ಹುಬ್ಬಳ್ಳಿ(ಉಣಕಲ್): ಜಗತ್ತಿನ ಎಲ್ಲ ಧರ್ಮದ ವಿಚಾರಗಳನ್ನು ಹೇಳುವವರು ಮತ್ತು ಕೇಳುವವರು ಇರುತ್ತಾರೆ ಆದರೆ ಶರಣ ಧರ್ಮದಲ್ಲಿ ಹೇಳುವವರು ಗುರುವಾದರೆ …
Read More »
1 week ago
ಶಿವಯೋಗದಿಂದ ಎಲ್ಲವೂ ಸಾಧ್ಯ: ನಿಜಗುಣಾನಂದ ಶ್ರೀಗಳು
ಹುಬ್ಬಳ್ಳಿ(ಉಣಕಲ್): ಜಗತ್ತಿನ ಎಲ್ಲ ಧರ್ಮದ ವಿಚಾರಗಳನ್ನು ಹೇಳುವವರು ಮತ್ತು ಕೇಳುವವರು ಇರುತ್ತಾರೆ ಆದರೆ ಶರಣ ಧ…
4 weeks ago
ಲಿಂಗಾಯತ ಹೋರಾಟಗಾರ, ಸಾಹಿತಿ ಶಿವಕುಮಾರ್ ಉಪ್ಪಿನ ಕಾಂಗ್ರೆಸ್ ಗೆ?
ವಿಜಯಪುರ: ಲಿಂಗಾಯತ ಮಾನ್ಯತೆಯ ಹೋರಾಟದಲ್ಲಿ ಸಕ್ರಿಯವಾಗಿದ್ದ ಇಲ್ಲಿನ ಬರಹಗಾರ ಶಿವಕುಮಾರ್ ಉಪ್ಪಿನ ಶೀಘ್ರದಲ್ಲೇ …
4 weeks ago
ಯುಗದ ಉತ್ಸಾಹ ಅರಟಾಳ ರುದ್ರಗೌಡರು
ಡಾ|| ಎಂ.ಎಂ. ಕಲಬುರ್ಗಿ ಬಸವಣ್ಣನವರನ್ನು ಯುಗದ ಉತ್ಸಾಹವೆಂದು ಪ್ರಭುದೇವರು ಬಣ್ಣಿಸಿದ್ದಾರೆ. 19-20ನೆಯ ಶತಮಾನ…
4 weeks ago
ಧರ್ಮದ ಕಾಲಂನಲ್ಲಿ ಲಿಂಗಾಯತ ಬರೆಸಿ: ಡಾ. ಗಂಗಾಮಾತಾಜಿ ಕರೆ
ಬೆಳಗಾವಿ: ಗುರು ಬಸವೇಶ್ವರರು 12ನೇ ಶತಮಾನದಲ್ಲಿ ಸ್ಥಾಪಿಸಿರುವ ಜಗತ್ತಿನ ವಿನೂತನ, ವಿಶಿಷ್ಟ ಲಿಂಗಾಯತ ಧರ್ಮಕ್ಕೆ ಸಾಂವಿಧ…
-
ಶಿವಯೋಗದಿಂದ ಎಲ್ಲವೂ ಸಾಧ್ಯ: ನಿಜಗುಣಾನಂದ ಶ್ರೀಗಳು
-
ಲಿಂಗಾಯತ ಹೋರಾಟಗಾರ, ಸಾಹಿತಿ ಶಿವಕುಮಾರ್ ಉಪ್ಪಿನ ಕಾಂಗ್ರೆಸ್ ಗೆ?
-
ಯುಗದ ಉತ್ಸಾಹ ಅರಟಾಳ ರುದ್ರಗೌಡರು
-
ಧರ್ಮದ ಕಾಲಂನಲ್ಲಿ ಲಿಂಗಾಯತ ಬರೆಸಿ: ಡಾ. ಗಂಗಾಮಾತಾಜಿ ಕರೆ
-
ಧರ್ಮದ ಕಾಲಂನಲ್ಲಿ ಲಿಂಗಾಯತ ಬರೆಸಿ: ಡಾ. ಗಂಗಾಮಾತಾಜಿ ಕರೆ ವಿಶ್ವಗುರು ಬಸವೇಶ್ವರರು 12ನೇ ಶತಮಾನದಲ್ಲಿ ಸ್ಥಾಪಿಸಿರುವ ಜಗತ್ತಿನ ವಿನೂತನ, ವಿಶಿಷ್ಟ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಿಗಲೇಬೇಕು. 2021ರ ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸುವಂತೆ ಕೂಡಲಸಂಗಮದ ಬಸವಧರ್ಮ ಪೀಠದ ಡಾ.ಗಂಗಾ ಮಾತಾಜಿ ಕರೆ ನೀಡಿದರು. ರವಿವಾರ ಬೆಳಗಾವಿಯ ಗಾಂಧಿ ಭವನದಲ್ಲಿ ಜಿಲ್ಲಾ ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ ಸಂಘಟನೆಗಳ ಆಶ್ರಯದಲ್ಲಿ ವಿಶ್ವದ ಮೊಟ್ಟ ಮೊದಲ ಮಹಿಳಾ ಜಗದ್ಗುರು ಕೂಡಲಸಂಗಮ ಬಸವಧರ್ಮ ಪೀಠದ ಲಿಂಗೈಕ್ಯ ಡಾ. ಮಾತೆ ಮಹಾದೇವಿ ಅವರ 2ನೇ ಪುಣ್ಯಸ್ಮರಣೆ ಕಾರ್ಯಕ್ರಮ ನಿಮಿತ್ಯ ಲಿಂಗಾಯತ ಧರ್ಮ ಜನಗಣತಿ 2021ರ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಆರಂಭದಲ್ಲಿ ವೇದಿಕೆ ಮೇಲೆ ಆಸೀನರಾಗಿದ್ದ ಗಣ್ಯರು ವಿಶ್ವಗುರು ಬಸವೇಶ್ವರರು, ಲಿಂಗೈಕ್ಯ ಪರಮಪೂಜ್ಯ ಲಿಂಗಾನಂದ ಮಹಾಸ್ವಾಮೀಜಿ, ಡಾ.ಮಾತೆ ಮಹಾದೇವಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಜಯಘೋಷ ಕೂಗಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಾ.ಮಾತೆ ಗಂಗಾ ಮಾತಾಜಿ ಅವರು ಪರಮಪೂಜ್ಯ ಡಾ.ಮಾತೆ ಮಹಾದೇವಿ ತಾಯಿಯವರ ಎರಡನೇ ಪುಣ್ಯಸ್ಮರಣೆ ದಿನ ನಾವೆಲ್ಲಾ ಸಂಕಲ್ಪ ಮಾಡಬೇಕಿದೆ. ಈ ಬಾರಿಯ ಜನಗಣತಿಯಲ್ಲಿ ಲಿಂಗಾಯತ ಧರ್ಮ ಎಂದು ಬರೆಸುವ ಸಂಕಲ್ಪ ಮಾಡೋಣ. ಜಾಗತಿಕವಾಗಿ ಲಿಂಗಾಯತ ಧರ್ಮಕ್ಕೆ ಸ್ಥಾನಮಾನ ಸಿಗುವವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು. ಬೆಂಗಳೂರು ಚನ್ನಬಸವೇಶ್ವರ ಜ್ಞಾನಪೀಠದ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ ಭಕ್ತಿ, ಶ್ರದ್ಧೆಯಿಂದ ಬೆಳಗಾವಿ ಜಿಲ್ಲೆ ಅಷ್ಟೇ ಅಲ್ಲದೇ ಬೇರೆ ಬೇರೆ ರಾಜ್ಯಗಳಿಂದಗಳು ಬಸವಾಭಿಮಾನಿಗಳು ಆಗಮಿಸಿದ್ದಾರೆ. ಅದೇ ರೀತಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಜವಾಬ್ದಾರಿಯನ್ನು ನೀಡಲಾಗುತ್ತಿದೆ. ಅದೇ ರೀತಿ 2021 ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಎಲ್ಲರೂ ಬರೆಸಬೇಕು. ಅದೇ ರೀತಿ ಲಿಂಗಾಯತ ಧರ್ಮಕ್ಕೆ ಸಾಂವಿಧಾನದ ಮಾನ್ಯತೆ ದೊರೆಯುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎ.ಬಿ.ಪಾಟೀಲ್, ಬೀದರ ಬಸವ ಮಂಟಪದ ಪರಮಪೂಜ್ಯ ಸತ್ಯಾದೇವಿ ಮಾತಾಜಿ, ಬೆಳಗಾವಿ ವಿಶ್ವಗುರು ಬಸವಮಂಟಪದ ಸದ್ಗುರು ಪ್ರಭುಲಿಂಗ ಸ್ವಾಮೀಜಿ,ಬೆಳಗಾವಿ ರಾಷ್ಟ್ರೀಯ ಬಸವದಳದ ಹಿರಿಯ ಪದಾಧಿಕಾರಿಗಳು ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.