಂಗ

ಗಂಗಾವತಿ: ಅಪ್ಪ ಗುರುಬಸವಣ್ಣನವರು ಕರುಣಿಸಿದ ಇಷ್ಟಲಿಂಗವು ಈಗಾಗಲೆ ವೈಜ್ಞಾನಿಕ ಸಂಶೋಧನೆಯಿಂದ ಮಾನವನ ಸರ್ವಾಂಗಿಕರಣ ಅಭಿವೃದ್ಧಿಗೆ ಎಲ್ಲ ರೀತಿಯ ಸಾಧನೆಗು ಸಹಾಯಕವಾಗಬಲ್ಲದು ಎಂಬ ವಿಷಯ ಈಗಾಗಲೇ ದೃಡಪಟ್ಟಿದೆ. ಈ ಇಷ್ಟಲಿಂಗವು ನನ್ನ ಸ್ವಂತ ಅನುಭವಕ್ಕೆ ಬಂದಂತೆ ಇದೊಂದು ನಮ್ಮೆಲ್ಲ ರೀತಿಯ ಸಾಧನೆಗಳಿಗೆ ಪೂರಕವಾಗಿದ್ದು ನಮ್ಮ ಇಂದ್ರಿಯಗಳ ನಿಗ್ರಹ ಮತ್ತು ಮನೊನಿಗ್ರಹದಿಂದ ಶಾಂತಿ ಸಮಾಧಾನದ ಬದುಕನ್ನು ತಂದು ಕೊಡುತ್ತದೆ. ಅದರಲ್ಲೂ ಆಧ್ಯಾತ್ಮ ಸಾಧಕನನ್ನ ಅತ್ಯುನ್ನತ ಮೇರು ಶಿಖರಕ್ಕೆ ಕೊಂಡೊಯ್ಯುವ ಒಂದು ಪ್ರಮುಖ ಸಾಧನವಾಗಿದೆ …

Read More »

ಇಷ್ಟಲಿಂಗ ಪೂಜೆ ಕರೆಗೆ ವಿರೋಧ

ಚಿತ್ರದುರ್ಗ: ಕರೋನಾ ಸೋಂಕು ನಿವಾರಣೆಗೆ ಇಷ್ಟಲಿಂಗ ಪೂಜೆ ಮಾಡುವಂತೆ ಲಿಂಗಾಯತ ಸಮುದಾಯಕ್ಕೆ ನೀಡಿರುವ ಕರೆಗೆ ಸರಿಗೆರೆಯ ತರಳುಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಇದೊಂದು ವಿಲಕ್ಷಣ ನಡೆಯೆಂದೇ ನಮ್ಮ ಭಾವನೆ. ಇದೊಂದು ಸಂಕುಚಿತ ಮನೋಭಾವ ಎಂಬುದ ಮನವರಿಕೆ ಮಾಡಿಕೊಡುವುದು ಅಗತ್ಯವಿದೆ. ಇದು ‘ದೇಶದ ಏಕತೆಗೆ ಧಕ್ಕೆ ತರಲಿದೆ’ ಎಂದು ಹೇಳಿಕೆ ಯಲ್ಲಿ ತಿಳಿಸಿದ್ದಾರೆ. ಒಂದು ನಿರ್ದಿಷ್ಟ ಸಮುದಾಯಕ್ಕೆ ಈ ರೀತಿ ಕರೆ ನೀಡುವುದು ಪ್ರತ್ಯೇಕತಾ …

Read More »

ಸೂಜಿಕಾಯಕದ ರಾಮಿತಂದೆ: ವಚನ ವಿಶ್ಲೇಷಣೆ

ತಲೆಗೆ ಮೂರು ಚಿಪ್ಪು, ಅಂಗಕ್ಕೆ ಆರು ಚಿಪ್ಪು, ಮಿಕ್ಕಾದ ಸರ್ವಾಂಗಕ್ಕೆಲ್ಲಕ್ಕೂ ಒಂದೆ ಚಿಪ್ಪಿನ ಕುಪ್ಪಸ. ಇದರಂಗದ ಆಚರಣೆಯ ಬಲ್ಲವ, ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನ ಲಿಂಗವ ಬಲ್ಲವ.  ಸೂಜಿಕಾಯಕದ ರಾಮಿತಂದೆ. ವಚನ ಅನುಸಂಧಾನ:- ಶರಣರ ವಚನಗಳನ್ನು ಅನುಸಂಧಾನ ಮಾಡಲು ತೊಡಗುವವರಿಗೆ ಶರಣತತ್ವ ಸಿದ್ಧಾಂತಗಳ ಅರಿವು ಆಚರಣೆಯ ಬಗ್ಗೆ ಹಾಗೂ ವಚನಗಳ ಪರಿಭಾಷೆಯ ಬಗ್ಗೆ ಕನಿಷ್ಠ ಮಟ್ಟದ ಪ್ರಾಥಮಿಕ ತಿಳುವಳಿಕೆ ಯಾದರೂ ಖಂಡಿತಾ ಇರಬೇಕಾಗುತ್ತದೆ. ಅಂದಾಗ ಮಾತ್ರವೇ ವಚನಗಳು ಅದರಲ್ಲೂ ಬೆಡಗಿನ ವಚನಗಳು …

Read More »