Home / ಧಾರ್ಮಿಕ ಕ್ಷೇತ್ರ (page 4)

ಧಾರ್ಮಿಕ ಕ್ಷೇತ್ರ

ಲಿಂಗವಂತರಿಗೆ ಮಾಂಸಾಹಾರ ನಿಷಿದ್ಧ

ಬೈಲಹೊಂಗಲ : ಲಿಂಗಾಯತರಲ್ಲಿ ಅನೇಕರು ಇಂದು ನಾಲಿಗೆ ರುಚಿಗಾಗಿ ಮಾಂಸಾಹಾರಿಗಳಾಗುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಸಂಸ್ಕಾರದ ಕೊರತೆ. ಲಿಂಗಾಯತ ಧರ್ಮದಲ್ಲಿ ಮಾಂಸಹಾರ ಇಲ್ಲ ನೀವು ಶಾಖಾಹಾರಿಗಳು ಅಂತಾ ನಮ್ಮನ್ನು ತಿದ್ದಿ ಬುದ್ದಿ ಹೇಳಬೇಕಾದ ಮಠಾಧೀಶರಲ್ಲಿ ಕೆಲವರನ್ನು ಹೊರೆತು ಪಡಿಸಿದರೆ ಬಹುಪಾಲು ಲಿಂಗಾಯತ ವಿರಕ್ತ ಮಠದ ಸ್ವಾಮೀಗಳು ಸಮಾಜ ಏನಾದರೂ ಪರವಾಗಿಲ್ಲ ನಮ್ಮ ಮಠದಲ್ಲಿ ಇರುವ ಶಾಲಾ ಕಾಲೇಜುಗಳ ವ್ಯಾಪಾರ ಚನ್ನಾಗಿ ನಡೆದರು ಸಾಕು ಎನ್ನುವ ದುರಾಸೆಯಿಂದ ಲಿಂಗಾಯತರನ್ನು ಸಂಸ್ಕಾರ ಮತ್ತು …

Read More »

ಶರಣರ ತ್ಯಾಗ-ಬಲಿದಾನ ಜಗತ್ತಿಗೆ ತೋರಿಸಿದ ಮಾತಾಜಿ

ಬೈಲಹೊಂಗಲ : ರೋಮನ್ ದೇಶದ ಯಹೂದಿಗಳ ಮೂಡನಂಬಿಕೆ ಅಂದಕಾರವನ್ನು ತೊಲಗಿಸಲು ಹೋಗಿ ರೋಮನ್ ಸಾಮ್ರಾಜ್ಯದ ಒಡೆಯ ಕೈಸರ ಕೆಂಗಣ್ಣಿಗೆ ಗುರಿಯಾಗಿ ಯಹೂದಿಗಳ ಒತ್ತಾಯದ ಮೇಲೆ ರೋಮನ್ ದೇಶದ ಯಹೂದಿ ಪ್ರಾಂತ್ಯದ ಪ್ರತಿನಿಧಿ ಪಿಲಾತನಿಂದ ಒಬ್ಬ ಏಸು ಕ್ರೈಸ್ತ ಶಿಲುಬೆಗೆ ಏರಿಸಿದರು. ಆತನ ತ್ಯಾಗವನ್ನು ಏಸುವಿನ ಅನುಯಾಯಿಗಳು ಇಡಿ ಜಗತ್ತಿಗೆ ತೋರಿಸಿದರು. ಕ್ರೈಸ್ತ ಶಿಲುಬೆಗೆ ಏರಿಸಿರುವ ಸನ್ನಿವೇಶವನ್ನು ಜಗತ್ತಿನಾದ್ಯಂತ ಸ್ಮಾರಕಗಳನ್ನಾಗಿ ಮಾಡಿ ಮಿಷನರಿಗಳ ಮೂಲಕ ಕ್ರೈಸ್ತ ಧರ್ಮವನ್ನು ಪ್ರಚಾರಗೈದರು. ಭಾರತದಂತಹ ಪ್ರಾಚೀನ …

Read More »

ವೀರಶೈವ ಆರಾಧ್ಯ ಜಂಗಮರ ಕುಠಿಲ ಹುನ್ನಾರ

ವಿಜಯಪುರ: 1871 ರ ಮೈಸೂರು ಸಂಸ್ಥಾನ ಸರಕಾರದ ಜನಗಣತಿ ವರದಿ ಪ್ರಕಾರ ಲಿಂಗಾಯತವು ಒಂದು ಸ್ವತಂತ್ರ ಧರ್ಮವಾಗಿತ್ತು.        1881 ರ ಜನಗಣತಿಯಲ್ಲಿ ಲಿಂಗಾಯತವು ಸ್ವತಂತ್ರ ಧರ್ಮ ಪಟ್ಟಿಯಿಂದ ಕೈಬಿಟ್ಟು ಲಿಂಗಾಯತರನ್ನು ಶೂದ್ರರ ಪಟ್ಟಿಯಲ್ಲಿಡಲಾಯಿತು. ಅಯ್ಯಂಗಾರಿ ಬ್ರಾಹ್ಮಣ ದಿವಾನನೊಬ್ಬನ ಕುತಂತ್ರ ಇದರ ಹಿಂದಿತ್ತು.                                    …

Read More »

ವಚನ ವಿಶ್ಲೇಷಣೆ: ಅಲ್ಲಮ‌‌ ಪ್ರಭು

ಚಿತ್ತುವೆಂಬ ಬಿತ್ತು ಬಲಿದು ಎರಡಾದಲ್ಲಿ, ಲಿಂಗವೆಂಬ ಕಳೆ ಅಂಕುರಿಸಿ ಮೂರ್ತಿಯಾಯಿತ್ತು. ಆ ಮೂರ್ತಿಯ ಘನತೆಯ ಏನೆಂದೂ ಉಪಮಿಸಬಾರದು ! ನೋಡಿದಡೆ ಮೂರ್ತಿ ಹಿಡಿದಡೆ ಬಯಲು ! ಆ ಮೂರ್ತಿಯೊಳಗದೆ ಈರೇಳು ಲೋಕದ ಪ್ರಾಣಕಳೆ. ಆ ಕಳೆಯ ಬೆಳಗು ತಾನೆ ನಮ್ಮ ಗುಹೇಶ್ವರಲಿಂಗದಲ್ಲಿ ಲೀಲಾಮೂಲದ ಪ್ರಥಮ ಭಿತ್ತಿ. ಅಲ್ಲಮಪ್ರಭುದೇವರು ————————————————————— ವಚನ ಅನುಸಂಧಾನ:- ಬಹುತೇಕರಿಗೆ ಅಲ್ಲಮಪ್ರಭುದೇವರ ಬಗ್ಗೆ ಗೊತ್ತಿದೆ. ೧೨ನೆಯ ಶತಮಾನದ ಶರಣರಲ್ಲಿಯೇ ಇವರು ತಮ್ಮ ಅಗಾಧ ಅರಿವು ಅನುಭಾವದ ಆಧ್ಯಾತ್ಮಿಕ …

Read More »

ಉಪ್ಪರಗುಡಿಯ ಸೋಮಿದೇವಯ್ಯ: ವಚನ ವಿಶ್ಲೇಷಣೆ

ಕಾಯದ ಸಂಗದಿಂದ ಆತ್ಮನು ಭವಕ್ಕೆ ಬಪ್ಪುದೊ ? ಆತ್ಮನ ಸಂಗದಿಂದ ಕಾಯ ಲಯಕ್ಕೊಳಗಪ್ಪುದೊ ? ಕಾಯ ಜೀವದಿಂದಳಿವೊ ? ಜೀವ ಕಾಯದಿಂದಳಿವೋ ? ಅಲ್ಲ, ಉಭಯವೂ ಏಕಸ್ಥದಿಂದ ಪ್ರಳಯವೋ ? ಎಂಬುದ ಅಂತಸ್ಥದಿಂದ ತಿಳಿದು, ಕಾಯಕ್ಕೂ ಜೀವಕ್ಕೂ ಭೇದವುಂಟೆಂದಡೆ, ಒಂದ ಬಿಟ್ಟೊಂದು ಇರದು. ಇಲ್ಲಾ ಎಂದೆಡೆ, ಆತ್ಮ ವಾಯುಸ್ವರೂಪ, ಘಟ ಸಾಕಾರಸ್ವರೂಪ, ಗುಣ-ಗಂಧ, ಕುಸುಮ-ಗಂಧ, ತಿಲ-ಸಾರದ ಸಂಗದಂತೆ. ಇಂತೀ ಉಭಯ ಭಾವದ ಭೇದವನರಿದ ಪರಮ[ಸುಖ] ಗಾರುಡೇಶ್ವರಲಿಂಗವನರಿದವಂಗಲ್ಲದೆ ಸಾಧ್ಯವಲ್ಲ. ಉಪ್ಪರಗುಡಿಯ ಸೋಮಿದೇವಯ್ಯ ವಚನ …

Read More »

ಭಾಲ್ಕಿ ಶ್ರೀ ಮಠದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ

ಜಗತ್ತಿನೆಲ್ಲೆಡೆ ಮಹಾ ಮಾರಿಯಾಗಿ ವ್ಯಾಪಿಸಿರುವ ಕೋರೋನಾ ವೈರಸ್ ನಿವಾರಣೆಗಾಗಿ ಭಾಲ್ಕಿ ಶ್ರೀ ಮಠದಲ್ಲಿ ಪರಮ ಪೂಜ್ಯರಿಂದ ಸಾಮೂಹಿಕವಾಗಿ ಇಷ್ಟಲಿಂಗ ಪೂಜೆ ಹಾಗೂ ಪ್ರಾರ್ಥನೆ ನೆರವೇರಿಸಲಾಯಿತು.

Read More »