Breaking News
Home / ವಚನಕಾರರು

ವಚನಕಾರರು

ಗಣಾಚಾರಿ ಲಿಂಗಾಯತ ನಿಜಶರಣ ಅಂಬಿಗರ ಚೌಡಯ್ಯ

  ಉಚ್ಚೆಯ ಬಚ್ಚಲಲ್ಲಿ ಬಂದವರೆಲ್ಲಾ , ನಾ ಹೆಚ್ಚು, ನೀ ಹೆಚ್ಚು ಎಂಬುವರು. ಇಂತಿವರನ್ನು ಹಿತ್ತಲಿನ ಬಚ್ಚಲಿಗೊಯ್ದು ಮಚ್ಚಿ-ಮಚ್ಚಿಲೇ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣ. ಜಾತಿ ತಾರತಮ್ಯ ವಿಚಾರವಾಗಿ ಈ ಮಟ್ಟದಲ್ಲಿ ಅತ್ಯಂತ ಕಟುವಾಗಿ ವಿಮರ್ಷಣೆ ಮಾಡುವ ಅಂಬಿಗರ ಚೌಡಯ್ಯ ನವರು ಕ್ರಿ.ಶ. ೧೨ ನೇ ಶತಮಾನದ ಕಾಲಮಾನದವರು. ಇವರು ಈಗಿನ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚೌಡದಾನಪುರ (ಶಿವಪುರ) ಎಂಬ ಗ್ರಾಮದವರು. ಹಾಗೂ ಕೆಲವು ಸಂಶೋಧನೆಗಳ ಪ್ರಕಾರ …

Read More »

ಶರಣ ಪರಂಪರೆಯ ಶರಣ ಶರಣೆಯರು- ಗಂಗಮ್ಮ

    ಲಿಂಗಾಯತ ಕ್ರಾಂತಿ ವರದಿ:  12 ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಕಲ್ಯಾಣದಲ್ಲಿ ಜನರ ಸಾಮಾಜಿಕ ಬದುಕು ಕಲ್ಯಾಣವಾಗುವಂತೆ ಒಂದು ಕ್ರಾಂತಿಯನ್ನೇ ನಡೆಸಿ ಇಂದಿಗೂ, ಮುಂದಿಗೂ ಅಜರಾಮರರಾದರು.  ಆಗಿನ ಕಾಲದಲ್ಲಿಯೇ ಸಾಮಾಜಿಕವಾಗಿ ಎಲ್ಲರೂ ಒಂದೇ ಎನ್ನುವ ತತ್ವವನ್ನೂ, ಆರ್ಥಿಕ ಸಬಲತೆಗೆ ದಾಸೋಹದ ಪರಿಕಲ್ಪನೆಯನ್ನೂ, ಆಧ್ಯಾತ್ಮಿಕ ಬಲಕ್ಕಾಗಿ ಅರಿವಿನ ಮಹಾ ಮಂತ್ರವನ್ನೂ ಅವರು ಜಾರಿಗೊಳಿಸಿ,  ಜನ ಸಾಮಾನ್ಯರಲ್ಲಿ ಹುಟ್ಟಿನಿಂದ ಯಾರೂ ದೊಡ್ಡವರೂ ಅಲ್ಲ, ಕೀಳು ಅಲ್ಲ ಎಂದು ಸಮಾನತೆಯನ್ನು  ಸಾರುವ …

Read More »

ಹೂಗಾರ ಮಾದಯ್ಯನವರ ಜಯಂತಿ ಆಚರಣೆ

ಲಿಂಗಾಯತ ಕ್ರಾಂತಿ ವರದಿ: ಬಸವಾದಿ ಪ್ರಮಥರಲ್ಲೊಬ್ಬರಾದ ಹೂಗಾರ ಮಾದಯ್ಯ(ಮಾದಣ್ಣ)ನವರ ಜಯಂತಿಯನ್ನು ಸೆ. 02 ರಂದು ಗಜೇಂದ್ರಗಡದ ಮೈಸೂರು ಮಠದಲ್ಲಿ ಆಚರಿಸಲಾಯಿತು. ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಅಖಿಲ ಕರ್ನಾಟಕ ಹೂಗಾರ ಸಮಾಜ ಗಜೇಂದ್ರಗಡ ತಾಲೂಕ ಸಮಿತಿಗಳ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ, ಹೂಗಾರ ಸಮಾಜದ ತಾಲೂಕಾ ಅಧ್ಯಕ್ಷ, ತಾ.ಪಂ.ಉಪಾಧ್ಯಕ್ಷ ಶಶಿಧರ ಹೂಗಾರ, ಜೆ.ಎಲ್.ಎಂ.ಮುಖಂಡರುಗಳಾದ ರವೀಂದ್ರ ಹೊನವಾಡ,ಬಸವರಾಜ ಶೀಲವಂತರ,ಎಂ.ಎಸ್.ಹಡಪದ,ಮಂಜುನಾಥ ಹೂಗಾರ,ಕೆ.ಎಸ್.ಸಾಲಿಮಠ ಅವರುಗಳು ಶರಣ ಮಾದಯ್ಯನವರ ಜೀವನ ಹಾಗೂ ಲಿಂಗಾಯತ ಧರ್ಮಕ್ಕೆ ಅವರು ನೀಡಿದ …

Read More »

ತಲೆಯೆರಡರ ಪಕ್ಷಿ ವಿಷ ನಿರ್ವಿಷವ ಮೆಲಿದಂತಾಯಿತ್ತೆನಗಯ್ಯಾ

ವಚನ ವಿಶ್ಲೇಷಣೆ: ಕಾಯದ ಕಣ್ದೆರೆಯಿಂದುದಯವಾದ ಧಾವತಿ ಎರಡು ನೋಡಯ್ಯಾ : ಅಯ್ಯಾ ಭ್ರಾಂತಿಯತ್ತಲೊಂದೆಳವುತ್ತಲದೆ ದೇವಾ ನಿಮ್ಮತ್ತಲೊಂದೆಳವುತ್ತಲದೆ. ಒಂದರ ಸಹಜವನೊಂದು ಗೆಲಲರಿಯದು. ಮುಂದೆ ಸತ್ಪಥಕ್ಕೆಂತಡಿಯಿಡುವೆನಯ್ಯಾ ನಾನು? ಬೆಳಗಾವಿ : ಕಾಲಚಕ್ರದಲ್ಲಿ ಹುಟ್ಟಿ, ಕರ್ಮಚಕ್ರದಲ್ಲಿ ಬೆಳೆದು ಕಲ್ಪಿತದಿಂದವೆ ದಿನಂಗಳು ಸವೆವುತ್ತವೆಯಯ್ಯಾ. ತಲೆಯೆರಡರ ಪಕ್ಷಿ ವಿಷ ನಿರ್ವಿಷವ ಮೆಲಿದಂತಾಯಿತ್ತೆನಗಯ್ಯಾ. ಅಂದಂದಿನರಿವು ಅಂದಂದಿನ ಮರವೆಗೆ ಸರಿಯಯ್ಯಾ. ತಂದೆ ಈ ದಂದುಗವ ಮಾಣಿಸಿ ನಿಮ್ಮ ನಿಜಾನಂದ ಭಕ್ತಿಯೆನಗೆ ಕರುಣಿಸಯ್ಯಾ ಅಮರಗುಂಡದ ಮಲ್ಲಿಕಾರ್ಜುನಾ. ಪುರದ ನಾಗಣ್ಣ ವಚನ ಅನುಸಂಧಾನ …

Read More »

ಕೆಂಬಾವಿಯ ಭೋಗಣ್ಣ: ಶರಣರ ಪರಿಚಯ

ಲಿಂಗಾಯತ ಕ್ರಾಂತಿ:  ಶರಣ ಕೆಂಬಾವಿಯ ಭೋಗಣ್ಣ ಇವನೊಬ್ಬ ಅಪ್ರತಿಮ ಶರಣನೇ ಹೌದು, ಹಾಗೆಯೇ ಆ 12 ನೇ ಶತಮಾನದಲ್ಲಿ ದಲಿತರಿಗಾಗಿ ಹೋರಾಟ ಮಾಡಿ, ಇಡೀ ಪ್ರಭುತ್ವವನ್ನೇ ಎದುರು ಹಾಕಿಕೊಂಡು, ದಲಿತೋದ್ದಾರಕರಾಗಿ ಮರೆದಂತಹ ಮಹಾನ್ ಶರಣ ಈ ಕೆಂಭಾವಿಯ ಬೋಗಣ್ಣ. ಜೊತೆಗೆ ಇವರು ಬಸವಣ್ಣನವರಿಗೆ ಮಾರ್ಗದರ್ಶಿಯೂ ಹೌದು, ಜೇಡರ ದಾಸಿಮಯ್ಯನು ಈ ಶರಣ ಕೆಂಭಾವಿಯ ಭೋಗಣ್ಣನ ಬಗ್ಗೆ *ಶಿವನು ಕೆಂಭಾವಿಯ ಭೋಗಣ್ಣನ ಹಿಂದೋಡಿ ಹೋದ* ಎನ್ನುತ್ತಾರೆ. ಹಾಗೆಯೇ ಸೊಡ್ಡಾಳ ಬಾಚರಸನು ಆಗಮಂಗಳು …

Read More »

ಶರಣ ಪರಂಪರೆ: ಕೋಟಾರದ ಸೋಮಣ್ಣ

ಶರಣ ಕೋಟಾರದ ಸೋಮಣ್ಣ ಈತನು ಬಸವಣ್ಣನವರ ಸಮಕಾಲೀನನಾದ ಶರಣನಾಗಿದ್ದು ಈತನ ಕಾಲ 1160 ಎಂದು ಗುರುತಿಸಲಾಗಿದೆ. ಈತನ ಇತಿವೃತ್ತಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ದೊರಕಿರುವುದಿಲ್ಲ. ಕೊಟಾರ ಎಂದರೆ ಉಗ್ರಾಣ‌, ದಾಸ್ತಾನು ಮಳಿಗೆ ಎಂಬರ್ಥವಿದೆ. ಅಂದರೆ ಈ ಶರಣ ಸೋಮಣ್ಣನು ಕಲ್ಯಾಣದ ರಾಜ ಬಿಜ್ಜಳನ ರಾಜ್ಯದಲ್ಲಿ ದಾಸ್ತಾನು ಮಳಿಗೆಯನ್ನೋ, ಉಗ್ರಾಣವನ್ನೋ ನೋಡಿಕೊಳ್ಳುವ ಕಾಯಕದವನು ಇರಬೇಕೆಂದು ಅಂದಾಜಿದಲಾಗಿದೆ. ಯಾವುದೇ ಶರಣರು ತಮ್ಮ ಕಾಯಕದಿಂದಲೇ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದರಿಂದ ಈ ಶರಣ ಸೋಮಣ್ಣನಿಗೆ ಕೊಟಾರದ ಸೋಮಣ್ಣ ಎಂಬ …

Read More »

ಪರಮ ದಾಸೋಹಿ ಲಿಂಗಾಂಗ ಯೋಗಿ ನೀಲಾಂಬಿಕಾ ತಾಯಿಯವರ ಲಿಂಗೈಕ್ಯ ಸಂಸ್ಮರಣೆ

ಬೆಂಗಳೂರು: ಪರಮ ದಾಸೋಹವನು ನೆರೆಮಾಡಿ ಜಂಗಮದ ಪರಮ ಪ್ರಸಾದವನು ಸವಿದು ಸುಖದಿಕರ ದಿಷ್ಟಲಿಂಗದೊಳೂ ಶರೀರವನಿಂಬಿಟ್ಟ ಕರುಣಿ ನೀಲಮ್ಮ ಶರಣು ಯೋಗಿನಾಥ. -ಬಸವಯೋಗಿ ಸಿದ್ಧರಾಮೇಶ್ವರರು. ವಿಶ್ವ ವಿಭೂತಿ, ಜ್ಞಾನಜೋತಿ, ಭಕ್ತಿ ಭಂಡಾರಿ ವಿಶ್ವಗುರು ಬಸವಣ್ಣನವರು ತಮ್ಮ ಸುತ್ತಲಿನ ಸಮಾಜದಲ್ಲಿರುವ ವೈಷಮ್ಯ ಮತ್ತು ಅಸಮಾನತೆಯನ್ನು ತೊಡೆದುಹಾಕಿ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಹೊಸ ಲಿಂಗಾಯತ ಧರ್ಮವನ್ನು ನೀಡಿ ಹೊಸ ಸಮಾಜವನ್ನು ರಚಿಸುವ ಕಾರ್ಯದಲ್ಲಿ ತೊಡಗಿದಾಗ, ಅಕ್ಕನಾಗಮ್ಮನವರಿಂದ ಲಿಂಗಾಯತ ಧರ್ಮ ದೀಕ್ಷೆಯನ್ನು ಪಡೆದು ಆತ್ಮೋನ್ನತಿಯ …

Read More »

ಷಟಸ್ಥಲ ಚಕ್ರವರ್ತಿ ಚೆನ್ನಬಸವಣ್ಣನವರು

ಚಿನ್ಮಯಜ್ಞಾನಿ ಚೆನ್ನಬಸವಣ್ಣಅಂಕಿತ: ಕೂಡಲಚೆನ್ನಸಂಗಮದೇವ ಕಾಯಕ: ಆಚಾರ್ಯ ಪುರುಷ, ಎರಡನೆಯ ಶೂನ್ಯ ಪೀಠಾಧ್ಯಕ್ಷ ತಾಯಿ: ಅಕ್ಕ ನಾಗಲಾಂಬಿಕೆ ತಂದೆ: ಶಿವದೇವ ಹುಟ್ಟಿದ ಸ್ಥಳ ಹಾಗೂ ವಷ೯: ಬಸವಕಲ್ಯಾಣ – ಕ್ರಿ. ಶ. ಸುಮಾರು 1172 ರಲ್ಲಿ ಜನಿಸಿದರು. ಸೋದರ ಮಾವ: ಗುರು ಬಸವಣ್ಣನವರು ಖಡ್ಗ ಹಿಡಿದು ಕನ್ನಡ ಸಾಹಿತ್ಯವನ್ನು ರಕ್ಷಣೆ ಮಾಡಿದ 21 ವರ್ಷದ ಯುವಕ ಯಾರು ಗೊತ್ತೆ? ಅದು ಷಟಸ್ಥಲ ಜ್ಞಾನಿ ಚನ್ನಬಸವಣ್ಣನವರು ಬಸವಣ್ಣನವರ ಪ್ರಕಾರ ಜನ್ಮತ: ಜ್ಞಾನಪರಿಮಳಭರಿತ ಪ್ರಭುದೇವರ …

Read More »

ವಿಶ್ವಗುರು ಬಸವಣ್ಣನವರ ಆಪ್ತ ಕಾರ್ಯದರ್ಶಿ ಶಿವಶರಣ ಹಡಪದ ಅಪ್ಪಣ್ಣ

ಬೈಲಹೊಂಗಲ: ಹಡಪದ ಅಪ್ಪಣ್ಣನವರ 886ನೇ  ಜಯಂತೋತ್ಸವನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು. ಕೋವಿಡ್-19 ಕರೋನಾ ಮಹಾಮಾರಿಯಿಂದ ಜಯಂತಿಯನ್ನು ತಾಲೂಕ  ಆಡಳಿತ ಸಾಂಕೇತಿಕವಾಗಿ ಸರಳ ರೀತಿಯಲ್ಲಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ತಹಸಿಲ್ದಾರ್ ಶ್ರೀ ದೊಡ್ಡಪ್ಪ ಹೂಗಾರ್ 12ನೇ ಶತಮಾನದ ವಚನ ಸಾಹಿತ್ಯದ ಶಿವಶರಣ ಹಡಪದ ಅಪ್ಪಣ್ಣನವರು ಮುಂಚೂಣಿಯಲ್ಲಿದ್ದವರು ಇಂತಹ ಶರಣರ ಜಯಂತಿಯನ್ನು ಆಚರಿಸುವುದರಿಂದ ಪ್ರತಿಯೊಬ್ಬರು ಶರಣರ ನಡೆ-ನುಡಿಗಳನ್ನು ಅನುಕರಣೆ ಮಾಡಿದಂತಾಗುತ್ತದೆ ಶರಣ ಸಾಹಿತ್ಯದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು. ಈ …

Read More »

“ನಿಜಸುಖಿ” ಬಸವಪ್ರಿಯ ಹಡಪದ ಅಪ್ಪಣ್ಣನವರ ಜಯಂತಿ ಇಂದು

ಚನ್ನಮ್ಮನ ಕಿತ್ತೂರು: ೧೨ ನೇ ಶತಮಾನದ ವಿಚಾರಕ್ರಾಂತಿಯ ಪ್ರಭೃತಿ ಬಸವಣ್ಣನವರ ಆಪ್ತ ಬಂಧುವಾಗಿ,ಆತ್ಮನಿಷ್ಠನಾಗಿ ನಾನಾ ಸಲಹೆ ನೀಡುವ ಮಾರ್ಗದರ್ಶಕನಾಗಿ ಕೆಲವೊಮ್ಮೆ ಗುರುವಾಗಿಯೂ ಹಡಪದ ಅಪ್ಪಣ್ಣನರು ಅಂದಿನ ಸಾಮಾಜಿಕ ,ಧಾರ್ಮಿಕ ಕ್ರಾಂತಿಯಲ್ಲಿ ತನ್ನದೇ ಕೊಡುಗೆ ಸಲ್ಲಿಸಿ ಬಸವಣ್ಣನವರೂಂದಿಗೆ ಚಿರಸ್ಥಾಯಿಯಾದ ಮಹಾನ ಶರಣ ಅಪ್ಪಣ್ಣನವರು ತಮ್ಮದೆ ಗುರುಶದೃಶ ಪಾತ್ರ ಅಪ್ರತಿಮಕರ್ತ,ಅವಿರಳ ಜ್ಞಾನ, ಆಧ್ಯಾತ್ಮಿಕ ಶಕ್ತಿ- ಭಕ್ತಿ ವಿಧೇಯತೆ, ದಾಸೋಹಂಭಾವ,ಸೇವಾಮನೋಭಾವ,ಶಿವಾನುಭಾವ ಹಿರಿಮೆಗಳಿಂದ ಬಸವಣ್ಣನವರ ಕಾರುಣ್ಯ ಪಡೆದು ಅವರ ಕೃಪೆಗೆ ಪಾತ್ರರಾದ ಪುಣ್ಯಾತ್ಮರು ಬಸವಣ್ಣನವರಿಗೆ ಅತ್ಯಂತ …

Read More »
error: Content is protected !!